ಹಲವು ವರ್ಷಗಳಿಂದ ಕಾಡಿದ BLUE ROCKET ಮಿಂಚುಳ್ಳಿ. ಸಾಮಾನ್ಯ ಮಿಂಚುಳ್ಳಿಗಿಂತ ತೀರ ಚಿಕ್ಕದಾದ ಈ ಹಕ್ಕಿ ಅದ್ಭುತ ವೇಗದಿಂದ ಹಾರಬಲ್ಲದು. ಸಾಮಾನ್ಯವಾಗಿ ಗುರುತಿಸಲಾಗದಷ್ಟು ವೇಗವಾಗಿ ಹಾರುವುದು ಇದರ ವಿಶೇಷತೆ. ಮೈ ಮೇಲೆ ಮಖ್ಮಲ್ ಬಟ್ಟೆ ತೊಟ್ಟಂತೆ ಹೊಳಪಿನ ನೀಲಿ, ಬಿಳಿ ಮತ್ತು ಕಪ್ಪು ಬಣ್ಣಗಳು. ಅತಿ ಚುರುಕಾದ ಸೂಕ್ಷ್ಮಗ್ರಾಹಿ ಕಣ್ಣು, ಸಣ್ಣ ಅಲುಗಾಟವನ್ನೂ ಗ್ರಹಿಸುತ್ತದೆ.
ಕಳೆದೊಂದು ವರ್ಷದಿಂದ ಈ ಹಕ್ಕಿಯು ಮೀನು ಹಿಡಿದಿರುವುದನ್ನು ಸೆರೆಹಿಡಿಯಬೇಕೆಂದು ಕೆರೆ, ಹೊಳೆ ದಡದಲ್ಲಿ ಗಂಟೆ ಗಟ್ಟಲೆ ಹೊಂಚು ಹಾಕಿದ್ದೆ. ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿತ್ತು. ಒಮ್ಮೆಯಂತು ಮೀನು ಹಿಡಿದು ನನ್ನ ವಿರುದ್ಧ ದಿಕ್ಕಿಗೆ ಮುಖಮಾಡಿ ತಿಂದು ಹಾರಿಹೋಗಿತ್ತು.
ಕಳೆದ ಬುಧವಾರ ನಮ್ಮ ತಂಡ ಮಿಂಚುಳ್ಳಿ ಸೆರೆಗೆಂದು ಬೆಳಿಗ್ಗೆ 9.00ಕ್ಕೆ ಹೊರಟಿತು. ಈ ಬಾರಿಯೂ ನಮ್ಮ ಸಣ್ಣ ಅಲುಗಾಟವೊ, ದೂರದಲ್ಲಿ ನಾವಾಗಮಿಸುವುದು ತಿಳಿದಂತೆ ಧ್ಯಾನಕ್ಕೆ ಭಂಗ ಬಂದ ಋಷಿಯಂತೆ ಪರಾರಿ. ಛಲಬಿಡದೆ ಅದು ಹೋದ ಕಡೆ ಹಿಂಬಾಲಿಸಿದೆವು. ಮೂರು ಬಾರಿ ಪರಾರಿಯಾಗಿ ನಿರಾಸೆ ಮೂಡಿಸಿತ್ತು. ಇದನ್ನು ಸೆರೆಹಿಡಿಯುವುದು ಅಸಾಧ್ಯವೆಂದು ತೀಮರ್ಾನಿಸಿದ್ದೆವು. ಹೊರಡುವ ತಯಾರಿ ನಡೆದಿತ್ತು. ಕೊನೆಯ ಒಂದೆರಡು ಸುತ್ತಲಿನ ಪೋಟೊ ತೆಗೆಯುವ ಸಲುವಾಗಿ ನಾಗರಾಜ ವೀಕ್ಷಿಸುತ್ತಿದ್ದರು. ಅದೇ ಸಮಯಕ್ಕೆ ಪರಾರಿಯಾದ ಹಕ್ಕಿ ಪ್ರತ್ಯಕ್ಷ ಅದೂ ಮೀನಿನೊಂದಿಗೆ. ಅದೇ ಜಾಗದಿಂದ ಅದು ಆಗಷ್ಟೆ ಪರಾರಿಯಾಗಿ ರೇಗಿಸಿಹೋಗಿತ್ತು. ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು. ನಿಮ್ಮೊಂದಿಗೆ ಹಂಚಿಕೊಂಡು ಮನಸ್ಸು ಹಗುರಾಗಿದೆ, ಬಹು ದಿನದ ಕನಸು ನನಸಾಗಿದೆ.
ಆದರೆ ಈ ಬಾರಿ ಮಾತ್ರ RED HAND ಆಗಿ ಕೆಮರಾ ಕಣ್ಣಿಗೆ ಸಿಕ್ಕಿಬಿದ್ದು ಕ್ಲಿಕ್ಕಾಗಿಸಿದೆ. ನಿಮಗೂ ಇಷ್ಟವಾಗಬಹುದು, ಪ್ರತಿಕ್ರಿಯಿಸಿ....
ಕ್ಯಾಮಾರ ನೀಡಿ ಸಹಕರಿಸಿದ ಗೆಳೆಯ ನಾಗರಾಜ್ ಮತ್ತು ನನ್ನ ಮನೆ ಮಂದಿಗೆ ಧನ್ಯವಾದಗಳು......
Small Kingfisher with the prey for its kid! |
No comments:
Post a Comment