Tuesday, August 22, 2017

ಮಳೆಗೆ ಮುತ್ತಿಕೊಂಡ ಕೀಟಗಳು........

ಮಳೆಗಾಲದಲ್ಲಿ ಅತಿಥಿಯಾಗಿ ಬರುವ ಕೀಟಗಳು ಕೆಲವನ್ನು ಕೆಮರದಲ್ಲಿ ಸೆರೆಯಾಗಿಸಿದ್ದೇನೆ. ಒಂದೊಂದಕ್ಕೂ ಒಂದೊಂದು ಬಣ್ಣ. 


ಕೆಲವು ಜೇಡಗಳು ಹಾರಬಲ್ಲ ಸಾಮಥ್ರ್ಯವಿರುವವು. ಅಂತಹ ಜಾತಿಯದೊಂದು ಸಣ್ಣ ಪತಂಗವೊಂದನ್ನು(ಒಔಖಿಊ) ಹಿಡಿದಿದೆ.  ತೀರಾ ಅಪರೂಪವಾಗಿ ಇಂತಹ ಚಿತ್ರಗಳು ಸಿಗುತ್ತವೆ ಎನ್ನುವುದು ಈ ಮೂರು ವರ್ಷಗಳ ಕೀಟ ಸಾಂಗತ್ಯದ ಅನುಭವ. 

ಬಿಟ್ಟರೂ ಬಿಡಿಸಿಕೊಳ್ಳಲಾಗದಂತಹ ಪ್ರೀತಿ ಈ ಕೀಟಗಳ ಮೇಲೆ ಬೆಳೆದು ಬಿಟ್ಟಿದೆ.



Spider's hunt!

 ಕಮುನಿಷ್ಟ್ ಗಿಡದ ಎಲೆಯ ಮೇಲೆ ಕಾಣಸಿಗುವ ಈ ಕೀಟ ಅದರ ಪಾರದರ್ಶಕ ಮೈಯಿಂದ ನಿಮ್ಮನ್ನು ಆಕಷರ್ಿಸದೇ ಇರದು. ತನ್ನ ಪುಟಾಣಿ ನಾಲಿಗೆಯಿಂದ ಒಣಗಿದ ಕಮುನಿಷ್ಟ್ ಎಲೆಯಿಂದ ಎನನ್ನೋ ಹೀರುತಲಿತ್ತು! ಸುಮಾರು ಒಂದು ಗಂಟೆ ಹೀರಿದರೂ ಹೀರುವಿಕೆ ಮುಗಿಯಲಿಲ್ಲ. ನನಗೇ ಬೇಸರ ಬಂದು ಮನೆ ಕಡೆಗೆ ಹೊರಟೆ. ಇಂತಹ ವಿಸ್ಮಯ ಕಾರಿ ಅಂಶಗಳು ನಮಗೆ ಕೀಟಗಳ ಸಾಂಗತ್ಯದಿಂದ ದೊರೆತಿದೆ. ಇಷ್ಟವಾದರೆ ತಿಳಿಸಿ.

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...