Monday, October 16, 2017

ಮಾತಿಗೆ ಸಿಕ್ಕ ಆನೆಗಳು...

ಪ್ರಾರಂಭ
ಗಂಗಡಿ ಕಲ್ಲಿನ ನೆತ್ತಿಯಿಂದ....

                ವೈಶಾಖದ ಹೂ ಬಿಸಿಲು. ಮೋಡ ರವಿಯೊಡನೆ ಚಕ್ಕಂದಗಿಳಿದಿತ್ತು. ಆದರ್ೆ ಮಳೆ ಆಗಸ್ಟೇ ತನ್ನ ಆಗಮನದ ಸೂಚನೆ ನೀಡಿ ಹೋಗಿತ್ತು. ಮಳೆಗೆ ಎದ್ದ ಮಣ್ಣಿನ ವಾಸನೆ ಬೆರೆತು ಗಾಳಿ ಎಲ್ಲಾ ಕಡೆ ತನ್ನ ಪರಿಮಳ ಹರಡಿತ್ತು. ಆಗಲೇ ನಮ್ಮಿಬರ ಮೋಟಾರ್ ಬೈಕ್ ಕುದುರೆಮುಖದತ್ತ ತಿರುಗಿದ್ದು. ಅಲ್ಲಲ್ಲಿ ಮೊದಲ ಮಳೆಯ ಹೆಜ್ಜೆ ಗುರುತು ಹೂ ಪಕಳೆಗಳೆಂತೆ ಹರಡಿತ್ತು. ಭದ್ರೆಯ ಪ್ರೀತಿ ನಮ್ಮನ್ನು ಕಾದ ದೇಹಕ್ಕೆ ತಂಪನೆರೆಯುತ್ತಿತ್ತು. ಭದ್ರೆಯಲ್ಲಿ ಈಸು ಬಿದ್ದು, ಹೊಟ್ಟೆ ತುಂಬಾ ತಿಂದ ಮುದ್ದೆ ನಿದ್ರೆಗಾಹ್ವಾನ ನೀಡುತ್ತಿತ್ತು. ಭಗವತಿ ಪ್ರಕೃತಿ ಶಿಬಿರದ ಕತ್ತಲೆಯು ನಮ್ಮಿಬ್ಬರನ್ನು ಆಪೋಷನ ತೆಗೆದುಕೊಳ್ಳಲು ಹೆಚ್ಚು ಸಮಯ ಹಿಡಿಸಲೇ ಇಲ್ಲ.
ಬೆಳ್ಳಂಬೆಳಗ್ಗೆ ಶಿಖರದತ್ತ
ಮಳೆ ಮೋಡಗಳು......

ಇನ್ನೊಂದು ಬದಿಗೆ ತೀರಾ ಕಡಿದಾದ ಪರ್ವತಗಳು....


ಬೆಳಿಗ್ಗೆ ಎದ್ದಾಗ ಹಕ್ಕಿ ಚಿಲಿಪಿಲಿ. ಪಕೃತಿ ಶಿಬಿರದ ಮುಂಜಾವಿನ ಹನಿಗಳ ಮೇಲೆ ಹೆಜ್ಜೆ ಇಟ್ಟಾಗ ಬೆಳಗಿನ ಜಾವ ಐದು ಗಂಟೆ. ಕುದುರೆ ಮುಖದ ಎರಡನೇ ಎತ್ತರದ ಶಿಖರ ಗಂಗಡಿ ಕಲ್ಲೆಂಬ ಮಾಯಾಂಗನೆಯನ್ನು ಒಲಿಸಿಕೊಳ್ಳಲು ಸ್ವಲ್ಪ ದೂರ ಪ್ರಯಾಣ. ಸನಿಹದ ಭೂತ ರುದ್ರಾಕ್ಷಿ ಮರದಡಿ ಬೈಕ್ನ್ನಿಟ್ಟು  ಹೊರಟೆವು.
ಹಾವು ಹರಿದ ದಾರಿಯಲ್ಲಿ ಗೈಡ್ನೊಂದಿಗೆ ಪಯಣ. ಶೋಲಾ ಕಾಡಿಗೆ ಮೂಕವಿಸ್ಮಿತನಾಗಿ ಸಂಭ್ರಮಿಸುತ್ತಾ ಸಾಗಿದೆವು. ಇಬ್ಬನಿಗೆ ಹುಲ್ಲು ಹಾಸು ವಿಪರೀತ ಕೈಕೊಡುತ್ತಿತ್ತು. ಚಿಟ್ಟೆಗಳೊಂದಿಗೆ, ಜೇಡಗಳೊಂದಿಗೆ ಮಾತನಾಡುತ್ತಾ ಸಣ್ಣ ಸಣ್ಣ ಗುಡ್ಡಗಳನು ದಾಟಿ ವಿಪರೀತ ಕಡಿದಾದ ಬೆಟ್ಟದೆದುರಿಗಿದ್ದೆವು. ಶಿಖರಾಗ್ರಕ್ಕೆ ಕಾಲಿಡುತ್ತಿದ್ದಂತೆ ಸೂರ್ಯನೂ ಅಲ್ಲಿ ಹಾಜರಿ ಹಾಕಿದ್ದ.
ಶಿಖರದಲ್ಲಿ ಹೊಳೆವ ಸೂರ್ಯನ ಹಾಜರಿ

ಶಿಖರದ ಕಲ್ಲು ಎಳೆ ಬಿಸಿಲಿಗೆ ಹೊಳೆಯುತ್ತಿತ್ತು. ಪಶ್ಚಿಮದಲ್ಲಿ ಮೋಡಗಳು ಗುನುಗುತ್ತಿದ್ದವು. ಪೋಲಿಸರ ಸಿಗ್ನಲ್ ಟವರ್ ನಕ್ಸಲಾರ್ಭಟಕ್ಕೆ ಹೆಬ್ಬಾವಿನಂತೆ ಮಕಾಡೆ ಮಲಗಿತ್ತು. ಅದರೊಳಗಿನ ಬ್ಯಾಟರಿಯನ್ನವರು ಅಪಹರಿಸಿದ್ದರು. ಶಿಖರದ ನೆತ್ತಿಯ ಸಣ್ಣ ಅಡಗು ತಾಣದಲ್ಲಿ ನಮ್ಮ ಬುತ್ತಿಯಲ್ಲಿದ್ದ ಕೋಡುಬಳೆ, ಚಕ್ಕುಲಿ, ಹಣ್ಣು, ಹೆಸರು ಕಾಳನ್ನು ಹೊಟ್ಟೆಗೆ ವಗರ್ಾಯಿಸಿದೆವು. ಜಗತ್ತನ್ನು ಮರೆಸುವ ಸೌಂದರ್ಯಕ್ಕೆ ನಾವು ಮನಸೋತ್ತಿದ್ದೆವು. ಕ್ಯಾಮರಕ್ಕಂತೂ ಒಂದರೆಗಳಿಗೆಯೂ ಪುರುಸೊತ್ತಿಲ್ಲದೆ ಕ್ಲಿಕ್ಕಿಸುತ್ತಿತ್ತು. ದೂರದಲ್ಲಿ ಕಾಣಿಸಿದ ಕಾಡೆಮ್ಮೆ ನಮಗೆ ಪುಳಕವನ್ನುಂಟು ಮಾಡಿತ್ತು. ಹರಿವ ಹಳ್ಳವೊಂದು ಅಮ್ಮ ಒಣಗಲು ಹಾಕಿದ ಸೀರೆಯಂತೆ ತೋರುತ್ತಿತ್ತು. ಲಖ್ಯಾ ಡ್ಯಾಂ ದೂರದಲ್ಲೆಲ್ಲೊ ಕಾಣುತ್ತಿತ್ತು. ಗಂಗಡಿಕಲ್ಲಿನ ನೆರೆಹೊರೆಯ ಗೆಳೆಯರನ್ನು ಮಾತನಾಡಿಸಲು ಗೆಳೆಯ ನಾಗರಾಜ್ ಶಿಖರವನ್ನಿಳಿದು ಹೊರಟ. ಮುಳ್ಳುಹಂದಿ ತಮ್ಮ ಇರುವನ್ನು ತೋರಿಸಲು ಅಲ್ಲಲ್ಲಿ ಮುಳ್ಳುದುರಿಸಿದ್ದವು. ಅವೆಲ್ಲಾ ನನ್ನ ಬತ್ತಳಿಕೆಯನ್ನು ಸೇರಿಕೊಂಡವು. ಗಂಗಡಿಕಲ್ಲಿನ ಪೂರ್ವದ ಮುಖ ತೀರಾ ಕಡಿದಾಗಿತ್ತು.

ಇಳಿವ ಧಾವಂತ
ಇಳಿವಾಗ ಕಾಣುವ ವಿಹಂಗಮ ನೋಟ..ಬಿಳಿ ಗೀಟು ಬಿಟ್ಟು ಬಂದ ರಸ್ತೆ...

ಮೂಡಿ ಬರುತ್ತಿದ್ದ ಕೆಂಚಣ್ಣನಾದ ಸೂರ್ಯನಿಗೆ ಹಾಯ್ ಹೇಳಿ ಬೆಟ್ಟಕ್ಕೆ ಬಾಯ್ ಹೇಳಲು ತಯಾರಾದೆ. ಎರಡು ದಿನದ ಹಿಂದೆ ಹುಡುಗಿಯೊಬ್ಬಳು ಹುಡುಗಾಟಕ್ಕೆ ಬೆಟ್ಟದಲ್ಲಿ ಜಾರುಬಂಡಿಯಾಡಿ ಹಲ್ಲು ಮುರಿದುಕೊಂಡಿದ್ದಳು! ಎಂದ ನಮ್ಮ ಗೈಡ್. ನನಗಂತೂ ಜಾರುಬಂಡಿಯಾಡುವ ಇಷ್ಟವಿಲ್ಲವಾಗಿ ನಿಧಾನಕ್ಕೆ ಇಳಿಯತೊಡಗಿದೆ. ಏನೋ ಸಾಧಿಸಿದ ಪುಳಕದಿಂದ ಪುಳಕಿತನಾಗಿದ್ದೆ ಅವತ್ತು. ಅಂತಹ ಪುಳಕ ಹಿಮಾಲಯದ ಸನ್ನಿಧಿಯಲ್ಲೂ ನನಗಾಗಿಲ್ಲ! ಪೋಟೋ ತೆಗೆಯುವ ಹುಚ್ಚೊಂದು ಅಂಟಿಕೊಳ್ಳದಿದ್ದರೆ ಆ ಪುಳಕವೊಂದು ನನ್ನಲ್ಲಿ ಮೂಡುತ್ತಿತ್ತೊ ಏನೋ? ಕಡವೆ ಮೆಂದ ಸುಳಿವು, ಯಾವುದೋ ವಿಚಿತ್ರ ಸುವಾಸನೆಯ ಗಿಡ ಅಲ್ಲಲ್ಲಿ ಕಾಣಸಿಕ್ಕವು. ಬೆಟ್ಟವಿಳಿದು ಬೈಕ್ ಕಡೆಗೆ ಹೊರಟಾಗ, ಬಿಸಿಲತಾಪಕ್ಕೋ ರಾತ್ರಿಯ 'ನಶೆ ಸೇವೆಯ' ಪರಿಣಾವೋ ಎಂಬಂತೆ ಗೈಡ್ ತುಂಬಾ ಹಿಂದುಳಿದು ಬಿಟ್ಟ. ನಿಜವಾದ ಕತೆಯ ಥ್ರಿಲ್ ಪ್ರಾರಂಬವಾಗುವುದು ಇಲ್ಲಿಂದಲೇ.
ಆನೆಗಳೊಂದಿಗೆ ಮುಖಾಮುಖಿ
ನಿಧಾನಕ್ಕೆ ಹಿಂದೆ ಉಳಿದ ನಮ್ಮ ಮಾರ್ಗದರ್ಶಕ...

ಜಾಲಿ ಪ್ರಯಾಣದಲ್ಲಿ ನಾಗರಾಜ್


ನಾನು ನಾಗರಾಜ ರಸ್ತೆ ತಲುಪಿದ್ದೆವು. ಗೈಡ್ ನಮ್ಮ ಹಿಂದೆ ಬರುತ್ತಿದ್ದ. ಯಾವುದೋ ಮರದ ಬುಡದಲ್ಲಿಟ್ಟ ಬೈಕನ್ನು ತೆಗೆಯಲು ಹೋದ. ಆ ಜಾಗ ಸ್ವಲ್ಪ ಎತ್ತರದಲ್ಲಿತ್ತು. ಗೆಳೆಯ ನಾಗರಾಜ್ ನಮ್ಮ ಬೈಕ್ನ್ನು ಜಾಲಿ ರೈಡ್ಗೆಂದು ಎತ್ತರದ ದಿಬ್ಬದ ಕಡೆಗೆ ಬಿಟ್ಟುಕೊಂಡು ಹೋದ. ನಡುವಿನ ಇಳಿಜಾರಿನಲ್ಲಿ ನಾನೊಬ್ಬನೇ ನಿಂತಿದ್ದೆ. ಕೆಳಬಾಗದಲ್ಲಿ ದಾರಿ ಇಳಿಜಾರಿಗಿತ್ತು. ನಾಗರಾಜ ಎತ್ತರದ ಕಡೆ ಹೊರಟು ಹೋದ. ಅಗಲೇ ತಗ್ಗಿನಿಂದ ಬಂದ ಟಾಟಾ ಸುಮೊ ಒಂದು ನನ್ನನ್ನು ಬಳಸಿ ಮುಂದೆ ಸಾಗಿ ನಿಂತಿತು. ಈ ನೀರವ ಪ್ರದೇಶದಲ್ಲಿ ನಿಂತ ವಾಹನ ನೋಡಿ ಎದೆ ಧಸಕ್ಕೆಂದಿತು. ಯಾಕೆ ನಿಲ್ಲಿಸಿರಬಹುದು? ಪೋಲಿಸ್ ಯಾ ಫಾರೆಸ್ಟ್ ಡಿಪಾಟರ್್ಮೆಂಟಿನ ಜನರೇ ಎಂದೆಲ್ಲಾ ಮನಸ್ಸು ಯೋಚಿಸ ಹತ್ತಿತು. ವಾಹನದ ನಂಬರ್ ಪ್ಲೇಟ್ ನೋಡಿದೆ. ಹಾಗನಿಸಲಿಲ್ಲ. ಅಷ್ಟರಲ್ಲೇ ವಾಹನ ಹಿಮ್ಮಖ ಚಲನೆ ಪಡೆದುಕೊಂಡು ಎಡಬದಿಗೆ ನನ್ನೆದುರಿಗೆ ಬಂದು ನಿಂತಿತು. ಮತ್ತೂ ಗಾಬರಿಗೊಂಡೆ. ಅದರಿಂದ ವಿಚಿತ್ರ ಮುಖದ, ಗಂಟು ಮೋರೆಯ ಮಧ್ಯವಯಸ್ಕನೊಬ್ಬ ನನ್ನ ಕಡೆಗೆ ಬರ ಹತ್ತಿದ. ಹತ್ತಿರ ಬಂದವನೇ ಇಲ್ಯಾಕೆ ನಿಂತಿದ್ದೀರಾ, ಸಾರ್? ಎಂದ. ಕಾರ್ಕಳಕ್ಕೆ ಹೋಗುವವರೇ ಬನ್ನಿ ಡ್ರಾಪ್ ಕೊಡುವೆ ಎಂದು ಒಂದೇ ಉಸುರಿಗೆ ಉಸುರಿದ. ನಾನಿಲ್ಲಿ ನಿಂತಿರುವುದು ಅಪರಾದವೇ? ಇವರಿಗೇನು ತೋದರೆ ಎಂದೆಲ್ಲಾ ಯೋಚಿಸತೊಡಗಿದೆ. ಹೋಗುವಾಗಲೇ ಕುದುರೆ ಮುಖದ ಕಡೆ ಸ್ಮಗ್ಲರ್ಗಳ ದೊಡ್ಡ ದಂಡೇ ಇದೆ ಎಂದು ನನ್ನವಳೂ ಹೆದರಿಸಿ ಕಳುಹಿಸಿದ್ದಳು. ವಿಚಿತ್ರವಾಗಿದ್ದ ಆತ ಕಳಕಳಿಯಿಂದಲೇ ಮಾತನಾಡಿಸಿದ್ದ. ಏಕೆ? ಏನಾಯಿತು? ಎಂದು ಕೇಳಿ ನನ್ನ ಸಂಪೂರ್ಣ ವಿವರ ಹೇಳಿದೆ. ಆತನ ಮುಂದಿನ ಮಾತಿಗೆ ನನ್ನ ತಲೆ ಖಾಲಿಯಾಗಿ ಯೋಚನಾರಹಿತನಾದೆ. ಇಷ್ಟು ಹೊತ್ತು ಎರಡು ಸಲಗಗಳು ನಮ್ಮನ್ನು ಅಡ್ಡಗಟ್ಟಿದ್ದವು. ಈ ಇಳಿಜಾರಿನ ಕೊನೆಯಲ್ಲಿ ಅವುಗಳು ಮೇಲೆ ಬರುತ್ತಲಿದೆ. ಬೇಗ ಹೊರಡಿ. ಎಂದು ಅವಸರಿಸಿದ.


ಥ್ರಿಲಿಂಗ್ ಕ್ಲೈಮ್ಯಾಕ್ಸ್
 ಕಾಲುಗಳಲ್ಲಿ ಭೂಕಂಪನವಾಗಿ ತಲೆ ನಿಸ್ತೇಜಗೊಂಡು ಅವನಿಗೇನು ಹೇಳುವುದೆಂದು ತೋಚದಾಯಿತು. ಎತ್ತರದ ದಿಬ್ಬದ ಕಡೆ ಹೋದ ನಾಗರಾಜ್ ಪತ್ತೆಯಿರಲಿಲ್ಲ. ಇವರೊಂದಿಗೆ ಹೋದರೆ ಆತ ತಪ್ಪಿ ಹೋಗಬಹುದೆಂಬ ಭಯ. ಆದರೂ ಧೈರ್ಯ ಮಾಡಿ ವ್ಯಾನಿನವನಿಗೆ ನೀವು ಹೊರಡಿ ಎಂದೆ. ಆತ ಜಾಗೃತೆ ಹೇಳಿ ಅವಸರಿಸಿ ಹೊರಟ. ನಾನಿದ್ದ ಜಾಗದಿಂದ ಸ್ವಲ್ಪ ಕೆಳಗೆ ಅನಂತ ಜಿಗ್ಗುಗಳೆಡೆಯಿಂದ ಶಬ್ದ ಕೇಳಿಸ ತೊಡಗಿತು. ಆನೆಗಳಿಗೆ ಬಲಿಯಾಗುವುದು ಬೇಡವೆಂದು ಅಸಾಧ್ಯ ವೇಗದಿಂದ ಸಣ್ಣ ದಿಬ್ಬದ ಕಡೆಗೆ ಹೆಜ್ಜೆ ಹಾಕಿದೆ. ಹತ್ತಿ ನಿಂತೆ. ದೂರದ ವರೆಗಿನ ದೃಶ್ಯಾವಳಿಗಳೆಲ್ಲವೂ ಇಲ್ಲಿಗೆ ಸ್ಪಷ್ಟ ಗೋಚರಾವಾಗಿತ್ತು. ಸುರಂಗದಿಂದೆಂಬಂತೆ ಎರಡು ಸಲಗಗಳು ಫೀಳಿಡುತ್ತಾ ರಸ್ತೆ ಬದಿಯ ಚರಂಡಿಯಿಂದ ಹೊರ ಚಿಮ್ಮಿದವು. ರಸ್ತೆ ದಾಟಿ ನಾವು ಬಿಟ್ಟು ಬಂದ ಪರ್ವತದ ಬುಡದಿಂದ ನಡೆದು ಬಂದ ದಾರಿ ಅನುಸರಿಸಿ ವೇಗವಾಗಿ ಬರತೊಡಗಿದವು. ಅವೆರಡೂ ಸಮರಕ್ಕೆ ಹೊರಟ ಸೈನಿಕರಂತೆ ನಮ್ಮೆಡೆಗೆ ಬರುವುದನ್ನು ನೋಡಿ ಇಂದು ನನ್ನ ಕತೆ ಮುಗಿತೆಂದು ಎಣಿಸಿದೆ. ಕಾಲುಗಳೆರಡೂ ನಡುಗುತ್ತಿತ್ತು. ಜೀವ ಬಾಯಿಗೆ ಬಂದಿತ್ತು. ಇಂದು ನಮ್ಮ ಕತೆ ಮುಗಿತೆಂದು ಎಣಿಸಿದೆ. ಬೈಕ್ನ್ನು ತಿರುಗಿಸಿ ನಮ್ಮೆಡೆಗೆ ಹೊರಟಿದ್ದ ಗೈಡ್ ಅವುಗಳ ಕಣ್ಣಿಗೆ ಬಿದ್ದ. ಆನೆಗಳನ್ನು ನೋಡಿದ್ದೇ ಅವನ ನಶೆ ಜರ್ರನೆ ಇಳಿಯಿತು. ಅವು ಈಗ ಅವನ ಹಿಂದೆ ಬಿದ್ದವು. ಯಾರೋ ಹೇಳಿಕೊಟ್ಟಂತೆ ಆನೆಗಳು ಮತ್ತು ಗೈಡ್ ನಾನಿದ್ದ ಕಡೆ ಬರ ತೊಡಗಿದರು. ಗೊಂಬೆಗಳನ್ನು ಯಾರೋ ನಿದರ್ೇಸಿದಂತೆ ಅವು ಕೆಲಸ ಮಾಡುತ್ತಿದ್ದವು. ಅಷ್ಟೊಂದು ಅನುಭವಿಲ್ಲದ ಆತ ನನ್ನ ಕಡೆ ಓಡತೊಡಗಿದ. ಆತನೂ ಕಂಗಾಲಾಗಿದ್ದ. ನನ್ನ ಪರಿಸ್ಥಿತಿ ಮತ್ತೂ ಬಿಗಡಾಯಿಸಿತ್ತು. ಆತನೇನಾದರೂ ತಪ್ಪಿಸಿಕೊಂಡೊ ಸಿಕ್ಕಿ ಬಿದ್ದೊ ಸಲಗಗಳು ಅದೇ ದಾರಿ ಹಿಡಿದಿದ್ದರೆ ಈ ಕತೆ ಹೇಳಲು ನಾನಿರುತ್ತಿರಲಿಲ್ಲ.
ಒಲಿದ ಅದೃಷ್ಟ
ಹತ್ತಿರದಲ್ಲೇ ಇದ್ದ ಮುಖ್ಯ ರಸ್ತೆ ಹಿಡಿದು ಬಸ್ಸು ಹತ್ತೋಣವೆಂದರೆ ಕೈಯಲ್ಲಿ ಒಂದೂ ರೂಪಾಯಿಯೂ ಇರಲಿಲ್ಲ. ಜಾಲಿ ರೈಡ್ಗೆಂದು ಹೋದ ನಾಗರಾಜ್ನ ಸುಳಿವಿಲ್ಲ. ತಲೆ ಗೊಂದಲದ ಗೂಡಾಗಿತ್ತು. ಏನು ಮಾಡುವುದು. ಮುಂದೆನಾಗುವುದೋ ಎಂದು ಹೆದರಿ, ಚಳಿಯಲ್ಲೂ ಬೆವರುತ್ತಾ ನಿಂತಿದ್ದೆ. ಎದ್ದನೋ ಬಿದ್ದನೋ ಎಂದು ಬೈಕ್ ಓಡಿಸುತ್ತಿದ್ದ ಗೈಡ್. ಅದೃಷ್ಟವೊಂದೇ ನಮ್ಮ ಪಾಲಿಗಿದ್ದದ್ದು. ಏನೆನ್ನಿಸಿತೋ ಆನೆಗಳಿಗೆ ಹಠಾತ್ತನೆ ನಿಂತು ದಿಕ್ಕು ಬದಲಿಸಿ ಮತ್ತೊಂದು ಇಳಿಜಾರಿನ ದಾರಿ ಹಿಡಿದು ಹೊರಟವು. ಬಾಯಿಗೆ ಬಂದ ಹೃದಯ ತನ್ನ ಸ್ವಸ್ಥಾನಕ್ಕೆ ಮರಳಿತು! ಎಷ್ಟೋ ಹೊತ್ತು ಅವು ಹೋಗುವುದನ್ನೇ ನೋಡುತ್ತಾ ನಿಂತು ಬಿಟ್ಟೆ. ಗೆಳೆಯ ನಾಗರಾಜ ಬಂದು ಕರೆದಾಗಲೇ ಎಚ್ಚರವಾದುದು!

Monday, October 2, 2017

ದಾರಿಯಿಲ್ಲದ ದಾರಿಯಲ್ಲಿ......ಅಡಿಗರ ನೆನೆದು.........


ಕಾಡಿನೊಳ ಹೊಕ್ಕು
ಪೊದೆ ಪೊದರು ಗಿಡಗಂಟೆ
ಮುಳ್ಳುಗಳ ನಡುವೆ
ಹೊಚ್ಚ ಹೊಸ ಹಾದಿ ಕಡಿವವರು
ಪದ್ಧತಿಯ ಬಿಟ್ಟು
ಮುದ್ದಾಮು ದಾರಿ ಹುಡುಕುತ್ತಾ
ಅಲೆವವರು, ಬೆಟ್ಟದ ನೆತ್ತಿ ಹತ್ತಿ
ಹತ್ತೂ ಕಡೆ ಕಣ್ಣು ಕಣ್ಣು
ಬಿಡುವಂಥವರು, ಇಂಥವರು
ಅರ್ಥವಾಗುವುದಾದರೂ ಹೇಗೆ?....... ಎಂದು ಗೋಪಾಲಕೃಷ್ಣ ಅಡಿಗರು ತಮ್ಮ ಪದ್ಯದಲ್ಲಿ ಕಥಿಸಿದ್ದಾರೆ. ನಮ್ಮ ಸಾಹಸಕ್ಕೂ ಈ ಪದ್ಯವನ್ನು ಸಾಮ್ಯ ಉಂಟೆದಿಲ್ಲಿ ಟಂಕಿಸಿದೆ.




ನನಗಿನ್ನೂ ಅರ್ಥವಾಗಿಲ್ಲ. ಕಿಸೆಯ ಭಾರ ದೇಹ ಭಾರ ಕಳಕೊಂಡು ಹೊರಡುವ ಈ ಚಾರಣಗಳ ಅರ್ಥ. ಸುಮ್ಮನೆ ಭಾನುವಾರದ ಸಂಜೆ ಉಂಡು ಮಲಗಬಹುದಿತ್ತು. ಕಾಫಿ ಹೀರುತ್ತಾ, ಮಳೆ ನೋಡುತ್ತಾ, ಒಂದೆರಡು ವಾತರ್ಾ ಪತ್ರಿಕೆ ಮಗುಚಿ ಹಾಕಬಹುದಿತ್ತು. ಆದರೆ, ದಾರಿಯಲ್ಲದ ದಾರಿಯಲಿ, ಹನಿ ನೀರಿಗೆ ಪರಿತಪಿಸಿ, ಜಪಿಸಿ, ಮುಳ್ಳು ಕಂಟಿಯ ಗೀರಿಸಿಕೊಳ್ಳುವ ಜರೂರೇನಿತ್ತು? ರಕ್ತ ಹೀರುವ ಇಂಬಳಗಳ ಕಾಟ. ಕಲ್ಲಿಂದ ಕಲ್ಲಿಗೆ ಹಾರುತ್ತಾ ಬೆಟ್ಟವೇರಬೇಕು. ಬೆಟ್ಟವಿಳಿಯಬೇಕು. ಎರಡು ದಿನ ನೋಯುವ ಕಾಲು. ಮುಷ್ಕರ ಹೂಡುವ ಗಂಟುಗಳು. ದಕ್ಕದ್ದು ದಕ್ಕಿಸಿಕೊಳ್ಳುವ ಛಲವೇ? ಗೊತ್ತಿಲ್ಲ. ಅಡಿಗರ ಮತ್ತೊಂದು ಪದ್ಯ ನೆನಪಾಗುತ್ತಿದೆ.
 ಸ್ವಿಚ್ ಎಲ್ಲೋ ಇದೆ ಸಿಕ್ಕುತ್ತಿಲ್ಲ?!








ಜಲಪಾತದೊಂದಿಗೆ ಸೆಲ್ಪಿ...
ಒಂದಲ್ಲ ಎರಡೆರಡು ಸಲ ನೋಡಿ ನಿರಾಶರಾಗಿ ಹಿಂದಿರುಗಿದ ಮೇಲೆ ಛಲ ಬಂದು ಹತ್ತಿ ನೋಡಿದೆವು ಬೆಟ್ಟದಾ ನೆತ್ತಿ. ನಡುವೆ ಸಿಗುವ ಫನರ್್ಗಳು, ಆಕರ್ಿಡ್ಗಳ ಲೆಕ್ಕವಿಟ್ಟವರ್ಯಾರು? ನೆತ್ತಿ ಸುಡದ ಮರಗಳ ನೆರಳು. ಕಲ್ಲುಗಳ ಸಂಧಿನಲ್ಲಿ ಕೋತಿಯಾಟವಾಡಿ ತಲುಪಿದೆವು ಅರೆ ನೆತ್ತಿ. ಅಲ್ಲೇ ಎರಡು ಬೆಟ್ಟಗಳ ನಡುವಲ್ಲಿ ಧುಮುಕುವ ತಿಳಿ ನೀರ ಜಲಧಾರೆ. ಜಟಾಧರನ ಜಟೆಯಿಂದೆಂಬಂತೆ ಉಕ್ಕಿ ಉಕ್ಕಿ ಬರುತಲಿತ್ತು ಮತ್ತೆ ಮತ್ತೆ. ಆಗಾಗ ಮೋಡದ ಪರದೆ. ಕ್ಯಾಮರಕ್ಕೆ ಬರಪೂರ ಊಟ. ಚಕ್ಕಳ ಬಕ್ಕಳ ಹಾಕಿ ಕೂತು ಜಲಧಾರೆ ಎದುರಿಗೆ ಒಂದಿಷ್ಟು ಧ್ಯಾನಿಸಿ, ಉಂಡು, ಮಿಂದು ಹೊರಟೆವು. ರುಚಿ ರುಚಿ ಪತ್ರೊಡೆ ಎಲೆಯನ್ನು ಗೆಳೆಯರು ಆರಿಸಿಕೊಟ್ಟರು. ಮರು ದಿನವೂ ಅದರದೇ ಧ್ಯಾನ.
ಭಾಗವಹಿಸಿದ ಗೆಳೆಯರಿಗೆಲ್ಲಾ ಧನ್ಯವಾದ.


ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...