ಸುಸಂಜೆಯಲಿ
ಕವಿ ಮನೆಗೆ ಭೇಟಿ ಇತ್ತು ಕವಿ ಶೈಲ ಹೊಕ್ಕ ಹೊತ್ತದು. ಮುಕ್ಕೋಟಿ ಜೀವರಾಶಿಗಳ ಗೀತ ಗಾಯನ ನಾವು ಕವಿ
ಶೈಲಕ್ಕೆ ಕಾಲಿಟ್ಟಾಗ ಶುರುವಿಟ್ಟಿತ್ತು. ಹಕ್ಕಿಗಳು ಮನೆ ತಲುಪುವ ಕಾತುರತೆಯಲ್ಲಿದ್ದವು. ಜೀರುಂಡೆಗಳು
ತಮ್ಮ ಶೃತಿ ಪೆಟ್ಟಿಗೆ ತೆಗೆದು ವಾದನಕ್ಕೆ ಭರ್ಜರಿ ತಯಾರಿಯಲ್ಲಿದ್ದವು. ಒಂದಿಷ್ಟು ಜನ ಸಹೃದಯರು ಸೃಷ್ಠಿಯ
ಕೌತುಕವನು ಕಣ್ ತುಂಬಿಕೊಳ್ಳಲು ಕಾತರಿಸಿದ್ದರು. ಕವಿ ವರೇಣ್ಯರ ಹಸ್ತಾಕ್ಷರಕ್ಕೆ ಸಾಕ್ಷಿಯಾಗಿ ಕಲ್ಲು
ಹಾಸಿನಲಿ ಕೂತು ಕವಿ ಸಮಯವ ಆಹ್ವಾನಿಸುತ್ತಾ ರವಿ ಆಗಮನವನ್ನೇ ಧ್ಯಾನಿಸುತಲಿತ್ತು ಮನ. ಎಷ್ಟು ಬೈಗು
ಮತ್ತು ಬೆಳಗಿನ ಚಿತ್ತಾರವನು ಉಂಡರೋ ಆ ಮಹಾ ಕವಿ! ಆ ರಸ ಗಳಿಗೆಯ ಮೆಲುಕು ಹಾಕುತ್ತಾ ಈ ಸಮಯವನು ಮನೋಹರಗೊಳಿಸಿತ್ತು.
ಆ ಮಧುರಾತಿ ಮಧುರ ಮುಸ್ಸಂಜೆಯ ಹಿಂಬೆಳಕಿನ ಚಿತ್ರಗಳು ನಿಮ್ಮ ನೋಟಕ್ಕೆ. ಒಪ್ಪಿಸಿಕೊಳ್ಳಿ.
No comments:
Post a Comment