ಚಾರಣ ಪ್ರವಾಸ!
|
ಕವಲೇ ದುರ್ಗಾ ಕೋಟೆ |
ಮಕ್ಕಳಿಗೆ ಪ್ರಕೃತಿ, ಚಾರಣ ಮತ್ತು ಇತಿಹಾಸದ ಅನುಭವ ಕೊಡಲು, ನಮ್ಮ ಪೂವರ್ಿಕರ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ಕವಲೇ ದುರ್ಗ ಎನ್ನುವ ಕೋಟೆಗೆ ಭೇಟಿಕೊಟ್ಟೆವು. ಇದೊಂದು ಅದ್ಭುತವಾದ ಐತಿಹಾಸಿಕ ತಾಣ. (ವಿವರಗಳಿಗೆ ಹಿಂದಿನ POST ನೋಡಿ)
|
ಐತಿಹಾಸಿಕ ತಾಣ ಹುಂಚ |
ನಮ್ಮ ಮುಂದಿನ ತಾಣ ಕದಂಬರಿಂದ ಚಾಲುಕ್ಯರತನಕ ಆಳಲ್ಪಟ್ಟ ಹುಂಚ. ಇದೊಂದು ಪ್ರಮುಖ ಜೈನ ಕೇಂದ್ರ. ಇತಿಹಾಸದ ಅನೇಕ ಚಿತ್ರಗಳು ನಮಗಿಲ್ಲಿ ಸಿಗುತ್ತವೆ. ಜೈನ ಪರಂಪರೆಯ ಕುರುಹುಗಳು ಅಲ್ಲದೆ, ಹೇಗೆ ಅವಸಾನದತ್ತ ಹೊರಳಿಕೊಂಡಿತ್ತೆಂದು ಇತಿಹಾಸಕಾರರು ಹುಡುಕಬಹುದು. ಆಸಕ್ತಿಕರವಾದ ಲಿಪಿಗಳು ಶಾಸನಗಳು ಕಂಡುಬರುತ್ತವೆ. ನಗರ ಪ್ರದಕ್ಷಿಣೆ ಮಾಡಿಬಂದರೆ, ಇತಿಹಾಸದ ಕುರುಹು ಅಲ್ಲಲ್ಲಿ ಕಾಣಸಿಗುತ್ತದೆ. ತನ್ನ ಆಕಾರ ಸ್ವರೂಪ ಜನಜೀವನದಿಂದ ಅದಿನ್ನು ಐತಿಹಾಸಿಕ ನಗರವಾಗಿಯೇ ಉಳಿದಿದೆ ಎನ್ನಬಹುದು. ಶಿಕ್ಷಕರಿಗೆ ಅಮೂಲ್ಯ ತಾಣಗಳನ್ನು ತೋರಿಸಿದ ತೃಪ್ತಿ ಮಕ್ಕಳಿಗೆ ಚಾರಣದ ವಿಶೇಷ ಅನುಭೂತಿ ನೀಡಿ ರೋಮಾಂಚಿತರಾದರು.
|
ಹುಂಚದಲ್ಲಿನ ಮಾಹಿತಿ ಫಲಕ |
|
ಪಾಳಿ ಲಿಪಿಯ ಶಾಸನ |
|
ಕುವೆಂಪುವನ್ನು ಸಕ್ಷಾತ್ಕರಿಸಿದಾಗ ಅವರ ಮನೆ ಎದುರಿಗೆ |
ನಮ್ಮ ಹೆಮ್ಮೆಯ ಕವಿ ಕುವೆಂಪು ಮನೆಗೆ ಅಡಿಯಿಟ್ಟು ಆನಂದಿಸಿದೆವು. ಪ್ರಕೃತಿಯೊಂದಿಗೆ ಸರಸವಾಡುತ್ತಾ ಅವರ ಮನೆ, ಸಮಾಧಿ, ಬಂದಿರುವ ಪ್ರಶಸ್ತಿ, ಬಿಡುಗಡೆಗೊಳಿಸಿದ ಕೃತಿ ವೀಕ್ಷಿಸಿ ಧನ್ಯರಾದೆವು.
|
ನಮ್ಮ ಸೈನ್ಯ! |