Saturday, September 28, 2013

ಕಾಡ ಝರಿಯ ಜಾಡ ಹಿಡಿದು...

ವಿಜಯ ಕನರ್ಾಟಕದಲ್ಲಿ ಇತ್ತೀಚಿಗೆ ಪ್ರಕಟವಾದ ನನ್ನ ಒಂದು ಲೇಖನ,  ಓದಿ ಪ್ರತಿಕ್ರಿಯಿಸಿ..

ನಾವೊಂದು ಐದಾರು ಸ್ನೇಹಿತರು ಕೂಡಿಕೊಂಡು ಭಾನುವಾರದಂದು ಸಣ್ಣ ಕಾಡ ಝರಿಯ ಜಾಡ ಹಿಡಿದು ಹೊರಟಾಗಿನ ನಮ್ಮ ಅನುಭವಗಳಿವು. ನಮ್ಮ ಸ್ವಾಗತಕ್ಕೆ ನಿಂತ ಗಿರಿಗಳು. ಮ್ಯಾಗಂನೀಸ್ ಅದಿರಿನ ರಾಶಿ ರಾಶಿ ಕಲ್ಲುಗಳು. ಮುಗಿಲ ಚುಂಬಿಸುವ ವೃಕ್ಷಗಳು. ಆಗಾಗ್ಗೆ ಕಾಣಸಿಗುವ ಕಾಡು ಪಕ್ಷಿ ಸಂಕುಲ. ಕಾಡುವ ಇಂಬಳಗಳ ರಾಶಿ. ಇವುಗಳ ನಡುವೆ ಯಾವುದೇ ಅಳುಕಿಲ್ಲದೆ, ನಿರಾಬರಣೆಯಾಗಿ ಹರಿಯುವ ಸಣ್ಣ ತೊರೆಯೇ ಈ ಅಕ್ಕಿನಕೊಡ್ಲು ಜಲಧಾರೆ. ಮುಂದೆ ಇದು  ಚಕ್ರಾ ನದಿಗೆ ಸೇರುತ್ತದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಿ ಧನ್ಯರಾಗುತ್ತಾ ಸಾಗುತ್ತದೆ ಈ ಜಲಧಾರೆ.

ಮೂರು ಕವಲಾಗಿ ಹರಿಯುವ ಈ ಜಲಧಾರೆಯನ್ನು ನೋಡುವುದೇ ಚಂದ. ತಲುಪುವುದೊಂದು ರೋಮಾಂಚನಕಾರಿ ಅನುಭವ. ಇಡುವ ಪ್ರತಿ ಹೆಜ್ಜೆಗೂ ಜಾರಿಕೆಯ ಅನುಭವವಾಗುತ್ತದೆ. ಕಲ್ಲುಗಳ ಇಡುಕಿನಲ್ಲಿ ಹೆಜ್ಜೆ ಇಡುತ್ತಾ ನಿಧಾನವಾಗಿ ಸಾಗಬೇಕು. ಕೆಲವೊಮ್ಮೆ ಅಕ್ಷರಶ ನುಸುಳಬೇಕು. ಜಾರುವ ಬಂಡೆಗಳನ್ನು ದಾಟುವ ಕೆಲವೊಮ್ಮೆ ಜಿಗಿಯುವ, ಕೆಲವೊಮ್ಮೆ ಹುಳುವಿನಂತೆ ತೆವಳುವ ಇಂತಹ ರೋಮಾಂಚನವನ್ನು ಒದಗಿಸುವ ಜಲಧಾರೆ ಕೊನೆ ಮುಟ್ಟಿದಾಕ್ಷಣ ತನ್ನೆಲ್ಲಾ ಸೌಂದರ್ಯದಿಂದ ಮಂತ್ರ ಮುಗ್ದಗೊಳಿಸುತ್ತದೆ. ಹೂ ಪಕಳೆಗಳಂತ ನೀರ ಹನಿಗಳ ಸಿಂಚನಗೈವ, ಮೂರು ಕವಲಾಗುವ ಈ ಜಲಧಾರೆ  ನೋಡುಗರಿಗೆ ಆನಂದಾನುಭೂತಿಯನ್ನುಂಟುಮಾಡುತ್ತದೆ. ನೀರ ಹನಿಗಳ ಕೆಳಗೆ ಕುಳಿತರಂತೂ ಅನಿರ್ವಚನೀಯವಾದ ಆನಂದವನ್ನುಂಟುಮಾಡುತ್ತದೆ. ಜಲಧಾರೆ ಜಳಕವಾಡುವಷ್ಟು ಜಾಗ ಇಲ್ಲಿರುವುದು ವಿಶೇಷ! ಜಲಪಾತ ವೀಕ್ಷಿಸಿ ವಾಪಾಸಾಗುವ ವರೆಗೂ ಇಂಬಳಗಳು ನಮ್ಮನ್ನು ಬಿಳ್ಕೊಟ್ಟವು.
ಈ ಜಲಧಾರೆಯ ಮೂಲ ತಲುಪಲು, ಜಲಧಾರೆಯ ಬದಿಯಲ್ಲಿಯೇ ಸಾಗಿ ಮುಂದೆ ಸಣ್ಣ ಬೆಟ್ಟದ ತುದಿಗೆ ತಲುಪಬೇಕು. ಅಲ್ಲಿ ಸಣ್ಣ ಜಿನುಗಾಗಿ ಪ್ರಾರಂಭವಾಗುವ ಇದು ಅನಂತರ ವಿವಿಧ ಮೂಲಗಳಿಂದ ನೀರನ್ನು ಸಂಗ್ರಹಿಸಿಕೊಂಡು ಜಲಪಾತವಾಗುತ್ತದೆ. ಹರಿವಿನ ಬದಿಯಲ್ಲಿ ಹೋಗುವ ಅವಕಾಶವಿದೆ. ಆದರೆ ಬಹಳ ಜಾರಿಕೆ ಇರುತ್ತದೆ ಅಲ್ಲಿ ಜಾಗರೂಕರಾಗಿ ಹೋಗಬೇಕು.



ತಲುಪುವುದು ಹೀಗೆ:- ಉಡುಪಿಯಿಂದ 55 ಕಿ.ಮಿ. ದೂರದ ಸಿದ್ದಾಪುರ ತಲುಪಿ ಅಲ್ಲಿಂದ ಹಳ್ಳಿಹೊಳೆ ಮಾರ್ಗವಾಗಿ ಬರಬೇಕು. ಕಮಲಶಿಲೆಯ ನಂತರ ಶೆಟ್ಟಿಪಾಲು ಎನ್ನುವ ಸಣ್ಣ ಹಳ್ಳಿಯಲ್ಲಿ ಇಳಿದು, ಎಡಗಡೆಯ ಮಣ್ಣುದಾರಿಯಲ್ಲಿ 2 ಕಿ.ಮಿ. ಸಾಗಿದಾಗ ಸಣ್ಣ ಝರಿ ಕಾಣುತ್ತದೆ. ಅದರ ಜಾಡು ಹಿಡಿದು ಬೆಟ್ಟವೇರಿದರೆ ಸಿಗುವುದೇ ಈ ಅಕ್ಕಿನಕೊಡ್ಲು ಜಲಧಾರೆ. ಅಜ್ಞಾತವಾಗಿರುವುದರಿಂದ ಸ್ಥಳಿಯರ ಸಹಾಯ ಪಡೆಯವುದು ಸೂಕ್ತ ಇಲ್ಲವಾದರೆ ದಾರಿ ತಪ್ಪುವಿರಿ ಜೋಕೆ.

ಸುತ್ತ ಮುತ್ತಲು:- ಇಲ್ಲಿಂದ ಬಿಳ್ಕಲ್ ತೀಥವೆಂಬ ಜಲಪಾತ, ಮೂಡಗಲ್ಲು ಗುಹಾಂತರ ದೇವಾಲಯ, ದೇವರ ಬಾಳು ಜಲಪಾತ ವೀಕ್ಷಿಸಿಲು ಹೋಗಬಹುದು. ಅಲ್ಲದೆ ಕಮಲಶಿಲೆಯ ದುಗರ್ಾಪರಮೇಶ್ವರಿ ದೇವಾಲಯ, ದೇವಸ್ಥಾನದ ಮೂಲ ಗುಹೆ ಪ್ರಕೃತಿ ನಿಮರ್ಿತ ಅತಿ ಸಮೀಪದ ಸುಂದರ ಸ್ಥಳಗಳು. ಅರೆಮನೆ ಕೊಡ್ಲು ಎಂಬ ಸಣ್ಣ ಜಲಧಾರೆ ಹಳ್ಳಿಹೊಳೆಯ ಸಮೀಪವಿದೆ. ಇಲ್ಲಿನ ಎಲ್ಲಾ ಜಲಧಾರೆಗಳನ್ನು ತಲುಪಲು ಸ್ಥಳಿಯರ ಸಹಾಯ ಪಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ದಾರಿ ತಪ್ಪುವುದು ಖಂಡಿತ!

ಶ್ರೀಧರ್. ಎಸ್. ಸಿದ್ದಾಪುರ, ಕುಂದಾಪುರ ತಾಲೂಕು

2 comments:

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...