Saturday, February 28, 2026

ನಾಲಿಗೆ ಹೊರಳದ ನಾಡಿನಲ್ಲಿ ಮೂರು ದಿನ…

        

 

 ಈಶಾನ್ಯ ಭಾರತದ ಶಿಲ್ಲಾಂಗನ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ಣು ತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಇಲ್ಲಿನ ಊರುಗಳ ಹೆಸರುಗಳನ್ನು ಹೇಳಲಾಗದೇ ಸೋಲೊಪ್ಪಿಕೊಂಡಿದ್ದೆ. ನಾಲಗೆ ಹೊರಳದ ನಾಡು!

 

ಮುನ್ನುಡಿ


32 ಉಷ್ಣದ ಊರಿಂದ 6-7 ತಂಪಿನ ಊರಿಗೆ ಬಂದಾಗ ದೇಹ ಮುದುರಿತ್ತು. ಗೌಹಾಟಿಯ ಗೌಜಿನಲ್ಲೂ ಸ್ಥಳೀಯ ಸೀರೆ ತೊಟ್ಟ ಸೊಗಸುಗಾತಿಯರು ವ್ಯವಹಾರಕ್ಕಿಳಿದಿದ್ದರು. ಇವರನ್ನೆಲ್ಲ ನೋಡುತ್ತಾ ಶಿಲ್ಲಾಂಗ್ಗೆ ಬಂದಾಗ ರಾತ್ರಿ 7 ಗಂಟೆ. ಇಲ್ಲಿಂದ ರಾಜ್ಯ ರಸ್ತೆ ಸಾರಿಗೆ ಹಾಗೂ ಟ್ಯಾಕ್ಸಿ ವ್ಯವಸ್ಥೆ ಶಿಲ್ಲಾಂಗಿಗಿದೆ.

ಸಂಜೆ ಚಹಾ ಹೀರಲು ನಿಲ್ಲಿಸಿದ ಅಂಗಡಿಯಲಿ ಸಾಲು ಸಾಲು ಮೀನು, ಏಡಿ, ಸಿಗಡಿಗಳ ಉಪ್ಪಿನಕಾಯಿ ನೋಡಿದ್ದೇ ಗೆಳೆಯ ನಾಗರಾಜ ಉಸುರಿದ ಬಿಟ್ಟರೆ ಮನುಷ್ಯರನ್ನು ಹುರಿದು ಉಪ್ಪಿನಕಾಯಿ ಮಾಡ್ತಾರೆ. ಇವರು ಗೆಳೆಯರ ನಡುವೆ ನಗುವಿನಲೆ ಉಕ್ಕಿತು. ಸಿಕ್ಕಿದ್ದನ್ನೆಲ್ಲಾ ಉಪ್ಪಿನಕಾಯಿ ಮಾಡಿದ್ದರು! ನಮ್ಮೂರಿನ ಉಪ್ಪಿನಕಾಯಿ ನೆನಪಾಯಿತು. ಕ್ಷಣ ಮಾತ್ರ ಅಯ್ಯೋ ಶಿವನೇ ಎಂತಹ ಲೋಕಕ್ಕೆ ಕಾಲಿಟ್ಟೆವಲ್ಲವೆಂಬ ಆತಂಕವೂ ಕಾಡಿತು. ಊಟಕ್ಕೆ ಕುಳಿತಾಗ ತಟ್ಟೆಗೆ ಬಂದು ಬಿದ್ದ ದೊಡ್ಡ ದೊಡ್ಡ ಮುಸುಂಬಿ ಹೋಳುಗಳನ್ನು ಕಂಡು ಊಟದ ಜೊತೆಗೇಕೆ ಮುಸುಂಬಿ ಎಂದು ಚಕಿತಗೊಂಡಿದ್ದೆ. ಮೂಸಿ ನೋಡಿದರೆ ಲಿಂಬೆಯ ಪರಿಮಳ! ಪರಿಚಾರಕನಲ್ಲಿ ವಿಚಾರಿಸಿದರೆ ಅದು ಮುಸುಂಬಿಯಲ್ಲಾ ಲಿಂಬೆ ಎನಬೇಕೆ? ಮೂಕವಿಸ್ಮಿತನಾಗಿದ್ದೆ. ದಾಲ್ ಅನ್ನದೊಂದಿಗೆ ಲಿಂಬೆಯ ರಸ ಬೆರಸಿ ಉಂಡರೆ ಬಲ್ಲವನೇ ಬಲ್ಲ ಇದರ ರುಚಿ!




 


ನಾಲಿಗೆ ಹೊರಳದ ನಾಡಿನ ಕತೆಗಳಿಗೆ ಕಿವಿಯಾಗೋಣ ಬನ್ನಿ, ಮೇಘಾಲಯದ ಗೆಸ್ಟ್ ಹೌಸ್ನಲ್ಲಿ ಬಂದಿಳಿದಾಗ ತಂದಿರಿಸಿದ ರಾಶಿ ಚೀನಿಕುಂಬಳ ಕಾಯಿಗಳ ಸ್ವಾಗತ! ನನ್ನ ಪರಮ ವೈರಿಚೀನಿಗುಂಬಳಕಾಯಿ ನೆನೆದು ನಮ್ಮನ್ನು ಓಡಿಸಲೇ ಇದನ್ನು ಇಷ್ಟು ರಾಶಿ ಹಾಕಿಕೊಂಡಿದ್ದಾರೆ ಎಂದುಕೊAಡೆ. ನಾಗರಜನ ಗೆಳತಿಯ ಮನೆಯಲ್ಲಿ ನಮಗೆ ದಿನ ರಾತ್ರಿಯ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರಿಂದ ಒಪ್ಪತ್ತಿನ ಮಟ್ಟಿಗಾದ ರೂಚೀನಿ ಕುಂಬಳದಿA ಬಿಡುಗಡೆ ದೊರಕಿತ್ತು!! ಬದುಕಿದೆಯಾ ಬಡಜೀವವೇ! ಅಲ್ಲಿಂದ ಹೊರಟ ನಮ್ಮ ಸವಾರಿ ಸೇರಿದ್ದು ಗೆಳತಿ ಜೋಯ್ಸ್ ಮನೆಗೆ.


ನಾಲಿಗೆ ಹೊರಳದ ನಾಡಿನ ಕತೆಗಳಿಗೆ ಕಿವಿಯಾಗೋಣ ಬನ್ನಿ, ಮೇಘಾಲಯದ ಗೆಸ್ಟ್ ಹೌಸ್ನಲ್ಲಿ ಬಂದಿಳಿದಾಗ ತಂದಿರಿಸಿದ ರಾಶಿ ಚೀನಿಕುಂಬಳ ಕಾಯಿಗಳ ಸ್ವಾಗತ! ನನ್ನ ಪರಮ ವೈರಿಚೀನಿಗುಂಬಳಕಾಯಿ ನೆನೆದು ನಮ್ಮನ್ನು ಓಡಿಸಲೇ ಇದನ್ನು ಇಷ್ಟು ರಾಶಿ ಹಾಕಿಕೊಂಡಿದ್ದಾರೆ ಎಂದುಕೊAಡೆ. ನಾಗರಜನ ಗೆಳತಿಯ ಮನೆಯಲ್ಲಿ ನಮಗೆ ದಿನ ರಾತ್ರಿಯ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರಿಂದ ಒಪ್ಪತ್ತಿನ ಮಟ್ಟಿಗಾದ ರೂಚೀನಿ ಕುಂಬಳದಿA ಬಿಡುಗಡೆ ದೊರಕಿತ್ತು!! ಬದುಕಿದೆಯಾ ಬಡಜೀವವೇ! ಅಲ್ಲಿಂದ ಹೊರಟ ನಮ್ಮ ಸವಾರಿ ಸೇರಿದ್ದು ಗೆಳತಿ ಜೋಯ್ಸ್ ಮನೆಗೆ.

 

ವಿಶೇಷ 'ಖಾಸಿ'ಅಡುಗೆ ಗೆಳತಿ ಜೋಯ್ಸ್ ಅವರ ಮನೆಯಲ್ಲಿ ಒಣಗಿದ ಬೆಳ್ಳುಳ್ಳಿ ಮಿಶ್ರಿತ ಹಸಿ ಮೂಲಂಗಿಯ ಪಲ್ಯ, ಹುದುಗು ಬರಿಸಿದ ಬೀನ್ಸ್ನ ವಿಚಿತ್ರ ಚಟ್ಣಿ, ಬೇಯಿಸಿದ ಸಾಸಿವೆ ಎಲೆ, ಜೀವಮಾನದಲಿ ಒಮ್ಮೆಯೂ ಸವಿಯದ ಅಮೃತ ರುಚಿಯ ಐಸ್ಕ್ರೀಮ್ ಮೊಸರು, ಭಿನ್ನ ರುಚಿಯ ಅನ್ನ ಹೀಗೆ ವಿವಿಧ ಖಾಸಿ

ಜನರ ಅಡುಗೆಯ ಖಾಸಗಿಯೂಟ. ಮರೆಯಲಾಗದ ಸವಿಯೂಟ. ಅವರೇ ಬೆಳೆದ ಅಕ್ಕಿಯಿಂದ ವಿಶಿಷ್ಟ ರುಚಿಯ ಅನ್ನ ಬಡಿಸಿದ್ದರು. ತಟ್ಟೆಗೆ ಬೀಳುತ್ತಲೇ ಘಮ್ ಎನ್ನುವ ಪರಿಮಳ. ಎಲ್ಲವೂ ಹೊಸತು. ಅವರಮ್ಮನ ಆತಿಥ್ಯಕ್ಕೆ ಸೋತು ಹೋದೆವು. ಭಿನ್ನರುಚಿಯ ಊಟವೊಂದು ನನ್ನ ದಿನಚರಿಯಲ್ಲಿ ದಾಖಲಾಯಿತು. ನಾಳೆಯ ಚೆರ್ರಿಬ್ಲಾಸಂ ಹಬ್ಬಕ್ಕೆ ಎಲ್ಲಾ ಗೆಳೆಯರು ಹೊರಟು ನಿಂತಿದ್ದರು. ಹಗಲಿಡೀಸೂಟಿ! ಹಾಗಾಗಿ ನಾನೊಬ್ಬನೇ ಊರು ತಿರುಗಲು ಹೊರಟೆ.


ನಾವಲ್ಲಿಗೆ ಕಾಲಿಟ್ಟಾಗ ಚಳಿಗಾಲ ಕಾಲಿಟ್ಟಿತ್ತು. ಅಸಾಧ್ಯ ಚಳಿ. ಮೈ ಮನಸು ಮುದುರಿತ್ತು. ಪುನಃ ಗೆಸ್ಟ್ ಹೌಸ್ಗೆ ಬಂದು ಮಲಗಿದೆವು. ಮುಂದಿನ ಮುಂಜಾನೆಯ ವಿಹಾರದ ಕನಸು ಹೊದ್ದು ಮಲಗಿದೆ.


    ಸೋಹ್ರಾದಿಂದ ಮೌಸ್ವಾಮಿನತ್ತ…….

 ಹೇಗೆ ಗುಹೆಯ ಹೆಸರನ್ನು ಉಚ್ಚರಿಸಬೇಕೆಂದು ಇನ್ನೂ ಗೊಂದಲದಲ್ಲಿರುವೆ. ಮುಂಜಾನೆ ಮುಸುಕಿದ ಮೋಡಗಳ ಮುತ್ತಿಡುತ್ತಾ ಹೆದ್ದಾರಿಯಲಿ ಸಾಗಿತ್ತು ನಮ್ಮ ಕಾರು. ನಡುವೆಲ್ಲೂ ನಿಲ್ಲಿಸಿ ಪರೋಟ, ವಡೆತಿಂದು, ಚಹಾ ಹೀರಿ ಹೊರಟರೂ ಹೋಗದ ಮಂಜು. ಹಾಗಾಗಿ ಹೆಸರು ಮೇಘಾಲಯ. 10-12 ಡಿಗ್ರಿ ಉಷ್ಣಾಂಶ. ಗೆಳೆಯನಂತಹ ಚಾಲಕ. ಚೆರಿ ಹೂವರಳಿ ನಿಂತ ಹಾದಿಯಲಿ ಹೂ ನುಜ್ಜು ಗುಜ್ಜಾಗ ದಿರಲೆಂದು 'ಹಗುರಹೋಗು ಮರಾಯ.' ಎಂದೆ. ಹುಳುಕಾದ ಹಲ್ಲುತೋರಿಸುತ್ತದೇಶಾವರಿ ನಗೆ

ನಕ್ಕ. ಬಹುಶಃ ಆತನಿಗೆ ನನ್ನ ಭಾಷೆ ತಿಳಿಲಿಲ್ಲವೋ ಏನೋ. ಹಾಗೆ ನೊ ಕಲಿಕೈ ಜಲಧಾರೆ ತೋರಿಸಿಕೊಂಡು, ಅದರ ಕುರಿತು ಲೈವ್ ಕಾಮೆಂಟರಿ ಕೊಡುತ್ತಾ ಸುಣ್ಣದ ಕಲ್ಲಿನ ಗುಹೆಗಳತ್ತ ಕಾರು
ಹೊರಳಿಸಿದ. ಬಟಾ ಬಯಲಿನ ನಡುವೆ ಹೆಬ್ಬಾವಿನಂತೆ ಮಲಗಿದ ದಾರಿ. ಬೆಟ್ಟದ ನಡುತಿರುವಿನಲ್ಲಿ ಕಂಡ ಒಂದು ಹೋಟೆಲ್ ಬಿಟ್ಟರೆ ದಾರಿ ಎಲ್ಲೆಲ್ಲೂ ನಿರ್ಮಾನುಶ! ಬುಟ್ಟಿ ಹೊತ್ತು ಹೊರಟ ಒಂದಿಬ್ಬರು ಬಿಟ್ಟರೆ ಬೆಟ್ಟವೆಲ್ಲಾ ಹುಲ್ಲ ಬಯಲು. ಈಗಲ್ಲಿ ನೂರಾರು ಹೋಂ ಸ್ಟೇಗಳ ಆರ್ಭಟ. ನೀರ ಅನುರಣನದ ದಾರಿಯಲ್ಲಿ ಹೋಂಸ್ಟೇಗಳ ಗೌಜಿ. ಅಂದು ಅನನ್ಯ ಅನುಭವ ನೀಡಿದ್ದ ಜಲಪಾತದ ಸನಿಹ ಮಾನವ ಇರುವಿನ ಕುರುಹು ಇರಿಸು ಮುರಿಸು ಉಂಟುಮಾಡಿತ್ತು.

ಜನಜೀವನ

ಪ್ರವಾಸೋಧ್ಯಮ, ಸುಣ್ಣದಕಲ್ಲು ಮತ್ತು ಮಸಾಲೆ ಪದಾರ್ಥಗಳೇ ಇವರ ಜೀವನ ಆಧಾರ. ಸುಣ್ಣದ ಕಲ್ಲಿನ ನೂರಾರು ಗುಹೆಗಳು ನಿಮಗೆ ಶಿಲ್ಲಾಂಗಿನಿA ಚಿರಾಪುಂಜಿಯೆಡೆಗೆ ಹೊರಟಾಗ ಕಾಣಸಿಗುತ್ತದೆ. ಇನ್ನು ಕಣಿವೆಯಲ್ಲಿ ವಾಸಿಸುವವರು ಸ್ವಲ್ವ ಕಿತ್ತಳೆ, ಶುಂಠಿ ಮತ್ತು ಕಾಳುಮೆಣಸು ಬೆಳೆದುಕೊಳ್ಳುತ್ತಾರೆ



ಕಾಡುತ್ಪತ್ತಿ ಸಂಗ್ರಹಿಸುತ್ತಾರೆ. ಇಲ್ಲಿನ ಕಿತ್ತಳೆ ಬಲು ಹುಳಿ. ಇವರ ಇನ್ನೊಂದು ಆದಾಯದ ಮೂಲ ಭತ್ತ ಮತ್ತು ಬಿದಿರು. ಇವರ ಬಿದಿರಿನ ನಾಜೂಕು ನಮಗೆ ಅಸಾಧ್ಯ, ಅಂಟು ಬಳಸದೆಯೇ ಭತ್ತದ ಬುಟ್ಟಿಗಳ ಹೆಣೆಯುವ ನೈಪುಣ್ಯದಲ್ಲಿ ಅಸಾಧ್ಯ ಕಲೆಗಾರಿಕೆ. ವಿಮಾನ ಮುಂತಾದ ಕಡೆ ಎಳೆದಾಡಿದರೂ ಚೂರೂ ಕೊಸರದೇ ಉಳಿದಿತ್ತು ನಾಕೊಂಡ ಭೆತ್ತದ ಪುಟಾಣಿ ಬುಟ್ಟಿ. ಎಲ್ಲಾ ಕೆಲಸಗಳಲ್ಲೂ ಸಿದ್ದ ಹಸ್ತರೂ ಕೂಡ. ನಮ್ಮ ಸ್ನೇಹಿತನ ಹರಿದ ಚಪ್ಪಲಿಯೊಂದನ್ನು ಕ್ಷಣಾರ್ಧದಲ್ಲೆ ಹೊಲಿದು ಕೊಟ್ಟನೊಬ್ಬ. ಹೆಂಗಸರೇ ಹೆಚ್ಚು ದುಡಿಯುವವರು. ಮಂಜಿನಿAದಾಗಿ ಅಲ್ಲಲ್ಲಿ ಚಳಿ ಕಾಯಿಸುವ ಜನ. ಸುಣ್ಣದ ಕಲ್ಲನ್ನು ಆರಿಸಿ ಆರಿಸಿ ಬೃಹತ್ ಗುಹೆಗಳು ನುಂಗುವAತೆ ದಾರಿಯುದ್ದಕ್ಕೂ ಬಾಯ್ದೆರೆದಿದ್ದವು. ಎಲ್ಲವೂ ಸೊಹ್ರಾದ ಸಿಮೆಂಟ್ ಕಾರ್ಖಾನೆಗೆ ಹೋಗುತಲಿತ್ತು.



ಗುಹೆ ಎದುರಿಗೆ

ಸೊಹ್ರಾದಿಂದ ಹೊರಟು ಊಟ ಮಾಡಿ ನಡು

ಮಧ್ಯಾಹ್ನಕ್ಕೆ ಪಾರ್ಕಿಂಗ್ ಜಾಗದಲ್ಲಿದ್ದ್ದೆವು. ಗುಹೆ ತಲುಪುವ ದಾರಿಯಂತೂ ಅಮೋಘ. ನೂರಾರುಫರ್ನ್ಗಳು, ಆರ್ಕಿಡ್ಗಳು ಬಂಡೆಗಳ ಮೇಲೆ ಅರಳಿನಿಂತಿದ್ದವು. ಸಿಕ್ಕ ಚಿಕ್ಕ ಬಿರುಕಿನಲ್ಲೇ ಬೇರು ಬಿಟ್ಟು ಬೆಳೆವ ಇವುಗಳ ಅದಮ್ಯಚೇತಕೆ ಬೆರಗಾದೆ! ದೂರದೂರದಿಂದ ಹಕ್ಕಿ ಉಲಿಗು ಹೆದಾರಿಯಲ್ಲೇ ಉಳಿವಂತೆ ಮಾಡುತ್ತಿತ್ತು. ಹತ್ತಾರು ಜೇಡಗಳು ಮರಗಳ ಮೇಲೆ, ಬಂಡೆಗಳ ಮೇಲೆ ಸಂಸಾರ
ಹೂಡಿದ್ದವು! ಇಂತಿಪ್ಪ ದಾರಿ ಸವೆಸಿ ನಡೆದರೆ ಗುಹೆ ಎದುರಿಗಿರುತ್ತೀರಿ.








 ನಾನಲ್ಲಿಗೆ ಅಡಿಇಟ್ಟಾಗ 'ಮೆ ನಹಿ ಆಂವೂಗಿ'(ನಾ ಬರೋದಿಲ್ಲ) ಎಂಬ ಕೂಗು ಗುಹೆಎದುರಿಂದ ಕೇಳಿ ಬರುತಲಿತ್ತು. ಎದೆ ನಡುಗಿಸುವ ಗುಹಾದ್ವಾರದೆದುರು ಅನೇಕ ಹೆಂಗಸರು ಒಳ ಹೋಗಲು ಹೆದರಿ ಹೀಂದೇಟು ಹಾಕುತ್ತಿದ್ದರು. ಅವರಗಂಡAದಿರು ಅವರನ್ನು ಒಳಹೋಗಲು ಒತ್ತಾಯಿಸುತ್ತಿದ್ದರು. ಮುದುಕನೊಬ್ಬನ ಬಾಯೊಳಗೆನು ಸುಳಿದಂತೆ ಕಂಡುಬರುವ ದ್ವಾರ ಎಂತವರನ್ನೂ ಭಯಗೊಳಿಸುವುದು. ಯಾರದೋ ಜೀರ್ಣನಾಳದೊಳಗೆ ಮೂಗು ತೂರಿಸಿದ ಅನುಭವ!! ಮತ್ತೆ ಹೇಗೆ ಒಳಹೊಕ್ಕಾರು ಅವರೆಲ್ಲ. ಪಾಪ. ಕುಸಿದು ಬಿದ್ದರೆ ಬದುಕಿನ ಅಧ್ಯಾಯ ಮುಗಿದಂತೆ. ಬರೋಬ್ಬರಿ 6.5 ಕಿಲೋ ಮೀಟರ್ ಬಾಯ್ದೆರೆದ ಭಯಾನಕ ಗುಹೆ. ಕೆಲವೆಡೆತೆವಳುತ್ತಾ ಸಾಗಬೇಕು. ಸಣ್ಣ ಝರಿಯೊಂದು ಗುಹೆಯೊಳಗೇ ಹಾದು ಹೋಗಿತ್ತು. ಗೋಡೆಗಳ ಮೇಲೆಲ್ಲಾ ಸುಣ್ಣದಕಲ್ಲಿನ ಚಿತ್ತಾರ.


  ಗುಹೆಯೊಳಗಿನ ನೆಲ ಸವೆದು ಜಾರುವ ಟೈಲ್ಸ್ನಂತಿತ್ತು. ಅನೇಕ ಕಡೆಜಾರಿ ಬೀಳುವಷ್ಟರಲ್ಲಿ ಸುಧಾರಿಸಿಕೊಂಡೆ. ಬಕಾಸುರನಂತೆ ಬಾಯಿ ಕಳೆದ ಗುಹೆ ಕಂಡಾಗ ಶ್ರೀ ಕೃಷ್ಣನ ನೆನಪು. ಗುಹೆಯೊಳಗೆ ಏನುಂಟು ಏನಿಲ್ಲ ತಣ್ಣಗೆ ಹರಿವ ಜಲರಾಶಿ, ಜೀವರಾಶಿ. ಅಪರೂಪದ ಜೇಡಗಳು. ವಿಚಿತ್ರ ವಿನ್ಯಾಸದೊಂದಿಗೆ ತೊಟ್ಟಿಕ್ಕುವ ನೀರು, ಗುಹೆಯೊಳು ಗಂವ್ ಎನ್ನುವ ಕತ್ತಲು. ನೆತ್ತಿ ಸುಡುವ ಬಿಸಿಲಿದ್ದರೂ ಒಳಗೆ ಹವಾನಿಯಂತ್ರಣದಷ್ಟು ತಂಪು.ಯಾರದೋ ಜಿರ್ಣನಾಳದೊಳಗೆ ಜಾರಿಹೋದಂತಹ ಅನುಭವ. ಹೆಬ್ಬಾವಿನ ಹೊಟ್ಟೆ ಸೇರಿದ ಭಾವ. ಯಾರದೋ ಕರುಳಿನೊಳಗೆ ಹೂತು ಹೋದಂತೆ. ಆಹಾರದ ಕಣದಂತೆ ಚಲಿಸುವ ಜನಸಂದಣಿ. ಒಳಾಂಗಣದಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ. ಗುಹೆಯಉದ್ದ ಸರಿಸುಮಾರು 6.5 ಕಿ.ಮೀ. ವಿನ್ಯಾಸ ಸುಣ್ಣದ ಕಲ್ಲಿನ ವಿಚಿತ್ರ ವಿನ್ಯಾಸ. ಜೇನುತಟ್ಟಿಯಂತಹ ವಿಭಿನ್ನ ಸಂಯೋಜನೆ. ಬೆಳಕಿಗೆ ಹೊಳೆವ ಕಲ್ಲಿನ ಚೂರುಗಳು. ದನದ ಕೆಚ್ಚಲಿನಾ ಕೃತಿಯ ವಿನ್ಯಾಸವೂ ಉಂಟು. ಹಲಸಿನ ಕಾಯಿಯಂತಹ ನೇತಾಡುವ ಮಣ್ಣ ಹೆಂಟೆಗಳು. ವಿಭಿನ್ನ ವಿನ್ಯಾಸ, ಆಕಾರ. ಹಾವು, ಶಂಕ, ಗದೆ, ರಾಕ್ಷಸ ಆಲದ ಬಿಳಲುಗಳಂತಹ ರಚನೆ. ಹತ್ತು ಹೆಡೆಸರ್ಪ, ಮುದುಕ, ಗಂಟಲಿನ ರಚನೆ, ಹೊಸ ಹೊಸ ವಿನ್ಯಾಸದ ಬಲ್ಬುಗಳಂತಹ ರಚನೆಗಳು, ಒಂದೇ ಎರಡೇ. ನಿಮ್ಮ ಕಲ್ಪನಾಲೋಕದ ವಿಸ್ತಾರ.ಬೀಳುವವೇನೋ ಎಂದು ನಿರುಕಿಸಿ ನಿರುಕಿಸಿ ಸೋತೆ. ಒಂದೂ ಹಿಸಿದು ಬೀಳಲೇ ಇಲ್ಲ. ಆಲದ ಬಿಳಲುಗಳಂತೆ ನೇತಾಡುವ ಸಪೂರ ಗುಹಾ ರಚನೆ. ಇಲ್ಲೆಲ್ಲಾ ನುಸುಳಿ, ತೆವಳಿ ಸಾಗಬೇಕಾದ ಅನಿವಾರ್ಯತೆ. ನಡುವಲ್ಲಿ ವಿಶಾಲವಾಗಿ ಮತ್ತೆ ಕುಗ್ಗಿ ಚಲಿಸಿತ್ತು ಗುಹೆ. ಸಾಕ್ಷಾತ್ ಗಂಟಲಿನಿಂದ ನುಸುಳಿ ಹೊಟ್ಟೆಗೆ ಕಾಲಿಟ್ಟಂತೆ! ಇಲ್ಲಿ ಸುಣ್ಣದ ಕಲ್ಲು ಗುಡ್ಡ ಕುಡಿದ ನೀರಿನೊಂದಿಗೆ ಬೆರೆತನೋಳಿ(ಅಂಟು) ರಸದಂತೆ ಸದಾ ಹರಿಯುತ್ತಲೇ ಇರುತ್ತದೆ. ಕೊನೆಯಲ್ಲಿ ಗುಹೆ ತನ್ನ ಬಾಯಿ ಕಳೆದುನಿಂತಿತ್ತು. ಹೊರಗಿನ ಬಿಸಿಲ ಕೋಲುಗಳು ಗುಹೆಯೊಳಗೆ ನುಗ್ಗಿ ಗುಹೆಯನ್ನು ಚೆಚ್ಚಗೆ ಮಾಡಿ ಹೊರಟು ಹೋಗಿದ್ದವು. ಶ್ರೀ ಕೃಷ್ಣ ಬಾಯಿ ತೆರೆದಂತೆ  ಮೂರು ಪುಟಾಣಿ ದ್ವಾರಗಳು ಇಲ್ಲಿಂದ ತೆರೆದುಕೊಳ್ಳುತ್ತದೆ. ಒಂದರೊಳಗಾದರೂ ನುಗ್ಗಿ ಮತ್ತೊಂದರಿA ಹೊರಬರಬೇಕೆಂಬ ಅದಮ್ಯ ಇಚ್ಚೆಯಾದರೂ ಒಂಟಿಯಾಗಿರುವುದರಿಂದ ಸುಮ್ಮನಾದೆ. ಜೊತೆಗೆ ಇಲ್ಲಿಂದ ಮುಂದೆ ಹೋಗಬಾರದೆಂದು ಸಣ್ಣ ಬೋರ್ಡೊಂದು ನೇತುಹಾಕಿದ್ದರು.



ರಚನೆ

ನೀರೇ ಎಲ್ಲಾ ರಚನೆಗಳ ವಿನ್ಯಾಸಗಾರ! ಸಹಸ್ರಾರು ವರ್ಷಗಳಿಂದ ನೀರು ಗುಹೆಗಳ ಮೂಲಕ ಹರಿದು ಹರಿದು ವಿಚಿತ್ರಗಳು ರಚನೆಯಾಗಿವೆ ಅನ್ನುತ್ತಾರೆ. ಇಲ್ಲಿನ ಲೈಮ್ ಸ್ಟೋನ್ಗಳು ಕರಗಿ ರಚನೆಗಳು ಉಂಟಾಗಿವೆ. ನೀರಿನ ಅದ್ಭುತ ಶಕ್ತಿಯ ನೆನೆದು ಅಚ್ಚರಿಯಾಯಿತು.

 

ಮುಂದಕ್ಕೆ ಪ್ರಕೃತಿ ನಿರ್ಮಿತ' ಲಿಯತ್ ಪ್ರಹಾ' ಎಂಬ ಗುಹೆ 30 ಕಿ.ಮೀ. ಉದ್ದವಿದೆ!' ಎಂದ ನಮ್ಮ ಡ್ರೆöÊವರ್. ಇವುಗಳಲ್ಲಿ ಕೆಲವೊಂದು ಕಡೆ ತೆವಳಿ ಸಾಗಬೇಕಾದ ಅನಿವಾರ್ಯತೆಯಂತೆ. ‘ಗಾರ್ಡನ್ಗುಹೆ ಎಂದು ಕರೆಯಲ್ಪಡುವ ಗುಹೆ ಸುಮಾರು ಕಿ.ಮೀ. ಉದ್ದವಿದೆ ಎಂಬ ಬರ‍್ಡೊಂದನ್ನು ಇಲ್ಲಿ ಕಂಡೆ. ಜೊತೆಗೆ ಗುಹೆಯೊಳಗೆ ಒಂದು ಜಲಪಾತವೂ ಇದೆ! ಇಲ್ಲಿನ ಗುಹೆಗಳು ಅಚ್ಚರಿಗಳ ಮೂಟೆ. ಮೇಘಾಲಯದಲ್ಲಿ ಸುಮಾರು 1950ಕ್ಕೂ ಹೆಚ್ಚು ಗುಹೆಗಳಿವೆ! ವಿಶ್ವ ಪ್ರಸಿದ್ಧ ಮೊದಲ 9 ಗುಹೆಗಳಿರುವುದು ನಮ್ಮ ಮೇಘಾಲಯದಲ್ಲೇ
. ಪ್ರತಿಯೊಂದೂ ಭಿನ್ನ. ಯುತ್ ಹಾಸ್ಟೆಲ್ನವರು ವರ್ಷಂಪ್ರತಿ ಇಲ್ಲಿ ಮೂರು ನಾಲ್ಕು ಗುಹೆ ತೋರಿಸುವ ಕರ‍್ಯಕ್ರಮವೇರ್ಪಡಿಸುತ್ತಾರೆ.




 ಚಿಕ್ಕ ವಯಸ್ಸಿನಲ್ಲೇ ಮೇಘಾಲಯಕ್ಕೆ ಹೋಗಿ ಬರಬೇಕೆಂಬ ಕನಸೊಂದು ಬಹಳ ವರ್ಷಗಳ ನಂತರ ನೆರವೇರಿತು. ಬದುಕಿನ ಬಣ್ಣಕ್ಕೆ ಹೊಸ ಗರಿಯೊಂದು ಸೇರಿತು. ಶಿಲ್ಲಾಂಗ್ ಸನಿಹವೇ ಇರುವ ಗುಹೆಗಳನ್ನು ನೋಡದೆ ಹೋದರೆ ಮೇಘಾಲಯ ಪ್ರವಾಸ ಅಪೂರ್ಣ. ಅರವಾಗುಹೆಗಳನ್ನು ನೋಡದೇ ಹಾಗೆ ವಾಪಾಸು ಬಂದಿದ್ದು ಬೇಸರವೆನಿಸಿದರೂ ಮತ್ತೊಮ್ಮೆ ಬರುವ ಇರಾದೆಯೊಂದಿಗೆ ಅಸ್ಸಾಂನತ್ತ ಹೊರಟು ನಿಂತೆವು. ನಾಲಗೆ ಹೊರಳದ ನಾಡಲ್ಲಿ ತಿರುಗಿ ಬರುವ ಮಜವೇ ಬೇರೆ. ಯಾಕಿನ್ನು ಯೋಚನೆ ಪ್ಯಾಕ್ಪ್ ಹೇಳಿ. ಜೀವಂತ ಸೇತುವೆಗಳೊಂದಿಗೆ ಒಂದು ದಿನ ಕಳೆಯುವ ಆಲೋಚನೆಯೊಂದಿಗೆ ಇಂದಿನ ಪ್ರವಾಸಕ್ಕೆ ನಾವು ಪ್ಯಾಕ್ಪ್ ಹೇಳಿದೆವು.                  

   

No comments:

Post a Comment

ವಾರೆ ನೋಟ

ನಾಲಿಗೆ ಹೊರಳದ ನಾಡಿನಲ್ಲಿ ಮೂರು ದಿನ…

              ಈಶಾನ್ಯ ಭಾರತದ ಶಿಲ್ಲಾಂಗನ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ಣು ತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ . ಅದೆಷ್ಟೇ ಪ್ರಯ...