ಬಂಡೆಗಳ ನಡುವೆ ಚಿತ್ರ ಕಾವ್ಯ..
ಶಾಂತಲೆಯ ಸ್ವರ್ಗಾರೋಹಣದ ಜಾಗದಲ್ಲಿದ್ದೆವು! ಈ ಜಾಗಕ್ಕೆ ಬಂದು ನಿಂತರೆ ಇತಿಹಾಸದ ಕಗ್ಗಂಟೊದು ನಮ್ಮ ಮುಂದೆ ದುತ್ತೆಂದು ಬಂದು ನಿಲ್ಲುವುದು. ಸಾವಿಗೂ ಇಂತಹ ಸುಂದರ ಸ್ಥಳವೊಂದನ್ನು ಆಯ್ಕೆ ಮಾಡಿ ಕೊಂಡ ಇನ್ನೊಬ್ಬರು ನನಗೆ ತಿಳಿದಿಲ್ಲ. ಈ ಮಾತನ್ನು ವ್ಯಂಗ್ಯದಿಂದ ಹೇಳುತ್ತಿಲ್ಲ. ಆದರೂ ಅವಳ ಸಾವು ನಮ್ಮನ್ನು ಬಹುವಾಗಿಯೇ ಕಾಡುವುದು. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಇಲ್ಲಿನ ಸೌಂದರ್ಯ ನೋಡಿಯೂ ಪರವಶಳಾಗದೆ ಅದು ಹೇಗೆ ಪ್ರಾಣ ಬಿಟ್ಟಳೆಂದು ಯೋಚಿಸಿದರೂ ಕಾಡುವ ಪ್ರಶ್ನೆ. ಬೇಲೂರು, ಹಳೆಬೀಡು ನಿಮರ್ಾಣದಲ್ಲಿ ಭಾಗವಹಿಸಿದ ಜೀವವೊಂದು ಹೀಗೆ ಅಂತ್ಯವಾದುದು ಇನ್ನೂ ಜೀಣರ್ಿಸಿಕೊಳ್ಳಲೂ ಸಾಧ್ಯವಾಗಿಲ್ಲ! ರಾಣಿಯೊಬ್ಬಳಿಗೆ ಇಷ್ಟು ಎತ್ತರದಿಂದ ನೆಗೆದು ಜೀವಕಳೆದುಕೊಳ್ಳಬೇಕಾಗಿ ಬಂದುದಾದರು ಏಕೆ? ಕೊನೆಗಾಲದಲ್ಲಿ ಖಿನ್ನತೆ ಕಾಡಿತೆ? ಇತಿಹಾಸದ ಮಗ್ಗುಲನ್ನು ಕೆದಕಬೇಕೆಂಬ ಹೆಬ್ಬಯಕೆ ಚಿಗುರೊಡೆಯಿತು. ಇಂತಹ ಹಲವು ಪ್ರಶ್ನೆಗಳ ಪಟ್ಟಿ ಬದಿಗೊತ್ತಿ ಶಿವಗಂಗೆ ಎಂಬ ವಿಸ್ಮಯಕಾರಿ ಬೆಟ್ಟವನ್ನು ಸುತ್ತು ಹಾಕಿ ಬರೋಣವೇ.
 |
ಶಾಂತಲಾ ಸ್ತಂಭ-ಶಿವಗಂಗೆ
ಅನತಿ ದೂರದಿಂದ ನೋಡುವವರಿಗೆ ಒಂದು ಸಾಧಾರಣ ಊರಂತೆ ತೋರಿದರೂ ರಸಿಕರಿಗೆ ಉಣ ಬಡಿಸುವ ವಿಶೇಷತೆ, ವಿಶಿಷ್ಟತೆ, ವಿಸ್ಮಯಗಳು, ವಿಸ್ಮಯ ಕಾರಿ ಲಿಂಗ, ಗುಹಾಂತರ ದೇವಾಲಯಗಳು ಒಂದೆರಡಲ್ಲ. ಅನೇಕ ತೀರ್ಥಗಳು, ಬಸವ ಮಂಟಪಗಳು ಅನೇಕ ಕತೆ ಹೇಳುತ್ತವೆ. ಅಲ್ಲಲ್ಲಿ ಯಾರೋ ತಂದು ನಿಲ್ಲಿಸಿದಂತೆ ಕಾಣುವ ಅನೇಕ ಕಲ್ಲುಗಳು. ಅಡಿಗಡಿಗೂ ಬಂಡೆಗಳ ಚಿತ್ರ ಕಾವ್ಯದಂತೆ ಕಾಣುವುದು. ಚಿತ್ರಗಳು ಕ್ಯಾಮರದೊಂದಿಗೇ ಸ್ಪಧರ್ೆಗಿಳಿಯುವವು.
ನಾವು ಹತ್ತಲೂ ಹೆದರುವ ಜಾಗಗಳಲ್ಲಿ ಮಂಟಪ, ನಂದಿಗಳನ್ನು ಕೆತ್ತಿಟ್ಟಿದ್ದಾರೆಂದರೆ ಭಾರತದ ಸಾಹಸಿಗರ ಬಗೆಗೆ ಆಶ್ಚರ್ಯ ಪಡುವಿರಿ. ಇಲ್ಲಿರುವ ವಿಸ್ಮಯಗಳು ನೂರಾರಿವೆ. ಒಂದಕ್ಕಿಂತ ಒಂದು ಭಿನ್ನ. ನಮ್ಮ ಇತಿಹಾಸದ ಮಗ್ಗಲುಗಳ ವಿಸ್ಮಯಗಳು ನೂರಾರು. ಒಂದೊಂದಾಗಿ ತಿಳಿಯೋಣ ನಿಧಾನಕ್ಕೆ...
|
 |
ಮಾತಿಗೆ ನಿಂತಂತೆ ಕಾಣುವ ಬಂಡೆಗಳು |
 |
ಬಂಡೆಗಳ ನಡುವಿನ ಮಂಟಪ |
 |
ಬೆಟ್ಟದ ಏರು ದಾರಿ. |
No comments:
Post a Comment