Wednesday, January 21, 2015

ನಿಸರ್ಗ ಕೆತ್ತಿದ ದೃಶ್ಯ ಕಾವ್ಯ

ಹೀಗೊಂದು ಬೈಕ್ ಸಾಹಸ 
        ತಿರುವು ಮುರುವು ರಸ್ತೆ. ಧೂಳುಮಯವಾದ ಕಣಿವೆಯಂತಿರುವ ದಾರಿ. ದಾರಿಯುದ್ದಕ್ಕೂ ಯುದ್ದಕ್ಕೆ ನಿಂತಂತಿರುವ ಕಲ್ಲುಗಳು! ಅಲ್ಲಲ್ಲಿ ಜಾರಿಕೆ. ಒಂದು ಕಡೆ ಆಳ ಪ್ರಪಾತ. ಸುತ್ತಲೂ ಪಶ್ಚಿಮಘಟ್ಟದ ದುರ್ಗಮ ಕಾಡು. ವಿವಿಧ ಪ್ರಾಣಿ ಪಕ್ಷಿಗಳ ದನಿ. ಮಲೆನಾಡಿನ ವಿರಳ ಮನೆ ಸರಣಿ. ಇವುಗಳ ನಡುವೆ ನಮ್ಮ ಬುಲೆಟ್ ಸವಾರಿ. ಕನರ್ಾಟಕದ ಐದನೇ ಅತಿ ಎತ್ತರದ ಶಿಖರ ಕೊಡಚಾದ್ರಿಯತ್ತ ಗೆಳೆಯ ನಾಗರಾಜ್ ಜೊತೆ ದುರ್ಗಮ ರೋಮಾಂಚಕ ಪಯಣ!
       ಈ ಬೈಕ್ ಸಾಹಸವಂತೂ ಮರೆಯಾರದ ರೋಚಕ ಅನುಭವ. ಒಂದೆಡೆ ಶೋಲಾ ಕಾಡುಗಳು, ನಿಸರ್ಗ ಕೆತ್ತಿದ ಚಲುವಿನ ವಿಸ್ತಾರದ ಬೆಟ್ಟ ಸರಣಿ. ಒಂದಕ್ಕೆ ಏರಿ ಮೊತ್ತೊಂದಕ್ಕೆ ಜೀಕಿಕೊಳ್ಳುವ ಅಪೂರ್ವ ಅವಕಾಶ. ಸುಂದರಿಗೆ ಬೈದಲೆ ತೆಗೆದಂತೆ  ಹಾವು ಹರಿದ ದಾರಿಯಲ್ಲಿ ಪಯಣ. ದಾರಿಯುದ್ದಕ್ಕೂ ಬೈಕ್ ಎತ್ತೆತ್ತಿ ಹಾರುತ್ತಿತ್ತು. ತೆವಳುವ ವೇಗದಲ್ಲಿ ತುದಿ ತಲುಪಿದಾಗ ಯುದ್ಧ ಗೆದ್ಧ ಸಂಭ್ರಮ. ಧನ್ಯತಾ ಭಾವ.ಎಳೆ ಬಿಸಿಲಿಗೆ ಮೈಯೊಡ್ಡುತಾ ಸರ್ವಜ್ಞ ಪೀಠಕೆ ದಾರಿ ಬೆಳೆಸಿದೆವು. ಚಳಿಗಾಳಿಗೆ ಮೈಯೊಡ್ಡಿ ಸೂಯರ್ಾಸ್ತ ಸವಿದು ಅಲ್ಲೇ ಉಳಿದು ಸೂಯರ್ೋದಯವನ್ನೂ ಸವಿದೆವು. 
ಬೆಟ್ಟದ ಸುತ್ತಲಿನ 64 ತೀರ್ಥಗಳ ನೀರು ಸೇರಿ ಸೌಪಣರ್ಿಕೆಯಾಗಿ ಕೊಲ್ಲೂರಿನ ಜನತೆಯ ದಾಹ ಹಿಂಗಿಸುವಳು. ಅಗಸ್ತ್ಯ ತೀರ್ಥ ಮತ್ತು ನಾಗ ತೀರ್ಥ ನೋಡುವಂತಹದು. ಮರಳುವಾಗ ಹೊಸ ಕಾಡ ಹಾದಿ ಹಿಡಿದೆನು. ಇಲ್ಲಿ ಗೆಳೆಯರಾದ ರಾಘು, ಸಂತೋಷ, ವಿಶ್ವಾಸ್ ಜೊತೆಯಾದರು. ಕಾಡದಾರಿಯಂತೂ ಮೈಮನಗಳಿಗೆ , ಕ್ಯಾಮರಕ್ಕೆ ಸುಗ್ರಾಸ ಭೋಜನವನ್ನೇ ನೀಡಿತು. 
ಬೆಟ್ಟದ ಸುತ್ತಲಿನ 64 ತೀರ್ಥಗಳ ನೀರು ಸೇರಿ ಸೌಪಣರ್ಿಕೆಯಾಗಿ ಕೊಲ್ಲೂರಿನ ಜನತೆಯ ದಾಹ ಹಿಂಗಿಸುವಳು. ಅಗಸ್ತ್ಯ ತೀರ್ಥ ಮತ್ತು ನಾಗ ತೀರ್ಥ ನೋಡುವಂತಹದು. ಮರಳುವಾಗ ಹೊಸ ಕಾಡ ಹಾದಿ ಹಿಡಿದೆನು. ಇಲ್ಲಿ ಗೆಳೆಯರಾದ ರಾಘು, ಸಂತೋಷ, ವಿಶ್ವಾಸ್ ಜೊತೆಯಾದರು. ಕಾಡದಾರಿಯಂತೂ ಮೈಮನಗಳಿಗೆ , ಕ್ಯಾಮರಕ್ಕೆ ಸುಗ್ರಾಸ ಭೋಜನವನ್ನೇ ನೀಡಿತು. ಅಪರೂಪದ ಕರಿ ಹದ್ದು ಆಗಾಗ ದರ್ಶನವಿತ್ತಿತು. 

Jaint Squirrel
ವಿದೇಶಿ ಹಕ್ಕಿಗಳಾದ ಕೆಸ್ಟ್ರಾಲ್, ಕುಂಡೆಕುಸ್ಕ ಸುಂದರ ಫೋಜ್ ನೀಡಿದವು. ಅಳಿವಿನಂಚಿನ ದೊಡ್ಡ ಅಳಿಲು ನನ್ನ ಫೋಟೊ ತೆಗೆಯಿರೆಂದು ಹಟಕ್ಕೆ ಬಿದ್ದು ಫೋಸ್ ನೀಡಿ ಪರಾರಿಯಾಯಿತು. ಪಶ್ಚಿಮ ಘಟ್ಟಗಳ ವಿಶಿಷ್ಟ ಚಿಟ್ಟೆ, ರಾಬರ್ಟ ಪ್ಲೈ ಕಾಣಸಿಕ್ಕವು.
On the summit


Namma Team
ಕಡಿದಾದ ಬೆಟ್ಟವೊಂದನ್ನು ಇಳಿದಾಗ ಕಾಣಸಿಕ್ಕ ಕಾಡ ಸುಂದರಿ 'ಎಮ್ಮೆಹೊಂಡ' ಜಲಧಾರೆ ಬಹಳವೇ ಚೇತೋಹಾರಿ ಅನುಭವ. ಔಷಧಿಯುಕ್ತ ನೀರಲಿ ಸ್ನಾನ ಮಾಡಿ, ಹಳ್ಳಿಗರಿತ್ತ ವಿಶಿಷ್ಟ ತಂಬಳಿಯುಂಡು ಹಿಂತಿರುಗಿದೆವು.
ಇನ್ನೇಕೆ ತಡ. ಚಳಿ ಮುಗಿಯುವ ಮುನ್ನ ಕ್ಯಾಮರ ಹೆಗಲಿಗೇರಿಸಿ ಹೊರಡಿ ಆದರೆ ಪ್ರಕೃತಿ ಮಾತೆಯನ್ನು ಪ್ಲಾಸ್ಟಿಕ್ ಕಸದಿಂದ ಮಲಿನಗೊಳಿಸದಿರಿ. ಮರೆಯಲಾರದ ಅನನ್ಯ ಅನುಭವ ನಿಮ್ಮದಾಗುದರಲ್ಲಿ ಅನುಮಾನವಿಲ್ಲ.
ಶ್ರೀಧರ್. ಎಸ್. ಸಿದ್ದಾಪುರ 

Wednesday, January 7, 2015

ಪುಟ್ಟ ಊರಿನ ಪುಟ್ಟ ಪುಟ್ಟ ಸುಂದರ ಜಲಪಾತಗಳು..

ಆ ಪುಟ್ಟ ಊರಿನಲ್ಲಿ ಪುಟ್ಟ ಪುಟ್ಟ ಸುಂದರ ಜಲಪಾತಗಳು... ಆ ಜಲಪಾತಗಳ ಕುರಿತು ಪುಟ್ಟ ಲೇಖನ... ಈ ಪುಟ್ಟ ಲೇಖನವನ್ನು ನಮ್ಮ ಕನ್ನಡ ಪ್ರಭ ಪ್ರೀತಿಯಿಂದ ಪ್ರಕಟಿಸಿದೆ, ಅದರ ಸಂಪಾದಕರಿಗೆ ಧನ್ಯವಾದಗಳು. ಓದಿ ಪುಟ್ಟದಾಗಿ ಕಮೆಂಟ್ ಮಾಡಿ...

ಗಾಳಿ ದೇವರ ಗುಡ್ಡದ ಅಜ್ಞಾತ ಸುಂದರಿ!









ಕಾಡುವ ಹನಿಗಳ ಅಮರ ಸಿಂಚನ. ಮಳೆಯುಕ್ಕುವ ಆ ದಿನಗಳಲ್ಲಿ ಮತ್ತೆ ಒಂದಿನ ಕಾಡಿನಂಚಿನ ಅಜ್ಞಾತ ಹಾಲ್ನೊರೆ ನೋಡಲು ಹೊರಟೆವು. ಜಾರವ ದಾರಿ ನಡುವೆ ದ್ವಿಚಕ್ರದ ಪಥ. ಸಾವರಿಸಿ, ಇಳಿದು, ಹತ್ತಿ, ಜಿಗಿದು ನೆಗೆವ ಪಯಣ.
ಇರುವ ಹತ್ತು ಹನ್ನೆರಡು ಮನೆಗಳಲ್ಲಿ ದುಂಬಾಲು ಬಿದ್ದು ರಾಜಣ್ಣ ನಮ್ಮೊಡನೆ ಬಿಮ್ಮಲ್ಲದೆ ಸೇರಿಕೊಂಡರು. ಕಿರೀಟವಿಟ್ಟಂತೆ ಅಲ್ಲಲ್ಲಿ ಹಿಮ ಆವರಿಸಿ ಗಿರಿಯ ಮುಸುಕಿತ್ತು, ಮಂಜು ಹರಡಿತ್ತು. ಮಣ್ಣ ಮನೆಗಳಿಂದ ಮಧ್ಯಾಹ್ನದಡುಗೆಗೆ ಕುಚ್ಚಲಕ್ಕಿ ಅನ್ನದ ಘಮಲು ಹೊಮ್ಮುತ್ತಿತ್ತು. ಮಡಿಸಾಲು ಹೊಳೆ ಬದಿಗೆ ಮೀನು ಹಿಡಿಯಲು ತೆರಳಿದ ತಮ್ಮ ಇನಿಯನಿಗಾಗಿ ಕಾಯುತಿರುವ ಒಂಟಿ ಮನೆಯ ಯಜಮಾನ್ತಿಯರು. ದಣಿವರಿಯದ ಕ್ಯಾಮರ ಕ್ಲಿಕ್ ಕ್ಲಿಕ್ ಎನುತ್ತಿತ್ತು.


ರಾಜಣ್ಣ ತೋರಿದ ದಾರಿ ಹಿಡಿದು, ಹೊಳೆಯೊಂದ ದಾಟಿ ಮಂದುವರಿದೆವು. ಕಾಲ ನೋವಿನಲೂ ಜನಪರವಾಗಿರುವ ಅವರನ್ನು ಮೆಚ್ಚಲೇಬೇಕು. ಕಾಲಿಗೆಲ್ಲ ನಶ್ಯ ಸವರಿಕೊಂಡು ನಡುವೆ ಸಿಗುವ ತೊರೆಯ ನೀರು ಕುಡಿದು ನಡೆಯದೆವು. ಅಲ್ಲಿ ಇಲ್ಲಿ ಕಚ್ಚಿದ ಇಂಬಳವನ್ನು ತೆಗೆಯುತ್ತಾ ಸಾಗಿತ್ತು ಪಯಣ.ನಡುವೆ ಸಿಕ್ಕ ಕಡಂಬಳಕ ಎಂಬ ಸಣ್ಣ ಜಾತಿಯ ಹಾವನ್ನು ನೋಡಿ ಕ್ಲಿಕ್ಕಿಸಿದೆವು. ಹಾವು ಚಿಕ್ಕವಾದರೂ ವಿಷ ಬಹಳ! ಅಪರೂಪದ ಕಪ್ಪೆ ಸಿಕ್ಕು ನೋಡಿ ನಾವು ನಲಿದೆವು.


ಮಧ್ಯದಾರಿಯಲ್ಲಿ ದೊಡ್ಡ ಮಂಗಟೆಯ ದರುಶನವಾಯಿತು. ಎರಡು ಕ್ಲಿಕ್ಕಿಗೆ ಸಿಕ್ಕ ಹಕ್ಕಿಯ ಮತ್ತೆ ನೆನೆದು. ನೊಣ ಹಿಡುಕಗಳ ಕೂಗ ಕೇಳುತ್ತಾ ಕಾಡ ನಡುವೆ ಬಂದಿದ್ದೆವು. ಸೂರ್ಯ ಕಾಣದ ನೆಲ, ಫಲವತ್ತಾದ ಮಣ್ಣು. ಗೆಳೆಯರೊಡನೆ ತಾವು ಕಂಡ ಹಕ್ಕಿಗಳ ಕುರಿತು ಚಚರ್ೆ ನಡೆಯಿತು. ಮತ್ತೆ ಮತ್ತೆ ಮಾತು ಕತೆಯಾಗಲು ದೊಡ್ಡದೊಂದು ಜಲಧಾರೆ ನಮ್ಮದುರೇ ಪ್ರತ್ಯಕ್ಷ. ಮೂರು ಹಂತಗಳಲ್ಲಿ ಬೀಳುವ ಅದನ್ನು ನೋಡಿ ಕ್ಯಾಮರಕ್ಕೆ ಕೆಲಸ ಕೊಟ್ಟೆವು. ನೀರ ನಡುವೆ ಕುಳಿತು ಇಡ್ಲಿ ಸಾಂಬಾರ್, ಚಿತ್ರಾನ್ನ ಹೊಡೆದೆವು. ಇಲ್ಲಿ ಕಾವ್ಯವೇ  ದೃಶ್ಯವಾದಂತೆ. ಕಲ್ಲು ಕಲ್ಲೂ ಶಿಲ್ಪದಂತೆ, ಎಂತಹ ಅರಸಿಕನ ಹೃದಯ ಅರಳಿಸುವಂತಹ ತಾಣ.


ಅಲ್ಲಿಯೇ ಮಿಂದು ನಲಿದೆವು. ದಣಿದ ದೇಹಕ್ಕೆ ಮೇಲಿನಿಂದ ಬೀಳುವ ನೀರು ಒಳ್ಳೇ ಮಸಾಜ್ ಮಾಡಿದಂತ್ತಿತ್ತು. ಹೀಗೆ ಈ ದಿನ ಸಾರ್ಥಕ್ಯವನ್ನು ಪಡೆದುಕೊಂಡು ನಮ್ಮನ್ನು ಬೀಳ್ಕೊಡಲು ಅನುವಾಗಿತ್ತು. ಇಲ್ಲಿಂದಲೇ ಕಾಡ ನಡುವೆ ಭೋರ್ಗರೆವ ಮತ್ತೊಂದು ಕಾಡ ಸುಂದರಿ ನೋಡಲು ಅನುವಾದೆವು!
ಆ ಕತೆಯನ್ನು ಇನ್ನೊಮ್ಮೆ ಹೇಳುವೆ....



ಶ್ರೀಧರ. ಎಸ್. ಸಿದ್ದಾಪುರ.

Sunday, January 4, 2015

ಅಜ್ಞಾತ ಸುಂದರಿ!

   ಕಾಡುವ ಹನಿಗಳ ಅಮರ ಸಿಂಚನ. ಮಳೆಯುಕ್ಕುವ ಆ ದಿನಗಳಲ್ಲಿ ಮತ್ತೆ ಒಂದಿನ ಕಾಡಿನಂಚಿನ ಅಜ್ಞಾತ ಹಾಲ್ನೊರೆ ನೋಡಲು ಹೊರಟೆವು. ಜಾರವ ದಾರಿ ನಡುವೆ ದ್ವಿಚಕ್ರದ ಪಥ. ಸಾವರಿಸಿ, ಇಳಿದು, ಹತ್ತಿ, ಜಿಗಿದು ನೆಗೆವ ಪಯಣ. 
     

 ಇರುವ ಹತ್ತು ಹನ್ನೆರಡು ಮನೆಗಳಲ್ಲಿ ದುಂಬಾಲು ಬಿದ್ದು ರಾಜಣ್ಣ ನಮ್ಮೊಡನೆ ಬಿಮ್ಮಲ್ಲದೆ ಸೇರಿಕೊಂಡರು. ಕಿರೀಟವಿಟ್ಟಂತೆ ಅಲ್ಲಲ್ಲಿ ಹಿಮ ಆವರಿಸಿ ಗಿರಿಯ ಮುಸುಕಿತ್ತು, ಮಂಜು ಹರಡಿತ್ತು. ಮಣ್ಣ ಮನೆಗಳಿಂದ ಮಧ್ಯಾಹ್ನದಡುಗೆಗೆ ಕುಚ್ಚಲಕ್ಕಿ ಅನ್ನದ ಘಮಲು ಹೊಮ್ಮುತ್ತಿತ್ತು. ಮಡಿಸಾಲು ಹೊಳೆ ಬದಿಗೆ ಮೀನು ಹಿಡಿಯಲು ತೆರಳಿದ ತಮ್ಮ ಇನಿಯನಿಗಾಗಿ ಕಾಯುತಿರುವ ಒಂಟಿ ಮನೆಯ ಯಜಮಾನ್ತಿಯರು. ದಣಿವರಿಯದ ಕ್ಯಾಮರ ಕ್ಲಿಕ್ ಕ್ಲಿಕ್ ಎನುತ್ತಿತ್ತು.


ರಾಜಣ್ಣ ತೋರಿದ ದಾರಿ ಹಿಡಿದು, ಹೊಳೆಯೊಂದ ದಾಟಿ ಮಂದುವರಿದೆವು. ಕಾಲ ನೋವಿನಲೂ ಜನಪರವಾಗಿರುವ ಅವರನ್ನು ಮೆಚ್ಚಲೇಬೇಕು. ಕಾಲಿಗೆಲ್ಲ ನಶ್ಯ ಸವರಿಕೊಂಡು ನಡುವೆ ಸಿಗುವ ತೊರೆಯ ನೀರು ಕುಡಿದು ನಡೆಯದೆವು. ಅಲ್ಲಿ ಇಲ್ಲಿ ಕಚ್ಚಿದ ಇಂಬಳವನ್ನು ತೆಗೆಯುತ್ತಾ ಸಾಗಿತ್ತು ಪಯಣ.ನಡುವೆ ಸಿಕ್ಕ ಕಡಂಬಳಕ ಎಂಬ ಸಣ್ಣ ಜಾತಿಯ ಹಾವನ್ನು ನೋಡಿ ಕ್ಲಿಕ್ಕಿಸಿದೆವು. ಹಾವು ಚಿಕ್ಕವಾದರೂ ವಿಷ ಬಹಳ! ಅಪರೂಪದ ಕಪ್ಪೆ ಸಿಕ್ಕು ನೋಡಿ ನಾವು ನಲಿದೆವು. ಮಧ್ಯದಾರಿಯಲ್ಲಿ ದೊಡ್ಡ ಮಂಗಟೆಯ ದರುಶನವಾಯಿತು. ಎರಡು ಕ್ಲಿಕ್ಕಿಗೆ ಸಿಕ್ಕ ಹಕ್ಕಿಯ ಮತ್ತೆ ನೆನೆದು. ನೊಣ ಹಿಡುಕಗಳ ಕೂಗ ಕೇಳುತ್ತಾ ಕಾಡ ನಡುವೆ ಬಂದಿದ್ದೆವು.
 ಸೂರ್ಯ ಕಾಣದ ನೆಲ, ಫಲವತ್ತಾದ ಮಣ್ಣು. ಗೆಳೆಯರೊಡನೆ ತಾವು ಕಂಡ ಹಕ್ಕಿಗಳ ಕುರಿತು ಚಚರ್ೆ ನಡೆಯಿತು. ಮತ್ತೆ ಮತ್ತೆ ಮಾತು ಕತೆಯಾಗಲು ದೊಡ್ಡದೊಂದು ಜಲಧಾರೆ ನಮ್ಮದುರೇ ಪ್ರತ್ಯಕ್ಷ. ಮೂರು ಹಂತಗಳಲ್ಲಿ ಬೀಳುವ ಅದನ್ನು ನೋಡಿ ಕ್ಯಾಮರಕ್ಕೆ ಕೆಲಸ ಕೊಟ್ಟೆವು.


  ನೀರ ನಡುವೆ ಕುಳಿತು ಇಡ್ಲಿ ಸಾಂಬಾರ್, ಚಿತ್ರಾನ್ನ ಹೊಡೆದೆವು. ಇಲ್ಲಿ ಕಾವ್ಯವೇ  ದೃಶ್ಯವಾದಂತೆ. ಕಲ್ಲು ಕಲ್ಲೂ ಶಿಲ್ಪದಂತೆ, ಎಂತಹ ಅರಸಿಕನ ಹೃದಯ ಅರಳಿಸುವಂತಹ ತಾಣ.
ಅಲ್ಲಿಯೇ ಮಿಂದು ನಲಿದೆವು. ದಣಿದ ದೇಹಕ್ಕೆ ಮೇಲಿನಿಂದ ಬೀಳುವ ನೀರು ಒಳ್ಳೇ ಮಸಾಜ್ ಮಾಡಿದಂತ್ತಿತ್ತು. ಹೀಗೆ  ದಿನ ಸಾರ್ಥಕ್ಯವನ್ನು ಪಡೆದುಕೊಂಡು ನಮ್ಮನ್ನು ಬೀಳ್ಕೊಡಲು ಅನುವಾಗಿತ್ತು. ಇಲ್ಲಿಂದಲೇ ಕಾಡ ನಡುವೆ ಭೋರ್ಗರೆವ ಮತ್ತೊಂದು ಕಾಡ ಸುಂದರಿ ನೋಡಲು ಅನುವಾದೆವು!
ಆ ಕತೆಯನ್ನು ಇನ್ನೊಮ್ಮೆ ಹೇಳುವೆ....

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...