ದಶಕಗಳ ಹಿಂದೆ ಈ ಹೆಸರಿನ ಚಲನಚಿತ್ರ ತೆರೆಕಂಡಿತ್ತು. ನೆನಪು ತಪ್ಪಿಲ್ಲದಿದ್ದರೆ ಕೋಮಲ್ ನಾಯಕ. ಆತನದು ಆ ಚಿತ್ರದಲಿ ತಡೆರಹಿತ ಕೊರೆತ. ರಿಯಲಿ ರೀಲ್ ಗರಗಸನೇ ಈತ! ನೀವೇನಂತೀರಿ?
ನಮ್ಮ ಕತೆಯ ಗರಗಸನೇ ಬೇರೆ. ಯಾವ ನಾಯಕನಿಗಿಂತಲೂ ಕಡಿಮೆ ಏನಿಲ್ಲಾ. ಪರಿಸರ ಸ್ನೇಹಿ, ಹತ್ತಾರು ಜೀವಿಗಳೊಂದಿಗೆ ಸಹ ಜೀವನ ನಡೆಸಬಲ್ಲ! ತನ್ನದಲ್ಲದ ವಸ್ತು ಕ್ಷೇತ್ರವನ್ನು ಮುಟ್ಟಲಾರ! ಕಮರ್ಶಿಯಲ್ ನಾಯಕನಿಗಿರುವ ಅರ್ಹತೆಯಲ್ಲಾ ಇವೆ. ಡ್ಯಾನ್ಸ ಒಂದನ್ನು ಬಿಟ್ಟು! ಅದನ್ನೂ ಮಾಡುತ್ತಾನೊ ಗೊತ್ತಿಲ್ಲ. ಸಂಭಾವನೆ ಮಾತ್ರ ಶೂನ್ಯ. ಕೊಟ್ಟರು ಇಸಕೊಳ್ಳದ ಪುಣ್ಯಾತ್ಮ. ನಾವೆಷ್ಟೇ ಅವನಿಗೆ ಕೃತಜ್ಞರಾಗಿದ್ದರೂ ಕಡಿಮೆಯೆ. ಸದಾ ಕ್ರಿಯಾಶೀಲ ಬಿಡುವಿಲ್ಲದ ವೇಳಾಪಟ್ಟಿ.
ಅಡಗಿ ಕೂತ ಕದೀಮರನ್ನು ಅರಸರಸಿ ಹೊಡೆವ. ಅವನಿಗೆ ಬೇಕಾದವರನ್ನು ಮಾತ್ರ!! ಇವನ ಕಷ್ಟಕ್ಕೆ ನೀವೇನೇ ಕೊಟ್ಟರು ಕಡಿಮೆಯೇ. ಯಾರೆಂದು ಕೊಂಡಿರಿ ನೀವು? ನಿಮ್ಮ ಊಹೆ ಸರಿ. ಇದೊಂದು Myrmarachne ಜೇನಸ್ ಗೆ ಸೇರಿದ ಜೇಡ. ನಮ್ಮ ಬಿದಿರ ಕಟ್ಟೆಯನ್ನು ಅನುಕರಿಸುತ್ತಾ ಸುತ್ತಾಡುತ್ತಾನೆ. ನಿಮಗೆ ಬಿದಿರ ಕಟ್ಟೆ ನೆನಪಾದೀತು. ಇಂದಿನ ಯುಗದಲ್ಲಿ ತನ್ನನ್ನು ಎಲ್ಲರೂ ಗುರುತಿಸಲಿ ಎಂದೇ ಬಯಸುವಲ್ಲಿ ಈತ ಯಾರೂ ಗುರುತಿಸದಿರಲಿ ಎಂದು ವೇಷಮರೆಸಿಕೊಂಡೇ ಇರುವವನು. ಎಲೆ ಮರೆಯ ಕಾಯಿಯಂತೆ.
ಇವನ ಬೇಟೆ ಹತ್ತಿರಕ್ಕೆ ಬಂದರೆ ಹರೋಹರ! ಒಂದೇ ಗುಕ್ಕಿಗೆ ತನ್ನ ಗರಗಸವನ್ನು ಚಾಚಿ ರಕ್ತ ಚಲ್ಲಾಡುತ್ತಾನೆ. ಇವನ ಹಿಡಿತಕ್ಕೊಮ್ಮೆ ಸಿಕ್ಕಿದರೆ ಮುಗೀತು. ಅಂತಹ ಹಿಡಿತ. ಅನೇಕ ಜೇಡಗಳು, ಬಿದಿರ ಕಟ್ಟೆಗಳು (ಕಟ್ಟೆ ಹಿಡಿದ ಚಿತ್ರಗಳು ಇನ್ನೂ ಸಿಕ್ಕಿಲ್ಲ!! ) ಇವನ ಆಹಾರ.
No comments:
Post a Comment