ಆತ್ಮಕತೆಯ ಭಾಗವಾಗುವಂತಹ ಕಾದಂಬರಿಗಳು ವಿರಳ. ಅಂತಹ ವಿರಳ ಕಾದಂಬರಿ ಅಬ್ಬೆ . ಹಾಲಾಡಿ ಸನಿಹದ ಮುದೂರಿಯ ಶಶಿಧರ್ ಇದರ ಲೇಖಕರು
ಅಬ್ಬೆಯ ಅನನ್ಯತೆ:
ಅಬ್ಬೆ ಎಂಬ ಜೇಡವೇ ಕತೆಯ ಆತ್ಮ. ಯಾರಿಗೂ ಇದರ ಸ್ಪಷ್ಟ ಪರಿಚಯವಾಗಲಿ ನಿಖರವಾಗಿ ತಿಳಿದಿಲ್ಲ. ಆದರೆ ಅನೇಕ ಸಾವುಗಳ ಅಪರಾಧಿ ಈ ಜೇಡ. ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟು ಸಮಯವಿಲ್ಲ ಎಂಬ ಗಾದೆ ಕಲ್ಕೆ ರೆ ಎಂಬ ಗ್ರಾಮದ ಜನ ನಂಬುತ್ತಾರೆ.
ಈ ಗ್ರಾಮಕ್ಕೆ ಬರುವ ಶಿವರಾಂ ಎಂಬ ಬ್ಯಾಂಕ್ ಅಧಿಕಾರಿ ಇಲ್ಲಿನ ನಿಗೂಢತೆಯನ್ನು ಬೇಧಿಸಲು ಪ್ರಯತ್ನಿಸುತ್ತಾನೆ. ತಾನು ಬಂದು ಸೇರುವ ಹೊತ್ತಿಗೇ ಕೊಲೆಯೊಂದು ನಡೆದಿರುತ್ತದೆ. ಆ ಕೊಲೆಯು ಕೊನೆಗೆ ಆತ್ಮಹತ್ಯೆ ಎಂದು ವರದಿ ಯಾಗುತ್ತದೆ. ಕತಾ ನಾಯಕನಿಗೆ ಇದು ಕೊಲೆ ಎಂಬ ಸಂಶಯ ಕಾಡುತ್ತಲೇ ಇರುತ್ತದೆ. ಕೊನೆಯ ಕ್ಷಣದವರೆಗೂ ಆತ ತನ್ನ ತನಿಖೆ ಮುಂದುವರಿಸುತ್ತಾನೆ.
ಕ್ರಿಟಿಕಲ್ ಕೆಂಚಪ್ಪ
ಕತೆಯಲ್ಲಿ ಕಂಡ ವಿಶಿಷ್ಟ ಪಾತ್ರ ಕೆಂಚಪ್ಪ . ಚಿಪ್ಪು ಹಂದಿ ಹಿಡಿಯುವ ಅವನು ಬ್ಯಾಂಕ್ ಗೆ ಬಂದು ಡಿಪಾಸಿಟ್ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡುತ್ತಾನೆ. ದಿನಕಳೆದ ಕಾಡುತ್ತಾ ಹೋಗುತ್ತಾನೆ. ಯಾವುದೇ ಪ್ರಾಣಿಶಾಸ್ತ್ರಜ್ಞನಿಗೂ ಕಮ್ಮಿ ಇಲ್ಲದ ಇವನ ಪ್ರತಿಭೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ತನ್ನ ಪ್ರತಿಭೆ ತನಗೇ ತಿಳಿಯದ ಅಮಾಯಕ. ಇಂತಹ ನೂರಾರು ಪ್ರತಿಭಾವಂತರು ನಮ್ಮ ನಡುವಿದ್ದಾರೆ ಎಂಬ ಸಣ್ಣ ವಿಶಾದವು ನಮ್ಮನ್ನು ಕಾಡುತ್ತದೆ. ಬದುಕಿನ ಕ್ರಿಟಿಕಲ್ ಸಮಯದಲ್ಲಿ ಅವನಾಡುವ ಮಾತು ವಿಶಿಷ್ಟವೆನಿಸುತ್ತವೆ.
ಕತೆಯ ಉದ್ದಕ್ಕೂ ಕಿರಿಕಿರಿ ಮಾಡುತ್ತಾ ಶಿವರಾಂ ನನ್ನು ಗೋಳು ಹೊಯ್ದು ಕೊಳ್ಳುವ ಪಾತ್ರವಾಗಿ ಮ್ಯಾನೇಜರ್ ಕಾಣಿಸುತ್ತಾನೆ. ಅನವಶ್ಯಕ ದ್ವೇಷ ಮತ್ತು ಇಂದಿನ ಸಮಾಜದ ವ್ಯಕ್ತಿಯನ್ನು ಆತ ಪ್ರತಿನಿಧಿಸುವಂತಿದೆ.
ದ್ವೇಷದ ಜೊತೆ ಜೊತೆಗೆ ಸ್ನೇಹ ಪ್ರೀತಿ ಸುರಿಸುವ ಅಪರೂಪದ ವ್ಯಕ್ತಿಗಳು ಇರುತ್ತಾರೆ. ಕ್ರಿಕೆಟ್ ತಂಡ ಮತ್ತು ಭಾಸ್ಕರನ ತಾಯಿ ಮತ್ತು ಭಾಸ್ಕರ ಪ್ರೀತಿಗೆ ಕಲಶವಿಟ್ಟಂತೆ ಕಾಡುತ್ತಾರೆ.
ಕತೆಗೆ ಪೂರಕವಾಗಿ ಕಲ್ಲೂರಾಯ, ಭಾಸ್ಕರ ಮುಂತಾದ ಪೂರಕ ಪಾತ್ರ ರಚಿಸಿದ್ದಾರೆ.
ಕತೆಯ ಓಟ:
ಕತೆಗಾರನಿಗಿಲ್ಲಿ ಯಾವ ಅವಸರವೂ ಕಾಣಿಸುವುದಿಲ್ಲ. ತನ್ನದೇ ವಿಶಿಷ್ಟ ವೇಗದಲ್ಲಿದೆ ಕತೆ. ಅದೇ ಕತೆಯ ಜೀವಾಳ.
ಮುಕ್ತ ಅಂತ್ಯ
ಕತೆಯ ಅನನ್ಯತೆ ಇರುವುದು ಅದು ಮುಕ್ತ ಅಂತ್ಯವನ್ನು ಕಾಣುವುದರಲ್ಲಿ, ಹೆಚ್ಚಾಗಿ ಕತೆಗಳು ಮುಕ್ತ ಅಂತ್ಯ ಕಾಣುತ್ತವೆ. ಆದರೆ ಕಾದಂಬರಿಯೊಂದು ಮುಕ್ತ ಅಂತ್ಯ ಕಾಣುವುದು ಅಪರೂಪ. ಅಂತಹ ಅಪರೂಪದ ಕಾದಂಬರಿ ಸಾಲಿಗೆ ಅಬ್ಬೆ ಸೇರಿದೆ.
ಅಬ್ಬೆಯ ಕುರಿತಾದ ನಿಗೂಢತೆಯನ್ನು ಹಾಗೇ ಉಳಿಸಿಕೊಂಡು ಕಾದಂಬರಿಯನ್ನು ಮುಕ್ತ ಅಂತ್ಯಕ್ಕೆ ಕೊಂಡೊಯಿದ್ದಿದ್ದಾರೆ.
ನಿರೂಪಕ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ವರ್ಗ ಆಗುವುದರೊಂದಿಗೆ ಕತೆ ಮುಕ್ತ ಅಂತ್ಯ ಕಾಣುತ್ತದೆ. ಅದೇ ಮತ್ತೊಂದು ಕಾದಂಬರಿಗೆ ಮುನ್ನುಡಿಯಾ ಎಂಬ ಆಲೋಚನೆಗೂ ರಾಜ ದಾರಿ. ಪ್ರವಾಸದ ಗೀಳಿರುವ ನನ್ನಂತವರಿಗೆ ನಿರೂಪಕನ ವರ್ಗಾವಣೆ ಚೇತೋಹಾರಿ.
ಕೆಲವರು ಅಪಾರವಾದ ಪ್ರತಿಭೆ ಶ್ರಮವಿದ್ದರೂ ಅದೃಷ್ಟದ ತೀವ್ರ ನಿರ್ಲಕ್ಷಕ್ಕೆ ಈಡಾಗುತ್ತಾರೆ. ಇದೇ ಬದುಕಿನ ವಿಕ್ಷಿಪ್ತತೆ. ಕೆಲವರಷ್ಟೇ ಈ ನಿರ್ಲಕ್ಷದ ಬಲೆಯಿಂದ ಹೊರಬರಬಲ್ಲರು. ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತದೆ.
ಎಲ್ಲೂ ಸ್ಥಾವರವಾಗದೇ ಜಂಗಮನಂತಿರುವುದೇ ಬದುಕಿನ ಅಂತಿಮ ಸತ್ಯವೇನೋ ? ಎಂಬ ಮಿಂಚನ್ನು ಮಿಂಚಿಸುತ್ತದೆ ಈ ಕಾದಂಬರಿ.