Sunday, January 4, 2015

ಅಜ್ಞಾತ ಸುಂದರಿ!

   ಕಾಡುವ ಹನಿಗಳ ಅಮರ ಸಿಂಚನ. ಮಳೆಯುಕ್ಕುವ ಆ ದಿನಗಳಲ್ಲಿ ಮತ್ತೆ ಒಂದಿನ ಕಾಡಿನಂಚಿನ ಅಜ್ಞಾತ ಹಾಲ್ನೊರೆ ನೋಡಲು ಹೊರಟೆವು. ಜಾರವ ದಾರಿ ನಡುವೆ ದ್ವಿಚಕ್ರದ ಪಥ. ಸಾವರಿಸಿ, ಇಳಿದು, ಹತ್ತಿ, ಜಿಗಿದು ನೆಗೆವ ಪಯಣ. 
     

 ಇರುವ ಹತ್ತು ಹನ್ನೆರಡು ಮನೆಗಳಲ್ಲಿ ದುಂಬಾಲು ಬಿದ್ದು ರಾಜಣ್ಣ ನಮ್ಮೊಡನೆ ಬಿಮ್ಮಲ್ಲದೆ ಸೇರಿಕೊಂಡರು. ಕಿರೀಟವಿಟ್ಟಂತೆ ಅಲ್ಲಲ್ಲಿ ಹಿಮ ಆವರಿಸಿ ಗಿರಿಯ ಮುಸುಕಿತ್ತು, ಮಂಜು ಹರಡಿತ್ತು. ಮಣ್ಣ ಮನೆಗಳಿಂದ ಮಧ್ಯಾಹ್ನದಡುಗೆಗೆ ಕುಚ್ಚಲಕ್ಕಿ ಅನ್ನದ ಘಮಲು ಹೊಮ್ಮುತ್ತಿತ್ತು. ಮಡಿಸಾಲು ಹೊಳೆ ಬದಿಗೆ ಮೀನು ಹಿಡಿಯಲು ತೆರಳಿದ ತಮ್ಮ ಇನಿಯನಿಗಾಗಿ ಕಾಯುತಿರುವ ಒಂಟಿ ಮನೆಯ ಯಜಮಾನ್ತಿಯರು. ದಣಿವರಿಯದ ಕ್ಯಾಮರ ಕ್ಲಿಕ್ ಕ್ಲಿಕ್ ಎನುತ್ತಿತ್ತು.


ರಾಜಣ್ಣ ತೋರಿದ ದಾರಿ ಹಿಡಿದು, ಹೊಳೆಯೊಂದ ದಾಟಿ ಮಂದುವರಿದೆವು. ಕಾಲ ನೋವಿನಲೂ ಜನಪರವಾಗಿರುವ ಅವರನ್ನು ಮೆಚ್ಚಲೇಬೇಕು. ಕಾಲಿಗೆಲ್ಲ ನಶ್ಯ ಸವರಿಕೊಂಡು ನಡುವೆ ಸಿಗುವ ತೊರೆಯ ನೀರು ಕುಡಿದು ನಡೆಯದೆವು. ಅಲ್ಲಿ ಇಲ್ಲಿ ಕಚ್ಚಿದ ಇಂಬಳವನ್ನು ತೆಗೆಯುತ್ತಾ ಸಾಗಿತ್ತು ಪಯಣ.ನಡುವೆ ಸಿಕ್ಕ ಕಡಂಬಳಕ ಎಂಬ ಸಣ್ಣ ಜಾತಿಯ ಹಾವನ್ನು ನೋಡಿ ಕ್ಲಿಕ್ಕಿಸಿದೆವು. ಹಾವು ಚಿಕ್ಕವಾದರೂ ವಿಷ ಬಹಳ! ಅಪರೂಪದ ಕಪ್ಪೆ ಸಿಕ್ಕು ನೋಡಿ ನಾವು ನಲಿದೆವು. ಮಧ್ಯದಾರಿಯಲ್ಲಿ ದೊಡ್ಡ ಮಂಗಟೆಯ ದರುಶನವಾಯಿತು. ಎರಡು ಕ್ಲಿಕ್ಕಿಗೆ ಸಿಕ್ಕ ಹಕ್ಕಿಯ ಮತ್ತೆ ನೆನೆದು. ನೊಣ ಹಿಡುಕಗಳ ಕೂಗ ಕೇಳುತ್ತಾ ಕಾಡ ನಡುವೆ ಬಂದಿದ್ದೆವು.
 ಸೂರ್ಯ ಕಾಣದ ನೆಲ, ಫಲವತ್ತಾದ ಮಣ್ಣು. ಗೆಳೆಯರೊಡನೆ ತಾವು ಕಂಡ ಹಕ್ಕಿಗಳ ಕುರಿತು ಚಚರ್ೆ ನಡೆಯಿತು. ಮತ್ತೆ ಮತ್ತೆ ಮಾತು ಕತೆಯಾಗಲು ದೊಡ್ಡದೊಂದು ಜಲಧಾರೆ ನಮ್ಮದುರೇ ಪ್ರತ್ಯಕ್ಷ. ಮೂರು ಹಂತಗಳಲ್ಲಿ ಬೀಳುವ ಅದನ್ನು ನೋಡಿ ಕ್ಯಾಮರಕ್ಕೆ ಕೆಲಸ ಕೊಟ್ಟೆವು.


  ನೀರ ನಡುವೆ ಕುಳಿತು ಇಡ್ಲಿ ಸಾಂಬಾರ್, ಚಿತ್ರಾನ್ನ ಹೊಡೆದೆವು. ಇಲ್ಲಿ ಕಾವ್ಯವೇ  ದೃಶ್ಯವಾದಂತೆ. ಕಲ್ಲು ಕಲ್ಲೂ ಶಿಲ್ಪದಂತೆ, ಎಂತಹ ಅರಸಿಕನ ಹೃದಯ ಅರಳಿಸುವಂತಹ ತಾಣ.
ಅಲ್ಲಿಯೇ ಮಿಂದು ನಲಿದೆವು. ದಣಿದ ದೇಹಕ್ಕೆ ಮೇಲಿನಿಂದ ಬೀಳುವ ನೀರು ಒಳ್ಳೇ ಮಸಾಜ್ ಮಾಡಿದಂತ್ತಿತ್ತು. ಹೀಗೆ  ದಿನ ಸಾರ್ಥಕ್ಯವನ್ನು ಪಡೆದುಕೊಂಡು ನಮ್ಮನ್ನು ಬೀಳ್ಕೊಡಲು ಅನುವಾಗಿತ್ತು. ಇಲ್ಲಿಂದಲೇ ಕಾಡ ನಡುವೆ ಭೋರ್ಗರೆವ ಮತ್ತೊಂದು ಕಾಡ ಸುಂದರಿ ನೋಡಲು ಅನುವಾದೆವು!
ಆ ಕತೆಯನ್ನು ಇನ್ನೊಮ್ಮೆ ಹೇಳುವೆ....

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...