ನವ ವಧುವಿನಂತೆ ಶೃಂಗಾರ ಗೊಂಡಿರುವ ಈಗಿನ ಸೋಮನಾಥಪುರ ದೇವಾಲಯದ ಅಂದಕ್ಕೆ ಅಂದೇ ಕುವೆಂಪು ಮಾರು ಹೋಗಿದ್ದರು. ಆಗ ತುಂಬಾ ಶಿಥಿಲಾವಸ್ಥೆಯಲ್ಲ್ಲಿದ್ದರೂ ಅವರಿಗೆ ಸೌಂದರ್ಯದ ಮೇರು ಪರ್ವತವಾಗಿ ತೋರಿತ್ತು. ಸೃಷ್ಟಿಶೀಲರಿಗೆ ಕಲ್ಲು ಸಹ ಸೌಂದರ್ಯದ ಜೊತಕವಾಗಿ ಕಾಣಿಸುತ್ತದೆ.ಎಂಬುವುದಕ್ಕೆ ಈ ಕವನವೇ ಸಾಕ್ಷಿ.
ವರ್ಷದ ಹಿಂದೆ ಕುಪ್ಪಳಿಗೆ ಹೋದಾಗ ಉದಯ ಶೆಟ್ಟಿ ಕಥಕ್ ಶೈಲಿಯಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದು ಅದ್ಭುತವಾಗಿತ್ತು, ಜೊತೆಗೆ ವಿಶೇಷ ಆಥಿತ್ಯವು. ನಿಜಕ್ಕೂ ಈ ದೇವಾಲಯ ಅದ್ಭುತವಾಗಿದೆ.
ಬೇಲೂರು ಹಳೆಬೀಡನ್ನೂ ಮೀರಿಸುವಷ್ಟು! ಈ ದೇವಾಲಯದ ಸೌಂದರ್ಯಕ್ಕೆ ಮಾರು ಹೋದ ಕುವೆಂಪು ಅಲ್ಲಿನ ಶಿಲ್ಪಕಲೆಯ ಬಗ್ಗೆ ಒಂದು ಕವನ ರಚಿಸಿದ್ದಾರೆ. ಇದೋ ಈ ಕವನ ನಿಮಗಾಗಿ, ಜೊತೆಗೆ ನನ್ನ ಛಾಯಾಚಿತ್ರವೂ ಇದೆ. ಓದುವ ಖುಷಿ ನಿಮ್ಮದಾಗಲಿ.
ಬೇಲೂರು ಹಳೆಬೀಡನ್ನೂ ಮೀರಿಸುವಷ್ಟು! ಈ ದೇವಾಲಯದ ಸೌಂದರ್ಯಕ್ಕೆ ಮಾರು ಹೋದ ಕುವೆಂಪು ಅಲ್ಲಿನ ಶಿಲ್ಪಕಲೆಯ ಬಗ್ಗೆ ಒಂದು ಕವನ ರಚಿಸಿದ್ದಾರೆ. ಇದೋ ಈ ಕವನ ನಿಮಗಾಗಿ, ಜೊತೆಗೆ ನನ್ನ ಛಾಯಾಚಿತ್ರವೂ ಇದೆ. ಓದುವ ಖುಷಿ ನಿಮ್ಮದಾಗಲಿ.
ಸೋಮನಾಥಪುರ ದೇವಾಲಯ
ಬಾಗಿಲೊಳು ಕೈಮುಗಿದು ಒಳಗೆ ಬಾ, ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುವಗಳನಪರ್ಿಸಿಲ್ಲಿ.
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ;
ಕಪೂರದಾರತಿಯ ಜ್ಯೋತಿಯಿಲ್ಲ.
ಭಗವಂತನಾನಂದ ರೂಪುಗೊಂಡಿಹುದಿಲ್ಲಿ;
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ!
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ!
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ!
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ!
ಮೂಛರ್ೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ!
ಕುವೆಂಪು; 10-7-28