ಹೀಗೊಂದು ಬೈಕ್ ಸಾಹಸ
ತಿರುವು ಮುರುವು ರಸ್ತೆ. ಧೂಳುಮಯವಾದ ಕಣಿವೆಯಂತಿರುವ ದಾರಿ. ದಾರಿಯುದ್ದಕ್ಕೂ ಯುದ್ದಕ್ಕೆ ನಿಂತಂತಿರುವ ಕಲ್ಲುಗಳು! ಅಲ್ಲಲ್ಲಿ ಜಾರಿಕೆ. ಒಂದು ಕಡೆ ಆಳ ಪ್ರಪಾತ. ಸುತ್ತಲೂ ಪಶ್ಚಿಮಘಟ್ಟದ ದುರ್ಗಮ ಕಾಡು. ವಿವಿಧ ಪ್ರಾಣಿ ಪಕ್ಷಿಗಳ ದನಿ. ಮಲೆನಾಡಿನ ವಿರಳ ಮನೆ ಸರಣಿ. ಇವುಗಳ ನಡುವೆ ನಮ್ಮ ಬುಲೆಟ್ ಸವಾರಿ. ಕನರ್ಾಟಕದ ಐದನೇ ಅತಿ ಎತ್ತರದ ಶಿಖರ ಕೊಡಚಾದ್ರಿಯತ್ತ ಗೆಳೆಯ ನಾಗರಾಜ್ ಜೊತೆ ದುರ್ಗಮ ರೋಮಾಂಚಕ ಪಯಣ!
ಈ ಬೈಕ್ ಸಾಹಸವಂತೂ ಮರೆಯಾರದ ರೋಚಕ ಅನುಭವ. ಒಂದೆಡೆ ಶೋಲಾ ಕಾಡುಗಳು, ನಿಸರ್ಗ ಕೆತ್ತಿದ ಚಲುವಿನ ವಿಸ್ತಾರದ ಬೆಟ್ಟ ಸರಣಿ. ಒಂದಕ್ಕೆ ಏರಿ ಮೊತ್ತೊಂದಕ್ಕೆ ಜೀಕಿಕೊಳ್ಳುವ ಅಪೂರ್ವ ಅವಕಾಶ. ಸುಂದರಿಗೆ ಬೈದಲೆ ತೆಗೆದಂತೆ ಹಾವು ಹರಿದ ದಾರಿಯಲ್ಲಿ ಪಯಣ. ದಾರಿಯುದ್ದಕ್ಕೂ ಬೈಕ್ ಎತ್ತೆತ್ತಿ ಹಾರುತ್ತಿತ್ತು. ತೆವಳುವ ವೇಗದಲ್ಲಿ ತುದಿ ತಲುಪಿದಾಗ ಯುದ್ಧ ಗೆದ್ಧ ಸಂಭ್ರಮ. ಧನ್ಯತಾ ಭಾವ.ಎಳೆ ಬಿಸಿಲಿಗೆ ಮೈಯೊಡ್ಡುತಾ ಸರ್ವಜ್ಞ ಪೀಠಕೆ ದಾರಿ ಬೆಳೆಸಿದೆವು. ಚಳಿಗಾಳಿಗೆ ಮೈಯೊಡ್ಡಿ ಸೂಯರ್ಾಸ್ತ ಸವಿದು ಅಲ್ಲೇ ಉಳಿದು ಸೂಯರ್ೋದಯವನ್ನೂ ಸವಿದೆವು.
ಬೆಟ್ಟದ ಸುತ್ತಲಿನ 64 ತೀರ್ಥಗಳ ನೀರು ಸೇರಿ ಸೌಪಣರ್ಿಕೆಯಾಗಿ ಕೊಲ್ಲೂರಿನ ಜನತೆಯ ದಾಹ ಹಿಂಗಿಸುವಳು. ಅಗಸ್ತ್ಯ ತೀರ್ಥ ಮತ್ತು ನಾಗ ತೀರ್ಥ ನೋಡುವಂತಹದು. ಮರಳುವಾಗ ಹೊಸ ಕಾಡ ಹಾದಿ ಹಿಡಿದೆನು. ಇಲ್ಲಿ ಗೆಳೆಯರಾದ ರಾಘು, ಸಂತೋಷ, ವಿಶ್ವಾಸ್ ಜೊತೆಯಾದರು. ಕಾಡದಾರಿಯಂತೂ ಮೈಮನಗಳಿಗೆ , ಕ್ಯಾಮರಕ್ಕೆ ಸುಗ್ರಾಸ ಭೋಜನವನ್ನೇ ನೀಡಿತು.
ಬೆಟ್ಟದ ಸುತ್ತಲಿನ 64 ತೀರ್ಥಗಳ ನೀರು ಸೇರಿ ಸೌಪಣರ್ಿಕೆಯಾಗಿ ಕೊಲ್ಲೂರಿನ ಜನತೆಯ ದಾಹ ಹಿಂಗಿಸುವಳು. ಅಗಸ್ತ್ಯ ತೀರ್ಥ ಮತ್ತು ನಾಗ ತೀರ್ಥ ನೋಡುವಂತಹದು. ಮರಳುವಾಗ ಹೊಸ ಕಾಡ ಹಾದಿ ಹಿಡಿದೆನು. ಇಲ್ಲಿ ಗೆಳೆಯರಾದ ರಾಘು, ಸಂತೋಷ, ವಿಶ್ವಾಸ್ ಜೊತೆಯಾದರು. ಕಾಡದಾರಿಯಂತೂ ಮೈಮನಗಳಿಗೆ , ಕ್ಯಾಮರಕ್ಕೆ ಸುಗ್ರಾಸ ಭೋಜನವನ್ನೇ ನೀಡಿತು. ಅಪರೂಪದ ಕರಿ ಹದ್ದು ಆಗಾಗ ದರ್ಶನವಿತ್ತಿತು.
Jaint Squirrel |
ವಿದೇಶಿ ಹಕ್ಕಿಗಳಾದ ಕೆಸ್ಟ್ರಾಲ್, ಕುಂಡೆಕುಸ್ಕ ಸುಂದರ ಫೋಜ್ ನೀಡಿದವು. ಅಳಿವಿನಂಚಿನ ದೊಡ್ಡ ಅಳಿಲು ನನ್ನ ಫೋಟೊ ತೆಗೆಯಿರೆಂದು ಹಟಕ್ಕೆ ಬಿದ್ದು ಫೋಸ್ ನೀಡಿ ಪರಾರಿಯಾಯಿತು. ಪಶ್ಚಿಮ ಘಟ್ಟಗಳ ವಿಶಿಷ್ಟ ಚಿಟ್ಟೆ, ರಾಬರ್ಟ ಪ್ಲೈ ಕಾಣಸಿಕ್ಕವು.
On the summit |
Namma Team |
ಕಡಿದಾದ ಬೆಟ್ಟವೊಂದನ್ನು ಇಳಿದಾಗ ಕಾಣಸಿಕ್ಕ ಕಾಡ ಸುಂದರಿ 'ಎಮ್ಮೆಹೊಂಡ' ಜಲಧಾರೆ ಬಹಳವೇ ಚೇತೋಹಾರಿ ಅನುಭವ. ಔಷಧಿಯುಕ್ತ ನೀರಲಿ ಸ್ನಾನ ಮಾಡಿ, ಹಳ್ಳಿಗರಿತ್ತ ವಿಶಿಷ್ಟ ತಂಬಳಿಯುಂಡು ಹಿಂತಿರುಗಿದೆವು.
ಇನ್ನೇಕೆ ತಡ. ಚಳಿ ಮುಗಿಯುವ ಮುನ್ನ ಕ್ಯಾಮರ ಹೆಗಲಿಗೇರಿಸಿ ಹೊರಡಿ ಆದರೆ ಪ್ರಕೃತಿ ಮಾತೆಯನ್ನು ಪ್ಲಾಸ್ಟಿಕ್ ಕಸದಿಂದ ಮಲಿನಗೊಳಿಸದಿರಿ. ಮರೆಯಲಾರದ ಅನನ್ಯ ಅನುಭವ ನಿಮ್ಮದಾಗುದರಲ್ಲಿ ಅನುಮಾನವಿಲ್ಲ.
ಶ್ರೀಧರ್. ಎಸ್. ಸಿದ್ದಾಪುರ
Nice one...!!!
ReplyDeleteCould you please once visit ammanahaadugalu.blogspot.com and share your opinion/suggestions.