Friday, May 12, 2017

ಬಿಸಿಲ ಕಾಲದ ನೀರ ನೆನಪು.

ಬಿಸಿ ಬಿಸಿ ಬೇಸಿಗೆಗೆ ಪ್ರಜಾವಾಣಿಯ ನೀರ ನೆನಪಿನ ಅಂಕಣದಲ್ಲಿ ಪುಟಾಣಿ ಪುಟದಲ್ಲಿ(ಕಾಮನಬಿಲ್ಲು) ನನ್ನ ಪುಟಾಣಿ ಲೇಖನವೊಂದು ಅಚ್ಚಾಗಿದೆ . ಅದರ ಪೂರ್ಣ ಪಾಠ ಇಲ್ಲಿದೆ. ಓದಿ ಪ್ರತಿಕ್ರಿಯಿಸಿ..

ನೀರ ಹನಿಗಳ ಹಾಡು.....
ಹೊಳೆ ಎಂಬ ಪದವೇ ನನ್ನಲ್ಲಿ ಪುಳಕದ ಮಳೆ ಹರಿಸಿದೆ. ಎಪ್ರಿಲ್ ಬಂದಾಗ ನನಗೆ ಮೊದಲ ನೆನಪು ಹೊಳೆಯದೇ. ಹೊಳೆ ಜಳಕದ ಪುಳಕವನು ಆಡಿಬಲ್ಲವರೇ ಬಲ್ಲರು. ಬನ್ನಿ ಸ್ವಲ್ಪ ಹೊಳೆ ಧ್ಯಾನ ಮಾಡೋಣ. ಬರದ ಬಯಲಲ್ಲಿ ತಂಪಾಗೋಣ. ನೀರ ಹನಿಗಳ ನೆನಪ ಹಾಡು ಕೇಳೋಣ.
    ನನ್ನಜ್ಜನೂರು ವಾರಾಹಿ ತಟದ ಸೌಡ. ಹೊಳೆ ಊರನ್ನು ಸೀಳಿ ಹರಿಯುತ್ತಿಲ್ಲಿ. ಎಪ್ರಿಲ್ನಲ್ಲೂ ಸೊಂಟ ಮುಳುಗುವಷ್ಟು ನೀರು! ಬೇಸಿಗೆ ಬಂದರೆ ನಾವಲ್ಲಿ ಹಾಜರ್. ತಂದೆಯ ಭುಜವೇರಿ ಹೊಳೆ ದಾಟಿ ಹೋಗುತ್ತಿದ್ದೆ. ಮತ್ತೆ ಹೊಳೆಗೆ ಮರಳಿ ನೀರಲಿ ನಮ್ಮ ಸೊಕ್ಕಾಟ ಶುರು. ಕಿರಣ, ಶಶಿಧರ, ಕಲಾಧರ ವೀರೇಂದ್ರ ನನ್ನ ಸಂಗಾತಿಗಳು. ನೀರ ನಡುವಿನ ಕಲ್ಲು ಹತ್ತಿ ಹೊಳೆಗೆ ಹಾರುವುದು, ಮುಳುಗಿ ಈಜುವುದು, ಜಲಯುದ್ಧ ಮುಂತಾದ ಸಾಹಸ ಮಾಡುತ್ತಿದ್ದೆವು. ಹೊಟ್ಟೆ ಚುರುಗುಡದೇ ಮರಳುತ್ತಿರಲಿಲ್ಲ. ಒಬ್ಬೊಬ್ಬರ ಕಣ್ಣು ಗುಡ್ಡೆ ನೋಡಬೇಕು. ಕೆಂಪಾದ ಕಣ್ಣು, ಕೆಂಪು ಕೋತಿಯಂತಾದ ಕೆನ್ನೆ, ಕೂದಲು ಹಂದಿ ಮುಳ್ಳಿನಂತಾಗಿ ಥೇಟ್ ಕಾಡು ಮನುಷ್ಯರಂತಾಗಿ ವಾಸಾಗುತ್ತಿದ್ದೆವು. ಊಟಕ್ಕಂತು ಮಾವಿನ ವಿವಿಧ ಖಾಧ್ಯವಿರುತ್ತಿತ್ತು. ಮನೆ ಸನಿಹದ  ಭಟ್ಕಳ ಹಣ್ಣಿನ ಗೊಜ್ಜು, ಸೀಕರಣೆ ಇದ್ದರಂತೂ ಸೇರು ಅನ್ನಕ್ಕೆ ಕನ್ನ. ಉಂಡು, ಈಜಿ ಸುಸ್ತಾಗಿ ಮನೆಯ ಜಗಲಿಯಲ್ಲಿ ಕುಂಭಕರ್ಣ ನಿದ್ದೆ. ಎದ್ದು ಕಾಫಿ ಹೀರಿ, ಗೆಳೆಯರ ಜೊತೆ ಕ್ರಿಕೆಟ್ಟ್ ಅಂಗಳಕ್ಕೆ ದೌಡು. ಹೊಳೆಯ ಬಾಗಿಲಲ್ಲೇ ಕ್ರಿಕೆಟ್ ಭಜನೆ. ಮನಸೋ ಇಚ್ಛೆ ಆಡಿ ಮತ್ತೆ ಹೊಳೆಗೆ ಪರಾರಿ. ಸೂರ್ಯ ಕಂತದೇ ನಾವು ಮೇಲೆಳುತ್ತಿರಲಿಲ್ಲ. ಹೊಳೆ ದಂಡೆಯಲ್ಲಿ ಚಕ್ಕುಲಿ, ವಡೆ, ಕೋಡುಬಳೆಗಳ ಸಮಾರಾಧನೆ. ಬಾಲ್ಯದಲ್ಲಿ ಬಿಸಿಲಿನ ತಾಪವಾಗಲಿ, ಸೆಖೆಯಾಗಲಿ ನಮ್ಮನ್ನು ತಾಕಿದಿಲ್ಲ. ಗೊಣಗಾಡಿದ್ದ ನೆನಪೇ ಇಲ್ಲ! ಬಿಸಿಲಿಲ್ಲದ ಕಾಲವಿರಬೇಕು!
                                 ***
    ನಮ್ಮ ಹೊಸ ಮನೆಯೂ ವಾರಾಹಿಯಿಂದ ಐದು ಕಿಲೋ ಮೀಟರ್ ದೂರದಲ್ಲಿತ್ತು. ಹೊಳೆ ದಾಟಿದರೆ ಹೊಸಂಗಡಿ ಎಂಬ ಗ್ರಾಮ. ಜಾಂಬೂರಿನ ಹಳ್ಳಿಗರು ನದಿ ದಾಟಲು ಸಣ್ಣ ಮರದ ಸೇತುವೆ ಜನರ ಸಹಬಾಗಿತ್ವದಲ್ಲಿ ವರ್ಷಂಪ್ರತಿ ನಿಮರ್ಿಸುತ್ತಿದ್ದರು. ಇಲ್ಲಿ ನದಿ ದಾಟಿ ಆಸು-ಪಾಸಿನ ಹಳ್ಳಿಗಳಿಗೆ ಜನರು ನಡೆದೇ ಹೋಗುತ್ತಿದ್ದರು! ಇದನ್ನು ಸ್ಥಳೀಯ ಭಾಷೆಯಲ್ಲಿ ಕಡು ಎನ್ನುತ್ತಿದ್ದರು. ದೋಣಿ ಕಡು, ಮುಸುರೆ ಕಡು, ಹೊಯಿಗೆ ಕಡು ಹೀಗೆ ವಿಧ-ವಿಧದ ಹೆಸರುಗಳು. ಪಾತ್ರೆ ತೊಳೆಯಲು ಜನ ಹೊಳಗೇ ಬರುತ್ತಿದ್ದರು. ಬಟ್ಟೆ ತೊಳೆಯಲೂ ಕೂಡ. ಹೊಳೆ ಎಂಬುದು ಜನ ಮಾನಸದ ಬದುಕಿನಲ್ಲಿ ಹಾಸು ಹೊಕ್ಕಾಗಿ, ಜೀವದ್ರವ್ಯವಾಗಿ ಬದುಕು ರೂಪಿಸುವ ಬದುಕಿನ ರೂಪಕವಾಗಿ ಕಾಣುತ್ತಿದೆ. ಒಂಚೂರೂ ಕಿರಿ ಕಿರಿ ಇರದೇ ಮೈಲು ನಡದೇ ಬರುತ್ತಿದ್ದರು. ನಳ್ಳಿ ನೀರು ಸಣ್ಣಗೆ ಬಂದರೆ ಗೊಣಗಾಟ ಇಂದು! ಯಾರೂ ಕಡುವಿನ ನಿಯಮ ಮುರಿಯುತ್ತಿರಲ್ಲಿಲ್ಲ. ಆ ಮೂಲಕ ಒಂದಿಷ್ಟು ಸ್ವಚ್ಛತೆಯ ಪಾಠ.
    ಇಂತಹ ಕಡುವಿಗೊಮ್ಮೆ ಸ್ನೇಹಿತರ ಜೊತೆ ಎಪ್ರಿಲ್ ರಜೆಯಲ್ಲಿ ಈಜಲು ಹೋಗಿದ್ದೆವು. ಅದೂ ಕದ್ದು ಮುಚ್ಚಿ. ಹೇಳಿದರೆ ಅಮ್ಮ ಬಿಡೊಲ್ಲ. ಹೇಳದೇ ಹೋದರೆ ಚಡಪಡಿಕೆ, ನಿರಾಸೆ. ಚಡ್ಡಿ ಹಿಡಿದು ಮೆಲ್ಲಗೆ ಸೈಕಲ್ ಏರಿ ಹೊರಟು ಬಿಟ್ಟಿದ್ದೆ. ಮರದ ಸೇತುವೆಯಿಂದ ಹಾರಿ ಸುಲಭಕ್ಕೆ ದಡ ಸೇರುತ್ತಿದ್ದೆ. ಒಮ್ಮೆಯಂತೂ ಈಜಿ ಸುಸ್ತಾದಾಗ ಕಾಲು ಸೆಟೆದುಕೊಂಡು ಬಿಟ್ಟಿತ್ತು. ನೀರ ಸೆಳತಕ್ಕೆ ಸೆಳೆದುಕೊಂಡು ತುಂಬಾ ದೂರ ಹೋಗಿ ಬಿಟ್ಟಿದ್ದೆ. ಸ್ನೇಹಿತರೆಲ್ಲಾ ಇವನ ಕತೆ ಮುಗಿಯಿತೆಂದು ಕೊಂಡರು. ಹೇಗೋ ಒಂದು ಸಣ್ಣ ಬಂಡೆ ಹಿಡಿದು ಮೇಲೆ ಬಂದೆ. ಬಂಡೆಯಲ್ಲಿ ಬೆಳೆದ ಸಣ್ಣ ಜಲ ಸಸ್ಯವೊಂದು ನನ್ನ ಜೀವ ಉಳಿಸಿತ್ತು. ಸ್ನೇಹಿತರೂ ನಿರಾಳರಾದರು.
    ಹೊಳೆಯಂತಹ ಹೊಳೆ ಅನೇಕ ಗೆಳೆಯರನ್ನು ನನಗೆ ಸಂಪಾದಿಸಿಕೊಟ್ಟಿತ್ತು. ಬದುಕಿನ ಪಯಣದ ಹಾದಿಯಲ್ಲಿ ಎಲ್ಲಿ ಕಳೆದು ಹೋದರೋ ನಾ ತಿಳಿಯೆ. ಮತ್ತೆ ನಾವು ಸೇರಲೇ ಇಲ್ಲ. ಹೀಗೆ ಎಪ್ರಿಲ್ ತಿಂಗಳು ಬಂದರೆ ನನ್ನ ಪ್ರೀತಿಯ ಹೊಳೆ ಮತ್ತು ಕಾಟು ಮಾವು ಬಿಡದೇ ನೆನಪಾಗುತ್ತೆ.
                            

ಶ್ರೀಧರ್ ಎಸ್. ಸಿದ್ದಾಪುರ
 

                                                      
-ಶ್ರೀಧರ್ ಎಸ್. ಸಿದ್ದಾಪುರ ಉಡುಪಿ


Tuesday, May 9, 2017

ಹೆಂಡತಿ ಕೈ ಕೊಟ್ಟರೆ ಹೆದರದಿರಿ.......



    ಬದುಕಿನ ಅರ್ಥದ ಹುಡುಕಾಟದಲ್ಲೇ ಬದುಕು ಕಳೆದು ಹೋಗುತ್ತೆ. ಮಕ್ಕಳು ಮರಿಗಳು, ಹೆಂಡತಿ, ಸೈಟು, ಚೆಂದದ ಕಾರು, ಪ್ರಮೋಷನ್ ಟೆನ್ಶನ್. ಓರಗೆಯವನಿಗೆ ಸಿಕ್ಕ ಬಡ್ತಿ ನನಗಿಲ್ಲವೆಂಬ ಪಡಿಪಾಟಲು. ಒಂದೇ ಎರಡೇ ನಮ್ಮ ಹಳವಂಡಗಳು. ಮುಗಿಯದ ರೈಲು ಬೋಗಿ, ಕಾಶ್ಮೀರದಿಂದ ಕನ್ಯಾ ಕುಮಾರಿ. ಕೆಲವರಂತೂ ಏನೋ ಕಳೆದುಕೊಂಡವರಂತೆ ಬದುಕುತ್ತಿರುತ್ತಾರೆ. ಏನು ಹುಡುಕುತ್ತಿರುತ್ತಾರೆಂದು ಯಾರಿಗೂ ತಿಳಿಯದು. ಸ್ವತಹ ಅವರಿಗೂ!
    ಬದುಕು ನಮ್ಮ ಮುಂದೊಂದು ಗಿಪ್ಟು ತಂದಿಡುತ್ತೆ. ಅದನ್ನು ತೆರೆಯಲೂ ನಮಗೆ ಪುರುಸೊತ್ತಿರುವುದಿಲ್ಲ. ಯಾರೋ ದಾರಿಹೋಕ ತೆರೆದಾಗ ನಾವು ಅಚ್ಚರಿಗೊಳ್ಳುತ್ತೇವೆ. ಅಯ್ಯೋ ನಾವು ತೆರಯಬಹುದಿತ್ತೆಂದು ಕೈ ಹಿಸುಕಿಕೊಳ್ಳುತೇವೆ. ತೆರೆದ ಮನಸ್ಸಿನಿಂದ ನೋಡುವ ಗುಣವಿದ್ದರೆ ಮಾತ್ರ ಅದನ್ನು ಆಯ್ದುಕೊಳ್ಳಬಹುದು.
    ಸಣ್ಣದೇನೋ ತಪ್ಪಿಹೋದರೆ, ಕೆಲಸವಾಗದಿದ್ದರೆ ಅವರ ಪಡಿ ಪಾಟಲು ನೋಡಬೇಕು. ಕೆಲವೊಮ್ಮೆ ನಗು, ಕೆಲವೊಮ್ಮೆ ಅನುಕಂಪ ತರಿಸುತ್ತೆ. ಆದರೆ ಇಲ್ಲೊಂದು ನೈಜ ಘಟನೆ ಇದೆ ಕೇಳಿಸಿಕೊಳ್ಳಿ..
    ತಾನು ಪ್ರೀತಿಸಿದ ಹೆಂಡತಿಯೇ ಕೈಕೊಟ್ಟರೆ ಹೇಗಾಗಬೇಡ ಆತನ ಸ್ಥಿತಿ. ಈತ ನಮ್ಮ ನಿಮ್ಮೆಲ್ಲರಿಗಿಂತ ಭಿನ್ನ. ಅವನ ನೈಜ ಕತೆಯಿದೆ. ಇಷ್ಟವಾದರೆ ಲೈಕಿಸಿ.

ಈ ಪದಗಳೇ ಹೀಗೆ......

ಈ ಪದಗಳೇ ಹೀಗೆ. ನಾವು ಹೇಳದೇ ಇದ್ದ ಭಾವವೊಂದನ್ನು ಇನ್ನೊಬ್ಬರಲ್ಲಿ ಮೂಡಿಸುವವು. ಕೆಲವೊಮ್ಮೆ ಅಪಾರ್ಥಕ್ಕೂ ದಾರಿಯಾಗಿದೆ. ಕೆಲವೊಮ್ಮೆ ಅಪಾರ ಅರ್ಥಕ್ಕೂ. ಕೆಲವು ವಿಷಯಗಳನ್ನು ಹೇಳಲು ಪದಗಳೇ ಇಲ್ಲದಂತಹ ಸ್ಥಿತಿ. ದೊಡ್ಡ ದೊಡ್ಡ ವಾಕ್ಯಗಳಲ್ಲಿ ವಿವರಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. ಉದಾಹರಣೆಗೆ ತನ್ನ ಮೂಗಿನ ನೇರಕ್ಕೆ ಎಲ್ಲಾ ನಡೆಯಬೇಕು ಎಂದು ಬಯಸುವವನನ್ನು ಎನೆಂದು ಹೇಳುವರು? ಕೇಳಿದರೆ ಯಾವ ಪದವನ್ನು ಪಂಡಿತರು ನೀಡಬಹುದು? ಸ್ವಾಥರ್ಿ, ಉಹೂಂ ಸರಿ ಎನಿಸದು. ?.?.
    ಹೀಗಿರುವಾಗ ಹೊಸ ಅರ್ಥ ಹೊಮ್ಮಿಸುವ ಪದ ಟಂಕಿಸಿದರೆ ಹೇಗೆ? ಇಂತಹ ಪದ ಪ್ರಯೋಗ ಮಾಡಿದವರು ಜಾನ್ ಕೋಯಿಕ್. ನಾವೀಗ ಬಳಸುವ ಓ. ಕೆ. ಹೇಗೆ ಉತ್ಪತ್ತಿಯಾಯಿತೆಂದು ಅವರು ವಿವರಿಸುತ್ತಾರೆ. ಪದಗಳ ಕುರಿತೊಂದು ಸುಂದರ ಲೇಖನ ನಮ್ಮ ವಿಶ್ವವಾಣಿಯಲ್ಲಿ....ನಿಮಗಿಷ್ಟವಾಗಬಹುದು.


ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...