Tuesday, September 6, 2016

ನನ್ನ ಊರು

       ನನ್ನ ಬಾವ ಕೋಶದ ಭಿತ್ತಿಯೊಳಗೆ ಹಸಿರಾಗಿರುವುದು ಸ್ವಲ್ಪ ಕಾಲ ನನ್ನ ಸಲಹಿದ ಆ ನನ್ನ ಊರು. ಮರೆತರೂ ಮರೆಯದ, ಮರೆಯಲಾಗದ ಅನುಭೂತಿಗಳನ್ನಿತ್ತ ಆ ನನ್ನ ಊರು. ಮುಗಿಯದ ಸುಂದರ ಬುತ್ತಿ ಗಂಟು. ಮತ್ತೊಮ್ಮೆ ಹುಟ್ಟ ಬೇಕು ನಾ ಅದೇ ಊರಲ್ಲಿ ಆದರೆ....................... ನಾ ಬೆಳೆದ ಆ ಊರಿನ ಕುರಿತು ನಾ ಬರೆದ ಕಿರು ಲೇಖನ 'ವಿಶ್ವವಾಣಿ' ಪತ್ರಿಕೆಯ ಭಾನುವಾರದ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಗೊಂಡಿದೆ. ಓದಿರಿ ಇಷ್ಟವಾದರೆ ಪ್ರತಿಕ್ರಿಯಿಸಿ.



ದೋಣಿಯ ಹುಟ್ಟು ನೀರಲಿ ಬಿತ್ತು
ಎತ್ತರದ ಮರಗಳ ಸಾಲು. ಗಾಢ ಹಸಿರ ಎಲೆ ಬಿಸಿಲು ನೆಲ ತಾಗದಂತೆ ಮಾಡಿದ್ದವು. ಬಿಸಿಲುಕೋಲುಗಳು. ದಾರಿಗುಂಟ ವಿವಿಧ -ರ್ನ್ಗಳು. ಸಣ್ಣ ಗುಡ್ಡದ ತುದಿಯಲ್ಲಿ ನಮ್ಮ ಮನೆ. ಮನೆ ಪಕ್ಕ ಹಳ್ಳ. ಹಳ್ಳ ದಾಟಿ 2 ಮೈಲು ಹೋದರೆ ಮೂರ್ನಾಲ್ಕು ಮನೆಗಳಿರುವ ಚಿಕ್ಕ ಹಳ್ಳಿ. ದೊಡ್ಡ ಹಳ್ಳದಿಂದೊಂದು ಕವಲು ಒಡೆದು ಝರಿಯಂತೆ ಗದ್ದೆ ಕಡೆ ಓಡುವುದು. ಝರಿಯ ಮೇಲ್ಭಾಗ ದಲ್ಲೇ ನಮ್ಮ ಮನೆ. ಎದುರಿಗೆ ಕಾಡು ಕಾಲು ಚಾಚಿ ತಣ್ಣಗೆ ಮಲಗಿತ್ತು. ಶಾಲೆ ಇರದ, ಟಿ.ವಿ. ಇರದ ನನ್ನೂರಿಗೆ ಹೊರ ಜಗತ್ತಿನೊಂದಿಗೆ ರೇಡಿಯೋ ಒಂದೇ ಕೊಂಡಿ. ಒತ್ತಡಗಳಿಲ್ಲದ, ಅಸೀಮ ಸಂತೋಷ ತುಂಬಿದ್ದ ಕಾಲ!ಊರಿಗೊಂದೇ ಬಸ್ಸು ಶಂಕರ ವಿಠಲ. ದಿನಕ್ಕೆ ಎರಡೋ ಮೂರೋ ಟ್ರಿಪ್ ಹೊಡೀತಿತ್ತು. ಬಸ್ಸು ನನ್ನೂರಿನಿಂದ 3 ಮೈಲು ದೂರದಲ್ಲಿ ನಿಲ್ಲುತ್ತಿತ್ತು. ದೋಣಿ ಕಡುವಿನಲ್ಲಿ ಹೊಳೆ ಇಳಿದು, ಪಂಚೆ ಎತ್ತಿ, ಚಡ್ಡಿ ಒದ್ದೆ ಮಾಡಿಕೊಂಡು ದಾಟಬೇಕಿತ್ತು. ಬಸ್ಸಿಳಿದು ದಾರಿಗುಂಟ ನಡೆವ ಖುಷಿಯೇ ಬೇರೆ. ಬಿಸಿಲು ತಾಕದ ಬಳಸು ದಾರಿ. ಬಾನಿಗೆರಚಿದ ಮರಗಳು.


ಕಾಡು ಸುತ್ತುತ್ತಾ ಸಾಗುತ್ತಿದ್ದೆವು. ಮನೆ ತಲುಪಿದೊಡನೆ ತಾಜಾ ಆಕಳ ಹಾಲಿನ ಕಾಫಿ ಕಾಯುತ್ತಿತ್ತು. ಕಾಫಿ ಸುವಾಸನೆ ಅಡರಿದರೆ ನಡೆದ ದಣಿವೆಲ್ಲಾ ಮಾಯ.ಅಂದು, ಯಾವುದೋ ದಿನ, ವಾರ, ತಿಥಿ, ನಕ್ಷತ್ರಗಳ ಪರಿವೆ ಇಲ್ಲದ ಕಾಲ! ನಾನು ಅಕ್ಕ ಮತ್ತು ಅಣ್ಣ ಚಕ್ರಾ ನದಿಯಲ್ಲಿ ದೋಣಿ ಬಿಡಲು ಹೊರಟೆವು. ನದಿಯಲ್ಲಿ ನೀರು ತುಂಬಾ ಇತ್ತು. ಅಣ್ಣನೇ ನಾವಿಕ. ಹೊರಟಿತು ನೋಡಿ ನಮ್ಮದೋಣಿ ಸವಾರಿ. ನಡು ಹೊಳೆಗೆ ಬಂದಿದ್ದೆವು, ದೋಣಿ ಹುಟ್ಟು ಜಾರಿ ನದಿಗೆ ಬಿತ್ತು. ಹುಟ್ಟು ತೇಲುತ್ತಾ ಸಾಗುತ್ತಿದ್ದದ್ದು ಕಾಣಿಸುತ್ತಿತ್ತು. ಅಕ್ಕ ನಾನು ಗಾಬರಿ ಬಿದ್ದೆವು. ಅಣ್ಣ ದುಡುಂ ಎಂದು ನೀರಿಗೆ ಧುಮುಕಿ ಅದು ಹೇಗೊ ಹುಟ್ಟು ಹುಡುಕಿದ! ನಾವಿಬ್ಬರೂ ದೋಣಿಯೊಂದಿಗೆ ಕೆಳಮುಖವಾಗಿ ಪ್ರಯಾಣ ಹೊರಟಾಗಿತ್ತು. ಚಕ್ರಾ ನದಿಯಲ್ಲಂತೂ ವಿಪರೀತ ಕಲ್ಲು. ಯಾವ ಕಲ್ಲಿನ ಮೇಲೆ ಪ್ರಾಣ ಹೋಗುವುದೊ ಎಂಬ ಭಯ.
 ಚಿತ್ರ ವಿಚಿತ್ರ ಹೆಸರಿನ ತಳ ಕಾಣದ ಗುಂಡಿಗಳು ಹೊಳೆಗುಂಟ ಹರಡಿದ್ದವು. ಈಜುತ್ತಾ ಬಂದು ಅಣ್ಣ ದೋಣಿಯನ್ನು ಹಿಡಿತಕ್ಕೆ ತಂದ. ಅದಾಗಲೇ ನಮಗಾಗಿ ಹುಡುಕಿ ಸುಸ್ತಾಗಿ ದೊಡ್ಡ ಹೊಳೆ ಕಡುವಿಗೆ ದೊಡ್ಡಪ್ಪ ನುಕ್ಕಿ ಅಡ್ರು ಹಿಡಿದು ಬಂದಿದ್ದರು. ‘ಹತ್ತಿ ಬೆಟ್ಟುಎಂದು ಕೂಗಿದ ಕೂಡಲೆ, ದೋಣಿಯನ್ನು ಬೆಟ್ಟಿಗೆ ತಂದು ಪರಾರಿಯಾದೆವು. ಆಮೇಲೆ ಸಿಕ್ಕಿಕೊಂಡೆವು. ಯಾರಿಗೆಷ್ಟು ಪೆಟ್ಟು ಬಿತ್ತೆಂದು ಈಗ ನೆನಪಿಲ್ಲ. ಮನೆ ಸಮೀಪದ ಹಳ್ಳ ದಲ್ಲಿ ದಿನಾಲೂ ಈಜಿದ್ದು, ಝರಿಯಲ್ಲಿ ಬಾಳೆದಿಂಡು ಕತ್ತರಿಸಿ ದೋಣಿ ಮಾಡಿ ಅದರ ಮೇಲೆ ಕುಳಿತು ತೇಲಿದ್ದು, ಬ್ರಹ್ಮನ ಗುಂಡಿ, ರಾಕ್ಷಸ ಗುಂಡಿಯಲ್ಲಿ ಈಜು ಕಲಿತಿದ್ದು, ಬಿಚ್ಚ ಹೋದರೆ ಸಾವಿರ ನೆನಪಿನ ಬುತ್ತಿ ನಮ್ಮೂರು. ಆಗೆಲ್ಲಾ ಹಳ್ಳಿ ಯವರೇ ಸೇರಿ ಹಳ್ಳಕ್ಕೆ ಕಟ್ಟುಗಳನ್ನು ಹಾಕುತ್ತಿದ್ದರು. ನೀರು ಶೇಖರವಾಗಿ ಪೂರ್ತಿ ತೋಟಕ್ಕೆ ಹೋಗುವಂತೆ, ಗದ್ದೆಗೆ ಬರುವಂತೆ ಮಾಡಿಕೊಳ್ಳುತ್ತಿದ್ದರು.
ನೀರಿನ ನಿರ್ವಹಣೆಯನ್ನು ನಮ್ಮ ಹಿಂದಿನವರಿಂದ ಕಲಿಯಬೇಕು. ಈಗ ಮೇಘ ಮುಖಿ ಮರಗಳೂ ಇಲ್ಲ, ಹಳ್ಳ ಕೂಡ ಮನುಷ್ಯನ ಹಣದಾಹಕ್ಕೆ ಸ್ಲಿಮ್ ಆಗಿದ್ದಾಳೆ. ಕಾಡಿದ್ದ ಜಾಗಗಳಲ್ಲಿ ತೋಟಗಳೆದ್ದಿವೆ. ನಾವು ತಿನ್ನುತ್ತಿದ್ದ ಕಾಟು ಮಾವಿನಹಣ್ಣಿನ ಮರಗಳು ಕಿಟಕಿ ಬಾಗಿಲುಗಳಾಗಿ ಯಾರದೋ ಮನೆ ಸೇರಿವೆ. 60-70 ಆಕಳಿದ್ದ ಕೊಟ್ಟಿಗೆಯಲ್ಲಿ ಸಂಖ್ಯೆ ಎರಡಕ್ಕಿಳಿದಿದೆ. ಉಡುಪಿ- ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿ ಹರಡಿದ ಕಮ್ಮರಪಾಲೆಂಬ ನಂದನವನ ನನ್ನ ಭಾವಕೋಶದ ಭಿತ್ತಿಯೊಳಗಿನ್ನೂ ಹಸಿರು ಹಸಿರು ಹಸಿರು.
ಶ್ರೀಧರ್. ಎಸ್ ಸಿದ್ದಾಪುರ

Saturday, July 2, 2016

ಕಣ್ಣ್ ಕಟ್ಟಿದ ಕುದುರೆ ಓಟ...

ಬದುಕಲು ಎಂಥಹ ಹೋರಾಟ ಮಾಡಬೇಕು ಇಂದಿನ ಯುಗದಲ್ಲಿ ಅಲ್ಲವೇ? ನಿಂತು ಯೋಚಿಸಿದರೆ ದುಡ್ಡಿನ ಹಿಂದೆಯೇ ನಮ್ಮ ಕಣ್ಣು ಕಟ್ಟಿದ ಕುದುರೆ ಓಟ ಎನಿಸುವುದಿಲ್ಲವೇ, ನಿಮಗೆ? ಇದಕೆ ಕೊನೆ ಎಲ್ಲಿ? ಇಂತಹ ಹಲವು ಪ್ರಶ್ನೆಗಳಾಗಿ ಹಾಗೇ ಉಳಿದು, ಇನ್ನು ಅನೇಕ ಪ್ರಶ್ನೆಗಳಿಗೆ ನಾಂದಿ ಹಾಡಿ ಪ್ರಶ್ನೆ ಮೂಡಿಸಿ, ಗೊಂದಲ  ಉಳಿಸಿ ಹೋಗಿವೆ.... ಇದೇ ಪ್ರಶ್ನೆಗಳಿದ್ದ ವಿಶ್ವವಾಣಿಯ ಲೇಖನವೊಂದು ಗಮನ ಸೆಳೆಯಿತು, ನಿಮಗಾಗಿ.....ಓದಿ ಪ್ರತಿಕ್ರಿಯಿಸಿ....


Sunday, May 8, 2016

ಎಲ್ಲಿ ಹೋದಿರಿ..


ಎಲ್ಲಿ ಹೋದಿರಿ ಸ್ನೇಹಿತರೇ
ಸಂತಸದ ನಗೆಯ ಚಲ್ಲಿ
ಬರಲಾರವೇ ಮತ್ತೆ  ಕ್ಷಣಗಳು ಇಲ್ಲಿ!

Sunday, May 1, 2016

ಒಂಟಿ ಹಕ್ಕಿಯ ಹೋರಾಟ..

    ಪ್ರಕೃತಿ ಎಷ್ಟು ವಿಚಿತ್ರ ಮತ್ತು ವಿಸ್ಮಯ. ಅಂತಹದೊಂದು ಪ್ರಸಂಗ ಮೊನ್ನೆಯೆಷ್ಟೆ ನಡೆಯಿತು. ಒಂದು ಹಕ್ಕಿ ದೊಡ್ಡ ಮರದಲ್ಲಿ ಗೂಡೊಂದ ಕಟ್ಟಿತ್ತು. ಮೂರೊ ನಾಲ್ಕೋ ಮರಿಗಳಿದ್ದವು. ತನ್ನ ಗೂಡು ಯಾರಿಗೂ ತಿಳಿಯಬಾರದೆಂದು ಎಲ್ಲೆಲ್ಲೋ ಹಾರಿ ನನ್ನ ದಾರಿ ತಪ್ಪಿಸುವ ಕೆಲಸ ಮಾಡಿತು. ಎಷ್ಟು ಹುಡುಕಿದರೂ ಗೂಡು ಸಿಗಲಿಲ್ಲ! ಯಾವುದೊ ಮರದ ಮೇಲೆ ಕೂತು ಹಕ್ಕಿ ಇನ್ನೆಲ್ಲಿಗೊ ಹಾರಿ ದಾರಿ ತಪ್ಪಿಸಿತು. ಸಣ್ಣಿಂದ ನನಗೆ ಹಕ್ಕಿಯಾಗಬೇಕೆಂಬ ಬಹಳ ಆಸೆ. ಈ ಹಕ್ಕಿಯ ಪಡಿಪಾಟಲು ನೋಡಿ ಬೇಡವೊ ಬೇಡ ಹಕ್ಕಿ ಜನ್ಮ ಎಂದೆನಿಸಿತು.

      ಆದರೆ ನಿನ್ನೆ ಅದು ಸಿಕ್ಕಿ ಬಿತ್ತು. ಹೇಗೆಂದರೆ ಹಾನರ್್ಬಿಲ್ ಮುತ್ತಿಗೆಯಿಂದ. ಆರೇಳು ಹಾನರ್್ಬಿಲ್ಗಳು ಏಕಾ ಏಕಿ ಅದರ ಗೂಡ ಸುತ್ತ ಗುಡಾರ ಹೂಡಿದವು. ಹೇಗಾದರೂ ಮಾಡಿ ಮರಿ ತಿನ್ನುವಾಸೆ ಅವಕ್ಕೆ. ಈ ಪುಟ್ಟ ಹಕ್ಕಿ ಬಿಡಬೇಕಲ್ಲ. ಅಷ್ಟೂ ಹಾನರ್್ಬಿಲ್ಗಳನ್ನು ಒಂದೇ ಏಟಿಗೆ ಓಡಿಸಿ ಬಿಟ್ಟಿತು.
HORN BILLS






Thursday, April 21, 2016

'ನೀರು' ಕುಡಿಯುವವರೆಲ್ಲರೂ ಓದಲೇ ಬೇಕಾದುದು...


    ಆರ್ಥಿಕತೆಯ ಬೆನ್ನೇರಿ ಹೊರಟ ನಮಗೆ ಯಾವುದನ್ನು ಕಾಣುವ ತಾಳ್ಮೆಯಾಗಲಿ, ಸಮಯವಾಗಲಿ, ಸಂವೇದನೆಗಳ ಇಲ್ಲವಾಗಿಸಿಕೊಂಡು ನರಳುತ್ತಿದ್ದೇವೆ. ತಾತ, ಮುತ್ತಾತ ಮಾಡಿದ ನೀರಿನ ಆಸ್ತಿಯನ್ನೂ ಕರಗಿಸ ಹೊರಟು ನಮ್ಮ ಅಂಡನ್ನೇ ನಾವೇ ಸುಡಲು ಹೊರಟಿದ್ದೇವೆ. ಸಮಯ ಮೀರುವ ಮುಂಚೆ 'ನೀರಿನ' ಕುರಿತು ಯೋಚಿಸುವುದೊಳಿತು. ಸರಕಾರಿ ಕೃಪಾ ಪೋಷಿತ ನೀರಿಂಗಿಸುವ ಕಾರ್ಯಕ್ರಮಗಳು ಕೇವಲ ಹಾಳೆಯ ಮೇಲಿನ ಹಕ್ಕೀಕತ್ತುಗಳಾಗಿ ಉಳಿದಿವೆ. ನಮ್ಮ ಮಕ್ಕಳು, ಮೊಮ್ಮಕ್ಕಳು ನಮಗೇನು ಉಳಿಸಿದ್ದೀರಿ ಎಂದು ಕೇಳುವ ಪರಿಸ್ಥಿತಿ ತಂದು ಕೊಳ್ಳದಂತಾಗದಿರಲಿ. ಇಲ್ಲಿ ವಿಶ್ವವಾಣಿಯ ಎರಡು ಲೇಖನಗಳಿವೆ. ದಯವಿಟ್ಟು ಓದಿ.


Monday, April 4, 2016

ಕಾಡು ಕೃಷಿಯ ತೋಟದ ನಡುವೆ ಮಕ್ಕಳ ಕಲಿಕೆ.....


    ನಿಶ್ಯಬ್ದ ಏಕಾಂತ. ಮೇಲು ಗೊಬ್ಬರ ಇಲ್ಲದೇ ಹುಲುಸಾಗಿ ಬೆಳೆದ ಅಡಿಕೆ ಗಿಡಗಳು. ತರೇವಾರಿ ಬೆಳೆಗಳು, ನಡುವೆ ನಲಿವ ಮಕ್ಕಳು. ಕಲಿಕೆಗೆ ಹೊಸ ಸ್ಪರ್ಶ ನೀಡುವ ಉದ್ದೇಶದಿಂದ, ಶಾಲಾ ಕೊಠಡಿ ಒಳಗಿನ ಬೋಧನೆಯ ಏಕತಾನತೆಯನ್ನು ಮುರಿದು, ಮಕ್ಕಳಿಗೆ ಕೃಷಿ ಅನುಭವಗಳು ಸಿಗುವಂತಾಗಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇಲ್ಲಿನ ವಿದ್ಯಾಥರ್ಿಗಳಿಗೆ ಪ್ರಸನ್ನ ಅಡಿಗ ಕೊಡ್ಲಾಡಿ ಇವರ ತೋಟಕ್ಕೆ ಹೊರಸಂಚಾರ ಆಯೋಜಿಸಲಾಯಿತು.
    'ಸಹಜ' ತೋಟದಲ್ಲೊಂದು ದಿನ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಶೋಕ್ ಕಾಮತ್ ವೆನಿಲಾ ಹೂವನ್ನು ಪರಾಗ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.









ಕಾರ್ಯಕ್ರಮದ ಕೇಂದ್ರ ಬಿಂದು ಪ್ರಸನ್ನ ಅಡಿಗರು ಸಹಜ ಕೃಷಿಯ ತಮ್ಮ ತೋಟದ ಇಂಚಿಂಚು ತೆರೆದು ತೋರಿಸಿದರು. ಅಡಿಕೆ ಕೃಷಿ ಮಾಡುವ ವಿಧಾನಗಳು, ಬೀಜಗಳ ಆಯ್ಕೆ , ಗೊಬ್ಬರವಿಲ್ಲದೇ ಅಡಿಕೆ ಬೆಳೆಸುವ ವಿಧಾನವನ್ನು ಮಕ್ಕಳಿಗೆ ತಿಳಿ ಹೇಳಿದರು. ಅಡಿಕೆ ಕೊಯ್ಲು ಮಾಡುವ ಕ್ರಮ, ನೀರು ಹನಿಸುವುದನ್ನು ವಿದ್ಯಾಥರ್ಿಗಳೊಂದಿಗೆ ಚಚರ್ಿಸಿದರು.
    ಹೈನುಗಾರಿಕೆಯ ಅನೇಕ ಒಳ ಸುಳಿಗಳನ್ನು ತಿಳಿಸಿಕೊಟ್ಟರು. ಗೋವುಗಳಿಗೆ ಬೇಕಾದ ಮೇವಿನ ಬೆಳೆ ತೆಗೆಯುವುದು. ಗೋವುಗಳಿಗೆ ನೀಡುವ ಪ್ರಮಾಣವನ್ನು ತಿಳಿಸಿದರು. ಗೋಬರ್ ಅನಿಲ ಸ್ಥಾವರದ ಪ್ರಾಮುಖ್ಯತೆ ವಿವರಿಸಿದರು. ಅನಿಲ ಸ್ಥಾವರ ಸ್ಥಾಪಿಸುಲು ಸಿಗುವ ಸೌಲಭ್ಯಗಳನ್ನು ಮಕ್ಕಳಿಗೆ ವಿವರಿಸಿದರು. ವಾಯು ಮಾಲಿನ್ಯ ನಿಯಂತ್ರಿಸಲು, ಕಾಡು ಉಳಿಸಲು ಇದೊಂದು ಪಯರ್ಾಯ. ಇದರೊಂದಿಗೆ ವೆನಿಲಾ ಕೃಷಿ, ಕಾಳು ಮೆಣಸಿನ ಕೃಷಿ, ಜೇನು ಕೃಷಿ, ಜೇನು ತುಪ್ಪ ತೆಗೆಯುವ ಯಂತ್ರದೊಂದಿಗೆ ತುಪ್ಪ ತೆಗೆಯುವ ಕ್ರಮ ತಿಳಿಸಿಕೊಟ್ಟರು.
    ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ, ಸಹ ಶಿಕ್ಷಕಿಯರಾದ ಮೀನಾಕ್ಷಿ, ಗೀತಾ ಹೆಗ್ಡೆ, ಮಮತಾ ಎಸ್. ಸಿದ್ದಾಪುರ, ಸಂಗೀತ, ಶ್ರೀಧರ ಎಸ್. ಸಿದ್ದಾಪುರ ಉಪಸ್ಥಿತರಿದ್ದರು.

Friday, March 18, 2016

ಪ್ರಜಾವಾಣಿಯಲ್ಲಿ ಪ್ರೇಮ ಪತ್ರ...

ಪ್ರಜಾವಾಣಿಗೆ ಬರೆದ ನನ್ನೊಂದು ಲೇಖನ ಮೆಚ್ಚುಗೆ ಗಳಿಸಿದೆ. ಸಾಧ್ಯವಾದರೆ ಓದಿ ಪ್ರತಿಕಿಯಿಸಿ.
A love letter.

Thursday, August 6, 2015

ಪುಟ್ಟ ಕನಸುಗಳ ಬೆನ್ನತ್ತಿ

ಜಾರುತಿರುವ ದೊಡ್ಡ ಕನಸ ದೋಣಿ ಬಿಟ್ಟು, ಪುಟ್ಟ ಪುಟ್ಟ ಕನಸುಗಳ ಬೆನ್ನತ್ತಿ ಹೋದ ಅನುಭವಗಳ  ಸಣ್ಣ ಕಥನ ಕನ್ನಡ ಪ್ರಭದಲ್ಲಿ ಮೊನ್ನೆಯಷ್ಟೇ ಪ್ರಕಟಗೊಂಡಿತು! ಓದಿ ಪ್ರತಿಕ್ರಿಯಿಸಿ

Friday, June 5, 2015

ನಮ್ಮ ಅನ್ನದ ಬಟ್ಟಲಿಗೆ ನಾವೇ ಸುರಿದುಕೊಂಡ ವಿಷ...

 ಅರಿವು ನಮ್ಮಲ್ಲಾಗ ಬೇಕಾ ಅಥವಾ ನಾವೇ ಅರಿವನ್ನು ವಿಸ್ತರಿಸಿಕೊಳ್ಳಬೇಕಾ? ಪ್ರಶ್ನೆಗಳೇಳದೆ ಉತ್ತರವೂ ಹೊಳೆಯದು.

30 ಕ್ಕೆ ಶುಗರು, 35 ಸಂಧಿವಾತ ನಮ್ಮನ್ನಾವರಿಸುವ ಈ ಸನ್ನಿವೇಶದಲ್ಲಿ ನಾವೆಲ್ಲಾ ಯೋಚಿಸ ಬೇಕು! ಎಲ್ಲದಕ್ಕೂ ಹೆರಿಡಿಟರಿಯನ್ನು ದೂರಿದರೆ ಪ್ರಯೋಜನ ಉಂಟೇ? ನಮ್ಮಜ್ಜನಿಗೆ 80ಕ್ಕು ಬಾರದ ಶುಗರು  ಅಪ್ಪನಿಗೆ 53ಕ್ಕೆ ಬಂದಿತೇಕೆ ಎಂದು ಯೋಚಿಸಬೇಕು! ಇವಕ್ಕೆಲ್ಲಾ ಉತ್ತರ ಹುಡಕಿ ಹೊರಟ ಸಿಗುವ ಉತ್ತರ ಆಹಾರ! ಹೈಬ್ರಿಡ್ಗಳ ಸಂತೆಯಲ್ಲಿ ನಾವಿದ್ದೇವೆ. ಸಣ್ಣ ರೋಗವನ್ನು ತಡೆದುಕೊಳ್ಳಲಾರದ ಇವು ತಲೆಯಿಂದ ಬುಡದವರೆಗೂ ವಿಷವುಂಡು ಬೆಳೆಯುವವು. ಜೊತೆಗೆ ಯುರಿಯಾ, ಪೊಟಾಷು.
ವಿಶಿಷ್ಟ 75 ಭತ್ತದ ತಳಿಗಳ ಪ್ರದರ್ಶನ ವೀಕ್ಷಿಸುತ್ತಿರುವ ಚಿಣ್ಣರು.

'ದೇಸಿ ಭತ್ತ' ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಚ್ಚಟ್ಟು ಶಾಲಾ ಮಕ್ಕಳಿಗೆ ಮತ್ತು ಊರವರಿಗೆ ದೇಸಿ ಭತ್ತದ ಕುರಿತು ಅರಿವು ಮೂಡಿಸಲಾಯಿತು. ನಮ್ಮ ದೇಶದಲ್ಲಿದ್ದ 1,10,000 ತಳಿಗಳಲ್ಲಿ ಈಗ ಉಳಿದಿರುವುದು ಕೇವಲ 6,000 ಮಾತ್ರ. ನೆರೆ ಬಂದಾಗಲೂ ಬೆಳೆವ, ಬರದಲ್ಲೂ ಬದುಕಬಲ್ಲ, ಉಪ್ಪು ನೀರಲ್ಲೂ ಬದುಕುವ ವಿಶೇಷ ತಳಿಗಳು ನಶಿಸಿವೆ ಕೆಲವು ನಮ್ಮೊಡನೆ ಇದೆ. ಅನ್ನ ಉಣ್ಣುವವರು ಇವನ್ನು ಉಳಿಸಬೇಕಲ್ಲವೇ? ಮುಂದೊಂದು ದಿನ ವಿದೇಶಿ ಕಂಪೆನಿಗಳ ಮುಂದೆ ಬೀಜಗಳಿಗಾಗಿ ಕೈ ಒಡ್ಡುವಂತಾದೀತು. ಅದಕ್ಕೂ ಮುನ್ನ ಜಾಗೃತರಾಗೋಣ. ಅರಿವನ್ನು ವಿಸ್ತರಿಸಿಕೊಳ್ಳೋಣ..
ಉಳಿದದ್ದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಅಲ್ಲವೇ? ಇನ್ನಾದರೂ ನಮ್ಮ ಅನ್ನದ ಬಟ್ಟಲಿಗೆ ನಾವೇ ವಿಷ ಸುರಿದುಕೊಳ್ಳುವುದನ್ನು ನಿಲ್ಲಿಸೋಣವೇ.
ಅವಲೋಕಿಸುತ್ತಿರುವ ಮಕ್ಕಳು

ನಮ್ಮ ಶಾಲೆಯಲ್ಲಿ ನಡೆದ ಎರಡು ವಿಶಿಷ್ಟ ಕಾರ್ಯಕ್ರಮಗಳು..
ಮೊದಲನೆಯದು ಕೀಟ ವಿಸ್ಮಯಗಳ ಸುತ್ತ ಒಂದು ಇಣುಕು ನೋಟ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಹೆತ್ತವರಿಗೆ ಮಾಹಿತಿ ನೀಡಲಾಯಿತು. ದೇಸಿ ಭತ್ತದ ಕುರಿತು ಮಾತು ಕತೆ ಮತ್ತು ಸುಮಾರು 75 ಭತ್ತದ ತಳಿಗಳ ಪ್ರದರ್ಶನ ಎರ್ಪಡಿಸಲಾಯಿತು. ಸಳ್ವಾಡಿಯ ಅನಿಲ್ ಪ್ರಸಾದ್ ಹೆಗ್ಡೆ ಮಾಹಿತಿ ಹಂಚಿಕೊಂಡರು.
138 ತಳಿ ಬೆಳೆದ ಸಂಗ್ರಾಹಕ ಅನಿಲ್ ಹೆಗ್ಡೆಯವರಿಂದ ಭತ್ತದ ಕ್ರಷಿ ಮಾಹಿತಿ.

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...