Vembanad kerala
ಈ ಸಮುದ್ರದ ಹೆಸರು ಎಲ್ಲೂ ಕೇಳಲಿಲ್ವಲ್ಲಾ? ಎಂದು ಹುಬ್ಬೇರಿಸಬೇಡಿ. ಇದು ಸಮುದ್ರ ಅಲ್ಲವೇ ಅಲ್ಲ! ಸಮುದ್ರದಂತಹ ಸರೋವರ. ಅರ್ಧ ಸಿಹಿ ಅರ್ಧ ಉಪ್ಪು ನೀರಿನಿಂದಾದ ಭಾರತದ ಅತ್ಯಂತ ಉದ್ದವಾದ ಮಹಾ ಸರೋವರ. ನೀಲ ನೀರ ತಾಣ. ವೆಲ್ಲಾರಪದಮ್, ವಿಲ್ಲಿಂಗ್ಡಮ್ ಎಂದೂ ಇದಕ್ಕೆ ಹೆಸರಿದೆ. ದೇವರ ಸ್ವಂತ ನಾಡಾದ ಕೇರಳದ ಕರಾವಳಿಯ ಅಳಪಿ ಯಾನೆ ಅಲಪುಝಾ ನಗರದಲ್ಲಿದೆ. ಒಂದೆರಡಲ್ಲ ದಿನವೂ ಇಲ್ಲಿ ನೂರಾರು ಬೋಟುಗಳ ಸಂತೆ! ಕಣ್ಣು ಹಾಯಿಸಿದಲ್ಲೆಲ್ಲಾ ನೀರು, ತೇಲು ಮನೆಗಳು, ತೆಂಗಿನ ಮರಗಳು, ಅವುಗಳ ಮೇಲೆ ಬೆಚ್ಚಗೆ ಕುಳಿತ ಪಕ್ಷಿ ಗಡಣ.
|
ವೆಂಬನಾಡ್ ಸರೋವರದಲ್ಲೊಂದು ಸಂಜೆ. |
|
ಸಾಹಸಿ ಮಹಿಳಾ ಚಾಲಕಿ. |
|
ಮೊಹಮ್ಮಾ ದ್ವೀಪದಲ್ಲಿ ಜೊತೆಯಾದ ನನ್ನ ಸಂಗಾತಿ... |
ವಿಸ್ಮಯಗೊಳಿಸುವ ವಿಸ್ತಾರ:-
ಪಂಬಾ, ಪೆರಿಯಾರ್, ಮೂವಾಟೂಪೂಝಾ, ಮಿನಾಚಿ, ಮನಿಮಾಲ, ಅಚಿನಕೊವಿಲ್ ಮುಂತಾದ ದಶ ನದಿಗಳ ಸಂಗಮದಿಂದುಂಟಾದ ಮಹಾ ಸಮುದ್ರ. ಸರಿ ಸುಮಾರು 96.5 ಕಿ. ಮೀ ಉದ್ದ. 14 ಕಿ. ಮೀ ಗರಿಷ್ಠ ಅಗಲ. ಮೂರು ಜಿಲ್ಲೆಗಳಲ್ಲಿ ಇದರ ವ್ಯಾಪ್ತಿ ಹರಡಿದೆಯೆಂದರೆ ವಿಸ್ತಾರವನ್ನು ನೀವು ಕಲ್ಪಿಸಿಕೊಳ್ಳಿ! ಭಾರತದ ಅತಿ ಉದ್ದದ ಸರೋವರವೆಂಬ ಖ್ಯಾತಿಯೂ ಇದಕ್ಕಿದೆ. ಸರೋವರವ ಬಿಗಿದಪ್ಪಿದ ದ್ವೀಪಗಳೂ ಅನೇಕ. ಅವುಗಳಲ್ಲಿ ಪಾದಿರಾಮಲೈ ಕೂಡಾ ಒಂದು. ಕುಮಾರಕೊಂ ಪಕ್ಷಿಧಾಮವೂ ಪಕ್ಕದಲ್ಲೇ ಇದೆ. 16 ಮಿಲಿಯನ್ ಜನ ಈ ಸರೋವರದಂತಹ ಸಮುದ್ರವನ್ನು ತಮ್ಮ ದಿನ ನಿತ್ಯದ ಅನ್ನ, ಬಟ್ಟೆಗಾಗಿ ಅವಲಂಬಿಸಿದ್ದಾರೆಂದರೆ ಅಚ್ಚರಿಯಾಗುತ್ತದೆ! ಒಟ್ಟು 290 ಚದರ ಕಿಲೋ ಮೀಟರ್ ಹರಡಿಕೊಂಡ ಇದರ ವಿಸ್ತಾರ. ಕೇರಳ ರಾಜ್ಯದ 30 ಶೇಕಡ ನೀರು ಈ ಸರೋವರದಲ್ಲೇ ಇದೆ ಎಂದರೆ ನೀವು ನಂಬಲೇಬೇಕು.
|
ಮುಗಿಲಿನೊಂದಿಗೆ ಸರೋವರದ ಅಂದ |
ನಡುವಿರುವ ತಗ್ಗಾದ ದ್ವೀಪದಂತಹ ಜಾಗಗಳಲ್ಲಿ ಜನರು ಮನೆಗಳ ನಿಮರ್ಿಸಿಕೊಂಡಿದ್ದಾರೆ ಎಂದರೆ ಅಚ್ಚರಿ ಎನಿಸುತ್ತದೆ. ಅನೇಕ ನಡುಗುಡ್ಡೆಗಳನ್ನು ಬಳಸಿ ಜನ ಗದ್ದೆಗಳ ನಿಮರ್ಿಸಿ ಬೇಸಾಯದಲ್ಲಿ ತೊಡಗಿದ್ದಾರೆ! ನಡುವಿನ ನಡುಗುಡ್ಡೆಯೊಂದರಲ್ಲಿ ಚಚರ್್ ಒಂದಿದೆ. ಸರೋವರವನ್ನು ನೋಡಲು ಬಂದು ಗದ್ದೆ ಅಂಚಿನ ಕಂಬಗಳಲ್ಲಿ ಕುಳಿತ ವಿದೇಶಿ ಸಮುದ್ರ ಕಾಗೆಗಳ ಹಿಂಡು. ನೀರನ್ನೇ ಹೊದ್ದು ಹಾಸಿಕೊಂಡ ಕೇರಳಿಗರ ದಿನ ನಿತ್ಯದ ಹಾಡು ಪಾಡು ಇಲ್ಲಿ ಅನಾವರಣ. ಹುಲ್ಲು ಕೊಯ್ಯುವವರು, ದೋಣಿಗಳ ಮೂಲಕ ಹೊರೆ ಹುಲ್ಲು ಹೊತ್ತೊಯ್ಯುವವರು, ನದಿ ಗುಂಟ ಬಟ್ಟೆ ಒಗೆಯುವವರು, ಪಾತ್ರೆ ತೊಳೆಯುವ ದೃಶ್ಯ ಇಲ್ಲಿ ಸಾಮಾನ್ಯ. ನಮ್ಮ ನಾಡಿನ ವೆನಿಸ್ ಎಂದು ಹೇಳಲಡ್ಡಿ ಇಲ್ಲ! ಇಡೀ ನಗರವನ್ನದು ಸುತ್ತಿ ಬರೋ ಇರಾದೆ ಇದ್ದರೆ ದೋಣಿ ಬಾಡಿಗೆಗೆ ಪಡೆದು ಸುತ್ತಿ ಬಂದರಾಯಿತು. ಬಾಡಿಗೆಯಂತೂ ಕೊಂಚ ಹೆಚ್ಚೇ. ದಿನವೊಂದಕ್ಕೆ ಏನಿಲ್ಲವೆಂದರೂ ಒಬ್ಬರಿಗೆ 1500 ರೂ ಕೇಳುವರು.
|
ತಂತಿಯ ಮೆಲೆ ವಿದೇಶಿ ವಿೀಕ್ಷಕರು |
ಇತಿಹಾಸ-
ಇಲ್ಲಿನ ಗದ್ದೆಗಳು ಸರೋವರಕ್ಕಿಂತ ತಗ್ಗಾಗಿವೆ. ಹೀಗೆ ರೂಪುಗೊಂಡಿರುವುದು ಹೇಗೆಂಬುವುದೇ ಒಂದು ವಿಸ್ಮಯ! ಇದರ ಇತಿಹಾಸ ಕೆದಕುತ್ತಾ ಹೋದರೆ 14 ನೇ ಶತಮಾನಕ್ಕೆ ಕರೆದೊಯ್ಯುವುದು.
|
ಗೆಳೆಯ ಗ ೌತಮ್ |
ಪ್ರಸಿದ್ಧ ನೆಹರು ಟ್ರೋಫಿ ಬೋಟ್ ರೇಸ್ ನಡೆಯುವುದು ಇಲ್ಲೇ. ಒಂದೆರಡು ವಿಶಿಷ್ಟ 'ಹಾವು ದೋಣಿಗಳನ್ನು' ಕಣ್ತುಂಬಿಕೊಂಡು, ನಡು ಮಧ್ಯಾಹ್ನದ ಹೊತ್ತಿನಲ್ಲಿ ನಮ್ಮ ಬೋಟ್ ದೂರ ತೀರದಲ್ಲೆಲ್ಲೋ ಲಂಗರು ಹಾಕಿತು. ಬೋಟಿನಲ್ಲೇ ತಿಂಡಿ ತೀರ್ಥವೂ ಸರಬರಾಜಾಯಿತು. ಹೊಟ್ಟೆ ಉಬ್ಬರಿಸುವಷ್ಟು ತಿಂದು ಸಂಜೆ ಅಲಪಿಗೆ ವಾಪಾಸಾದೆವು.
ಇಲ್ಲಿ ಮಾತ್ರವೇ ಸಿಗುವ ವಿಶಿಷ್ಟ ಶ್ರಿಂಪ್ಗಳು, ಬಲು ದೊಡ್ಡ ಏಡಿಗಳು, ವಿಶಿಷ್ಟ ಜಾತಿಯ ಚಿಪ್ಪುಗಳು ಈ ಸರೋವರದಲ್ಲಿ ಬೆಳೆಯುತ್ತಿರುವ ಕಳೆಗಿಡಗಳಿಂದ ಕಂಟಕವನ್ನು ಎದುರಿಸುತ್ತಿವೆ. ಜೊತೆಗೆ ಪ್ರವಾಸಿಗರೆಸೆದ ಪ್ರತಿ ಕಸವೂ ಇಲ್ಲಿನ ವಿಶಿಷ್ಟ ಜೀವಿಗಳ ನಿದ್ದೆ ಕೆಡಿಸಿದೆ. ಇನ್ನು ಕೆಲವೇ ವರ್ಷಗಳಲ್ಲಿ ಗಂಗೆಯಂತೆ ಈ ಸರೋವರವೂ ಬತ್ತಿ ಹೋಗುವುದೆಂಬ ಎಚ್ಚರಿಕೆಯನ್ನೂ ವಿಜ್ಜಾನಿಗಳು ನೀಡಿದ್ದಾರೆ. ಜೊತೆಗೆ ಇದರ ವಿಸ್ತಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮುಂದಿನ ಜನಾಂಗಕ್ಕೆ ಇದನ್ನು ಉಳಿಸೋಣವಲ್ಲವೇ?
|
ವಿಶಿಷ್ಟ ಸಮುದ್ರ ಜ ೀವಿ |
ಇಲ್ಲಿ ಹೇಳದೇ ಇದ್ದ ಜನ ಜೀವನದ ಕತೆಯನ್ನು ಇನ್ನೊಮ್ಮೆ ಹೇಳುವೆ ಪುರುಸೊತ್ತು ಮಾಡಿಕೊಂಡು ಕೇಳುವಿರಲ್ಲವೇ?