ಎಂಥಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿಯ ಹೆಸರು ಕೇಳಿರದ ಚಾರಣಿಗ ಕರ್ನಾಟಕದಲ್ಲಿ ಇಲ್ಲವೇನೋ. ಅಂತಹ ಅದ್ಭುತ ಅಹ್ಲಾದಕರ ಚಾರಣ ಸ್ಥಾನ. ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟ್ಯವಾದ ಮತ್ತೊಂದು ನಿಲ್ದಾಣವಿರಲಿಕ್ಕಿಲ್ಲ.
ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಭೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುವೇರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ್ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್ ಒಂದು ಇದೆ ಎಂಬುದೇ ಒಂಥರಾ ವಿಚಿತ್ರವಲ್ಲವೆ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ 8 ಕಿಲೋ ಮೀಟರ್ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಎಡಕುವೇರಿ.
ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂತರ್ಿ ಹಸಿರು ಚಾದರ ಹೊದ್ದಿರುತ್ತವೆ ಬೆಟ್ಟಗಳು. ಬೇಸಿಗೆಯಲ್ಲೂ ಹಂಗೇ ಇರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ. ಇಲ್ಲಿನ ರೈಲ್ವೆ ಮಾಸ್ತರನ್ನ ಮಾತಾಡಿಸಿದೆ, ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ.
ಎಡುಕುವೇರಿಯ ಪಾಸಿಂಗ್ ರೈಲ್ವೆ ಟ್ರಾಕ್. ಸುಂದರ ಪರಿಸರ. ಒಂದು ದಿನದ ಪಿಕ್ನಿಕ್ ಗೆ ಹೇಳಿಮಾಡಿಸಿದ ತಾಣ. |
ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್ ಮಾಸ್ಟ್ರಗಳಿಗೆ ಬಹಳ ಕಷ್ಟ. ವಿದ್ಯುತ್ ಬೇರೆ ಇಲ್ಲಾ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾಟರ್ುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿಮರ್ಿಸಿದ ಒಂದೆರಡು ಸಣ್ಣ ಮನೆಗಳು.
ಎಡುಕುವೇರಿಯ ರೈಲ್ವೆ ಟನ್ರಿಂಗ್ |
ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ. ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿಸಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಹಲವು ವರುಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಇದನ್ನು ಸಂಪೂರ್ಣ ನಿಶೇಧಿಸಲಾಗಿದೆ! ಈಗಿಲ್ಲಿ ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್ ಕೇಸ್ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಒಮ್ಮೆಯಾದರು ಯಡಕುಮರಿಯಲಿ ರಾತ್ರಿ ಕಳೆಯುವ ಇರಾದೆ ಇದೆ. ನೀವು ಬರುವಿರಾ?
No comments:
Post a Comment