ದೊಡ್ಡ ಮಂಗಟ್ಟೆಯ ಸಹೋದರ |
ಕರಾವಳಿಯ ಕುರುಚಲು ಕಾಡು. ಹಕ್ಕಿಗಳ ಪೋಟೊ ತೆಗೆಯಲು ಅಲೆಯುತ್ತಿದ್ದಾಗ ಗೋಳಿ ಮರದ ಸಮೀಪ ವಿಚಿತ್ರವಾದ ನಗುವ ಸದ್ದು ಕೇಳಿ ಬಂತು, ಕುತೂಹಲವಾಯಿತು. ಕ್ಯಾಮರ ಲೆನ್ಸ್ನ್ನು ಪೋಕಸ್ ಮಾಡಿ ನೋಡಿದೆ. ಒಂದೆರಡು ಪೋಟೋ ಕ್ಲಿಕ್ಕಿಸಿದೆ. ಪೋಟೊ ನೋಡಿ, ಅರೆ ಇದು ದಾಂಡೇಲಿ ಅಭಯಾರಣ್ಯಗಳಲ್ಲಿ ಕಂಡುಬರುವ ಹಾರ್ನಬಿಲ್ನಂತಿದೆಯಲ್ಲ ಎನ್ನಿಸಿತು, ಕುತೂಹಲ ತಡೆಯಲಾರದೆ ಕೂಡಲೇ ಮನೆಗೆ ಹಿಂತಿರುಗಿದೆ.
ಪೂರ್ಣಚಂದ್ರರ ಕನ್ನಡನಾಡಿನ ಹಕ್ಕಿ ಪುಸ್ತಕ ನೋಡಿದಾಗ ಇದೂ ಹಾನರ್್ಬಿಲ್ ಇರಬಹುದೇ ಎನ್ನಿಸಿತು. ಕೆಲವು ಸಾದೃಶಗಳು ಕಣ್ಣಿಗೆ ಕಟ್ಟುವಂತಿತ್ತು. ಕೆಲವೇ ವ್ಯತ್ಯಾಸಗಳಿದ್ದವು. ಗೊಂದಲಕ್ಕೆ ಬಿದ್ದೆ. ಓರಗೆಯ ಮಿತ್ರರೊಂದಿಗೆ ಚಚರ್ಿಸಿದೆ. ಉತ್ತರ ಮಾತ್ರ ಸಿಗಲಿಲ್ಲ. ಕೆಲವರದಕ್ಕೆ ಮಳೆ ಕೋಗಿಲೆಯೆಂದರು. ನನ್ನ ಸಮಸ್ಯೆ ಮಾತ್ರ ಹಾಗೇ ಉಳಿಯಿತು..
ಸ್ವಲ್ಪ ದಿನಕ್ಕೆ ವಿಷಯ ಮರೆತೇ ಹೋಯಿತು, ಮೊನ್ನೆ ಮೊನ್ನೆ ಯಾವುದೋ ದಿನಪತ್ರಿಕೆಯಲ್ಲಿ ಹಾರ್ನಬಿಲ್ ವಿಷಯ ಓದಿದೆ. ಫೋಟೊ ಕೂಡ ಅಚ್ಚಾಗಿತ್ತು. ನನ್ನ ಹಳೆ ಪೋಟೊದೊಂದಿಗೆ ಹೋಲಿಸಿನೋಡಿದೆ. ಇವುಗಳಿಗೂ ಹಾರ್ನಬಿಲ್ನಂತೆ ಹಾರುವಾಗ ರೆಕ್ಕೆಯಲ್ಲಿ ಬಿಳಿ ಬಿಳಿ ಗೆರೆ ಮೂಡುತ್ತದೆ. ಗಾತ್ರವೂ ಹಾನರ್್ಬಿಲ್ನಷ್ಟೆ. ಬಣ್ಣವೂ ಹಾನರ್್ಬಿಲ್ನ ಗ್ರೇ. ಕೂಗೂವುದು ಸಹ ಹಾನರ್್ಬಿಲ್ನಂತೆ. ಹಾನರ್್ಬಿಲ್ಗಳಿಗಿರುವಂತೆ ಕೊಕ್ಕಿನ ಮೇಲ್ಗಡೆ ಟೋಪಿಯಾಕಾರದ ರಚನೆಗಳಿಲ್ಲ.
ಇವುಗಳ ಜೀವನ ವಿಧಾನವೂ ಹಾನರ್್ಬಿಲ್ಗಳಂತೆ, ಗೋಳಿ ಅತ್ತಿ ಮತ್ತಿತ್ತರ ಹಣ್ಣುಗಳನ್ನು ತಿಂದು ಬದುಕುತ್ತದೆ. ಡಿಸೆಂಬರ್ ನಲ್ಲಿ ಮರಿಮಾಡುತ್ತದೆ. ಜೋಡಿಯಲ್ಲಿ ಕಂಡುಬರುತ್ತದೆ. ಎಲ್ಲಾ ಗೊಂದಲಗಳ ನಡುವೆ ಹಾರ್ನಬಿಲ್ ನೋಡುವ ತವಕ. ಒಂದೇ ಸಮನೆ ಹಾನರ್್ಬಿಲ್ ಕನಸು ಕಾಣುತ್ತಾ ಕ್ಯಾಮರ ಹೆಗಲಿಗೇರಿಸಿಕೊಂಡು ದಾಂಡೇಲಿಗೆ ಹೊರಟಿದ್ದೇನೆೆ. ನಿಮಗೇನಾದರು ಈ ಹಕ್ಕಿ ಕಾಣಸಿಕ್ಕರೆ. ವಿವರ ತಿಳಿಸುತ್ತಿರಾ?
ಶ್ರೀಧರ. ಎಸ್. ಸಿದ್ಧಾಪುರ
No comments:
Post a Comment