Thursday, April 21, 2016

'ನೀರು' ಕುಡಿಯುವವರೆಲ್ಲರೂ ಓದಲೇ ಬೇಕಾದುದು...


    ಆರ್ಥಿಕತೆಯ ಬೆನ್ನೇರಿ ಹೊರಟ ನಮಗೆ ಯಾವುದನ್ನು ಕಾಣುವ ತಾಳ್ಮೆಯಾಗಲಿ, ಸಮಯವಾಗಲಿ, ಸಂವೇದನೆಗಳ ಇಲ್ಲವಾಗಿಸಿಕೊಂಡು ನರಳುತ್ತಿದ್ದೇವೆ. ತಾತ, ಮುತ್ತಾತ ಮಾಡಿದ ನೀರಿನ ಆಸ್ತಿಯನ್ನೂ ಕರಗಿಸ ಹೊರಟು ನಮ್ಮ ಅಂಡನ್ನೇ ನಾವೇ ಸುಡಲು ಹೊರಟಿದ್ದೇವೆ. ಸಮಯ ಮೀರುವ ಮುಂಚೆ 'ನೀರಿನ' ಕುರಿತು ಯೋಚಿಸುವುದೊಳಿತು. ಸರಕಾರಿ ಕೃಪಾ ಪೋಷಿತ ನೀರಿಂಗಿಸುವ ಕಾರ್ಯಕ್ರಮಗಳು ಕೇವಲ ಹಾಳೆಯ ಮೇಲಿನ ಹಕ್ಕೀಕತ್ತುಗಳಾಗಿ ಉಳಿದಿವೆ. ನಮ್ಮ ಮಕ್ಕಳು, ಮೊಮ್ಮಕ್ಕಳು ನಮಗೇನು ಉಳಿಸಿದ್ದೀರಿ ಎಂದು ಕೇಳುವ ಪರಿಸ್ಥಿತಿ ತಂದು ಕೊಳ್ಳದಂತಾಗದಿರಲಿ. ಇಲ್ಲಿ ವಿಶ್ವವಾಣಿಯ ಎರಡು ಲೇಖನಗಳಿವೆ. ದಯವಿಟ್ಟು ಓದಿ.


Monday, April 4, 2016

ಕಾಡು ಕೃಷಿಯ ತೋಟದ ನಡುವೆ ಮಕ್ಕಳ ಕಲಿಕೆ.....


    ನಿಶ್ಯಬ್ದ ಏಕಾಂತ. ಮೇಲು ಗೊಬ್ಬರ ಇಲ್ಲದೇ ಹುಲುಸಾಗಿ ಬೆಳೆದ ಅಡಿಕೆ ಗಿಡಗಳು. ತರೇವಾರಿ ಬೆಳೆಗಳು, ನಡುವೆ ನಲಿವ ಮಕ್ಕಳು. ಕಲಿಕೆಗೆ ಹೊಸ ಸ್ಪರ್ಶ ನೀಡುವ ಉದ್ದೇಶದಿಂದ, ಶಾಲಾ ಕೊಠಡಿ ಒಳಗಿನ ಬೋಧನೆಯ ಏಕತಾನತೆಯನ್ನು ಮುರಿದು, ಮಕ್ಕಳಿಗೆ ಕೃಷಿ ಅನುಭವಗಳು ಸಿಗುವಂತಾಗಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇಲ್ಲಿನ ವಿದ್ಯಾಥರ್ಿಗಳಿಗೆ ಪ್ರಸನ್ನ ಅಡಿಗ ಕೊಡ್ಲಾಡಿ ಇವರ ತೋಟಕ್ಕೆ ಹೊರಸಂಚಾರ ಆಯೋಜಿಸಲಾಯಿತು.
    'ಸಹಜ' ತೋಟದಲ್ಲೊಂದು ದಿನ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಶೋಕ್ ಕಾಮತ್ ವೆನಿಲಾ ಹೂವನ್ನು ಪರಾಗ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.









ಕಾರ್ಯಕ್ರಮದ ಕೇಂದ್ರ ಬಿಂದು ಪ್ರಸನ್ನ ಅಡಿಗರು ಸಹಜ ಕೃಷಿಯ ತಮ್ಮ ತೋಟದ ಇಂಚಿಂಚು ತೆರೆದು ತೋರಿಸಿದರು. ಅಡಿಕೆ ಕೃಷಿ ಮಾಡುವ ವಿಧಾನಗಳು, ಬೀಜಗಳ ಆಯ್ಕೆ , ಗೊಬ್ಬರವಿಲ್ಲದೇ ಅಡಿಕೆ ಬೆಳೆಸುವ ವಿಧಾನವನ್ನು ಮಕ್ಕಳಿಗೆ ತಿಳಿ ಹೇಳಿದರು. ಅಡಿಕೆ ಕೊಯ್ಲು ಮಾಡುವ ಕ್ರಮ, ನೀರು ಹನಿಸುವುದನ್ನು ವಿದ್ಯಾಥರ್ಿಗಳೊಂದಿಗೆ ಚಚರ್ಿಸಿದರು.
    ಹೈನುಗಾರಿಕೆಯ ಅನೇಕ ಒಳ ಸುಳಿಗಳನ್ನು ತಿಳಿಸಿಕೊಟ್ಟರು. ಗೋವುಗಳಿಗೆ ಬೇಕಾದ ಮೇವಿನ ಬೆಳೆ ತೆಗೆಯುವುದು. ಗೋವುಗಳಿಗೆ ನೀಡುವ ಪ್ರಮಾಣವನ್ನು ತಿಳಿಸಿದರು. ಗೋಬರ್ ಅನಿಲ ಸ್ಥಾವರದ ಪ್ರಾಮುಖ್ಯತೆ ವಿವರಿಸಿದರು. ಅನಿಲ ಸ್ಥಾವರ ಸ್ಥಾಪಿಸುಲು ಸಿಗುವ ಸೌಲಭ್ಯಗಳನ್ನು ಮಕ್ಕಳಿಗೆ ವಿವರಿಸಿದರು. ವಾಯು ಮಾಲಿನ್ಯ ನಿಯಂತ್ರಿಸಲು, ಕಾಡು ಉಳಿಸಲು ಇದೊಂದು ಪಯರ್ಾಯ. ಇದರೊಂದಿಗೆ ವೆನಿಲಾ ಕೃಷಿ, ಕಾಳು ಮೆಣಸಿನ ಕೃಷಿ, ಜೇನು ಕೃಷಿ, ಜೇನು ತುಪ್ಪ ತೆಗೆಯುವ ಯಂತ್ರದೊಂದಿಗೆ ತುಪ್ಪ ತೆಗೆಯುವ ಕ್ರಮ ತಿಳಿಸಿಕೊಟ್ಟರು.
    ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ, ಸಹ ಶಿಕ್ಷಕಿಯರಾದ ಮೀನಾಕ್ಷಿ, ಗೀತಾ ಹೆಗ್ಡೆ, ಮಮತಾ ಎಸ್. ಸಿದ್ದಾಪುರ, ಸಂಗೀತ, ಶ್ರೀಧರ ಎಸ್. ಸಿದ್ದಾಪುರ ಉಪಸ್ಥಿತರಿದ್ದರು.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...