ಮೊನ್ನೆ ಫೋಟೋಗ್ರಫಿಗೆಂದು ಹೊರಗಡೆ ಹೋಗಿದ್ದೆ. ನೇರಳೆ ಮರದಡಿ ನಿಂತು ನಿರುಕಿಸುತ್ತಾ ಇದ್ದೆ. ಆಗ ಈ ಮುರಿದ ರೆಂಬೆಯೊಂದು ಕಣ್ಣಿಗೆ ಬಿತ್ತು. ಬೆಳಗಿನ ಬಿಸಿಲಿಗೆ ಚೆನ್ನಾಗಿತ್ತು. ಸುಮ್ನೆ ಒಂದು ಫೋಟೋ ತೆಗೆದೆ. ಹಾಗೇ ಅದನ್ನು ಗಮನಿಸುತ್ತಾ ನಿಂತೆ. ಎಂದೋ ಓದಿದ ಈ ಕವನ ತಟ್ಟನೆ ನೆನಪಾಯಿತೇಕೋ. ಮತ್ತೂ ಗಮನಿಸುತ್ತಾ ನಿಂತೆ! ಕವಿಗೆ ಚಂದ್ರ ಹೆಂಡತಿಯ ಮೋರೆ ವಿಜ್ಞಾನಿಗಳಿಗೆ ಬರಿಯ ಕಲ್ಲು ಗುಂಡು ಮಕ್ಕಳಿಗೆ ಐಸ್ ಕ್ರೀಮ್ನ ತುಂಡು... ನಿಮಗಿಲ್ಲಿ ಹೆಂಡತಿಯ ಮೋರೆ ಕಾಣಿಸಲಿಕ್ಕಿಲ್ಲ ಆದರೂ ಬಿಡದೆ ನೀವೂ ಗಮನಿಸಿ ನೋಡಿ ನಿಮ್ಮ ಕಣ್ಣಿಗದು ಏನಾಗಿ ಕಾಣುತ್ತದೆಂದು ಊಹಿಸಿ. ನೋಡೋಣ.
Monday, February 5, 2018
ಕವಿಗೆ ಚಂದ್ರ ಹೆಂಡತಿಯ ಮೋರೆ..
Subscribe to:
Post Comments (Atom)
ವಾರೆ ನೋಟ
ಸಂತಾನ ದೇಗುಲದಲ್ಲಿ …
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...
No comments:
Post a Comment