Wednesday, December 14, 2011

ವಿಸ್ಮಯ ಜಗತ್ತು













ಜಗತ್ತಿನ ವಿಸ್ಮಯ ವಿಶಿಷ್ಟತೆ ಹೇಳುವುದು ಅತಿ ಕಠಿಣ ಸಂಗತಿ. ಜೀವ ಜಗತ್ತಿನ ಸರಪಣಿಯೂ ಅದ್ಭುತವೂ ಅನನ್ಯವಾದುದು. ಅದರಲ್ಲೂ ಮಲೆನಾಡು ಇತಂಹ ಹಲವು ಅನನ್ಯತೆಗಳ ತವರೂರು.ಬೆಳಕು ಸೂಸುವ ಅಣಬೆ, ಬಣ್ಣ ಬಣ್ಣದ ಕಪ್ಪೆಗಳು, ಹಸಿರು ಜೇಡಗಳು ಕಾಣಸಿಗುತ್ತದೆ. ಎಲ್ಲೊ ಹಾರಾಡುವ ಚಿಟ್ಟೆಗಳ ವಿಷಯ ತಿಳಿದು ಅಲ್ಲಿಗಾಗಮಿಸುವ ಸಾವಿರಾರು ಹಕ್ಕಿಗಳು.





ಯೂರೋಪಿನಿಂದ ವಲಸೆ ಬರುವ ಹಕ್ಕಿ ಎಂದರೆ ನೀವು ನಂಬುವಿರಾ
ಯುರೋಪಿನಿಂದ ಭಾರತಕ್ಕೆ ಬರುವ ಗುಬ್ಬಚ್ಚಿ ಗಾತ್ರದ, ಕುಂಡೆ ಕುಸ್ಕದಂತಹ ಹಕ್ಕಿಗಳು! ಕೇವಲ ಹಣ್ಣು ತಿನ್ನುವ ಹಕ್ಕಿಗಳು. ಜೋಡಿಯ
ಲ್ಲೇ ಇರುವ, ಬೇರಾದರೆ ಒಂಟಿಯಾಗಿ ಬದುಕುವ ಹಕ್ಕಿಗಳು, ಒಂದೆ ಎರಡೆ. ಇವಿಸ್ಟೆ ಅಲ್ಲ, ನಮ್ಮ ಅನುಭವಕ್ಕೆ ಬಾರದ ಎಷ್ಟೋ ಜೀವಿಗಳು ನಮ್ಮ ಸುತ್ತಮುತ್ತಲಿವೆ. ಇತಂಹ ಎಷ್ಟನ್ನು ನಾವು ನೋಡದೇ ಬಿಟ್ಟಿದ್ದೇವೋ ಏನೋ!


ಸಂದರ್ಭದಲ್ಲಿ ತೇಜಸ್ವಿಯವರ ಒಂದು ಮಾತು ನೆನಪಿಗೆ ಬರುತ್ತದೆ. ನೋಡುವವರಿಗಾಗೆ ಯಾವುದು ಕಾದು ಕುಳಿತಿರುವುದಿಲ್ಲ. ಅದನ್ನೆಲ್ಲಾ ನೋಡಲು ಎಲ್ಲಿಗಾಗಲೀ ಹೋಗುವ ಅಗತ್ಯವಿಲ್ಲ ನಾವು ಎಲ್ಲಿದ್ದೆವೋ ಅಲ್ಲೇ ಅತ್ತಿತ್ತ ಕಣ್ಣು ಬಿಟ್ಟು ನೋಡಿದರೆ ಸಾಕು.
ಪಶ್ಚಿಮ ಘಟ್ಟದ ತಪ್ಪಲಿನ ಒಂದು ಗ್ರಾಮಕ್ಕೆ ಹೋ
ಗಬೇಕಾಗಿ ಬಂದ ಸಂದರ್ಭದಲ್ಲಿ ಕಂಡು ಬಂದ ಹಕ್ಕಿ ಪ್ರಸಂಗವನ್ನು ನಿಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ.

ಎರೋಪ್ಲೇನ್ ಚಿಟ್ಟೆಗಳು ದೊಡ್ಡ ಗಾತ್ರದವು, ಸುಲಭವಾಗಿ ಯಾವ ಹಕ್ಕಿಗೂ ಆಹಾರವಾಗಲಾರದ ಕೀಟ. ಆದರೂ ಅತಂಹ ಕೀಟವನ್ನೂ ಹಿಡಿಯುವ ಪಕ್ಷಿಗಳಿವೆ! ತಮ್ಮ ಸಾಮಥ್ರ್ಯದ ಹಲವು ಪಟ್ಟು ದೊಡ್ಡದಾದ ಇವನ್ನು ಹಿಡಿಯಲು ಮಲೆನಾಡಿನಲ್ಲಿ ಗಿಣಿಗಾರಲು ಎಂಬ ವಿಶಿಷ್ಟ ಹಕ್ಕಿಗಳು ಕಾದು ಕುಳಿತಿರುತ್ತದೆ. ಬೇಲಿಗಳ ಮೇಲೆ, ವಿದ್ಯುತ್
ತಂತಿಗಳ ಮೇಲೆ , ಕುರುಚಲು ಕಾಡುಗಳಲ್ಲಿ, ಮಳೆಗಾಲ ಮುಗಿದ ಕೂಡಲೆ ಹುಟ್ಟುವ ಎರೋಪ್ಲೇನ್ ಚಿಟ್ಟೆಗಳುನ್ನು ಭಕ್ಷಣೆ ಮಾಡುತ್ತಿರುತ್ತದೆ. ಎರೋಪ್ಲೇನ್ ಚಿಟ್ಟೆಗಳು ಹುಟ್ಟುವ ಮೊದಲು ಅಜ್ಞಾತವಾಗಿರುವ ಹುಟ್ಟಿದ ಕೂಡಲೆ ದಿಗ್ಗನೆ ಮಲೆನಾಡಿನಾದ್ಯಂತ ಕಾಣಿಸಿಕೊಳ್ಳುತ್ತವೆ.
ಅತ್ಯಂತ ವಿಶಿಷ್ಟ ಬಣ್ಣಗಳಲ್ಲಿ ಕಂಡುಬರುವ ಅತಿ ಸುಂದರ ಹಕ್ಕಿ. ಕೆಂಪು ಕುತ್ತಿಗೆಯ ನೀಲಿ ಬಾಲದ, ನೀಲಿ ಕುತ್ತಿಗೆಯ ಹಸಿರು ಬಾಲದ ಚಿಕ್ಕ ಗಾತ್ರದ, ನೀಲಿ ಗಡ್ಡದಂತಿರುವ ಕುತ್ತಿಗೆಯ ದೊಡ್ಡ ಗಾತ್ರದ ಮೊತ್ತೊಂದು ಹಕ್ಕಿ
ಸಹ ಕಂಡುಬರುತ್ತದೆ.
ಗುಳಕಾಯಿಸಲೆಂದು ಎರೋಪ್ಲೇನ್ ಚಿಟ್ಟೆಯೊಂದನ್ನು ಗಿಣಿಗಾರಲು ಹೆಕ್ಕಿಕೊಂಡು ಬಂತು. ಸರಿ ನಿಧಾನಕ್ಕೆ ತಿನ್ನೊಣವೆಂದು ಕೊಂಬೆಯ ಮೇಲೆ ಕೂತಿತು. ಕೊಂಬೆಗೆ ಎರೋಪ್ಲೇನ್ ಚಿಟ್ಟೆಯನ್ನು ತಬಲ ಬಡಿಯುವಂತೆ ಬಡಿಯಲಾರಂಬಿಸಿತು. ಅಷ್ಟರಲ್ಲಿಯೇ ಎರೋಪ್ಲೇನ್ ಚಿಟ್ಟೆ ತಪ್ಪಿಸಿಕೊಂಡಿತು. ಆದರೂ ಚಲ ಬಿಡದೆ ಮತ್ತೊಮ್ಮೆ ಹಿಡಿಯಿತು. ಬಾರಿ ಮಾತ್ರ ಚನ್ನಾಗಿಯೇ
ತಪ್ಪಿ ಹೋಯಿತಲ್ಲೆ....

ಬಡಿದು ಸಾಯಿಸಿ ತಿಂದಿತು. ಗುಳಕಾಯಿಸುವಾಗ ಅದರ ಗಂಟಲನ್ನು ಗಮನಿಸಿ. ಅದರಷ್ಟೇ ದೊಡ್ಡದಾಗಿದೆ.

Bee eater.



ಅಂತು ತಿಂದೇ ಬಿಟ್ಟೆ.










ಶ್ರೀಧರ್. ಎಸ್. ಸಿದ್ಧಾಪುರ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...