Showing posts with label ಶಾಲೆ. Show all posts
Showing posts with label ಶಾಲೆ. Show all posts

Sunday, May 12, 2019

ಕನಸುಗಳು unlimited.

       ನಮ್ಮ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿಯ ಗರಿ ಮೂಡಿಸಿಕೊಂಡ ಸಂರ್ದಭ. ಮನದಲಿ ಮತ್ತೊಂದಿಷ್ಟು ಕನಸುಗಳು ಮೊಳೆತವು. 
ನಾಲ್ಕನೆಯ ಬರಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪಡೆದ ಕ್ಷಣ 






ಶಾಲೆಯಲ್ಲಿ ನಡೆದ ಕೆಲವು ಕಾರ್ಯಕ್ರಮಗಳು.... 

ಕೆಲವನ್ನು ಮಾತ್ರ ಇಲ್ಲಿ ಹಾಕಲಾಗಿದೆ. 


ಇಕೋ ಕ್ಲಬ್ ಉದ್ಘಾಟನೆ- ಗಿಡ ನೆಡುವ ಮೂಲಕ..  
2010-11 ರ ಸಮಯ ನಮ್ಮ ಶಾಲೆ ಶಿಕ್ಷಕರೆಲ್ಲಾ ಶಾಲೆಯ ಸುತ್ತಲೂ ಔಷಧೀಯ ಗಿಡಗಳಿರಬೇಕು, ಶಾಲಾ ಎದುರಿಗೆ ಸುಂದರವಾದದೊಂದು ವನವಿರಬೇಕು, ಪುಟ್ಟ ಕೈತೋಟ, ಗಿಡಗಳಿಗೆಲ್ಲಾ ಹನಿ ನೀರಾವರಿ ಮಾಡಬೇಕೆಂದು ನಿರ್ಧರಿಸಿದೆವು.
ರಾಮನ್ ವಿಜ್ಞಾನ ಕಲಿಕಾ ಪ್ರಯೋಗಾಲಯ 

ಆ ವರ್ಷ ಪೋಷಕರ ಮತ್ತು ಊರವರ ಸಹಕಾರದಿಂದ ಶಾಲಾ ಸುತ್ತಲೂ ಒಂದಿಪ್ಪತ್ತು ಗಿಡ ನೆಟ್ಟೆವು. ಕೆಲವೇ ಕೆಲವು ಬದುಕುಳಿಯಿತು. ಮುಂದಿನ ವರ್ಷವೂ ಒಂದತ್ತು ಗಿಡ ನೆಟ್ಟೆವು. ಆ ವರ್ಷ ಮುಖ್ಯ ಶಿಕ್ಷಕರಾಗಿದ್ದ ರಘುರಾಮ್ ಕೊಠಾರಿಯವರು ನಾಲ್ಕು ತೆಂಗಿನ ಸಸಿ ಮತ್ತು ಮೇ ಪ್ಲವರ್ ಗಿಡಗಳನ್ನು ತಂದು ನೆಟ್ಟರು.
ವಿವಿಧ ಗಿಡ ನೆಡುವ ಕಾರ್ಯಕ್ರಮ.. 
ಆ ವರ್ಷವೇ ಅವುಗಳಿಗೆ ಹನಿ ನೀರಾವರಿ ಮಾಡಿಸಬೇಕಿತ್ತು, ಜೊತೆಗೆ ಮೇ ತಿಂಗಳಿನಲ್ಲಿ ಅವನ್ನು ಬದುಕಿಸಿಕೊಳ್ಳುವ ಸವಾಲಿತ್ತು. ನಮ್ಮ ನೆರವಿಗೆ ಬಂದವರು ದಿ. ನಾರಾಯಣ ಶೆಟ್ಟಿ. ಶಾಲಾ ಮಕ್ಕಳಿಗೆ ಎಲ್. ಐ. ಸಿ ಮಾಡಿಸಿ ವಿಮಾ ಶಾಲೆ ಎಂದು ಘೋಷಣೆ ಮಾಡಿದರು. ಎಲ್. ಐ. ಸಿ ಯಿಂದ ಬಂದ ಸ್ವಲ್ಪ ಹಣ ಜೊತೆಗೆ ನಾರಾಯಣ ಶೆಟ್ಟರು ಸ್ವಲ್ಪ ಸೇರಿಸಿ ಧನ ಸಹಾಯ ಮಾಡಿದರು. ಮೊತ್ತ ರೂಪಾಯಿ 12,000 ದಾಟಿತು. ಆ ಹಣದಲ್ಲೇ ಹನಿ ನೀರಾವರಿ ವ್ಯವಸ್ಥೆ ತಲೆ ಎತ್ತಿತ್ತು. ಮೇ ತಿಂಗಳಿನಲ್ಲಿ ನೀರು ಹಾಕಲು ಶಾಲೆಯ ಸನಿಹದ ನಾಲ್ಕನೇ ತರಗತಿಯ ಮಕ್ಕಳು ಒಪ್ಪಿಕೊಂಡರು. ಮುಂದಿನ ಎರಡು ವರ್ಷ ಏಳನೆ ತರಗತಿಯ ವಿನುತಾ ಮೇ ತಿಂಗಳಿನಲ್ಲಿ ನೀರುಣಿಸಿದಳು. ಈಗ ಶಾಲೆಯ ಸುತ್ತ ಮುತ್ತಲೂ ಔಷಧೀ ಗಿಡಗಳು.
ಮಕ್ಕಳ ವಾರದ ಪ್ರಯೋಗ 

ಶಾಲೆಯಲ್ಲಿ ಬೆಳೆದ ಬಾಳೆಹಣ್ಣು ಮಕ್ಕಳಿಂದ ಮಕ್ಕಳಿಗೆ ..... 

ಮಕ್ಕಳ ಪ್ರವಾಸ 

     ಶಾಲೆಯಲ್ಲಿರುವ ಅನೇಕ ವಿಜ್ಞಾನ ಮಾದರಿಗಳನ್ನು, ರಾಸಾಯನಿಕಗಳು, ಗಾಜಿನ ಉಪಕರಣಗಳು, ಜೀವಿಗಳ ಮಾದರಿಗಳು, ಮಾನವ ದೇಹದ ಅಂಗ ರಚನೆಗಳನ್ನು ಮಕ್ಕಳಿಗೆ ತೋರಿಸಲು ಅವನ್ನೆಲ್ಲಾ ಜೋಡಿಸಿಕೊಂಡು ವ್ಯವಸ್ಥಿತವಾಗಿ ಇರಿಸಲು ಮಕ್ಕಳ ಪ್ರಯೋಗಾಲದ ಜರೂರಿತ್ತು. ರೋಟರೀ ಕ್ಲಬ್ ಸಿದ್ದಾಪುರ ಹೊಸಂಗಡಿ ಇವರ ಸಹಾಯದಿಂದ ಪ್ರಯೋಗಾಲದ ಮಾಡಿಗೊಂದು ರೂಫಿಂಗ್ ವ್ಯವಸ್ಥೆ ಮಾಡಿಕೊಟ್ಟರು. ಈಗ ನಮ್ಮ ಪ್ರಯೋಗಾಲಯ ನವ ವಧುವಿನಂತೆ ಸಿಂಗಾರಗೊಂಡಿದೆ. ಸ್ಥಳೀಯರಾದ ವಿಶ್ವನಾಥ್ ಭಟ್ ಇವರು ಹೊಸದೊಂದು ಕವಾಟು ತೆಗೆಸಿಕೊಟ್ಟರು. ರಘುಶೆಟ್ಟಿ ನಡುಮಕ್ಕಿಯವರು ಹತ್ತು ಪ್ಲಾಸ್ಟಿಕ್ ಕುಚರ್ಿಯನ್ನು ಕೊಡುಗೆಯಾಗಿ ನೀಡಿದರು. ಡಾ.ಗುರುದತ್ತ್ ಕೊಡ್ಗಿ, ಅನಂತ ಕೊಡ್ಗಿ ಮತ್ತು ತಿಮ್ಮಪ್ಪ ಹೆಬ್ಬಾರ್ ಮನೆಯವರು ಕೈತೋಟಕ್ಕೆ ಸುಂದರ ಬೇಲಿ ಮಾಡಿಕೊಟ್ಟಿದ್ದಾರೆ.
ಸ್ವಚ್ಛತಾ ಅಭಿಯಾನ 


ಅರಳಿ ನಿಂತ ಗಿಡ ಬಳ್ಳಿಗಳು.. 

ಕೋಳಿ ಸಾಕಾಣಿಕಾ ತಂತ್ರಗಳು 

ತೋಟದಲ್ಲಿ ಕೃಷಿ ತರಬೇತಿ 

ಪರಿಸರ ಮಿತ್ರ ತಂಡ ಶಾಲೆಗೆ ಭೇಟಿ ನೀಡಿದ ಸಮಯ 


ಕಾರ್ಖಾನೆ ಭೇಟಿ ... 

ಪರಿಕಲ್ಪನೆಯ ಆಧಾರಿತ ವಿಜ್ಞಾನ ಮೇಳ ... 

ಕನಸುಗಳು 

ಶಾಲೆಗೊಂದು ಹೊಸ ಕಟ್ಟಡವಾಗಬೇಕು (ಹೆಂಚಿನ ಮಾಡು). ಜೊತೆಗೆ ಇಂಗು ಗುಂಡಿ, ಮಳೆ ನೀರಿನ ಕೊಯ್ಲು, ಗೊಬ್ಬರದ ಗುಂಡಿ,  ಇಂಗ್ಲೀಷ್  ಕಲಿಕೋಪಕಾರಣಗಳು,  ಔಷಧಿ ಮೂಲಿಕೆಗಳ ವನವಾಗಬೇಕು. ಊರವರು, ಪೋಷಕರು, ಹಿರಿಯ ವಿದ್ಯಾಥರ್ಿಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.

ಶ್ರೀಧರ್ ಎಸ್. ಸಿದ್ದಾಪುರ.

Thursday, October 11, 2018

ಹೊಸದು ಹೊಸೆದು ಹೊನ್ನಾಗಿಸಬೇಕು...


         ನಡೆದದಾ ದಾರಿಯಲಿ ನಡೆವ ರೋಮಾಂಚನವೆಲ್ಲಿ? ಹೊಸದಾರಿಯಲ್ಲಿ ಪುಳಕದ ಪುಗ್ಗವು ಊದಿಕೊಳ್ಳುವುದು. ಹಾಕಿದ ಹಳಿಗಳ ಮೇಲೆಯೇ ರೈಲು ಬಿಟ್ಟವರಿಗೆ ಹೊಸದು ಅರ್ಥವಾಗುವುದಾದರೂ ಹೇಗೆ? ಎಂದು ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ಕವನದಲ್ಲಿ ಮಥಿಸಿದ್ದಾರೆ, ಕಥಿಸಿದ್ದಾರೆ.

ಏನೋ ಹೊಸದು ಮಾಡುವಲ್ಲಿ ಎಡವುದು ಸಹಜ. ಕಷ್ಟ ಕೋಟಲೆಗಳು ನೂರಾರು. ಅವನ್ನೆಲ್ಲಾ ಮೆಟ್ಟಿ ನಿಂತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇಲ್ಲಿ ಈ ವರ್ಷ ಮಕ್ಕಳ ಅಜ್ಜಿಯಂದಿರಿಂದ ಸಂಗ್ರಹಿಸಿದ 'ಅಜ್ಜಿ ಮದ್ದು' ಎಂಬ ಕಿರು ಹೊತ್ತಗೆಯನ್ನು ಅನಾವರಣಗೊಳಿಸಲಾಯಿತು. ನಿವೃತ್ತ ಸಸ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಅರವಿಂದ ಹೆಬ್ಬಾರ್ ಅವರು ಪತ್ರಿಕೆ ಪ್ರಾಯೋಜಿಸಿ ಅನಾವರಣಗೊಳಿಸಿ ಮಾತನಾಡಿದರು.



ಮಕ್ಕಳ,  ಶಿಕ್ಷಕರ ಪ್ರಯತ್ನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ಇನ್ನೂ ಹೆಚ್ಚಿನ ಸಂಚಿಕೆಗಳು ಹೊರ ಬರಲಿ ಎಂದು ಆಶಿಸಿದರು.

Monday, October 8, 2018

ಮಕ್ಕಳ ಮನ ಸೆಳೆದ ಜೇಡಗಳ ಛಾಯಾಚಿತ್ರ ಪ್ರದರ್ಶನ...

        ಹಕ್ಕಿ ಹಿಕ್ಕೆಯಂತೆ ಕಾಣುವ, ಚಪ್ಪಟೆ   ಹುಳದಂತಹ ಎಂಟು ತುದಿ ಹೊಂದಿರುವ, ಅಂಗಿ ಗುಂಡಿಯಂತಿರುವ,  ಕಿತ್ತಳೆ ಹಣ್ಣಿನಂತಿರುವ, 

ಅಳಿಲಿನ ಮರಿಯಂತಿರುವ ಜೇಡಗಳು. ಒಂದೊಂದು ಒಂದು ಬಗೆ. 

ಕೆಲವು ಮುದುಡಿ ಮಲಗಿದರೆ, ಕೆಲವು ಕೀಟಗಳ ಹಿಡಿದು ತಿನ್ನಲು ಕುಳಿತಿದ್ದವು. 

ಇನ್ನು ಕೆಲವು ಮತ್ತೊಂದು ಜೇಡವನ್ನು ತಿನ್ನಲು ಹಿಡಿದಿದ್ದವು. 
ಕೆಲವು ಎರಡು ಬಾಲದವು. ಕೆಲವು ಇರುವೆಯಂತಿರುವವು, ಆದರೆ ಇರುವೆಗಳಲ್ಲ! ಎಲ್ಲವೂ ಜೇಡಗಳು. ಬಲೆ ಹೆಣೆದು ಕಾದು ಕುಳಿತ ಕೆಲವು ಜೇಡಗಳ ಛಾಯಾಚಿತ್ರಗಳು. 
ಒಂದೊಂದು ಒಂದು ಬಣ್ಣ. ಕೆಲವು ನಿದ್ರಾವಸ್ಥೆಯಲ್ಲಿ. ಕೆಲವು ರಾತ್ರಿ ಶಿಖಾರಿಗೆ ಸಜ್ಜಾಗಿದ್ದವು. 
ಇವುಗಳ ಜೊತೆಗೆ ಒಂದಿಪ್ಪತ್ತು ಹಕ್ಕಿಗಳು. 


















ಹಲವು ಮಿಡತೆಗಳು, ಏರೋಪ್ಲೇನ್ ಚಿಟ್ಟೆಗಳು ಮತ್ತು ಅವುಗಳ ದೂರದ ಸಂಬಂಧಿ ಕೀಟಗಳು! ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳು ಕಣ್ತುಂಬಿಕೊಂಡ ದೃಶ್ಯ! ಮಕ್ಕಳ ಕಲ್ಪನೆಯಲ್ಲಿ ಹೊಸ ಹೂಗಳಂತೆ ಜೇಡಗಳು ಅರಳಿ ನಿಂತವು. 
ಎಲ್ಲಾ ಛಾಯಾಚಿತ್ರಗಳು ಶ್ರೀಧರ್ ಎಸ್. ಸಿದ್ದಾಪುರ ಅವರ ಕ್ಯಾಮರ ಕಣ್ಣಿಂದ ಮೂಡಿಬಂದಿತ್ತು.



Sunday, February 4, 2018

ಮಚ್ಚಟ್ಟು ಶಾಲೆಗೆ 'ಹಸಿರು ಶಾಲೆ' ಪ್ರಶಸ್ತಿಯ ಹ್ಯಾಟ್ರಿಕ್ ಗರಿ..

 
 ಮರವೇ ವರ ಎಂಬ ಮಕ್ಕಳ ಮತ್ತು ಶಿಕ್ಷಕರ ತಂಡ. 'ಒಂದು ಮರ ಸಾವಿರ ವರ' ಎಂಬ ಫೋಷ ವಾಕ್ಯವನ್ನು ಓದಿಕೊಂಡು ಶಾಲೆ ಒಳ ಹೊಕ್ಕರೆ ಅಂಜೂರ ಮತ್ತು ಮಂದಾರ ಗಿಡಗಳು ಸ್ವಾಗತಿಸುತ್ತವೆ. ಅಂಜೂರದ ಎಡ ಬಲಕ್ಕಿರುವ ಚಿಕ್ಕು, ತೆಂಗು, ನೆಲ್ಲಿ, ಅಜರ್ುನ, ಧೂಪ, ಕದಂಬ, ಸೀತಾಫಲಗಳು, ಬಾದಾಮಿ, ವಾಟೆ, ನೇರಳೆ, ಅಡಿಕೆ, ಹಾಲೆ, ಮಾವು, ನಿಂಬೆ ಸಾಗುವಾನಿ ಮುಂತಾದ ಗಿಡಗಳು ಶಾಲೆಯ ಸುತ್ತಲೂ ತಮ್ಮ ನಗು ಚೆಲ್ಲಿವೆ. ಉರಗ, ತುಂಬೆ, ಅಮೃತ ಬಳ್ಳಿ, ಅರಶಿನ, ಸ್ಥಳೀಯ ಅಗಳು ಶುಂಠಿ, ಕಿರಾತ ಕಡ್ಡಿ ಮುಂತಾದ ಔಷಧೀಯ ಗಿಡಗಳು ಶಾಲೆಯ ಸುತ್ತುವರಿದಿದೆ.
 ಶಾಲೆಯಲ್ಲಿನ ಇಂಗು ಗುಂಡಿಗಳು, ತಿಪ್ಪೆ ಗುಂಡಿ, ಪೈಪ್ ಕಾಂಪೋಸ್ಟ್, ಶಾಲೆಯ ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿನ ಅನನ್ಯತೆ, ವಿವಿಧ ಔಷಧಿ ಗಿಡಗಳ ಕುರಿತು ಮಕ್ಕಳು ಸಂಗ್ರಹಿಸಿದ ಮಾಹಿತಿಗಳು, ಭೂಮಿ ಎಂಬ ವಿಜ್ಞಾನ ಪತ್ರಿಕೆ, ವಿಜ್ಞಾನದ ವಿವಿಧ ಮಾದರಿಗಳು, ಪ್ಲಾಸ್ಟಿಕ್ ನಿರ್ವಹಣೆ, ಸ್ವಚ್ಚತೆಯ ನಿರ್ವಹಣೆ, ಅಡುಗೆ ಕೋಣೆಯ ನಿರ್ವಹಣೆ, ಶಾಲಾ ಕೈತೋಟ, ಗೋಡೆಯ ಮೇಲಿನ ವಿವಿಧ ಫೋಷಣೆಗಳು, ಹೀಗೆ ಶಾಲೆ ಕೈಗೊಂಡ ವಿವಿಧ ವಿನೂತನ ಕಾರ್ಯಕ್ರಮಗಳನ್ನು  ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಶಾಲೆಗೆ ಹಸಿರು ಶಾಲೆ ಎಂಬ ಜಿಲ್ಲಾ ಪ್ರಶಸ್ತಿಯನ್ನು ಮೂರನೇ ಬಾರಿಗೆ ಶ್ರೀ ಶೇಷ ಶಯನ ಕಾರಿಂಜ ಅವರು ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ, ಪರಿಸರ ಅಧಿಕಾರಿ ಶ್ರೀ ಲಕ್ಷೀಕಾಂತ, ಶ್ರೀ ದಿನೇಶ್ ಶೆಟ್ಟಿಗಾರ್ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದಶರ್ಿ ಉಪಸ್ಥಿತರಿದ್ದರು. ಸಸ್ಯ ಶ್ಯಾಮಲದ ದಿನೇಶ ನಾಯಕ್ ವಿಟ್ಲ ಇವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

Tuesday, September 12, 2017

ಶಿಕ್ಷಣ, ಮೆಕಾಲೆ ಮತ್ತು ಪಂಜರ ಶಾಲೆ......


 ಬ್ರಿಟಿಷ್ರು ತಮಗಾಗಿ ಮಾಡಿಕೊಂಡ ಈ ಶಿಕ್ಷಣ ಪದ್ದತಿ ಇನ್ನೂ ನಾವು ಜೀವಂತವಾಗಿಟ್ಟು ಹಾಗೇ ಕಾಪಿಡುತ್ತಿದ್ದೇವೆ. ಸತ್ತ ಶವವನ್ನ ಜೀವಂತವಾಗಿರಿಸಲು ಶತಾಯಗತಾಯ ಹೋರಾಡುತ್ತಲೇ ಇದ್ದೇವೆ! ಇನ್ನೆಷ್ಟು ದಿನ? ಉರು ಹೊಡೆದು, ಒತ್ತಡದಲ್ಲಿ ಯಾವುದೋ ಒಂದೆರಡು ಭಾಷೆ ಕಲಿತು ಬಿಟ್ಟರೆ ನಮ್ಮ ಜನ್ಮ ಪಾವನವೆಂಬಂತೆ ಆಡುತ್ತಿರುವವರ ಜನರ ನಡುವೆ ಹೋರಾಡಬೇಕಾದ ಅನಿವರ್ಾಯತೆ. ಊರಿನ ಜತಗೆ ಕುರುಡನೂ ಓಡಬೇಕಾದ ಸಂದಿಗ್ಧ ಸ್ಥಿತಿ ಉಂಟಾಗಿದೆ. ಇಚ್ಚೆ ಇಲ್ಲದವನೂ ಓಡಲೇ ಬೇಕಾಗಿದೆ.
Fairy Bull bull team with me.


ನಮ್ಮದೇಶಕ್ಕೆ ಸರಿ ಹೊಂದುವ ಶಿಕ್ಷಣ ಪದ್ಧತಿಯನ್ನು ನಾವಿನ್ನೂ ಅನ್ವೇಷಿಸಿಲ್ಲವೆಂಬದೇ ದೊಡ್ಡ ದುರಂತ. ಮತ್ತದೇ ಉರು ಹೊಡೆವ ಗುಮಾಸ್ತಗಿರಿಯ ಗುಲಾಮಿ ಪದ್ಧತಿ, ಎಲ್ಲರಿಗೂ ಎಲ್ಲವನ್ನು ಕಲಿಯಲಸಾಧ್ಯವೆಂಬ ಸರಳ ತತ್ವವನ್ನು ಮರೆತಿರುವ ಸ್ಥಿತಿ ನಮದಾಗಿದೆ. ಹೆಚ್ಚು ಹೆಚ್ಚು ಅಂಕ ಪಡೆದು ಇನ್ನೊಬ್ಬರ ಗುಲಾಮರಾಗಿ ಸ್ವಂತಿಕೆ ಮಾರಿಕೊಂಡಿದ್ದೇವೆ. ದೇಶವೇ ನಮಗೆ ಹೀನಾಯದಂತೆ ಕಾಣುವ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಉಳಿದ ದೇಶಗಳು ಸಂಸ್ಕೃತಿಗಾಗಿ ನಮ್ಮತ್ತ ನೋಡುತ್ತಿದ್ದರೂ ನಾವು ಮೂಕರಂತಾಡುತ್ತಿದ್ದೇವೆ. ಹೀಗೆ ಕಲಿಕೆಯ ವಿಡಂಬನಾತ್ಮಕವಾಗಿ ನೋಡುವ, ಆಲೋಚಿಸುವವರಿಗಾಗಿ ಇರುವ ನಾಟಕ ಪಂಜರ ಶಾಲೆಯನ್ನು ನಮ್ಮ ಮಕ್ಕಳು ಅಭಿನಯಿಸಿದರು. ಒಂದೊಳ್ಳೆ ನಾಟಕವಾಡಿದ ಅನುಭೂತಿ ನನ್ನದಾಯಿತು.
ಪಂಜರ ಶಾಲೆಯ ನೆಪದಲ್ಲಿ ಇಷ್ಟೆಲ್ಲಾ ಹೇಳ ಬೇಕಾಯಿತು. ಮೇಲ್ನೋಟಕ್ಕೆ ಸಾಮಾನ್ಯ ನಾಟಕದಂತೆ ಕಂಡರೂ ಅದರ ತಿರುಳು ಮಾತ್ರ ನಿಮ್ಮನ್ನು ಕಾಡದೇ ಬಿಡದು. ಸಾಧ್ಯವಾದರೆ ಒಮ್ಮೆ ನೋಡಿ, ಓದಿ 

Wednesday, March 15, 2017

ಜಿಲ್ಲಾ ಉತ್ತಮ ಪರಿಸರ ಮಿತ್ರ ಶಾಲೆ

                  ಶಾಲೆ ನಿರ್ವಹಿಸಿದ ವಿವಿಧ ಪರಿಸರ ಸಂಬಂಧಿ ಕಾರ್ಯಗಳ ಫಲವಾಗಿ ನಿನ್ನೆ ನಮ್ಮ ಶಾಲೆಗೆ ಜಿಲ್ಲಾ ಉತ್ತಮ ಪರಿಸರ ಮಿತ್ರ ಹಸಿರು ಶಾಲೆ  ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿ ದ್ವಿತೀಯ ಸ್ಥಾನಿಯಾಗಿ ಹೊರ ಹೊಮ್ಮಿತು.  ಆಯ್ಕೆ ಮಾಡಿದ ಎಲ್ಲರಿಗೂ ಶಾಲಾ ಶಿಕ್ಷಕಿ ಮತ್ತು ಮಕ್ಕಳಿಗೆ ಧನ್ಯವಾದಗಳು.

ಡಾ. ಲಕ್ಷೀಕಾಂತ ತಮ್ಮ ಮಾತುಗಳಲ್ಲಿ



ಪ್ರಶಸ್ತಿ ಸ್ವೀಕರಿಸಿದ ಕ್ಷಣ.


ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...