Tuesday, January 15, 2019

ಭಿನ್ನ ಹಾದಿಯ ಕಥನ...


ಲೇಖನಕ್ಕೆ ಈ ಹೆಸರು ಕೊಡಲು ಎರಡು ಕಾರಣಗಳುಂಟು. ಮೊದಲನೆಯದು ಇಲ್ಲಿ ಸುತ್ತಮುತ್ತಲೆಲ್ಲಾ ಕಡೆ ನಿಮಗೆ ಭಿನ್ನವಾದ ಶಿಲಾ ಬಿಂಬಗಳ ರಾಶಿಯೇ ಸಿಗುವುದು. ಜೊತೆಗೆ ಇಲ್ಲಿಗೆ ಬರಲು ಶರಾವತಿಯನ್ನು ಹೊಯ್ದಾಡುವ ಸಂಕದಲ್ಲಿ ಹಾದು ಬರಬೇಕು. ಇಲ್ಲವೇ ಶರಾವತಿಯ ದಾಟಿ ಬರಬೇಕು. ಹಾಗಾಗಿ ಇದು ಭಿನ್ನ ಹಾದಿಯ ಕಥನ.
***


2012ರ ಸುಮಾರಿಗೆ ಇಗ್ಲೆಂಡ್ ಸಾಗರತಳದಲ್ಲಿ ಸಿಕ್ಕ ಅಪಾರ ಸಂಪತ್ತು ಎಲ್ಲರ ಕಣ್ಣು ಕುಕ್ಕುವಂತಿತ್ತು. ಜರ್ಮನಿಯ ದಾಳಿಗೆ ಮುಳುಗಿದ ಆ ಹಡಗನ್ನು 2012ರಲ್ಲಿ ಮೇಲಕ್ಕೆತ್ತಲಾಯಿತು! ಅಟ್ಲಾಂಟಿಕ್ ಸಾಗರದಾಳದಿಂದ ಅಮೇರಿಕಾದ 'ಔಜಥಿಜಥಿ ಒಚಿಡಿಟಿಜ ಇಥಠಿಟಠಡಿಚಿಣಠಟಿ' ಕಂಪೆನಿಯೊಂದು ಟನ್ಗಟ್ಟಲೆ ಬೆಳ್ಳಿಯಿಂದ ತನ್ನ ಜೇಬಿಗಿಳಿಸಿದ್ದು ಬರೋಬ್ಬರಿ 150 ಮಿಲಿಯನ್ ಡಾಲರ್! ಆ ಹಡಗಿನಲ್ಲಿದ್ದ ಒಟ್ಟು ಬೆಳ್ಳಿ ಬರೋಬ್ಬರಿ 240 ಟನ್! ಅದು ಭಾರತದಿಂದ ಹೊರಟ ಹಡಗು. ಆ ಹಡಗಿನ ಮೇಲಿದ್ದ ಹೆಸರು 'ಎಸ್. ಎಸ್. ಗೇರುಸೊಪ್ಪ'. ಪೋಚರ್ುಗೀಸರನ್ನೂ ಬಗ್ಗು ಬಡಿದ ನಮ್ಮ ಕರಾವಳಿ ನಾಡನ್ನು ಆಳಿದ ವೀರ ರಾಣಿಯ ಕಾಲದ ಅಪಾರ ಸಂಪತ್ತದು ಎನ್ನುವುದೇ ಆಶ್ಚರ್ಯಕರ ಸಂಗತಿ! ಈ ಪರಿಯಾಗಿ ನಮ್ಮ ಸಂಪತ್ತನ್ನು ಅಂದು ಕೊಳ್ಳೆ ಹೊಡೆಯಲಾಗಿತ್ತು. ಜೊತೆಗೆ ಬ್ರಿಟಿಷ್ ಸರಕಾರಕ್ಕೂ ಬರೋಬ್ಬರಿ 50 ಟನ್ ಆಂಟಿಕ್ ಬೆಳ್ಳಿ ಸಿಕ್ಕಿತ್ತು!
***


ಪಯಣಿಸುವ ಬನ್ನಿ ಆ ನಾಡಿಗೆ..
ನಮ್ಮ ಪ್ರಯಾಣವು ಪ್ರಥಮಿಸಿದ್ದು ಹೊನ್ನಾವರದಿಂದ ಚತರ್ುಮುಖ ಬಸದಿಗೆ. ಎದ್ದು ಬಿದ್ದು ಶನಿವಾರ ಹೊರಟು ನಿಂತಾಗ ದಾರಿಯೇ ತಿಳಿದಿರಲಿಲ್ಲ! 2010ರಲ್ಲಿ ಓದಿದ ಸಣ್ಣ ಹಾಳೆಯ ತುಣುಕೊಂದು ಮಾತ್ರ ನನ್ನ ನೆನಪಿನ ಜೊತೆಗಿತ್ತು. ರಾತ್ರಿ ಇಡೀ ತಿಣುಕಿ ಹುಡುಕಿ ಅಲ್ಲಿಗೆ ಹೋಗಲು ಎರಡು ದಾರಿಗಳ ಪತ್ತೆ ಹಚ್ಚಿದ್ದೆ. ಯಾವ ದಾರಿಯಲ್ಲಿ ಹೋಗುವುದೆಂದು ಬೆಳಗಿನವರೆಗೂ ಗೊಂದಲ ಮುಂದುವರಿದಿತ್ತು. ಕೊನೆಗೆ ಎರಡನೆಯ ದಾರಿಯನ್ನು ಆರಿಸಿಕೊಂಡೆವು. ಮೊದಲ ದಾರಿ ಗೇರುಸೊಪ್ಪೆಯ ಮೂಲಕ ಎರಡನೆಯದ್ದು ಇಡುಗುಂಜಿಯ ಮೂಲಕ.
ಹೊನ್ನಾವರದಿಂದ ಕೇವಲ ಒಂದೇ ಬಸ್ಸು! ನಾವು ಹತ್ತಿ ಕೂತದ್ದು 8.45ಕ್ಕೆ. ಎಲ್ಲೊ ಸನಿಹದಲ್ಲಿದೆ ಎಂದು ತಿಳಿದವನಿಗೆ ಕಂಡೆಕ್ಟರ್ ಬರೋಬ್ಬರಿ ಎರಡು ಗಂಟೆ ಬೇಕು ಎಂದಾಗ ತುಸು ಬೇಸರವೆನಿಸಿತ್ತು. ಆದರೆ ದಾರಿ ಅದ್ಭುತ, ರೋಮಾಂಚಕ. ಕೆಲವಡೆಯಂತೂ ಮೋಡಕ್ಕೆ ತಾಕಿ ಬಂದಿತ್ತು ನಮ್ಮ ಬಸ್ಸು!
***





ಬನ್ನಿ ಹೋಗೋಣ, ಗೇರುಸೊಪ್ಪವ ನೋಡೋಣ
ಶಿವಮೊಗ್ಗದ ದಟ್ಟಡವಿಯ ಗರ್ಭದಲ್ಲಿ ಹುಟ್ಟಿದ ಅಂಬುತೀರ್ಥ, ಶರಾವತಿಯಾಗಿ ಬೋರ್ಗರೆಯುತ ಗೇರುಸೊಪ್ಪೆಯ ಸುತ್ತುವರಿದು ಹರಿವಳು. ಒಂದು ಬದಿಯು ಮೊರೆವ ಕಡಲು ಇನ್ನೊಂದು ಕಡೆಯು ಘಟ್ಟ ಸಾಲು, ನಡುವೆ ಹರಿವ ಹೊಳೆ. ಇಂತಹ ಆಯಕಟ್ಟಿನ ಜಾಗದಲ್ಲಿದ್ದ ಸ್ಥಳ. ಅಂದು ಯಥೇಚ್ಚವಾಗಿ ಸಿಗುವ ಬೆಳ್ಳಿಗಿಂತಲೂ ಬೆಲೆ ಬಾಳುವ ಕಾಳು ಮೆಣಸು. ಭಟ್ಕಳ, ಬಸ್ರೂರು, ಬಾಕರ್ೂರು, ಹೊನ್ನಾವರ, ಕುಂದಾಪುರ, ಗಂಗೊಳ್ಳಿ, ಹಂಗಾರಕಟ್ಟೆ, ಮಿಜರ್ಾನ ಮುಂತಾದ ಬಂದರುಗಳು. ಇಲ್ಲಿಂದಲೇ ರಫ್ತಾಗುತ್ತಿದ್ದ ಸಾಂಬಾರು ಪದಾರ್ಥಗಳು ಮತ್ತು ಅಕ್ಕಿ ಇತ್ಯಾದಿಗಳು. ನೆನಪಿಡಿ ಈಗಲೂ ವಿಶ್ವದ 86 ಭಾಗ ಸಾಂಬಾರು ಪದಾರ್ಥ ರಫ್ತಾಗುತ್ತಿದ್ದದ್ದು ಭಾರತದಿಂದ! ಜೊತೆಗೆ ಕುದುರೆ ವ್ಯಾಪಾರದ ಹೆಬ್ಬಾಗಿಲು! ವಿಜಯನಗರಕ್ಕೂ ಇಲ್ಲಿಂದಲೇ ಕುದುರೆಗಳ ಸರಬರಾಜು. ಇನ್ನೇನು ಬೇಕು ಸುಸಜ್ಜಿತ ಸುಂದರ ರಾಜ್ಯ ಕಟ್ಟಲು. ಬೇಕಿದ್ದದ್ದು ರಾಜಕೀಯ ಇಚ್ಚಾಶಕ್ತಿಯಷ್ಟೇ. ಗೇರುಸೊಪ್ಪೆ ಮತ್ತು ಹಾಡುವಳ್ಳಿ, ಇಂದಿನ ಭಟ್ಕಳದ ರಾಜರನ್ನು ವಿಲೀನ ಮಾಡಿ ಆಳಿದಳೀಕೆ.


ಹೀಗೆ ರೂಪುಗೊಂಡಿದ್ದೇ ಅಂದಿನ ಭಲ್ಲಾತಕೀಪುರ (ಭಲ್ಲಾತಕೀ ಎಂದರೆ ಗೇರು ಮರ!), ಇಂದಿನ ಗೇರುಸೊಪ್ಪ ಎಂಬ ರಾಜ್ಯದ ಹರವು ಹೊನ್ನಾವರದಿಂದ ಕುಂದಾಪುರದವರೆಗೆ ನರ ನಾಡಿಯಂತೆ ಹರಡಿಕೊಂಡ ಮಹಾ ಸಾಮ್ರಾಜ್ಯ. ಸಂಕ್ರಮಣದ ಕಾಲಘಟ್ಟದಲ್ಲಿ ರಾಣಿಯಾಗಿ, ಪರಂಗಿಗಳಾದ ಪೋಚರ್ುಗೀಸರಿಗೂ ಜಗ್ಗದ ರಾಜ್ಯ ಕಟ್ಟಿದವಳು ಗೇರುಸೊಪ್ಪದ ಮೆಣಸಿನ ರಾಣಿ, ರಾಣಿ ಚೆನ್ನಬೈರಾದೇವಿ. ಬಹುಶಃ ಭಾರತದ ಅತ್ಯಂತ ವೀರ ರಾಣಿಯರಲ್ಲಿ ಈಕೆಯೇ ಪ್ರಮುಖಳು. ಕಾಲ ಗರ್ಭದ ಅವಜ್ಞೆಗೆ ಗುರಿಯಾದವಳು.

ಓಲಾಡುವ ಪಶ್ಚಿಮದ ಕಟ್ಟು ಹೊಳೆಯ ತೂಗು ಸೇತುವೆ ದಾಟಿ ಕಾನನ ಪ್ರವೇಶಿಸಿದರೆ ನೂರಿನ್ನೂರು ಎಕರೆಗಳಲ್ಲಿ ಹರವಿಕೊಂಡ ನಾಲ್ಕೈದು ಬಸದಿ ಸಮುಚ್ಚಯವೇ ನಿಮ್ಮ ಮುಂದೆ. ಆಹಾ ಎಂತಹ ಕೆತ್ತನೆಗಳು. ಪ್ರತಿ ಮೂರ್ತಿಯೂ ಸುಮನೋಹರ. ಪಾಶ್ರ್ವನಾಥನ ಬಸದಿಯ ಪಾಶ್ರ್ವನಾಥನ ಕೆತ್ತನೆಯಂತೂ ನೆನಪಿನಲ್ಲುಳಿಯುವುದು. ಎಲ್ಲಕ್ಕೂ ಕಲಶವಿಟ್ಟಂತೆ ಕಾಣುವ ಚತರ್ುಮುಖ ಬಸದಿ. ಜೊತೆಗೆ ಪ್ರಭಾವಿ ಜ್ವಾಲ ಮಾಲಿನಿ ದೇವಿಯ ಉಪಸ್ಥಿತಿ.


ಕಾಲದ ಓಣಿಯಲ್ಲಿ ಹಿಮ್ಮುಖವಾಗಿ ಪಯಣಿಸುವ ಬನ್ನಿ...
5 ಎಕರೆ ಪ್ರದೇಶದಲ್ಲಿ ಹರಡಿಕೊಂಡ ಎತ್ತರದ ಪೀಠದ ಮೇಲೆ ಅಲಂಕೃತವಾದ ಸುಮಾರು 16ನೆಯ ಶತಮಾನದ ಬಸದಿ. ಬಸದಿಯುದ್ದಕ್ಕೂ ಸುಮಾರು 100 ಅಡಿ ಅಗಲದ ರಾಜ ಬೀದಿ. ಅಂದಿನ ವೈಭವಕ್ಕೆ ಸಾಕ್ಷಿ ನುಡಿಯುತ್ತೆ.
ನಾಲ್ಕು ದ್ವಾರಕ್ಕೂ ಮುಖಮಾಡಿ ಕುಳಿತ ವಿಶಿಷ್ಟ ಕಲಾ ನೈಪುಣ್ಯದಿಂದ ಮಿರುಗುವ ಆದಿನಾಥ, ಸಂಭವನಾಥ, ಅಜಿತನಾಥ ಮತ್ತು ಅಭಿನಂದನಾಥ ಮೂತರ್ಿಗಳು. ಹೊರ ಗೋಡೆಯ ಮೇಲೆಲ್ಲಾ ಸುಂದರ ಕಿಟಕಿಗಳು, ಜಾಲಾಂದ್ರ. ಕಿಟಕಿಗಳ ಮೇಲೆ ಹರಿವ ಸರ್ಪದ ಕೆತ್ತನೆ. ಕಿಟಕಿಯ ಮೇಲಿನಿಂದ ಇಣುಕುವ ಮಂಗನ ಕೆತ್ತನೆ ಅತ್ಯದ್ಭುತ. ಮಾನವನ ಧನ ದಾಹವನ್ನು ಪ್ರತಿನಿಧಿಸುತ್ತದೆ ಎನ್ನುವುದು ಇದರ ರೂಪಕವಂತೆ ಎಂದು ಸ್ಥಳೀಯರೊಬ್ಬರು ಅರುಹಿದರು.





ಉತ್ತರ ದಿಕ್ಕಿನ ರಾಣಿ ಆಗಮನದ ಗಜ ದ್ವಾರದ ಪಕ್ಕದಲ್ಲೇ ಮೀನಿನ ಕೆತ್ತನೆಯಿಂದ ಅಲಂಕೃತವಾದ ಗೋಡೆ. ಒಳಗಿನ ಕಂಬಗಳ ಕೆತ್ತನೆಯೂ ಅತ್ಯದ್ಭುತ. ರಾಣಿ ಚೆನ್ನಬೈರಾದೇವಿಯ ಕಾಲದ ಈ ಸುಂದರ ಬಸದಿಯ ಹೊರ ಪೌಳಿಯ ಮೇಲ್ಚಾವಣಿ ಕೆಲಸಗಳು ಬಾಕಿ ಉಳಿಸಿದ ಕಾರಣ ತಿಳಿದಿಲ್ಲ.

ಬಹುಶಃ ಕೆಳದಿ ಅರಸರಿಗೆ ಸೋತ ರಾಣಿ ತನ್ನ ಕೊನೆಯ ದಿನಗಳನ್ನು ಸೆರೆಮನೆಯಲ್ಲಿ ಕಳೆದದ್ದು ಇರಬಹುದು.
ಬಸದಿಯ ಸುತ್ತಲಿನ ಪೌಳಿ ಸಂಪೂರ್ಣ ನಾಶವಾಗಿದೆ. ಬಸದಿಯ ಹೊರ ಭಾಗದಲ್ಲಿ ಎರಡು ಬಾವಿಗಳು, ವಿವಿಧ ದೇವರುಗಳ ಮೂತರ್ಿಗಳು,  ಶಿಶ್ನ ಶಿಲ್ಪಗಳು, ಜಟ್ಟಿಗನ ಕಲ್ಲು ಅಲ್ಲಲ್ಲಿ ಅನಾಥವಾಗಿ ಬಿದ್ದಿವೆ.
ಮರಕ್ಕೆ ಒರಗಿದ ಮಾಸ್ತಿ ಕಲ್ಲೊಂದು ಹಲ್ಲು ಕಿಸಿದು ನಮ್ಮ ಇತಿಹಾಸದ ಪ್ರಜ್ಞೆಯನ್ನು, ಅವಜ್ಞೆಯನ್ನು ಅಣಕಿಸುತ್ತಿತ್ತ್ತು. ಸುತ್ತಲೂ ಹಬ್ಬಿದ ಕಾಡಿನಲ್ಲಿ 10,000 ಕ್ಕೂ ಹೆಚ್ಚು ಬಾವಿಗಳು! ಇವೆಲ್ಲಾ ಕಾಳು ಮೆಣಸನ್ನು ನೆನಸುವ ಬಾವಿಗಳು. ಜೊತೆಗೆ ಅನೇಕ ಪಾಳು ಮಂಟಪಗಳ ಅರಣ್ಯ ರೋಧನ ಕಾಡಿನ ಕತ್ತಲಲಿ ಕರಗಿ ಹೋಗುತ್ತಲೇ ಇದೆ.


ಹಂಪಿಗಿಂತಲೂ ಹೆಚ್ಚು ವೈಭವ ಪೂರ್ಣವಾಗಿ ಆಳ್ವಿಕೆ ಮಾಡಿದ ಕರಿ ಮೆಣಸಿನ ರಾಣಿಯ ಉಲ್ಲೇಖಗಳು ಇಟಲಿಯ ಪ್ರವಾಸಿಗ 'ಪೆಟ್ರೊ ಡೆಲವೆಲ್ಲನ' ಡೈರಿ ಸಾರಿ ಹೇಳುತ್ತೆ. ಸಂಶೋಧಕರಿಗಂತೂ ಈ ಬೀಡು ಸುಗ್ರಾಸ.

ಇಂತಹ ಅಪೂರ್ವ ಕಲಾ ಸಿರಿ ಮತ್ತು ಒಗ್ಗಟ್ಟಿನ ಸಾಮ್ರಾಜ್ಯಕ್ಕೆ ಹಾಗೂ ವೀರ ರಾಣಿಗೆ ಪ್ರಾಮುಖ್ಯತೆ ನೀಡದೇ ಇರುವುದು ಕನ್ನಡ ನಾಡಿಗೆ ಬಗೆದ ದ್ರೋಹ. ಆದರೂ ನಾಗರಿಕತೆಯ ಜೊತೆಗೆ ಬರುವ ಮಲೀನತೆಯಿನ್ನೂ ತಟ್ಟದೆ ತಣ್ಣಗೆ ಕಾಡೊಳಗೆ ಪವಡಿಸಿಹ ಬಸದಿ ನೋಡಿದರೆ ಯಾವುದೋ ಲೋಕಕ್ಕೆ ಬಂದ ಅನುಭವವಾಗುವುದು.
ವೇಗದ ಬದುಕಿನ ವ್ಯಾಧಿಗಂಟಿದವರು ಒಂದೆರಡು ದಿನವಿದ್ದು ಬಂದರೆ ನಿರಾಳವಾಗುವುದರಲ್ಲಿ ಸಂಶಯವಿಲ್ಲ! ಇನ್ನೇಕೆ ತಡ ಹೊರಡಿ ಮತ್ತೆ.

ಶ್ರೀಧರ್. ಎಸ್. ಸಿದ್ದಾಪುರ.
ವಿಳಾಸ:-       ರಥಬೀದಿ ಸಿದ್ಧಾಪುರ,
          ಸಿದ್ದಾಪುರ ಅಂಚೆ, ಕುಂದಾಪುರ ತಾಲೂಕು,
                  ಉಡುಪಿ ಜಿಲ್ಲೆ 576229.

ಗೃಂಥ ಋಣ-
'ಮಹಾ ಮಂಡಲೇಶ್ವರಿ ರಾಣಿ ಚೆನ್ನಾ ಬೈರಾದೇವಿ' ಕಮಲಾ ಹಂಪನಾ.
'ಬಳ್ಳಿ ಕಾಳ ಬೆಳ್ಳಿ'- ಕೆ. ಎನ್ ಗಣೇಶಯ್ಯ.
'ನೆಡದಷ್ಟೂ ನಾಡು'-ರಹಮತ್ ತರಿಕೆರೆ.


Tuesday, January 1, 2019

ಬಾಬಾ ರಾಮ್ ದೇವನ ಶಿಷ್ಯ ಸಿಕ್ಕಿದ್ದ ಮೊನ್ನೆ!

          ನೆಲ್ಲಿಯ ಮರ. ಮುಂಜಾವಿನ ಮುತ್ತಿನಂತಹ ಸೂರ್ಯ. ನೆಲ್ಲಿಯ ಮರಗಳ ಪುಟಾಣಿ ಎಲೆಗಳೊಂದಿಗೆ ಲಾಸ್ಯವಾಡುತ್ತಿದ್ದ. ಎಲೆಗಳ ಸಂಧಿಯಲ್ಲಿದ್ದ ನೆಲ್ಲಿ ಗಿಡದ ಸಣ್ಣ ಕಾಯೊಂದು ಮೆಲ್ಲಗೆ ಚಲಿಸಿದಂತಾಯಿತು.
 

ಆಶ್ಚರ್ಯ, ಪುಳಕ, ಕೌತುಕ ಒಟ್ಟೊಟ್ಟಿಗೆ! ಇದು ಸಾಧ್ಯನಾ ಎಂದು. ಮತ್ತೆ ಸನಿಹಕ್ಕೆ ಹೋಗಿ ಗಮನಿಸಿದೆ, ಅರೆ ಕಾಯಿಗೆ ಕಾಲುಗಳಿವೆ! ಮತ್ತೆ ನೋಡಿದರೆ ಇವ ನಮ್ಮವ ಊರ್ಣನಾಭ.(ಜೇಡ). ಒಮ್ಮೆಲೆ ಒಂದೇ ಕೈಲಿ ಹಿಡಿದ ಕ್ಯಾಮರದ ಬೆಳಕನ್ನು ಚಕ್ಕನೆ ಚೆಲ್ಲಿದೆ. ಈಗ ಗಮನಿಸಿ ನೋಡಿದೆ, ಅರೇ ಸಣ್ಣ ನೆಲ್ಲಿ ಕಾಯಿಗೆ ಕಾಲು ಬಂತಿರುವ ಹದವಾದ ಜೇಡ. ಎಲೆಯ ನಡುವೆ ಏನು ಮಾಡುತ್ತಿದೆ ಎಂದು ಗಮನಿಸುತ್ತಾ ಹೋದೆ. ಮುಂಜಾವಿಗೆ ನಮ್ಮ ಬಾಬಾ ರಾಮ್ ದೇವ್ ಮಾಡುವ ಆಸನವೊಂದನ್ನು ಎಲೆಗಳ ನಡುವೆ ಮಾಡುತ್ತಾ ವಿಶ್ರಾಂತ ಸ್ಥಿತಿಗೆ ಹೋಯಿತು! (ಎರಡನೇ ಚಿತ್ರ ಗಮನಿಸಿ) ಹೀಗೆ ಕಾಲು ಚಾಚಿ ಮಲಗಿದ ನಮ್ಮ ಊರ್ಣ ನಾಭ ಮತ್ತೆ ಅಲ್ಲಾಡಲೇ ಇಲ್ಲ! 

Epidius species.
ಆಂ ಎನಂದ್ರಿ ಹೆಸರಾ? ಹೆಸರು ಗಿಸರು ಕೇಳಬೇಡಿ! ನಮ್ಮ 'ಸಾಲಿಗ' ತಂಡದ ಅಭಿಜಿತ್ ಡಾಕ್ಟ್ರನ್ನೇ ಕೇಳ್ಬೇಕು!

ಇಂತಿ ಪ್ರವರಂ ಸಮಾಪ್ತಿ.
ಶ್ರೀಧರ್ ಎಸ್. ಸಿದ್ದಾಪುರ.

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...