Saturday, July 20, 2013

ಶಿವಮೊಗ್ಗ ಜಿಲ್ಲೆಯ ಅನನ್ಯ ಅವಶೇಷಗಳು..


 ವಿದ್ವಂಸಗಳನ್ನು ಮತ್ತು  ವಿದ್ರೋಹಗಳನ್ನು ಈ ದೇಶ ಬಹಳಷ್ಟು ಕಂಡಿದೆ. ಉಚ್ಚ ನೈತಿಕತೆಯನ್ನು ಹೊಂದಿದ ದೇಶ ಹೀಗೆಕಾಯಿತು ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಉತ್ತರ ಹುಡುಕುವುದು ಬಲು ಕಠಿಣ. ನಮಗೆ ನಮ್ಮ ಇತಿಹಾಸದ, ಸಾಹಿತ್ಯದ ಬಗೆಗೆ ಹೆಮ್ಮೆ ಉಳಿಯದಂತಾಗುವಷ್ಟು ಕೊಡಲಿ ಏಟನ್ನು ಬ್ರಿಟಿಷ್ರಿಂದ ತಿಂದ್ದಿದ್ದೇವೆ. ಮೊದಲು ನಾನು ನಂತರ ದೇಶವೆನ್ನುವ ಭಾವ ನನ್ನಂಥ ಯುವ ಜನರಲ್ಲಿ ಮನೆ ಮಾಡಿರುವುದು ಕಳವಳಕಾರಿ ಸಂಗತಿ. ದೇಶದ ಬಗೆಗೆ ಅಭಿಮಾನ ಕೆಲವೇ ಕೆಲವು ಜನರಲ್ಲಿ ಮಾತ್ರ ಉಳಿದಿದೆಯೇನೋ ಎನ್ನುವಷ್ಟು ಕಳವಳವಾಗುತ್ತದೆ. ಹೀಗೇಕಾಯಿತೆಂದು ನಮ್ಮ ಹಿರಿಯರು ಚಿಂತಿಸಿದ್ದಲ್ಲ, ನಾವು ಚಿಂತಿಸುತ್ತಿಲ್ಲ?!  17 ಬಾರಿ ದಂಗೆಗಳಾದಾಗ ನಾವು ಸುಮ್ಮನಿದ್ದೆವು. ನಮ್ಮ ಕಿರೀಟವೇ ಜಾರಿ ಹೋಗುವ ಸ್ಥಿತಿ ಬಂದರೂ ನಾವು ಸುಮ್ಮನಿದ್ದೇವೆ! ಇನ್ನೆಷ್ಟು ದಿನ ಈ ಗೊಂದಲ. ನಮ್ಮ ಶಿಕ್ಷಣದ ಗುಣಮಟ್ಟವೇ ಕಳಪೆಯೇ ಎನ್ನುವ ಸಂಶಯವೇ ನಮ್ಮನ್ನು ಕಾಡುತ್ತವೆ.
ಶಿವಮೊಗ್ಗದ ಹಲವು ಶಿಲ್ಪಕಲಾ ವೈಭವಗಳನ್ನು, ಹೊಯ್ಸಳ, ಚಾಲುಕ್ಯ ರಚನೆಗಳನ್ನು ಕಂಡು ಬಂದ ನಂತರ ನನಗನಿಸಿದ್ದು ಇದು. ಹೊಳೆ ಕೆರೆಗಳಲ್ಲಿ ಬಿದ್ದಿರುವ ಮೂತರ್ಿಗಳು, ನರಿ ನಾಯಿಗಳ ಮೂತ್ರ ಕುಡಿಯುತ್ತಾ ಬಿದ್ದಿರುವುದು ಅತಿಯಾದ ಆಶ್ಚರ್ಯಕ್ಕೆ ತಳ್ಳಿತು. ಸರಕಾರಕ್ಕೆ ಕಣ್ಣಿಲ್ಲವೆಂದು ತಿಳಿಯೋಣ ಆದರೆ ಅಲ್ಲಿನ ಸಹೃದಯರಿಗೆ, ಇತಿಹಾಸದ  ಆಸಕ್ತರಿಗೆ, ಸಾಹಿತ್ಯದ ಸಹೃದಯದ ಓದುಗರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅನಿಸಲಿಲ್ಲವೇ?? ಅಯ್ಯೋ...
ಸೆಪಿಯಾ ಬಣ್ಣದಲ್ಲಿ ಅದ್ದಿದ ಈ ಚಿತ್ರ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 




ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...