ಇಂದಿನ ಸಮಾಜವು ನಮ್ಮ ಹಳೆಯ ಶಾಲೆಗಳ ಪ್ರತಿನಿಧಿ ಎನಿಸುವುದಿಲ್ಲವೇ? ಮುಂದೆಯೂ ಇದಕ್ಕಿಂತ ಉತ್ತಮ ಸಮಾಜ ನಿರೀಕ್ಷಿಸುತ್ತೇವಲ್ಲವೆ? ಈ ನಿರಿಕ್ಷೆಗೆ ನೀರೆರೆಯ ಬೇಕಾದುದು ನಮ್ಮ ಶಾಲೆಗಳು ಮತ್ತು ಸಮಾಜ. ಇನ್ನು ಮುಂದೆ ನಮ್ಮ ಎಲ್ಲಾ ಶೌಚಾಲಯಗಳ ಗೋಡೆಗಳು ಸ್ವಚ್ಚ ಸುಂದರವಾಗಿರುತ್ತವೆ! ಏಕೆಂದರೆ ಮಗುವಿಗೆ ತನ್ನ ಬಾವನೆಯನ್ನು ಹೊರ ಹಾಕಲು ಒಂದು ಸುವರ್ಣ ಅವಕಾಶವನ್ನು ಹಲವಾರು ಶಾಲೆಗಳು ಮಾಡುತ್ತಿವೆ. ಅದು ಶಾಲಾ ಗೋಡೆ ಮತ್ತು ಮಾಸಿಕ ಪತ್ರಿಕೆಗಳ ಮೂಲಕ. ಅವುಗಳಿಗೆ ಸಮುದಾಯದ ಅಭೂತಪೂರ್ವ ಬೆಂಬಲವೂ ದೊರಕಿದೆ ಎನ್ನುವುದು ಖುಷಿಯ ವಿಚಾರ. ವಿಚಾರ ಮಾಡಬೇಕಾದ ವಿಚಾರವಲ್ಲವೇ?
ನಮ್ಮ ಶಾಲಾ ಇಂತಹ ಒಂದು ಸಣ್ಣ ಪ್ರಯತ್ನವೇ 'ಪ್ರತಿಬಿಂಬ' ಪತ್ರಿಕೆ. ಊರಿನವರ ಸಮಸ್ತ ಜನರ ಸಹಕಾರ ಹಾಗು ಶಾಲಾ ಸಹಶಿಕ್ಷಕಿಯರ ಸಂಪೂರ್ಣ ಸಹಕಾರದೊಂದಿಗೆ ಎರಡನೇ ವರ್ಷದ ಶಿಶುವಾಗಿದೆ. ಮುಂದೆಯೂ ಸಹ ಇಂತಹದೇ ಪ್ರೋತ್ಸಾಹ ದೊರಯಲಿಯೆಂದು ಹಾರೈಸುತ್ತೇವೆ.
ನಾವು ಕಲಿತಂತೆ ನಮ್ಮ ಮುಂದಿನ ಜನಾಂಗ ಕಲಿಯದೇ ಹೊಸ ಹೊಸ ತಂತ್ರಜ್ಞಾನವನ್ನು ಕಲಿಯುತ್ತಾ ಮೌಲ್ಯಗಳನ್ನು ಸಹ ಕಲಿಯುತ್ತಾ ಸಾಗಬೇಕಲ್ಲವೆ? ಹಾಗಾಗಿ ಶಾಲೆಗೆ ಬೇಕಾದ ಕಂಪ್ಯೂಟರ್ ಮತ್ತು ಎಜುಸ್ಯಾಟ್ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದೇವೆ.
ಇಲ್ಲಿ ನಮ್ಮ ಶಾಲಾ ಪತ್ರಿಕೆಯ ಎರಡನೆಯ ಸಂಚಿಕೆಯಿದೆ. ಸಹೃದಯಿ ಓದುಗರು ತಮ್ಮ ಅನಿಸಿಕೆ ತಿಳುಸುವಿರಲ್ಲಾ. ವಂದನೆಗಳೊಂದಿಗೆ.