Saturday, January 28, 2017

ಆಚೆಗೇನೋ ಇದೆ....


ಆಚೆಗೊಂದು ವಿಶಿಷ್ಟ ಜಗತ್ತಿದೆ. ನೋಡುವ ಕಣ್ಣಿನ ನೋಟವನ್ನದು ಬೇಡುತ್ತಿದೆಯಷ್ಟೆ. ಕೊನೆಯ ಮನೆಯಾಚೆಗೆ ಕಾಣುವ ಹಿಮ ಬೆಟ್ಟ. ಮೋಡದ ಮರೆಯಲ್ಲಿ ಅಲ್ಪ ಸ್ವಲ್ಪವೇ ಕಾಣುವ ಸುಂದರ ದೃಶ್ಯ ನೊಡುಗನಲ್ಲಿ ಆಸಕ್ತಿ ಕೆರಳಿಸಿ ಆಚೆಗೇನೋ ಇದೆ ಎಂದು ಆಸೆ ಹುಟ್ಟಿಸುವಂತಿದೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ತಾಣಗಳಿವು. ಸರಳ ಬದುಕಿನ ಆದರ್ಶಗಳ ಸಾಕಾರ ರೂಪಗಳು ಈ ಹಿಮದ ಹಳ್ಳಿಗಳು. ಹರಕಿ ದುನ್ ಚಾರಣದಲ್ಲಿ ಕಂಡ ಹಿಮಾಲಯದ ಹಳ್ಳಿಯೊಂದರ ಸುಂದರ ನೋಟ.

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...