ಒಂದೆಡೆ ಸುಂದರ ಕಡಲು. ಇನ್ನೊಂದೆಡೆ ತಂಪಾದ ಕೊಳಗಳು. ಸುತ್ತಲು ಹಸಿರು. ಸೂರ್ಯ ಶಶಿಮುಖಿ. ಬೀಸುವ ತಂಗಾಳಿ ನಡುವೆ ಕಲರವಿಸುವ ಖಗಗಳ ಸಮೂಹ. ನೀರಲಿ ನೀಲಾಕಾಶದ ಬಣ್ಣ. ಅಲ್ಲಲ್ಲಿ ವೈಯಾರಗೈಯುವ ನೈದಿಲೆ, ತರು-ಲತೆಗಳು.
ಮೀನಿಗಾಗಿ ಕಾಯುವ ಋಷಿ ಬಿಳಿ ಮಿಂಚುಳ್ಳಿ, ತರೆವಾರಿ ಮುನಿಯ, ಕೊಳದ ಬಕ, ಕೊಕ್ಕರೆ, ಕೇಸರಿ ಗೀಜಗ ಇನ್ನಿತರ ಹಕ್ಕಿಗಳು. ನಡುವೆ ಬೈತಲೆ ತೆಗೆದಂತಿರುವ ರಾಷ್ಟ್ರೀಯ ಹೆದ್ದಾರಿ 66.
ಇದು ಕುಂದಾಪುರ ತಾಲೂಕಿನಮಲ್ಯಾಡಿ ಪಕ್ಷಿಧಾಮದ ನೋಟ. ಕುಂದಾಪುರದಿಂದ ತೆಕ್ಕಟ್ಟೆ ತಲುಪಿ ಪೂರ್ವದ ರಸ್ತೆಯಲ್ಲಿ 2 ಕಿ.ಮೀ. ಕ್ರಮಿಸಿದರೆ ಸಿಗುವುದೇ ವಿಶಾಲ ನೀರಿನ ಕೊಳಗಳು. ಪ್ರಾಣಿ ಪಕ್ಷಿ ಕೀಟಗಳ ಆಶ್ರಯತಾಣ ಮಲ್ಯಾಡಿ. ವರ್ಷವಿಡಿ ಇರುವ ನೀರು ಸುತ್ತಲಿನ ಹಸಿರು ಪರಿಸರ ಪಕ್ಷಿಗಳನ್ನು ಆಕಷ್ರಿಸಿವೆ. ಕೊಳಗಳ ಸುತ್ತಲೂ ಭತ್ತದ ಗದ್ದೆಗಳಿವೆ. ಇದರಿಂದ ಪಕ್ಷಿಗಳಿಗೆ ಸಾಕಷ್ಟು ಆಹಾರ ದೊರೆಯುತ್ತದೆ. ಕೊಳಗಳ ಸುತ್ತಲೂ ಉದ್ದು, ನೆಲಗಡಲೆ, ಅಲಸಂಡೆ ಮುಂತಾದ ಬೆಳೆಗಳನ್ನು ಬೆಲೆಯಲಾಗಿದೆ. ಇಲ್ಲಿರುವ ಪಕ್ಷಿ ವೈವಿಧೈ ಅನನ್ಯ , ಬಿಳಿ ಮಿಂಚುಳ್ಳಿ ಭಾರತದಾದ್ಯಂತ ಕಂಡು ಬರುತ್ತಿತ್ತು. ಈಗ ಅಪರೂಪವಾಗಿದೆ. ಆದರೆ ಈ ಪಕ್ಷಿ ಇಲ್ಲಿ ಹಲವಿದೆ. ಕೋಳಗಳ ಸುತ್ತಲೂ ಸಂತಾನೋತ್ಪತ್ತಿ ನಡೆಸಿವೆ. ಕೊಳದ ಬಕ, ಹಾವಕ್ಕಿ, ಉದ್ದ ಕರಿ ಕತ್ತಿನ ಕೊಕ್ಕರೆ. ಕೇಸರಿ ಗೀಜಗ, ಯುರೋಪಿನ ಅತಿಥಿ ಕುಂಡೆ ಕುಸ್ಕ, ನೆಲ ಗುಬ್ಬಿ, ಟಿಟ್ಟಿಭ, ಮುನಿಯಗಳು, ನೀಲಿ ಮಿಂಚುಳ್ಳಿ, ಗೊರವ, ನವಿಲು ಗೊರವ, ಕಾಜಾಣ ಇವುಗಳ ವೈಯಾರ ನೋಡುವುದೇ ಸಂಭ್ರಮ. ಭಾನುವಾರದಂದು ಭೇಟಿ ಇತ್ತಾಗ ನವಿಲು ಗೊರವ (jakana), ತಪಸ್ವಿ ನೀಲಿ ಮಿಂಚುಳ್ಳಿ ಸ್ವಾಗತ ಕೋರಿದವು. ಬೆಳ್ಳಕ್ಕಿಗಳು, ಹಸಿರು ಗಿಣೆಗಾರಲು, ಬಿಳಿ ಕತ್ತಿನ ಕಪ್ಪು ಬೆಳ್ಳಕ್ಕಿಗಳು ಬೇಟೆಯಾಡುತ್ತಿದ್ದವು. ಅಲ್ಲಲ್ಲಿ ಇಣುಕುವ ಹಾವಕ್ಕಿಗಳು. ಕಾಳು ಹೆಕ್ಕುವಲ್ಲಿ ನಿರತವಾಗಿರುವ ಮುನಿಯಗಳು ಭತ್ತದ ಗದ್ದಯಲ್ಲಿ ಸರ್ಕಸ್ ಮಾಡುತ್ತಿದ್ದವು. ಮಡಿವಾಳ ಹಕ್ಕಿ ತನ್ನ ಇಂಪಾದ ದನಿಯಿಂದ ಹೆಣ್ಣು ಹಕ್ಕಿಯನ್ನು ಕರೆಯುತ್ತಿತ್ತು. ಅಲ್ಲಲ್ಲಿ ತೇಲುವ ತಾವರೆಗಳು ಸೂರ್ಯನೊಂದಿಗೆ ಸ್ಪರ್ದೆ ಗಿಲಿದ್ದಿದವು. ನೀಲಾಕಾಶದ ಕೊಳಗಳಲ್ಲಿನ ಪ್ರತಿಫಲನವು ಇವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಟಿಟ್ಟಿಭವೊಂದು ಕೊಳದ ನಡುವಿನ ಜಾಗದಲ್ಲಿ ಬಿಸಿಲು ಕಾಯಿಸುತ್ತಿತ್ತು. ತಣ್ಣನೆಯ ಗಾಳಿ ನಮ್ಮನ್ನು ಹಿಂತಿರುಗಲಾರದಂತೆ ಮಂತ್ರ ಮುಗ್ದಗೊಳಿಸಿತ್ತು. ಹೊರಡುವು ಮನಸ್ಸಿಲ್ಲದ ಮನಸ್ಸಿನಿಂದ ಹೊರಟಾಗ ಬಿಳಿ ಮಿಂಚುಳ್ಳಿಗಳು ವಿದಾಯ ಹೇಳಿದವು.
ಕೊನೆ ಗರಿ:- ಪಕ್ಷಿಧಾಮಕ್ಕೆ ಸೂಕ್ತ ರಕ್ಷಣೆಯಿಲ್ಲ. ಮನುಷ್ಯ ಆಹಾರದ ಕೊರತೆಯಾದರೆ ಬೇರೆ ಕಡೆಗಳಿಂದ ತಂದು ಹಸಿವು ನೀಗಿಸಿಕೊಳ್ಳ ಬಲ್ಲ. ಸೀವಿತವಾದ ಸ್ವಚ್ಚವಾಗಿರುವ ಕೊಳಗಳನ್ನು ಆಶ್ರಯಿಸಿಕೊಂಡಿರುವ ಈ ಪಕ್ಷಗಳ ಆಹಾರ ಲಭ್ಯತೆ ಅತ್ಯಲ್ಪ. ಈ ಅತ್ಯಲ್ಪವನ್ನೂ ಮಾನವ ಕಸಿಯ ಹೊರಟಿದ್ದಾನೆ! ಮೀನುಗಾರರ ಹಲವು ತಂಡ ಇಲ್ಲಿ ಮೀನು ಆಮೆ ಹಿಡಿಯಲು ನಿರತವಾಗಿವೆ. ಅಲ್ಲದೆ ಪಕ್ಷಿಧಾಮದ ಸ್ಥಳಾಕ್ರಮಣವು ನಡೆಯುತ್ತಿದೆ. ಕೊಳದ ನೀರನ್ನು ಮನಸೋ ಇಚ್ಚೆ ಯಥೇಚ್ಚ ಬಳಸಿಕೊಳ್ಳುತ್ತಿದ್ದಾನೆ. ಸಿಮೆಂಟ ಕಾಡು ತಲೆಯೆತ್ತುತ್ತಿವೆ. ಇಲ್ಲಿನ ಪರಿಸರ ಜೀವಿ ಸಮೂಹವನ್ನು ಸರಕಾರ, ಪರಿಸರವಾದಿಗಳು ರಕ್ಷಿಸಬೇಕೆಂಬುದು ನನ್ನ ಮನವಿ.

ಶ್ರೀಧರ್ . ಎಸ. ಸಿದ್ದಾಪುರ.
No comments:
Post a Comment