Saturday, March 18, 2017

ಕಾಲದ ಓಣಿಯಲ್ಲೊಂದು ಸುಂದರ ಪಯಣ....1

             ಸಣ್ಣಗೆ ಹನಿವ ಮಳೆ. ಹನಿ ಹನಿಯಲ್ಲೂ ತಣ್ಣನೆಯ ಗುಟುರು ಚಳಿ. ಅಮ್ಮನಂತೆ ತಬ್ಬಿ ಮುತ್ತಿಕ್ಕಿ ಹೋಗುವ ಮಂಜು. ಆಕಾಶಕ್ಕೆ ಚಪ್ಪರ ಹಾಸಿದಂತಹ ಮುಗಿಲು. ಮನಸ್ಸೆಲ್ಲಾ ಆದ್ರ. ಸಣ್ಣ ಮನಃಕಂಪನ. ಇನಿಯನ್ನು ಸೇರುವ ತವಕದಲ್ಲಿರುವಂತೆ ಬೀಸುವ ಕುಳಿಗರ್ಾಳಿ. ಏಕಾಂತ. ಹಳೆಯ ಸಿನಿಮಾ ಸೆಟ್ಟಿನಂತಹ, ಕಲ್ಲಿನಿಂದ ಮಾಡಿದ ರೈಲು ನಿಲ್ದಾಣ. ಚುಮುಚುಮು ಚಳಿಗೆ ನಿಲ್ದಾಣವೇ ತಣ್ಣಗಾದಂತಿತ್ತು. ಯಾವುದೇ ಗಡಿಬಿಡಿ ಇಲ್ಲದೇ ಬೆಚ್ಚಗೆ ಕುಳಿತ ಜನ. ಸ್ವೆಟರಿನೊಳಗಿಂದ ಇಣುಕುವ ಸುಂದರಿಯರ ಅರವಿಂದ. ಅವರನ್ನು ನೋಡದಂತೆ ಪಕ್ಕದಲ್ಲಿದ್ದ ಹೆಂಡತಿಯ ನಿಶೇಧ. ಇಲ್ಲಿ ಬಂದಿಳಿದರೆ ಕಾಲವೇ ನಿಂತ ಅನುಭವ. ಸುಮ್ಮನೆ ಕುಳಿತವನ ಮನಸ್ಸು ನೂರಿನ್ನೂರು ವರ್ಷ ಹಿಂದಕ್ಕೊಡುತ್ತೆ.
Ooty Station

Nilagiri Toy trains coach.

ಬ್ರಿಟಿಷ್ ಕಾಲದ ಪಳೆಯುಳಿಕೆಯಂತೆ ಗೋಚರಿಸುವ ಸಣ್ಣ ನಿಲ್ದಾಣ. ಇದನ್ನು ನಿಮರ್ಿಸುವ ಕಾಲಕ್ಕೆ ಇಲ್ಲಿನ ಪರಿಸ್ಥಿತಿ ಹೇಗಿದ್ದಿರಬಹುದೆಂದು ಊಹಿಸುತ್ತಾ ಕುಳಿತೆ. ಮಗನೋ ಆಟದಲ್ಲಿ ತಲ್ಲೀನನಾಗಿದ್ದ. ಅವನದೊಂದು ಚಿತ್ರ ತೆಗೆದು ನನ್ನ ಆಲೋಚನೆಯಲ್ಲಿ ಮತ್ತೆ ಮುಳುಗಿದೆ. ಕಡಿದಾದ ಪರ್ವತದ, ಬರೋಬ್ಬರಿ 2203 ಮೀಟರ್ ಎತ್ತರದಲ್ಲಿ ನಿಮರ್ಿಸಿದ ನಿಲ್ದಾಣ. ಸುತ್ತಲೂ ದಟ್ಟ ಕಾಡಿದ್ದಿರ ಬಹುದು ಆ ಕಾಲಕ್ಕೆ. ವನಸಿರಿಯೇ ಮುಗಿಲು ಮುಟ್ಟಿರುವ ಕಾಲ. ಬ್ರಿಟಿಷ್ ಕಾಲಕ್ಕೆ ಜಾರುತಿದೆ ಮನಸ್ಸು.
Old Swis made Steam engine.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...