Friday, April 28, 2017
Tuesday, April 25, 2017
ವಸಂತ ಬರೆದನು ಒಲವಿನ ಓಲೆ....
Saturday, April 22, 2017
ಹಕ್ಕಿ ಮರಿ..
ಮೊನ್ನೆ ಪೋಟೋಗ್ರಪಿಗೆ ಹೋದಾಗ ಕುಟುರದ ಮರಿಯೊಂದು ಅಮ್ಮ ನೊಂದಿಗೆ ಕಾಣಸಿಕ್ಕಿತು. ಮುದ್ದಾದ ಮರಿ. ತರೆದ ಗೆಲ್ಲುಗಳ ಮೇಲೆ ಕುಳಿತ್ತಿತ್ತು. ಇಂದಷ್ಟೇ ಹೊರಗೆ ಬಂದ ಮರಿಗೆ ಅಮ್ಮ ಅಡಗುವುದನ್ನು, ಹಾರುವುದ ಕಲಿಸುವುದ ನೋಡುವುದು ಕಣ್ಣಿಗೆ ಹಬ್ಬ. ಮತ್ತೆ ಮತ್ತೆ ಮರಿ ನೋಡಿ ಆನಂದಿಸಿದೆ. ತನ್ನ ಮರಿಯನ್ನು ತಾಯಿ ಹುರಿದುಂಬಿಸುವುದು ಮತ್ತು ತಾಯಿ ಜೊತೆ ಏನು ಮಾತನಾಡುತ್ತಿರಬಹುದೆಂದು ಕಲ್ಪಿಸಿ ಕವನವೊಂದು ಗೀಚಿದೆ. ಓದಿ ಕುಸಿಯಾದರೆ ಇಷ್ಟಿಸಿ!
ಹಕ್ಕಿ ಮರಿ..
ಗೂಡು ಬಿಟ್ಟು ಹೊರಗೆ ನೀ ಬಂದರೆ
ಆಗದಂತೆ ನಿನಗೆ ಎಲ್ಲೂ ತೊಂದರೆ.
ಗುಬ್ಬಿ ಮರಿಯಂತೆ ನಿನ್ನ ನಾ ನೋಡಿಕೊಳ್ಳುವೆ;
ಹಾರಲು ಹಾರಾಡಲು ನಿನಗೆ ನಾ ಕಲಿಸುವೆ.
ವಸಂತದ ಹೂವಂತೆ ಬಿರಿದೆ ನೀ
ಹಾರಲು ನಿನಗೆ ನಾ ಕಲಿಸಲೆ.
ಅಲ್ಲಿ ನೋಡು ಮಾವು ಚಿಗುರಿದೆ;
ಕೊಕ್ಕಿನಲ್ಲಿ ಕಿತ್ತು ತಿನ್ನ ಬಾರದೇ?
ಚಿಗುರಿನಂತೆ ನಿನ್ನೆ ಮೊನ್ನೆ ನಾ ಚಿಗುರಿದೆ,
ವಿಶಾಲ ಪ್ರಪಂಚವ ನಾ ಇಂದೇ ನೋಡಿದೆ.
ಚಿಗುರು ಮಿಡಿಯ ಕಿತ್ತು,
ಬಾಯಿಗಿಡಬಾರದೇ ಒಂದು ತುತ್ತು?
ಹಾರುತಿಹುದು ದೂರದಲ್ಲಿ ಹದ್ದು ಹತ್ತು
ಬಿಟ್ಟು ಹಾರದಿರು ನನ್ನ ಇವತ್ತು.
ತುಂಬ ಹೊಸದು ನನಗೆ ಈ ಜಗತ್ತು,
ಹಾರಬಾರದೇ ನನ್ನ ಹೊತ್ತು?
ಶ್ರೀಧರ್. ಎಸ್. ಸಿದ್ದಾಪುರ.
Juvenile Barbit. |
ಹಕ್ಕಿ ಮರಿ..
ಗೂಡು ಬಿಟ್ಟು ಹೊರಗೆ ನೀ ಬಂದರೆ
ಆಗದಂತೆ ನಿನಗೆ ಎಲ್ಲೂ ತೊಂದರೆ.
ಗುಬ್ಬಿ ಮರಿಯಂತೆ ನಿನ್ನ ನಾ ನೋಡಿಕೊಳ್ಳುವೆ;
ಹಾರಲು ಹಾರಾಡಲು ನಿನಗೆ ನಾ ಕಲಿಸುವೆ.
ವಸಂತದ ಹೂವಂತೆ ಬಿರಿದೆ ನೀ
ಹಾರಲು ನಿನಗೆ ನಾ ಕಲಿಸಲೆ.
ಅಲ್ಲಿ ನೋಡು ಮಾವು ಚಿಗುರಿದೆ;
ಕೊಕ್ಕಿನಲ್ಲಿ ಕಿತ್ತು ತಿನ್ನ ಬಾರದೇ?
ಚಿಗುರಿನಂತೆ ನಿನ್ನೆ ಮೊನ್ನೆ ನಾ ಚಿಗುರಿದೆ,
ವಿಶಾಲ ಪ್ರಪಂಚವ ನಾ ಇಂದೇ ನೋಡಿದೆ.
ಚಿಗುರು ಮಿಡಿಯ ಕಿತ್ತು,
ಬಾಯಿಗಿಡಬಾರದೇ ಒಂದು ತುತ್ತು?
ಹಾರುತಿಹುದು ದೂರದಲ್ಲಿ ಹದ್ದು ಹತ್ತು
ಬಿಟ್ಟು ಹಾರದಿರು ನನ್ನ ಇವತ್ತು.
ತುಂಬ ಹೊಸದು ನನಗೆ ಈ ಜಗತ್ತು,
ಹಾರಬಾರದೇ ನನ್ನ ಹೊತ್ತು?
ಶ್ರೀಧರ್. ಎಸ್. ಸಿದ್ದಾಪುರ.
Labels:
copper smith barbit,
ಕತೆ-ಕವಿತೆ,
ಬಾನಾಡಿ
Saturday, April 1, 2017
ಕಾಲದ ಓಣಿಯಲ್ಲೊಂದು ಸುಂದರ ಪಯಣ. .....ಭಾಗ-2
In the Start Of Journey. |
ವಿರಾಮ ಜೀವಿಯಂತೆ ರೈಲು ಅವಸರಿಸದೇ ಚುಕುಬುಕು ನಾದ ಮಾಡಿತು. ಆಗಲೇ ಮನಸು ಇಹಕ್ಕೆ ಇಳಿದಿದ್ದು. ಉದಕ ಮಂಡಲದಿಂದ ಅದು ಹಸಿರ ಹೊದ್ದ ಹಾದಿಯಲ್ಲಿ ಏದುಸಿರು ಬಿಡುತ್ತಾ ಮದುವಣಗಿತ್ತಿಯಂತೆ ಹೊರಟಿತು ನೋಡಿ. ಇಕ್ಕೆಲಗಳ ಟೀ ಎಸ್ಟೇಟುಗಳ ನಡುವೆ ದಾರಿ ಮಾಡಿಕೊಂಡು, ತೆವಳುತ್ತಾ, ಧಾವಂತವಿಲ್ಲದ ವಿರಾಮ ಪಯಣ. ಬಸವನ ಹುಳುವಿನ ವೇಗ. ಟೀ ಎಸ್ಟೇಟುಗಳಲ್ಲಿ ಸೊಪ್ಪು ಕೊಯ್ಯುವ ಕೆಲವೇ ಕೆಲವು ಮಂದಿ ಕಾಣಸಿಕ್ಕರು. ಜನರೇ ಇಲ್ಲದ ಚಳಿ ಹೊದ್ದ ಸಣ್ಣದಾದ ಕೆಲಸದವರ ಮನೆಗಳು. ಚಹ ತೋಟದ ನಡುವೆ ಏಕಾಂಗಿಯಾಗಿ ನಿಂತಿರುವ ಸಿಲ್ವರ್ ಓಕ್ ಮರಗಳು. ಮೊಡ ಅಮರಿಕೊಂಡ ಬೆಟ್ಟ ಗುಡ್ಡಗಳು. ಉದಕ ಮಂಡಲದಿಂದ 52 ಕಿ.ಮೀ ದೂರದ ಮೆಟ್ಟುಪಾಳಯಂ ತಲುಪಲು ಅದು 5 ಗಂಟೆ ತೆಗೆದುಕೊಳ್ಳುತ್ತದೆಂದರೆ ಅದರ ವೇಗವನ್ನು ನೀವೇ ಊಹಿಸಿ. ನಮ್ಮ ಜೊತೆ ಎರಡು ನವ ದಂಪತಿಗಳು ಹೊಸ ಹಾದಿ ಮರೆತು ತಮ್ಮ ತಮ್ಮನ್ನೇ ನೋಡಿಕೊಳ್ಳುತ್ತಿದ್ದರು. ಕಡಿದಾದ ಬೆಟ್ಟಗಳ ಗರ್ಭಗಳನ್ನು ಹೊಕ್ಕು, ಬೆಟ್ಟವಿಳಿದು, ಕಣಿವೆಗಳ ದಾಟುತ್ತಾ ಸಾಗಿತ್ತು ರೈಲು. ಪ್ರತಿ ಸುರಂಗವನ್ನು ಹೊಕ್ಕು ಹೊರ ಬಂದಾಗಲೂ ವಿಭಿನ್ನ ನೋಟ. ಹೂ ಹೊತ್ತ ಗಿಡ ಮರಗಳು. 250 ಸೇತುವೆಗಳನ್ನು ಹಾದು ಬಂದಿದ್ದೆವು.
Nilagiri Train. |
ನೂರು ವರ್ಷಗಳ ಹಿಂದೆ ಇಲ್ಲಿನ ಕಾಡು ಹೇಗಿದ್ದಿರಬಹುದೆಂದು ಮನಸ್ಸು ಹಿಂದಕ್ಕೊಡಿತು. ಭಾರತದ ವಿವಿಧ ಭಾಗಗಳಿಂದ ಕೆಲಸಕ್ಕೆಂದು ಬಂದವರು ಇಲ್ಲೇ ನೆಲೆಸಿ ಇಲ್ಲಿನವರಾಗಿದ್ದಾರೆ. ಕೆಲವು ತಲೆಮಾರುಗಳನ್ನು ಇಲ್ಲಿಯೇ ಕಳೆದಿದ್ದಾರೆ. ಅವರು ಕೊಡುವ ಉದಕಮಂಡಲದ ಚಿತ್ರ ಅನನ್ಯ. ಮೈಸೂರು ಭಾಗದ ಹೆಂಗಸೊಬ್ಬಳು ಮವತ್ತು ಮರುಷದ ಹಿಂದೆ ಬೀಳುತ್ತಿದ್ದ ಮಳೆಯನ್ನು ನೆನೆದಳು. ಅಂದಿನ ಮಳೆ ಈಗ ಇಲ್ಲವೆಂದಳು. ಸುತ್ತಲಿನ ಸಿಕ್ಕುಗಳ ಮರೆತು ಅಂದಿನ ಪರಿಸ್ಥಿತಿಗಳ ಚಿತ್ರಣ ಮಾಡ ಹತ್ತಿತ್ತು ಮನಸು. ಈ ನೂರಾರು ಸುರಂಗಗಳ ನಿಮರ್ಿಸಲು ಅಂದಿನ ಜನ ಪಟ್ಟ ಪಾಡು ಎಣಿಸಲು ಸಾಧ್ಯವಿಲ್ಲದ್ದು. ಅವರ ಕಳೆದ ನೀರವ, ನಿಲರ್ಿಪ್ತ ರಾತ್ರಿಗಳ ನೆನೆಸಿಕೊಂಡರೆ ಭಯವಾಗುವುದು. ನೀಲಗಿರಿ ಕಾಡಿನ ಜೀವಿಗಳ ನಡುವೆ ಕೆಲಸ ಮಾಡುವ ಅನಿವರ್ಾಯತೆ. ಚಳಿ ಮತ್ತು ಮಳೆಯೊಂದಿಗೆ ಹೋರಾಟ ಬೇರೆ. ಮನುಷ್ಯನ ಇಚ್ಚಾಶಕ್ತಿಯ ವಿರಾಟ ದರ್ಶನವೇ ನಮಗಾಗುವುದರಲ್ಲಿ ಆಶ್ಚರ್ಯವಿಲ್ಲ.
Nilagiri train on a u shaped bridge. |
Beautiful landscapes |
ವಿಚಿತ್ರವೆನಿಸುವ ಹೆಸರಿನ ಕಾಡ ನಡುವಿನ ನಿಲ್ದಾಣಗಳನ್ನು ಹಾದು ಅದು ಕೂನೂರ್ ತಲುಪಲು ಸಣ್ಣಗೆ ಮತ್ತೊಂದು ಮಳೆ ನಮಗಾಗಿ ಕಾದಿರುವಂತೆ ಹೊಯ್ಯತೊಡಗಿತು. ರೈಲು ಅಲ್ಲೊಂದು ಹತ್ತು ನಿಮಿಷ ನಿಂತು ಸುಧಾರಿಸಿಕೊಂಡು ನೀರು ಕುಡಿದು ಮತ್ತೆ ಪ್ರಯಾಣ ಆರಂಭಿಸಿತು. ತಣ್ಣಗಿನ ಚಳಿಗೆ ಬಿಸಿ ಕಾಫಿ ಸವಿದು ನಾವೂ ಹೊರೆಟೆವು ಅದನ್ನೇರಿ. ಬಲಭಾಗದ ಸ್ವರ್ಗ ಸದೃಶ ಭೂ ದೃಶ್ಯಾವಳಿಗಳು ಮುಗಿದು ಈಗ ಎಡ ಭಾಗಕ್ಕೆ ಹೊರಳಿ ಕೊಂಡಿತು. ಮನ ತಣಿಯುವವರೆಗೂ ನೋಡುತ್ತಾ ಮೆಟ್ಟುಪಾಳಯಂನ್ನು ಸಂಜೆ ತಲುಪಿದೆವು. ಈ ದಾರಿಯಲ್ಲಿ ದಿನಕ್ಕೆರಡು ಬಾರಿಯಂತೆ ಚಲಿಸುವ ರೈಲು ಜನಮಾನಸದ ಜೀವನಾಡಿಯಂತಿದೆ.
A Village on the way. |
Nilagiri Toy train piercing a tea estate. |
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ನೀಲಗಿರಿ ಪರ್ವತ ರೈಲು 2004ರಲ್ಲಿ ಸೇರ್ಪಡೆಗೊಂಡಿತು. ನೂರು ವರ್ಷ ಪೂರೈಸಿರುವ ಇದು ಡಿಸೆಲ್ ಚಾಲಿತ ಸ್ವಿಸ್ ಇಂಜಿನ್ನಿಂದ ಓಡಿಸಲಾಗುತ್ತಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಹಳೆಯ ವಿನ್ಯಾಸದ ಟಿಕೀಟುಗಳನ್ನು ನೀಡಲಾಗುತ್ತಿದೆ. 50 ಕಿ.ಮೀಗಳಿಗೆ ರೂ. 50ಕ್ಕೂ ಹೆಚ್ಚು ಹಣ ಪಾವತಿಸುವ ಈ ಕಾಲದಲ್ಲಿ ಕೇವಲ 15 ರೂಪಾಯಿಗೆ ಒಂದು ಸುಮಧುರ ಪ್ರಯಾಣದ ಅನುಭವ ನಿಮಗೆ ನೀಡುವುದರಲ್ಲಿ ಸಂಶಯವಿಲ್ಲ. ಇನ್ನೇಕೆ ತಡ ಈ ಬೇಸಿಗೆಗೆ ಕ್ಯಾಮರ ಹೆಗಲಿಗೇರಿಸಿ ಹೊರಡಿ.
Subscribe to:
Posts (Atom)
ವಾರೆ ನೋಟ
ಸಂತಾನ ದೇಗುಲದಲ್ಲಿ …
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...