Monday, March 21, 2022
ಬೇಟೆ ಹಕ್ಕಿಯ ಬೆನ್ನಟ್ಟಿ!
Sunday, September 26, 2021
ನೇರಳ ಕಟ್ಟೆಯಲ್ಲೊಬ್ಬ ದೇವಲೋಕದ ಸುಂದರ......
ಮಾಗಿ ಚಳಿಯ ಸಮಯ, ಸ್ನೇಹಿತ ಕಾಲ್ ಮಾಡಿ ನೇರಳ ಕಟ್ಟೆಯಲ್ಲಿ ಹಳೆ ವಸ್ತು ಮಾರಾಟಗಾರನಿದ್ದಾನೆ. ಅವನಲ್ಲಿ ಹೊಸ ಹೊಸ ಹಳೆ ವಸ್ತುಗಳು ಬಂದಿವೆಯಂತೆ ನೋಡಿ, ಕೊಂಡು ಬರೋಣವೇ? ಎಂದು ಕೇಳಿದ. ಸರಿ ಎಂದು ಹೊರಟೆ. ನೇರಳಕಟ್ಟೆಯಿಂದ ಮುಂದೆ ಗುಲ್ವಾಡಿಯಲ್ಲಿ ಆತನ ಮನೆಯಿತ್ತು.
ಹಳೆಯ ವಸ್ತುಗಳ ಮಾರಾಟಗಾರನಾದ ಆತ ನಮ್ಮೆದುರು ಒಂದು ಗೋಣಿ ಚೀಲದಷ್ಟು ಹಳೆ ವಸ್ತುಗಳನ್ನು ರಾಶಿ ಹಾಕಿದ. ನಮಗೂ ಅವನಿಗೂ ವ್ಯಾಪಾರ ಕುದುರದೇ ಅಲ್ಲಿಂದ ಹೊರಟೆವು. ಹಾದಿ ನಡುವಿನ ನೇರಳಕಟ್ಟೆಯಲ್ಲಿ ಚಹ ಹೀರಲು ನಿಲ್ಲಿಸಿದೆವು. ಹತ್ತಾರು ಅಂಗಡಿ, ಸಣ್ಣ ಶಾಲೆ ಇರುವ ಪುಟಾಣಿ ಗ್ರಾಮ. ಅನೇಕ ಬರಹಗಾರರು, ಸಾಹಿತ್ಯ ಪ್ರೇಮಿಗಳನ್ನು ತನ್ನ ಒಡಲ ಬಸಿರಿನಲ್ಲಿ ಬಚ್ಚಿಟ್ಟುಕೊಂಡಿದೆ. ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್, ಕವಯತ್ರಿ ಜ್ಯೋತಿ ನೇರಳಕಟ್ಟೆ, ನಾಟಕಕಾರ ಆನಂದ ತಪ್ಪಲು, ಅಕ್ಷರ ಸಂಚಾರದ ಪುಸ್ತಕ ಪ್ರೇಮಿ ಭಾಸ್ಕರ ಮುಂತಾದವರು.
ನೇರಳಕಟ್ಟೆಯಿಂದ ವಾಪಾಸು ಬರುವಾಗ ಒಂದಿಷ್ಟು ಮೀನು ಮಾರುವವರನ್ನು ಕಂಡೆ. ತಲೆ ಮೇಲೊಂದು ಅಣಬೆ ಛತ್ರಿ ಹಾಕಿಕೊಂಡು ಅದರ ನೆರಳಲ್ಲಿ ಕುಳಿತು ಮಾರುತ್ತಿದ್ದರು. ನೋಡಿದ ಕೂಡಲೆ ನನ್ನೊಳಗಿನ ಛಾಯಾಗ್ರಾಹಕ ಜಾಗೃತನಾದ. ಇವರ ಛಾಯಾಗ್ರಹಣ ಮಾಡಬೇಕೆಂದು ನಿರ್ಧರಿಸಿದೆ. ಮುಂದಿನ ಭಾನುವಾರವೇ ಅಲ್ಲಿಗೆ ಮತ್ತೆ ಹೊರಟೆ.
ನೇರಳ ಕಟ್ಟೆ ಚಿತ್ರಕಾರನೊಬ್ಬ ಬಿಡಿಸಿದ ಕೊಲಾಜ್ನಂತೆ. ಹೆಸರೇ ಎಷ್ಟು ಸುಂದರ. ಕೇರಳದಿಂದ ಬಂದ ಮಾಪಿಳ್ಳೆಗಳು, ಕೊಚ್ಚಿ ಕ್ರಿಶ್ಚಿಯನ್ನರು ಈ ಭಾಗದವರೇ ಆಗಿ ಹೋಗಿದ್ದಾರೆ. ಬಹುತೇಕರು ಕೃಷಿಕರು. ಕೊಡ್ಲಾಡಿ ಸಮೀಪದ ದಿ. ಶ್ರೀಪತಿ ಅಡಿಗ ಮತ್ತು ಅವರ ಮಗ ಪ್ರಸನ್ನ ಅಡಿಗ ತಮ್ಮ ಸಹಜ ಕೃಷಿಯ ಮೂಲಕ ನೇರಳ ಕಟ್ಟೆಗೆ ಹೆಸರು ತಂದು ಕೊಟ್ಟವರು.
ಅಂತೂ ಆಸಾಮಿ ವಿಷಯಕ್ಕೆ ಬಂದ್ನಲ್ಲ ಎಂದು ಕುಸಿಯಾಯಿತಾ? ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ್ರೆ ಈ ಹಟ್ಟಿ ಮುದ್ದ. ನಾ ನಿಟ್ಟ ಹೆಸರಲ್ಲ ಇದು. ಪರಿಸರದೊಂದಿಗೆ ಹಲವು ಶತಮಾನಗಳಿಂದ ಸಹ ಜೀವನ ನಡೆಸುತ್ತಾ ಬಂದ ಕುಡುಬಿ ಮತ್ತು ಮರಾಠಿ ಜನಾಂಗದವರಿತ್ತ ಹೆಸರು! ಹಟ್ಟಿ ಎಂದರೆ ನಮ್ಮ ಕಡೆ ದನ, ಎಮ್ಮೆ ಕಟ್ಟುವ ಜಾಗ. ಅಲ್ಲಿರುವ ಕೀಟಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ಹೊರೆದು ಕೊಳ್ಳುವವನೀತ. ಗಂಡು ಗಲಿ. ಅಲ್ಲದೆ ಮರಾಠಿಗರ ಹೋಳಿ ಹಬ್ಬಕ್ಕೆ ಇವನ ಚಂದ ಬಾಲವಿದ್ದರೆ ಅದರ ಗತ್ತೇ ಬೇರೆ. ಅವನ ಬಾಲಕ್ಕೆ ಒಳ್ಳೆ ಬೆಲೆ! ಹಾಗೆಂದು ಹಿಡಿಯಲು ಹೋಗಬೇಡಿ. ಪಾರೆಸ್ಟ್ ಡಿಪಾರ್ಟಮೆಂಟಿನವರು ಹಿಡಿದಾರು ಜೋಕೆ. ಈಗಾಗಲೇ ಅಳಿವಿನಂಚಿಗೆ ಸರಿದಿದೆ ಸ್ವಾಮಿ.
ಹೇಗಿದ್ದಾನಿವ ಎಂದು ಕೇಳಿದಿರಾ? ತಲೆಯ ಮೇಲೊಂದು ಶಿಖೆ. ಸೀಳಿಕೊಂಡ ಉದ್ದನೆಯ ಬಿಳಿ ಬಾಲ. ಚೂಪು ಕಣ್ಣು. ದೇಹವೆಲ್ಲಾ ಕಪ್ಪೆನಿಸುವ ಕಡು ನೀಲಿ. ಎದೆ ಬಿಳಿ. ಅದಕೆ ಮ್ಯಾಚಿಂಗ್ ಆದ ಬಿಳಿ ಪುಕ್ಕ ಮತ್ತು ಸೀಳಿಕೊಂಡ ಸುಂದರ ಬಾಲ. ಥೇಟ್ ಸ್ವರ್ಗದಿಂದಿಳಿದು ಬಂದ ದೇವತೆ. ಹಾಗಾಗಿ ಇಂಗ್ಲೀಷ್ ಬಲ್ಲವರು ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು. ಇರಲಿ ಇದು ಒಂದು ಅಗ್ದಿ ನೊಣ ಹಿಡುಕ. ಹಾಗಾಗಿ ಮೀನು ಹೆಂಗಸರ ಬೆನ್ನು ಬಿದ್ದಿದ್ದ. ಹಟ್ಟಿ ಮುದ್ದನ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡುಬಿಟ್ಟೆ. ನನ್ನ ಕ್ಯಾಮರ ಇವತ್ತು ತೃಪ್ತಿಯ ತೇಗು ತೇಗಿತ್ತು. ಫೋಟೋ ಕ್ಲಿಕ್ಕಿಸಿಕೊಂಡ ಕುಸಿಯಲ್ಲಿ ಆತನೂ ಬಾಲ ಅಲ್ಲಾಡಿಸುತ್ತಾ ಹಾರಿ ಹೋದ!
ಶ್ರೀಧರ್. ಎಸ್. ಸಿದ್ದಾಪುರ
Saturday, May 23, 2020
ಕಾಣದ ಕಡಲಿಗೆ ಕಾಯುತಿದೆಯೆ ಬದುಕು?
"ಫೋಟೋಗ್ರಫಿ ಮಾಡಲು"
"ಯಾವುದರದ್ದು ತೆಗಿತಿ ಚಿತ್ರ?"
"ಹಕ್ಕಿ"
ಹೀಗೆ ಪ್ರಶ್ನೆಗಳ ಸರಮಾಲೆ ಮುಂದುವರಿಯುತ್ತದೆ. ಏನು ಉತ್ತರಿಸುವುದೋ ಗೊತ್ತಾಗದೆ ಸುಮ್ಮನಾಗುತೇನೆ. ಅವರಿಂದ ಹೇಗೋ ತಪ್ಪಿಸಿಕೊಂಡು ಮುನ್ನುಗ್ಗುವೆ. ಕೆಲವೊಮ್ಮೆ ಅವರು ಕಾಣುತ್ತಲೇ ನಾನು ದಿಕ್ಕು ಬದಲಾಯಿಸುವುದುಂಟು ಮರ್ರೆ. ಹಳ್ಳಿಗಳಲ್ಲಿ ಛಾಯಾಚಿತ್ರ ತೆಗೆಯುವವರು ಎದುರಿಸುವ ಪ್ರಶ್ನೆಗಳ ಸರಮಾಲೆಯನ್ನು ಕೇಳಿದರೆ ಚಳಿ ಜ್ವರ ಶುರುವಾಗುವುದು. ಅವರ ಅಜ್ಞಾನವೋ ನಮ್ಮ ಕರ್ಮವೋ ನಾ ಕಾಣೆ.
ಇಂತಹ ಬಿಕ್ಕಟ್ಟಿನ ಪ್ರಶ್ನೆಗಳ ಸರಮಾಲೆಯನ್ನು ನನ್ನ ಅಕ್ಕನೂ ನನ್ನ ಮೇಲೆಸೆದು ನನ್ನನ್ನು ಕಕ್ಕಾಬಿಕ್ಕಿ ಮಾಡಿದ್ದಿದೆ. ಈ ವಂಶದ ಜಿವಿಗಳಿಗೆ ಹೊಸ ಸೇರ್ಪಡೆ ನನ್ನ ಪತ್ನಿ!! ಇಂತಹ ಮಮರ್ಾಘಾತದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಇಂತವರಿಂದ ಆದಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಅವರನ್ನು ಗೊಂದಲಗೊಳಿಸಲು "ಲಕ್ಷ, ಲಕ್ಷ ಸುರಿದು ಯಾವ ಪುರುಷಾರ್ಥಕ್ಕೆ ಚಿನ್ನಕೊಳ್ಳುತ್ತೀರಿ? ನೀವು ಹಾಕುವುದು ಬರೇ 30 ನಿಮಿಷವಷ್ಟೇ." ಎಂದವರಿಗೆ ಪ್ರಶ್ನೆ ಕೇಳಿ ಗಾಬರಿ ಹುಟ್ಟಿಸುತ್ತೇನೆ.
![]() |
| ಮಲಬರ್ ಸ್ಟಾರ್ಲಿಂಗ್. |
ಎಲ್ಲವೂ ಪ್ರಯೋಜನಕ್ಕೆ ಬರಲೇಬೇಕೆ? ಗೊತ್ತಿಲ್ಲ. 5 ವರುಷಗಳಿಂದ ನನ್ನ ಗಣಕದಲ್ಲಿ ತಣ್ಣಗೆ ಕುಳಿತ ಎಲ್ಲಾ ಚಿತ್ರಗಳಿಗೂ ಅಚಾನಕ್ ಒಳ್ಳೆ ಬೇಡಿಕೆ ಬಂದಿತು ಮರ್ರೆ.
'ಮಕ್ಕಳ ವಾಣಿ' ಎಂಬ ಯು-ಟ್ಯುಬ್ ಚಾನೆಲ್ ಒಂದಕ್ಕೆ ಹಕ್ಕಿಗಳ ಪುಟ್ಟ ಪುಟ್ಟ ಎರಡು ವಿಡಿಯೋ ಮಾಡಿ ಕೊಡಿ ಎಂದು ಉದಯ ಗಾಂವಕ್ಕರ್ ಕೇಳಿಕೊಂಡಿದ್ದರು. ಒಂದು ಸುಂದರ ಹಕ್ಕಿಯ ಛಾಯಾ ಚಿತ್ರ ತೆಗೆಯಲು ಒದ್ದಾಡಿದ ನೆನಪುಗಳೆಲ್ಲಾ ಒದ್ದುಕೊಂಡು ಬಂತು. 300 mm ನ ಸುಮಾರು 2 ಕೆ.ಜಿ ತೂಕದ ಲೆನ್ಸ್! ಹೊತ್ತು ತಿರುಗಿದವನಿಗೇ ಗೊತ್ತದರ ಕಷ್ಟ. ಬಿಡ ಬೇಕು ಎಂದು ಅನೇಕ ಬಾರಿ ಎಣಿಸಿದ್ದೂ ಉಂಟು. ಆದರೆ ಏನೋ ವಿಚಿತ್ರ ಸೆಳೆತ. ಚಿತ್ರ ತೆಗೆದ ಸ್ಥಳಕ್ಕೊಮ್ಮೆ ಹೋಗಿ ಕೂಡಾ ಬಂದೆ. ಆ ಮರದ ರೆಂಬೆಯೊಂದು ಮುರಿದು ಬಿದ್ದಿತ್ತು. ಸನಿಹದಲ್ಲೇ ಒಂದೆರಡು ಮನೆ ಕೂಡಾ ಆಗಿತ್ತು. ಆ ನಿಮ್ಮಿತ್ತ ನನ್ನ ಗಣಕದಲ್ಲಿ ತಣ್ಣಗೆ ಮಲಗಿದ್ದ ಹಕ್ಕಿಗಳನ್ನೆಲ್ಲಾ ಮತ್ತೊಮ್ಮೆ ಎಬ್ಬಿಸಬೇಕಾಗಿ ಬಂತು. ಹಾಗೆ ಅನೇಕ ಮಿತ್ರರನ್ನು ಸಹ. ಜೊತೆಗೆ ನಿಮ್ಮನ್ನು! ಕಾಣದ ಕಡಲಿಗೆ ನಾವೂ ಹೀಗೆ ಯಾವೊತ್ತೋ ಉಪಯೋಗಕ್ಕೆ ಬರುವುದಕ್ಕಾಗಿ ಹುಟ್ಟಿದ್ದೇವೆಯೇ? ಹುಟ್ಟು ಸಾರ್ಥಕವಾಗುವುದು ಹೀಗೆಯೇ? ಕಾಣದ ಕಡಲಿಗೆ ಕಾಯುವುದೇ ಬದುಕಾ? ಗೊತ್ತಿಲ್ಲ.
https://youtu.be/Osc0IFMU6dM
ಅಂತೂ ತೆಗೆದ ಹಲವು ಹಕ್ಕಿಗಳ ಚಿತ್ರಗಳ ಕುರಿತು ಪುಟಾಣಿ ಲೇಖನಗಳನ್ನು ಬ್ಲಾಗಿನಲ್ಲಿ ಹಾಕಿರುವೆ. 'ಬಾನಾಡಿ' ಅಡಿಯಲ್ಲಿ ಅವೆಲ್ಲಾ ಇವೆ. ಕೆಲವು ಚೆನ್ನಾಗಿವೆ. ಕೆಲವು ಸಪ್ಪೆ. ಮತ್ತೆ ಸರಿ ಪಡಿಸಬೇಕಾಗಿದೆ.
ಓದಿ, ವಿಡಿಯೋ ನೋಡಿ ಪ್ರತಿಕ್ರಿಯಿಸುವಿರಲ್ಲಾ. ನಿಮ್ಮ ರಚನಾತ್ಮಕ ಸಲಹೆಗಳ ನಿರೀಕ್ಷೆಯಲ್ಲಿ....
ಶ್ರೀಧರ್. ಎಸ್. ಸಿದ್ದಾಪುರ
Saturday, March 2, 2019
ಚಳಿಗೆ ಮುದುರಿದ ನೀಲಕಂಠ-
Saturday, April 22, 2017
ಹಕ್ಕಿ ಮರಿ..
![]() |
| Juvenile Barbit. |
ಹಕ್ಕಿ ಮರಿ..
ಗೂಡು ಬಿಟ್ಟು ಹೊರಗೆ ನೀ ಬಂದರೆ
ಆಗದಂತೆ ನಿನಗೆ ಎಲ್ಲೂ ತೊಂದರೆ.
ಗುಬ್ಬಿ ಮರಿಯಂತೆ ನಿನ್ನ ನಾ ನೋಡಿಕೊಳ್ಳುವೆ;
ಹಾರಲು ಹಾರಾಡಲು ನಿನಗೆ ನಾ ಕಲಿಸುವೆ.
ವಸಂತದ ಹೂವಂತೆ ಬಿರಿದೆ ನೀ
ಹಾರಲು ನಿನಗೆ ನಾ ಕಲಿಸಲೆ.
ಅಲ್ಲಿ ನೋಡು ಮಾವು ಚಿಗುರಿದೆ;
ಕೊಕ್ಕಿನಲ್ಲಿ ಕಿತ್ತು ತಿನ್ನ ಬಾರದೇ?
ಚಿಗುರಿನಂತೆ ನಿನ್ನೆ ಮೊನ್ನೆ ನಾ ಚಿಗುರಿದೆ,
ವಿಶಾಲ ಪ್ರಪಂಚವ ನಾ ಇಂದೇ ನೋಡಿದೆ.
ಚಿಗುರು ಮಿಡಿಯ ಕಿತ್ತು,
ಬಾಯಿಗಿಡಬಾರದೇ ಒಂದು ತುತ್ತು?
ಹಾರುತಿಹುದು ದೂರದಲ್ಲಿ ಹದ್ದು ಹತ್ತು
ಬಿಟ್ಟು ಹಾರದಿರು ನನ್ನ ಇವತ್ತು.
ತುಂಬ ಹೊಸದು ನನಗೆ ಈ ಜಗತ್ತು,
ಹಾರಬಾರದೇ ನನ್ನ ಹೊತ್ತು?
ಶ್ರೀಧರ್. ಎಸ್. ಸಿದ್ದಾಪುರ.
Sunday, May 1, 2016
ಒಂಟಿ ಹಕ್ಕಿಯ ಹೋರಾಟ..
ಆದರೆ ನಿನ್ನೆ ಅದು ಸಿಕ್ಕಿ ಬಿತ್ತು. ಹೇಗೆಂದರೆ ಹಾನರ್್ಬಿಲ್ ಮುತ್ತಿಗೆಯಿಂದ. ಆರೇಳು ಹಾನರ್್ಬಿಲ್ಗಳು ಏಕಾ ಏಕಿ ಅದರ ಗೂಡ ಸುತ್ತ ಗುಡಾರ ಹೂಡಿದವು. ಹೇಗಾದರೂ ಮಾಡಿ ಮರಿ ತಿನ್ನುವಾಸೆ ಅವಕ್ಕೆ. ಈ ಪುಟ್ಟ ಹಕ್ಕಿ ಬಿಡಬೇಕಲ್ಲ. ಅಷ್ಟೂ ಹಾನರ್್ಬಿಲ್ಗಳನ್ನು ಒಂದೇ ಏಟಿಗೆ ಓಡಿಸಿ ಬಿಟ್ಟಿತು.
![]() |
| HORN BILLS |
Thursday, May 14, 2015
Tuesday, May 12, 2015
ಹಕ್ಕಿಗಳು ಹೀಗೆ ಮಾತಾಡತಾ ಇರಬಹುದೇ??...
Sunday, May 19, 2013
ಮನೆ ಅಂಗಳದಲ್ಲೊಂದು ಹಕ್ಕಿ ಮರಿ....
![]() |
| ಮೊಟ್ಟೆಗೆ ಕಾವು ಕೊಡುತ್ತಿರುವ ಗಂಡು ಪಿಕರಾಳ |
ನಮ್ಮ ಅಂಗಳದ ಪಕ್ಕದ ಮಾಡಿನಲ್ಲಿ ಹಕ್ಕಿ ಮರಿಯೊಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು ಕಾವು ಕೊಡುತ್ತಿದೆ. ನಾನು ನನ್ನ ಕನಸುಗಳಿಗೆ ರೆಕ್ಕೆ ಜೋಡಿಸಿ ಕಾವು ಕೊಡುತ್ತಿದ್ದೇನೆ. ಅದೇ ಹಿಮಾಚಲ ಸುತ್ತುವ ಕನಸು. ಅಲ್ಲಿ ತಿರುಗಿ ಜನ ಜೀವನ ಪರಿಸರ ಅರಿಯುವ ಕನಸೀಗ ಮರಿಯಾಗಿದೆ ಅದನ್ನೆಲ್ಲಾ ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆಂಬ ತವಕ. ನಿಧಾನವಾಗಿ ಹಂಚಿಕೊಳ್ಳವೆ.
ಈ ಪಿಕರಾಳದ ಮೊಟ್ಟೆಗಳು ಮರಿಯಾಗಿ ಮನೆಯೆಲ್ಲಾ ಚಿಲಿಪಿಲಿಯಿಂದ ತುಂಬಲಿಯೆಂದು ಹಾರೈಸುವೆ. ಮತ್ತೆ ಭೇಟಿಯಾಗೋಣ..
Saturday, April 6, 2013
ನಮಗೂ ಬದುಕಲು ಒಂದು ಅವಕಾಶ ಕೊಡಿ.
. ಇದೇ ರೀತಿ ಪರಿಸರ ನಾಶವಾಗುತ್ತಾ ಸಾಗಿದರೆ ಮುಂದೊಂದು ದಿನ ನಾವು ವಿನಾಶಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವುದರಲ್ಲಿ ಆಶ್ಚರ್ಯವಿಲ್ಲ. ಕೇವಲ ಏಕ ರೂಪದ ಪ್ರಾಣಿ ಪಕ್ಷಿ ವ್ಯವಸ್ಥೆಯಾಗಿ ರೂಪಗೊಳ್ಳವತ್ತ ನಾವು ಸಾಗುತ್ತಿದ್ದೇವೆ. ಪರಿಸರ ಅಸಮತೋಲನವು ತುಂಡರಿಸುವುದು ಖಂಡಿತ. ಯಾವುದೋ ಒಂದು ಪಕ್ಷಿಯ ನಾಶವು ನಮ್ಮ ನಾಶದ ಮುನ್ನುಡಿಯಾಗಿರಬಹುದು. ಯೋಚಿಸ ಬೇಕಾದುದು.
| ಕುಂಡಿ ಅಲ್ಲಾಡಿಸುತ ಹೊರಟಿ ನಿ ಎಲ್ಲಿಗಿ! |
| ನಿಮ್ಮ ಸುದ್ದಿಗೆ ಬತ್ತಿಲ್ಲೆ ಮರ್ರೆ ಅಯ್ಯೋ ಬಿಟ್ಟ್ ಬಿಡಿ ನನ್ನ್ನಾ!!! |
Saturday, February 2, 2013
ಸೃಜನಾತ್ಮಕತೆ
![]() |
| ಕುಟುರ Green Barbet |
![]() |
| Crimson Red Barbet |
Friday, September 21, 2012
BLUE ROCKET ಮಿಂಚುಳ್ಳಿಯ ಬೆನ್ನತ್ತಿ
![]() |
| Small Kingfisher with the prey for its kid! |
Monday, April 30, 2012
ಕಾರಂಜಿ ಕೆರೆಯ ಮೋಹಕ ಪಕ್ಷಿಲೋಕ
![]() |
| Purple Mur Hen |
![]() |
| Gray Tit |
![]() |
| ಗೂಡಿನಿಂದ ಇಣುಕು ನೋಟ |
![]() |
| ಇದೇನು ಹೇಳಿ... |
ಯಾರು ಗುರುತಿಸ ಬಲ್ಲರು ಈ ಮರದಲ್ಲೊಂದು ಗೂಡಿದೆಯೆಂದು..
Sunday, April 1, 2012
ಕಾಯುತಿರುವೆ ನೀರಿಗಾಗಿ
ವಾರೆ ನೋಟ
ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್
ಆಗುಂಬೆ ಎಂಬ ಲಾಂಚ್ ಪ್ಯಾಡ್ ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...















































