Sunday, June 30, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...4

ಇಲ್ಲೂ ಇದೆ ನೋಡಿ ಒಂದ್ ಶಾಲೆ:- 
10,200 ಅಡಿ ಎತ್ತರ. 3,000 ಜನಸಂಖ್ಯೆಯ ಈ ಹಳ್ಳಿಯಿರುವ ಪರ್ವತದ ತುತ್ತ ತುದಿಯಲ್ಲಿ ಶಾಲೆ ಇದೆ ಎನ್ನುವುದೊಂದು ವಿಶೇಷ. ಶಾಲೆಯನ್ನು ಕಡಿದಾದ ಪರ್ವತಗಳು ಸುತ್ತುವರಿದಿದೆ. ಈ ಶಾಲೆ ಕೇವಲ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.  
ಮಕ್ಕಳ ಸಂಖ್ಯೆ 300ಕ್ಕೂ ಅಧಿಕ. ಪ್ರತಿದಿನವು ಇಬ್ಬರು ಶಿಕ್ಷಕರು 2.5 ಗಂಟೆಗಳ ಪರ್ವತಗಳ ಸೆರಗನ್ನು ಕಡಿದಾದ ಕಡೆಗಳಲ್ಲಿ ಹತ್ತಿ ಬರುತ್ತಾರೆನ್ನುವುದು ವಿಶೇಷ. ನಾವು ಕೇವಲ 1 ಕಿ.ಮಿ. ನಡಿಗೆಗೆ ಹೆದರುವಾಗ ಈ ಶಿಕ್ಷಕರು ವರ್ಷವಿಡಿ ನಾಜೂಕಾದ ಪರ್ವತ ಎರುತ್ತಾ, ಮಳೆಗಾಳಿಗೆ ಲೆಕ್ಕಿಸದೆ ಪಾಠ ಪ್ರವಚನ ಮಾಡುವುದನ್ನು ನೋಡುವುದೊಂದು ರೋಮಾಂಚನ. 
ನಾವು ಪರ್ವತವೇರುವ ಸಂದರ್ಭ ಅಲ್ಲಿನ ಶಿಕ್ಷಕರನ್ನು ನೋಡಿ ಮಾತನಾಡಿಸಿದೆವು. ಸಂಜೆಯ ವೇಳೆಗೂ ಅವರು ಲವಲವಿಕೆಯಿಂದ ಮಾತನಾಡಿಸಿ ಉಪಚರಿಸಿದರು. ಸರಳ ಕಟ್ಟಡದ ಈ ಶಾಲೆ ಮನ ಸೆಳೆಯಿತು. ಶಾಲೆ ಬಿಟ್ಟ ಕೂಡಲೆ ಕೆಲವು ಮಕ್ಕಳು ಮರದ ಮೇಲೆ ಹತ್ತಿ ನಮಗೆ ಸರ್ಕಸ್ ತೋರಿಸತೊಡಗಿದರು. ನಾವು ಅವರ ಕೆಲವು ಪೋಟೊ ತೆಗೆದುಕೊಂಡೆವು ಅವರೆಲ್ಲಾ ನಾಚಿಕೆಯಿಂದ ಮುಖ ತಪ್ಪಿಸಿಕೊಂಡರು. ನಮಗೋ ಮಲಾನ ಸಂದಶರ್ಿಸಿದ ಖುಷಿಯಲ್ಲಿ ತೇಲುತ್ತಾ ಸಾಗಿದೆವು. ಸರಿಯಾಗಿ ಪೋಟೊ ತೆಗೆಯಲಾಗಲಿಲ್ಲ. ಮಲಾನಕ್ಕೆ ನಮಗೆ ಮೊದಲು ಸ್ವಾಗತಿದ್ದೆ ಈ ಶಾಲೆಗಳು ಮತ್ತು ಅಲ್ಲಿನ ಶಿಕ್ಷಕರು ಎನ್ನುವುದು ವಿಶೇಷ. ದಾರಿ ತಪ್ಪಿತೆನ್ನುವಾಗ ಸಿಕ್ಕದ ಖುಷಿಯಲ್ಲಿದ್ದೆವು.



 ಇಲ್ಲಿಂದ ಎಲ್ಲಿಗೆ:-

ಇಲ್ಲಿಂದ ಅನೇಕ ಸುಂದರವಾದ ಸ್ಥಳಗಳನ್ನು ನೋಡಬಹುದು. ಮಣಿಕರಣ್, ನಗ್ಗರ್ನ ರೋರಿಚ್ ಮ್ಯೂಸಿಯಂ, ಬಿಜಲಿ ಮಹಾದೇವ, ಮಹಾದೇವ ತೀರ್ಥ ಮುಂತಾದ ಅತಿ ಹತ್ತಿರದ ಸ್ಥಳಗಳಿವೆ. ಅಲ್ಲದೇ ಮನಾಲಿ, ಹಿಡಿಂಬಾ ದೇವಸ್ಥಾನ, ಮನು ದೇವಸ್ಥಾನ, ರೋಥಾಂಗ್ ಪಾಸ್, ಬಿಯಾಸ್ ಕುಂಡ್ ಮುಂತಾದ ಪಟ್ಟಿ ಮಾಡಲಾಗದಷ್ಟು ಅನೇಕ ಸ್ಥಳಗಳಿವೆ. ಇಲ್ಲಿಂದ ಮಲಾನ ಕಣಿವೆಯನ್ನು ನೋಡಬಹುದು. 
ಚಂದ್ರಕಣಿ ಪಾಸ್ ಎನ್ನುವ ಸುಂದರ ಸ್ಥಳ ನೋಡಲು ಇಲ್ಲಿಂದ ಕೇವಲ 4 ಗಂಟೆಯ ದಾರಿ. ಚಂದ್ರಕಣಿ ಚಾರಣವನ್ನು ಸಹ ಇಲ್ಲಿಂದಲೂ ಕೈಗೊಳ್ಳಬಹುದು. ಅದ್ಭುತವಾದ ಪಾರ್ವತಿ ಕಣಿವೆ, ಹಿಮಾಲಯದ ವಿವಿಧ ಬೆಟ್ಟಗಳ ದರ್ಶನಮಾಡಲು ಚಂದ್ರಕಣಿ ಪಾಸ್ ಚಾರಣ ಮಾಡಬಹುದು.
(ಮುಂದುವರಿಯುವುದು .... )

Thursday, June 6, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...3

ಹಾಳುಗೆಡವಿದ ಹೈಡೋ ಪ್ರಾಜೆಕ್ಟ್
ನಿನಾದದ ಮಲಾನಾ ನದಿ. 
ಮಲಾನದ ಜನರು  ತಮ್ಮಷ್ಟಕ್ಕೆ ತಾವು ಆರಾಮವಾಗಿದ್ದರು. ಅವರದ್ದೇ ಕೃಷಿ, ಹೈನುಗಾರಿಕೆ  ಮತ್ತಿತರೇ ಉದ್ಯೋಗದಲ್ಲಿ ಅವರದೇ ಆಟಗಳಲ್ಲಿ  ಮಜವಾಗಿದ್ದರು. ಆದರೆ ದಶಕದಿಂದೀಚಗೆ ಅಲ್ಲೊಂದು ಹೈಡ್ರೋಪ್ರಾಜೆಕ್ಟ್ ಕಾಲಿಟ್ಟಿತು ನೋಡಿ ಅಲ್ಲಿಂದ ಮಲಾನದ ನಕ್ಷೆಯೇ ಬದಲಾಯಿತು. ಮಲಾನ ನದಿಯಲ್ಲಿ ಕಷ್ಟ ಪಟ್ಟು ದಾಟಿ ಜನರು ಅಲ್ಲಿಗೆ ಹೋಗ ಬೇಕಾಗಿತ್ತು. ಹಾಗಾಗಿ ಜನರಿಗೆ ಹೊರಗಿನ ಸಂಪರ್ಕವೇ ಇರಲಿಲ್ಲ, ನೋಡ ಬೇಕೆಂದರೆ ಕನಿಷ್ಟ 20 ಕಿ.ಮೀ ನಡೆಯಬೇಕಿತ್ತು. ಅಲ್ಲಿನ ಜನರ ಮುಗ್ದತೆ ಹಾಗೆ ಉಳಿಯುತ್ತಿತ್ತು. ಹಿಂದೆ ಹೋದವರು ಅಲ್ಲಿನ ವರ್ಣನೆ ಕೇಳಿ ಹೋದರೆ ಬ್ರಮನಿರಸನವಾಗುದರಲ್ಲಿ ಆಶ್ಚರ್ಯವಿಲ್ಲಾ. 
     


ಹೈಡ್ರೋ ಪ್ರಾಜೆಕ್ಟ್ ಗೆ ಮಾಡಿದ ರಸ್ತೆಯ ವಿಹಂಗಮ ನೋಟ. 
ಅಂಥ ಸೌಂದರ್ಯದಿಂದ ಕೂಡಿದ ಮಲಾನ ಈಗ ಮಲೀನವೆನ್ನುವಷ್ಟು ಮಲೀನವಾಗಿದೆ. ಶುದ್ಧ ಜಲಮೂಲಗಳು ಸಹ ಹಾಳಾಗಿವೆ ಎನ್ನುವಾಗ ವಿಷಾದವಾಗುತ್ತದೆ. ಮಲಾನದಲ್ಲಿ ಈಗ ಪ್ಲಾಸ್ಟಿಕ್ಮಯ ವಾತವಾರಣ. ಅಲ್ಲಲ್ಲಿ ಲೇಸ್ ಪ್ಯಾಕೆಟ್ಟುಗಳನ್ನು, ಚಾಕಲೇಟ್, ಐಸ್ಕ್ರೀಮ್ ತಟ್ಟೆಗಳು ಕಾಣಸಿಗುತ್ತವೆ. ಐಸ್ಕ್ರೀಮ್ ಮಾರುವವರು 20-30 ಕಿ.ಮೀ. ನಿಂದಾಚೆಯಿಂದ ತಂದು ಇಲ್ಲಿ ಮಾರುತ್ತಾರೆ! ಮಾರುವವರು ಮಕ್ಕಳು ನಡೆದೇ ಬರುತ್ತಾರೆ!
ಆದಷ್ಟು ಇಲ್ಲಿನ ಪರಿಸರವನ್ನಾದರೂ ರಕ್ಷಿಸುವುದು ಅಗತ್ಯ.

ಧಮ್ ಹೊಡಿ ಬೇಕೆ?
ಇಲ್ಲಿನ ಇನ್ನೊಂದು ವಿಶೇಷತೆ, ನಮ್ಮ ಕಾನೂನುಗಳು ಇವರಿಗೆ ಲಾಗೂ ಆಗದೇ ಇರುವುದು. ಇಲ್ಲಿ ಪೋಲಿಸ್ ಹಸ್ತಕ್ಷೇಪವಾಗಲೀ, ರಾಜಕೀಯ ಹಸ್ತಕ್ಷೇಪ ಇಲ್ಲದೇ ತಮ್ಮದೇ ವಿಶೇಷವಾದ ಸರಕಾರ ಸ್ಥಾಪಿಸಿಕೊಂಡು ಆಡಳಿತ ನಡೆಸುತ್ತಾರೆ. ಎಲ್ಲದಕ್ಕೂ ಗ್ರಾಮದ 'ಮುಖ್ಯ' ನೋಡಿಕೊಳ್ಳುತ್ತಾನೆ. ಎಲ್ಲದೂ ಅವನ ಮೇಲುಸ್ಥುವಾರಿಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿನ ಜನರು ಸ್ವತಂತ್ರರು. ಇವರ ಅವಶ್ಯಕತೆಗಳು ತುಂಬಾ ಕಡಿಮೆ ಹಾಗಾಗಿ ನಿತ್ಯ ಸಂತೋಷಿಗಳು. ಯಾಕೊ ಏನೋ ಸರಕಾರದ ಹಸ್ತಕ್ಷೇಪ ಇಲ್ಲಿ ಬಹಳ ಕಡಿಮೆ. ಹಾಗಾಗಿ ಇವರು ಅಮಲು ಪದಾರ್ಥ ಬೆಳೆಯುತ್ತಾರೆ. 
ಅಲ್ಲಿನ ಕುರಿ ಕಾಯುವ ಅಜ್ಜನೊಂದಿಗೆ. 



    ನಾವಿಲ್ಲಿಗೆ ಹೋದಾಗ ಅಲ್ಲಿನ ಕುರಿಕಾಯುವವ ನಿಮಗೆ ಜರಸ್ ಬೇಕೆ ಎಂದು ಕೇಳಿದ. ಅದೂ ಯಾವುದೇ ಆತಂಕವಿಲ್ಲದೇ! ನಾವಂತೂ ದಂಗು ಬಡಿದು ಕುಳಿತೆವು, ನಿರಾಕರಿಸಿದೆವು. ಇಲ್ಲಿ ಜರಸ್ ಎನ್ನುವುದು ಅತಿ ಸಾಮಾನ್ಯವಾದ ಸಂಗತಿ! ಶಾಲಾ ಮಸ್ತರರನ್ನು ಭೇಟಿಯಾದೆವು! ಇಲ್ಲಿಯೂ ಒಬ್ಬ ಶಾಲಾ ಮಾಸ್ತರರೆ ಎಂದು ಕೇಳಬೇಡಿ. ಇಲ್ಲಿಯೂ ಒಂದು ಶಾಲೆ ಇದೆ ಅದರ ಬಗ್ಗೆ ಟಿಣಜಡಿಣಟಿರ ಆದ ವಿಷಯ ಮುಂದಿನ ಬಾರಿ ತಿಳಿಸುವೆ. ಅಲ್ಲಿಯವರೆಗೆ ವಿರಾಮ...



ಮಲಾನಾದ ಹಳೆ ಕಟ್ಟಡ ಸಣ್ಣ ದೇವರ ಗುಡಿ . 

Saturday, June 1, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...2

ಚಾರಣದ ಅನುಭವ

ಚಾರಣದ ನಡುವೆ 
ಹಿಮಾಲಯವೆಂದರೆ ಮೊದಲಿಗೆ ನೆನಪಿಗೆ ಬರುವುದು ಹಿಮ ಮತ್ತು ಇಲ್ಲಿನ ಚಾರಣದ ಕ್ಲಿಷ್ಟತೆ. ಸಾದಾರಣ ದೇಹ ಸ್ಥಿತಿಯವರಿಗೆ ಅಸಾಧ್ಯವೆಂಬ ಬಾವ. ಅಂತಹ ಆತಂಕಗಳೊಂದಿಗೆ ಹಿಮಾಲಯ ತಪ್ಪಲಿನ ಮಲಾನದ ಬಳಿಯ ಪರ್ವತವೇರಲು ತೀಮರ್ಾಸಿದೆವು. ದೂರದಿಂದ ನೋಡಿದರಂತೂ ಅಸಾಧಾರಣ ಗಿರಿ ಶ್ರೇಣಿಗಳಂತೆ ಅದು ಭಾಸವಾಗುತ್ತದೆ. 








10,200 ಅಡಿಗಳ ಎತ್ತರ. ಕಡಿದಾದ ಶಿಖರಗಳು. ಆಮ್ಲಜನಕದ ಕೊರತೆ. ಪೈನ್ಮರಗಳ ಎಲೆಗಳಿಂದ ಇಚಿಂಚಿಗೂ ಜಾರುವ ಕಲ್ಲುಗಳು. ಎರಡಿಂಚೂ ವ್ಯತ್ಯಾಸವಾದರೂ ಕಣಿವೆ ಪಾಲಾಗುವ ಭೀತಿ ಎಂತಹ ಗಂಡೆದೆಯನ್ನು ನಡುಗಿಸಿ ಬಿಡುವುದು. ಅನಿರೀಕ್ಷಿತವಾಗಿ ಬೀಳುವ ಮಳೆ, ಚಾರಣಿಗರನ್ನು ಮತ್ತೂ ಹೈರಾಣ ಮಾಡಿಬಿಡುತ್ತದೆ. ಸುಂದರ ಪ್ರಕೃತಿಯೂ ಭೀಕರವಾಗಿ ಕಾಣಿಸುತ್ತದೆ.








ಬೆಟ್ಟದ ಮೇಲಿಂದ ಕಾಣುವ ಹಿಮ ಬೆಟ್ಟಗಳ ಮನ್ಮಯ ನೋಟ 
ಬುಂತರ್ ಎಂಬ ಊರಿನಿಂದ ನಾವಿಲ್ಲಿಗೆ ಕಾಲಿಟ್ಟಾಗ ಸುಮಾರು ಒಂದು ಗಂಟೆಯ ಸಮಯ. ಗಿರಿಯ ಸಮೀಪದ ವರೆಗೆ ವಾಹನ ಸೌಲಭ್ಯವಿದೆ. ಅಲ್ಲಿಂದೇನಿದ್ದರು ನಿಮ್ಮ ಕಾಲುಗಳು ನಿಮ್ಮ ಸಹಾಯಕ್ಕೆ. ನಿಧಾನಕ್ಕೆ ಮೋಡವೂ ಆವರಿಸುತ್ತಾ ಇರುವ ಸಮಯವದು. ಅಲ್ಲಿನ ಹತ್ತಿರದ ಹಳ್ಳಿಯವನೊಬ್ಬನಲ್ಲಿ ಮಲಾನಕ್ಕೆ ದಾರಿ ಕೇಳಿದೆವು. ಆತ ನಮಗೆ ಹೇಳಿದ ಪ್ರಕಾರ ನಾವಿರುವ ಸ್ಥಳದಿಂದ ಸುಮಾರು ಒಂದು ಗಂಟೆಯ ದಾರಿ. 





ಗೆಳೆಯ ನಾಗರಾಜನ ಫೋಟೋ ಸೆಶನ್ 

ಸರಿ ಕೇವಲ ಒಂದು ಗಂಟೆ ಎಂದು ಆತ ಹೇಳಿದ ದಾರಿಯಲ್ಲಿ ನಡೆಯ ತೊಡಗಿದೆವು. ನೆಡೆದು ನೆಡೆದು 3 ಗಂಟೆಯ ದಾರಿ ಸವೆಸಿದರೂ ಮಲಾನ ಹಳ್ಳಿ ಸಿಗಲಿಲ್ಲ! ಯಾವ ಒಂದು ಗಂಟೆ ಇದು ಎಂದು ಕೊಂಡೆವು. ನಾಳೆ ಮಧ್ಯಾಹ್ನ ಒಂದು ಗಂಟೆಯೆ? ಗೊಂದಲಕ್ಕೆ ಬಿದ್ದೆವು. ನಾವು ಖಂಡಿತವಾಗಿ ದಾರಿ ತಪ್ಪಿದವೆಂದು ತೀಮರ್ಾನಿಸಿದೆವು. ಏನಾದರಾಗಲಿ ಈ ಬೆಟ್ಟ ಹತ್ತಿಯೇ ನೋಡೊಣವೆಂದು ಹತ್ತ ತೊಡಗಿದೆವು. ಕಡಿದಾದ ದಾರಿ, ಆಮ್ಲಜನಕದ ಕೊರತೆಯಿಂದಾಗಿ ಅಲ್ಲಲ್ಲಿ ಕುಳಿತುಕೊಂಡು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಿದೆವು.

ಪರ್ವತದ ಇಳಿಜಾರಿನಲ್ಲಿ 

 ಕೇವಲ ಹತ್ತಿ ಬಟ್ಟೆ ಮತ್ತು ಬಮರ್ುಡದಲ್ಲಿ ಹತ್ತಿದ ನನಗೆ ಮಳೆ ಬಂದಿದ್ದರೆ 0 ಡಿಗ್ರಿಗೆ ಜಾರುವ ಉಷ್ಣಾಂಶವು ಪಚೀತಿಯನ್ನುಂಟುಮಾಡುತ್ತಿತ್ತು. ಅಲ್ಲದೇ ಮಳೆ ಬಂದರೆ ಮೋಡದಿಂದ ದಾರಿ ಕಾಣಿಸದೆ ದಾರಿ ತಪ್ಪುವ ಅವಕಾಶ ಬಹಳವಾಗಿತ್ತು. ದಾರಿ ತಪ್ಪಿದ ಹಿಮಾಲಯದ ಚಾರಣಿಗರು ಅಲ್ಲಿಯೇ ಲೀನವಾದ್ದದೂ ಇದೆ. ಹಾಗಾಗಿ ಜಾಗ್ರತೆಯಿಂದ ಒಟ್ಟಿಗೆ ಸಾಗಿದೆವು. ಅಂತೂ ಪರ್ವತದ ತುತ್ತ ತುದಿಯ ತನಕವೂ ಮೋಡಗಳು ಮಾತ್ರ ನಮ್ಮನ್ನು ಸ್ವಾಗತಿಸಿದವು. 





ದೂರದಲ್ಲಿನ ಕೆಲವು ಮನೆಗಳು 




ಪರ್ವತದ ತುದಿಗೇರಿದಾಗ ಹಲವು ಸಂದೇಹಗಳು ಉಂಟಾದವು. ಅಲ್ಲಿ ಯಾವುದೇ ಮನೆಗಳು ಇರದೇ ಇದ್ದದ್ದು, ದೂರದಲ್ಲಿ ಕೆಲವು ಮನೆಗಳು ಕಾಣಸಿಕ್ಕವು. ಅದೇ ಮಲಾನವಿರಬಹುದೇ ಎಂದುಕೊಂಡೆವು. ಅವು ಇರುವ ದೂರವನ್ನು ನೋಡಿದರೆ ಅಲ್ಲಿಗೆ ತಲುಪಲು ನಮಗೆ ಎನಿಲ್ಲವೆಂದರೂ ಇನ್ನರ್ಧ ದಿನ ಬೇಕಾಗಿತ್ತು. ನಿರಾಶೆಯ ಗಡಲಲ್ಲಿ ಮುಳುಗಿರುವಾಗ ಅಲ್ಲಿಗೊಬ್ಬ ಕುರಿ ಕಾಯುವವ ಕಾಣಿಸಿದ. 


ಆತನನ್ನು ಮಾತನಾಡಿಸಿದೆವು, ಮಲಾನಕ್ಕೆ ಹೋಗುವುದು ಹೇಗೆಂದು ಕೇಳಿದೆವು. ಇಲ್ಲಿಂದ ಕೇವಲ ಐದು ನಿಮಿಷದ ದಾರಿ ಎಂದ. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲಿ. ಏನೋ ಸಾಧಿಸಿದ ತೃಪ್ತಿ. ಸರಿ ಎಂದು ಅವನಿಗೆ ವಂದಿಸಿ, ಸ್ವಲ್ಪ ಒಣ ದ್ರಾಕ್ಷಿಯನ್ನು ಕೊಟ್ಟೆವು. ಆತ ಸಿಗರೇಟ್ ಇಲ್ಲವೇ? ಎಂದ. ಮುಂದಿನ ಬಾರಿ ಬರುವಾಗ ನಿಮಗೆ ಖಂಡಿತಾ ಸಿಗರೇಟ್ ತರುತ್ತೇವೆಂದು ಹೇಳಿ ಮುಂದುವರಿದೆವು. ಹಿಂದಿನ ಹಳ್ಳಿಗ ಕೇವಲ ಒಂದು ಗಂಟೆಯಲ್ಲಿ ಏರಬಹುದೆಂದಿದ್ದ. ನಮಗೆ 3 ಗಂಟೆ ಹಿಡಿಯಿತು. ಇತನ 5 ನಿಮಿಷ ನಮಗೆಷ್ಟು ಹೊತ್ತೊ ಎಂದು ಮನದಲ್ಲೇ ಲೆಕ್ಕಚಾರ ಹಾಕುತ್ತಾ ಸಾಗಿದೆವು.

ಅಂತೂ ಬಂತು ಮಲಾನ
ಪರ್ವತ ಏರಿ ಸ್ವಲ್ಪವೇ ಇಳಿದಾಗ ಅಚ್ಚರಿ ಕಾದಿತ್ತು. ನಿಜವಾಗಿ ನಾವು ಮಲಾನದ ಹಾದಿಯಲ್ಲಿದ್ದೆವು ಎಂಬ ಸಂತೋಷವೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ನನ್ನ ಗೆಳೆಯ ನಾಗರಾಜನಂತು ಚಿಗರೆಯಂತೆ ಜಿಗಿಯುತ್ತಾ ಆ ವಿಶಿಷ್ಟ ಜನರನ್ನು ಭೇಟಿಯಾಗಲು ಓಡತೊಡಗಿದ! ಈ ವಿಶಿಷ್ಟಾನುಭೂತಿಯನ್ನು ಅನುಭವಿಸಲು ಕಾತರರಾಗಿ ಹಳ್ಳಿ ಕಡೆಗೆ ನಡೆದೆವು.
ಮಲಾನ ಕಣಿವೆಯ  ಒಂಟ ಮನೆ 
ಹಲವು ವಿಶಿಷ್ಟತೆಗೆ ಹೆಸರು ಮಾಡಿದ ಈ ಹಳ್ಳಿ ನನ್ನಲ್ಲಿ ಸಂಚಲನೆಯನ್ನೇ ಉಂಟುಮಾಡಿತು. ಅದನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳವೆ.

ಪರ್ವತ ಸೆರಗಿನಲ್ಲಿರುವ ಮೋಹಕ ಮಲಾನ ಹಳ್ಳಿ 

















ಮುಂದುವರಿಯುವುದು......

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...