ಬೆಳ್ಳಿಯೂರಿನ ಬೆಡಗಿ
ಸಿಕ್ಕಿದ್ದಳು ಮೊನ್ನೆ
ಕದ್ದು ನೋಡುತ್ತಿದ್ದಳು ನನ್ನೇ
ನೋಡಿದೆನವಳ ನಾನೂ ಕದ್ದೇ
ಬಿಡದೇ ಕದ್ದೆ ಅವಳ ನಿದ್ದೆ
ವಾಸಿಯಾಗಿಲ್ಲ ಅವಳ ಹುಚ್ಚು
ಎಷ್ಟೇ ಕೊಟ್ಟರೂ ಮದ್ದು!
ದಿನವಿಡಿ ಇವಳದೇ ಸದ್ದು.
ಹೊಂಗನಸೊಂದನ್ನು
ಕಟ್ಟಿಕೊಂಡೇ ಇದ್ದೇ ಸೊಂಟಕ್ಕೆ
ಜಾರಿಹೋಗದಂತೆ ಬಿದ್ದು.
ತಳುಕು ಬಳುಕಿನ ಬಳ್ಳಿ
ಅಡಗಿಕುಂತವಳೆ ಕಳ್ಳಿ
ಮನ ಕದ್ದ ಮಳ್ಳಿ
ಅಡವಿಯೊಳಗಿನ ಚೆಂದುಳ್ಳಿ!
ಶ್ರೀಧರ್ ಎಸ್. ಸಿದ್ದಾಪುರ.
ಒಂದು ಆರ್ಕಿಡ್ ಸಸ್ಯ |
On Way to Jari Falls |
No comments:
Post a Comment