Friday, June 5, 2015

ನಮ್ಮ ಅನ್ನದ ಬಟ್ಟಲಿಗೆ ನಾವೇ ಸುರಿದುಕೊಂಡ ವಿಷ...

 ಅರಿವು ನಮ್ಮಲ್ಲಾಗ ಬೇಕಾ ಅಥವಾ ನಾವೇ ಅರಿವನ್ನು ವಿಸ್ತರಿಸಿಕೊಳ್ಳಬೇಕಾ? ಪ್ರಶ್ನೆಗಳೇಳದೆ ಉತ್ತರವೂ ಹೊಳೆಯದು.

30 ಕ್ಕೆ ಶುಗರು, 35 ಸಂಧಿವಾತ ನಮ್ಮನ್ನಾವರಿಸುವ ಈ ಸನ್ನಿವೇಶದಲ್ಲಿ ನಾವೆಲ್ಲಾ ಯೋಚಿಸ ಬೇಕು! ಎಲ್ಲದಕ್ಕೂ ಹೆರಿಡಿಟರಿಯನ್ನು ದೂರಿದರೆ ಪ್ರಯೋಜನ ಉಂಟೇ? ನಮ್ಮಜ್ಜನಿಗೆ 80ಕ್ಕು ಬಾರದ ಶುಗರು  ಅಪ್ಪನಿಗೆ 53ಕ್ಕೆ ಬಂದಿತೇಕೆ ಎಂದು ಯೋಚಿಸಬೇಕು! ಇವಕ್ಕೆಲ್ಲಾ ಉತ್ತರ ಹುಡಕಿ ಹೊರಟ ಸಿಗುವ ಉತ್ತರ ಆಹಾರ! ಹೈಬ್ರಿಡ್ಗಳ ಸಂತೆಯಲ್ಲಿ ನಾವಿದ್ದೇವೆ. ಸಣ್ಣ ರೋಗವನ್ನು ತಡೆದುಕೊಳ್ಳಲಾರದ ಇವು ತಲೆಯಿಂದ ಬುಡದವರೆಗೂ ವಿಷವುಂಡು ಬೆಳೆಯುವವು. ಜೊತೆಗೆ ಯುರಿಯಾ, ಪೊಟಾಷು.
ವಿಶಿಷ್ಟ 75 ಭತ್ತದ ತಳಿಗಳ ಪ್ರದರ್ಶನ ವೀಕ್ಷಿಸುತ್ತಿರುವ ಚಿಣ್ಣರು.

'ದೇಸಿ ಭತ್ತ' ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಚ್ಚಟ್ಟು ಶಾಲಾ ಮಕ್ಕಳಿಗೆ ಮತ್ತು ಊರವರಿಗೆ ದೇಸಿ ಭತ್ತದ ಕುರಿತು ಅರಿವು ಮೂಡಿಸಲಾಯಿತು. ನಮ್ಮ ದೇಶದಲ್ಲಿದ್ದ 1,10,000 ತಳಿಗಳಲ್ಲಿ ಈಗ ಉಳಿದಿರುವುದು ಕೇವಲ 6,000 ಮಾತ್ರ. ನೆರೆ ಬಂದಾಗಲೂ ಬೆಳೆವ, ಬರದಲ್ಲೂ ಬದುಕಬಲ್ಲ, ಉಪ್ಪು ನೀರಲ್ಲೂ ಬದುಕುವ ವಿಶೇಷ ತಳಿಗಳು ನಶಿಸಿವೆ ಕೆಲವು ನಮ್ಮೊಡನೆ ಇದೆ. ಅನ್ನ ಉಣ್ಣುವವರು ಇವನ್ನು ಉಳಿಸಬೇಕಲ್ಲವೇ? ಮುಂದೊಂದು ದಿನ ವಿದೇಶಿ ಕಂಪೆನಿಗಳ ಮುಂದೆ ಬೀಜಗಳಿಗಾಗಿ ಕೈ ಒಡ್ಡುವಂತಾದೀತು. ಅದಕ್ಕೂ ಮುನ್ನ ಜಾಗೃತರಾಗೋಣ. ಅರಿವನ್ನು ವಿಸ್ತರಿಸಿಕೊಳ್ಳೋಣ..
ಉಳಿದದ್ದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಅಲ್ಲವೇ? ಇನ್ನಾದರೂ ನಮ್ಮ ಅನ್ನದ ಬಟ್ಟಲಿಗೆ ನಾವೇ ವಿಷ ಸುರಿದುಕೊಳ್ಳುವುದನ್ನು ನಿಲ್ಲಿಸೋಣವೇ.
ಅವಲೋಕಿಸುತ್ತಿರುವ ಮಕ್ಕಳು

ನಮ್ಮ ಶಾಲೆಯಲ್ಲಿ ನಡೆದ ಎರಡು ವಿಶಿಷ್ಟ ಕಾರ್ಯಕ್ರಮಗಳು..
ಮೊದಲನೆಯದು ಕೀಟ ವಿಸ್ಮಯಗಳ ಸುತ್ತ ಒಂದು ಇಣುಕು ನೋಟ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಹೆತ್ತವರಿಗೆ ಮಾಹಿತಿ ನೀಡಲಾಯಿತು. ದೇಸಿ ಭತ್ತದ ಕುರಿತು ಮಾತು ಕತೆ ಮತ್ತು ಸುಮಾರು 75 ಭತ್ತದ ತಳಿಗಳ ಪ್ರದರ್ಶನ ಎರ್ಪಡಿಸಲಾಯಿತು. ಸಳ್ವಾಡಿಯ ಅನಿಲ್ ಪ್ರಸಾದ್ ಹೆಗ್ಡೆ ಮಾಹಿತಿ ಹಂಚಿಕೊಂಡರು.
138 ತಳಿ ಬೆಳೆದ ಸಂಗ್ರಾಹಕ ಅನಿಲ್ ಹೆಗ್ಡೆಯವರಿಂದ ಭತ್ತದ ಕ್ರಷಿ ಮಾಹಿತಿ.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...