ಮತ್ತೆ ಬಂದಿದೆ ವಸಂತ..
ಹಾ ನಾಹೇಳುವ ಸುರಗಿ U. R. Ananth Moorthiಯ ಸುರಗಿ ಆತ್ಮಕತೆಯಲ್ಲ. ಅದರಲ್ಲಿ ಆತ್ಮವಿದೆಯೋ ಇಲ್ಲವೂ ಗೊತ್ತಿಲ್ಲ!
ಮೋಹಕ ಸುರಗಿ |
ಸುರಗಿ ಹೂವಿನ ಕಂಪು ವಸಂತದ ನೆನಪು. ಅಕ್ಕ ಸುರಗಿ ಗುಂಗಿಗೆ ಬಲಿಯಾದವರು ನಾನು. ಕೊಯ್ಯಲೊಬ್ಬರು ಅವಳೊಡನೆ ಹೋಗಲೇ ಬೇಕು, ಅವಳಿಗೊ ಭಯ. ಅವಳೊಡನೆ ಕಾಡು ಸುತ್ತಿ ಮರ ಹತ್ತಿ ಸುರಗಿ ಪರಿಮಳ ಹೀರಿ ಮನೆಗೆ ಬರುವಾಗ ಅಮ್ಮನ ತಿಂಡಿ ತಯಾರಾಗಿರುತ್ತಿತ್ತು. ಹಸಿವೆ ಹಿಂಗಿಸಿಕೊಂಡು ಸುರಗಿಯ ಹೂಮಾಲೆ ಮಾಡುವ ಸಂಭ್ರಮ ಅಕ್ಕನಿಗೆ. ಈಗ ಸುರಗಿಯ ವನವನ್ನು ನಾವು ಉಳಿಸಲಿಲ್ಲಾ ಅಕ್ಕನೂ ಉದ್ಯೋಗ ನಿಮಿತ್ತ ಬೆಂಗಳೂರಿನ ಸಿಮೆಂಟ್ ವನದಲ್ಲಿದ್ದಾಳೆ. ಅಲ್ಲೂ ಇಲ್ಲೂ ಸುರಗಿ ಮಾಯವಾಗಿದೆ.
ಅದನ್ನು ಬಳಸಿದವರಿಗೆ ಅದು ಕಾಡದಿರದು ನಿಮಗೂ ಈ ವಸಂತದಲಿ ಸುರಗಿ ನೆನಪಾಗಲಾರದೆ. U. R ನೆನಪಾದರೆ ನಾನು ಹೊಣೆಯಲ್ಲ.
ಸುರಗಿಯ ಜೊತೆ ಜೊತೆಗೆ ಕಾಡುವ ಹೂ ಸೀತೆ ಎಂದು ಕರೆಯು ಈ ಹೂ ಬಾಲ್ಯದ ನೆನಪಿನ ಭಾಗಗಳು.
ಅಲ್ಲವೇ? ಹೌದಾದ್ರೆ ಕಾಮೆಂಟ್ ಮಾಡಿ.