Sunday, May 12, 2019

ಕನಸುಗಳು unlimited.

       ನಮ್ಮ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿಯ ಗರಿ ಮೂಡಿಸಿಕೊಂಡ ಸಂರ್ದಭ. ಮನದಲಿ ಮತ್ತೊಂದಿಷ್ಟು ಕನಸುಗಳು ಮೊಳೆತವು. 
ನಾಲ್ಕನೆಯ ಬರಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪಡೆದ ಕ್ಷಣ 






ಶಾಲೆಯಲ್ಲಿ ನಡೆದ ಕೆಲವು ಕಾರ್ಯಕ್ರಮಗಳು.... 

ಕೆಲವನ್ನು ಮಾತ್ರ ಇಲ್ಲಿ ಹಾಕಲಾಗಿದೆ. 


ಇಕೋ ಕ್ಲಬ್ ಉದ್ಘಾಟನೆ- ಗಿಡ ನೆಡುವ ಮೂಲಕ..  
2010-11 ರ ಸಮಯ ನಮ್ಮ ಶಾಲೆ ಶಿಕ್ಷಕರೆಲ್ಲಾ ಶಾಲೆಯ ಸುತ್ತಲೂ ಔಷಧೀಯ ಗಿಡಗಳಿರಬೇಕು, ಶಾಲಾ ಎದುರಿಗೆ ಸುಂದರವಾದದೊಂದು ವನವಿರಬೇಕು, ಪುಟ್ಟ ಕೈತೋಟ, ಗಿಡಗಳಿಗೆಲ್ಲಾ ಹನಿ ನೀರಾವರಿ ಮಾಡಬೇಕೆಂದು ನಿರ್ಧರಿಸಿದೆವು.
ರಾಮನ್ ವಿಜ್ಞಾನ ಕಲಿಕಾ ಪ್ರಯೋಗಾಲಯ 

ಆ ವರ್ಷ ಪೋಷಕರ ಮತ್ತು ಊರವರ ಸಹಕಾರದಿಂದ ಶಾಲಾ ಸುತ್ತಲೂ ಒಂದಿಪ್ಪತ್ತು ಗಿಡ ನೆಟ್ಟೆವು. ಕೆಲವೇ ಕೆಲವು ಬದುಕುಳಿಯಿತು. ಮುಂದಿನ ವರ್ಷವೂ ಒಂದತ್ತು ಗಿಡ ನೆಟ್ಟೆವು. ಆ ವರ್ಷ ಮುಖ್ಯ ಶಿಕ್ಷಕರಾಗಿದ್ದ ರಘುರಾಮ್ ಕೊಠಾರಿಯವರು ನಾಲ್ಕು ತೆಂಗಿನ ಸಸಿ ಮತ್ತು ಮೇ ಪ್ಲವರ್ ಗಿಡಗಳನ್ನು ತಂದು ನೆಟ್ಟರು.
ವಿವಿಧ ಗಿಡ ನೆಡುವ ಕಾರ್ಯಕ್ರಮ.. 
ಆ ವರ್ಷವೇ ಅವುಗಳಿಗೆ ಹನಿ ನೀರಾವರಿ ಮಾಡಿಸಬೇಕಿತ್ತು, ಜೊತೆಗೆ ಮೇ ತಿಂಗಳಿನಲ್ಲಿ ಅವನ್ನು ಬದುಕಿಸಿಕೊಳ್ಳುವ ಸವಾಲಿತ್ತು. ನಮ್ಮ ನೆರವಿಗೆ ಬಂದವರು ದಿ. ನಾರಾಯಣ ಶೆಟ್ಟಿ. ಶಾಲಾ ಮಕ್ಕಳಿಗೆ ಎಲ್. ಐ. ಸಿ ಮಾಡಿಸಿ ವಿಮಾ ಶಾಲೆ ಎಂದು ಘೋಷಣೆ ಮಾಡಿದರು. ಎಲ್. ಐ. ಸಿ ಯಿಂದ ಬಂದ ಸ್ವಲ್ಪ ಹಣ ಜೊತೆಗೆ ನಾರಾಯಣ ಶೆಟ್ಟರು ಸ್ವಲ್ಪ ಸೇರಿಸಿ ಧನ ಸಹಾಯ ಮಾಡಿದರು. ಮೊತ್ತ ರೂಪಾಯಿ 12,000 ದಾಟಿತು. ಆ ಹಣದಲ್ಲೇ ಹನಿ ನೀರಾವರಿ ವ್ಯವಸ್ಥೆ ತಲೆ ಎತ್ತಿತ್ತು. ಮೇ ತಿಂಗಳಿನಲ್ಲಿ ನೀರು ಹಾಕಲು ಶಾಲೆಯ ಸನಿಹದ ನಾಲ್ಕನೇ ತರಗತಿಯ ಮಕ್ಕಳು ಒಪ್ಪಿಕೊಂಡರು. ಮುಂದಿನ ಎರಡು ವರ್ಷ ಏಳನೆ ತರಗತಿಯ ವಿನುತಾ ಮೇ ತಿಂಗಳಿನಲ್ಲಿ ನೀರುಣಿಸಿದಳು. ಈಗ ಶಾಲೆಯ ಸುತ್ತ ಮುತ್ತಲೂ ಔಷಧೀ ಗಿಡಗಳು.
ಮಕ್ಕಳ ವಾರದ ಪ್ರಯೋಗ 

ಶಾಲೆಯಲ್ಲಿ ಬೆಳೆದ ಬಾಳೆಹಣ್ಣು ಮಕ್ಕಳಿಂದ ಮಕ್ಕಳಿಗೆ ..... 

ಮಕ್ಕಳ ಪ್ರವಾಸ 

     ಶಾಲೆಯಲ್ಲಿರುವ ಅನೇಕ ವಿಜ್ಞಾನ ಮಾದರಿಗಳನ್ನು, ರಾಸಾಯನಿಕಗಳು, ಗಾಜಿನ ಉಪಕರಣಗಳು, ಜೀವಿಗಳ ಮಾದರಿಗಳು, ಮಾನವ ದೇಹದ ಅಂಗ ರಚನೆಗಳನ್ನು ಮಕ್ಕಳಿಗೆ ತೋರಿಸಲು ಅವನ್ನೆಲ್ಲಾ ಜೋಡಿಸಿಕೊಂಡು ವ್ಯವಸ್ಥಿತವಾಗಿ ಇರಿಸಲು ಮಕ್ಕಳ ಪ್ರಯೋಗಾಲದ ಜರೂರಿತ್ತು. ರೋಟರೀ ಕ್ಲಬ್ ಸಿದ್ದಾಪುರ ಹೊಸಂಗಡಿ ಇವರ ಸಹಾಯದಿಂದ ಪ್ರಯೋಗಾಲದ ಮಾಡಿಗೊಂದು ರೂಫಿಂಗ್ ವ್ಯವಸ್ಥೆ ಮಾಡಿಕೊಟ್ಟರು. ಈಗ ನಮ್ಮ ಪ್ರಯೋಗಾಲಯ ನವ ವಧುವಿನಂತೆ ಸಿಂಗಾರಗೊಂಡಿದೆ. ಸ್ಥಳೀಯರಾದ ವಿಶ್ವನಾಥ್ ಭಟ್ ಇವರು ಹೊಸದೊಂದು ಕವಾಟು ತೆಗೆಸಿಕೊಟ್ಟರು. ರಘುಶೆಟ್ಟಿ ನಡುಮಕ್ಕಿಯವರು ಹತ್ತು ಪ್ಲಾಸ್ಟಿಕ್ ಕುಚರ್ಿಯನ್ನು ಕೊಡುಗೆಯಾಗಿ ನೀಡಿದರು. ಡಾ.ಗುರುದತ್ತ್ ಕೊಡ್ಗಿ, ಅನಂತ ಕೊಡ್ಗಿ ಮತ್ತು ತಿಮ್ಮಪ್ಪ ಹೆಬ್ಬಾರ್ ಮನೆಯವರು ಕೈತೋಟಕ್ಕೆ ಸುಂದರ ಬೇಲಿ ಮಾಡಿಕೊಟ್ಟಿದ್ದಾರೆ.
ಸ್ವಚ್ಛತಾ ಅಭಿಯಾನ 


ಅರಳಿ ನಿಂತ ಗಿಡ ಬಳ್ಳಿಗಳು.. 

ಕೋಳಿ ಸಾಕಾಣಿಕಾ ತಂತ್ರಗಳು 

ತೋಟದಲ್ಲಿ ಕೃಷಿ ತರಬೇತಿ 

ಪರಿಸರ ಮಿತ್ರ ತಂಡ ಶಾಲೆಗೆ ಭೇಟಿ ನೀಡಿದ ಸಮಯ 


ಕಾರ್ಖಾನೆ ಭೇಟಿ ... 

ಪರಿಕಲ್ಪನೆಯ ಆಧಾರಿತ ವಿಜ್ಞಾನ ಮೇಳ ... 

ಕನಸುಗಳು 

ಶಾಲೆಗೊಂದು ಹೊಸ ಕಟ್ಟಡವಾಗಬೇಕು (ಹೆಂಚಿನ ಮಾಡು). ಜೊತೆಗೆ ಇಂಗು ಗುಂಡಿ, ಮಳೆ ನೀರಿನ ಕೊಯ್ಲು, ಗೊಬ್ಬರದ ಗುಂಡಿ,  ಇಂಗ್ಲೀಷ್  ಕಲಿಕೋಪಕಾರಣಗಳು,  ಔಷಧಿ ಮೂಲಿಕೆಗಳ ವನವಾಗಬೇಕು. ಊರವರು, ಪೋಷಕರು, ಹಿರಿಯ ವಿದ್ಯಾಥರ್ಿಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.

ಶ್ರೀಧರ್ ಎಸ್. ಸಿದ್ದಾಪುರ.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...