
ಪ್ರಕೃತಿಯೊಂದಿಗೆ ಲೀನವಾಗಿ, ಕಾಡಿನ ಸಂತನೆನಿಸಿದ ತೇಜಸ್ವಿ ನಿಮಗಿದೊ ನುಡಿ ನಮನ. ಪ್ರಕೃತಿಯ ಸೂಕ್ಷ್ಮವನ್ನು ಅದರ ಚಿದಂಬರ ರಹಸ್ಯವನ್ನು ಬೆರಗುಗಣ್ಣಿನಿಂದ ನೋಡಿ, ಮಗುವಿನಂತೆ ಪುಳಕಗೊಳ್ಳುವ, ಇನ್ನೊಬ್ಬರಿಗೆ ಅದನು ತಿಳಿಸುವ ತವಕದ ಸಣ್ಣ ಬಾಲಕ. ಮಿಲೆನಿಯಂ ಸರಣಿ ಇದಕ್ಕೊಂದು ನಿದರ್ಶನ. ತಾನು ಬೆಳೆದು ಉಳಿದವರಿಗೆ ಪ್ರಕೃತಿ ಪ್ರೀತಿಯ ಕಲಿಸಿದ ಗುರು. ಇವರ ಸಾಹಿತ್ಯ ಓದಿದವರಿಗಂತು ಇತರೆ ಕೃತಿಗಳು ಪೇಲವವಿನಿಸಿಕೊಳ್ಳುದರಲ್ಲಿ ಆಶ್ಚರ್ಯವಿಲ್ಲ. ಇಲ್ಲಿ ಎಲ್ಲರೂ ಮುಖ್ಯರೆನ್ನುತ್ತಾ, ಯಾವುದೂ ಮುಖ್ಯವಲ್ಲ ಎಂಬ ಕುವೆಂಪು ದೋರಣೆಯಂತೆ ಅನೇಕ ಪ್ರಯೋಗಶೀಲ ಕೃತಿ ರಚಿಸಿದರು. ಹಳೆಯ ಪದ್ಧತಿಗಳಿಗೆ ಅಂಟಿಕೊಳ್ಳದೇ, ನವ್ಯದ ಕಿಲುಬನ್ನು ತೆಗೆದುಹಾಕಿ, ಹೊಸ ದಿಗಂತದೆಡೆಗೆ ಸಾಗಿದ ಸಂತ. ವಿದೇಶಿ ಸಂಸ್ಕ್ರತಿಯ ಮೋಹಕ್ಕೆ ಒಳಗಾಗದೆ, ಸ್ನಿಗ್ಧ ಸ್ವಚ್ಚಂದ ಝರಿಯಂತೆ ಹರಿದ ಸಾಹಿತ್ಯ ಪ್ರತಿಭೆ.

ಕೊನೆ ಮುನ್ನುಡಿ:- ಇದೊಂದು ಬರೆದಷ್ಟೂ ಮುಗಿಯದ ಅಕ್ಷರ ಜಾತ್ರೆ. ಹಾಗಾಗಿ ಇಲ್ಲಿಗೆ ಮುಗಿಸುತ್ತೇನೆ. ಮತ್ತೊಮ್ಮೆ ಅಕ್ಷರ ಬುತ್ತಿಯೊಂದಿಗೆ ಬರುವೆ. ನಮಸ್ಕಾರ.ಶ್ರೀಧರ. ಎಸ್. ಸಿದ್ಧಾಪುರ
No comments:
Post a Comment