Saturday, July 14, 2018

ಕೈ ಬೀಸಿ ಕರೆಯುತಿದೆ ಕಾರವಾರದ ಕಡಲು......


ಕಡಲ ಒಡಲಿನಲಿ ಮುಸ್ಸಂಜೆ.
ಕರಾವಳಿ ಎಂದರೆ ಭಯಂಕರ ಬಿಸಿಲೆಂದು ತಿಳಿದಿದ್ದ ನನಗೆ ಕಾರವಾರಕ್ಕೆ ಹೋದಾಗ ಅಚ್ಚರಿಯಾಗಿತ್ತು. ಕಾರವಾರದ ಹಗಲು ಕೂಡಾ ತುಂಬಾ ತಂಪು ತಂಪು. ಉಡುಪಿಯ ಕರಾವಳಿಯವರಾದ ನಮಗೆ ನವೆಂಬರ್ನಲ್ಲಿ ಬೆವತು ಹೋಗುವಷ್ಟು ಸೆಕೆ. ಪಡುಬಿದ್ರಿಯ ಉಷ್ಣ ವಿದ್ಯುತ್ ಸ್ಥಾವರದ ಪರಿಣಾಮವಿರಬೇಕು ಅಂದುಕೊಂಡಿದ್ದೇನೆ. ಗೋಕರ್ಣ ಸಮೀಪದ ತದಡಿ ಉಷ್ಣ ವಿದ್ಯುತ್ ಸ್ಥಾವರದ ಬಳಿಕ ಕಾರವಾರದ ಕತೆಯೂ ಅಷ್ಟೇಯೋ ಏನೋ ಎಂಬ ಹೆದರಿಕೆಯೂ ಶುರುವಾಗಿದೆ?
ಪ್ರವಾಸಿಗರ ಮಸ್ತಿ...
ಕಡಲೊಡಲಿನ ನಮ್ಮ ಮೊದಲ ಪ್ರಯಾಣಕ್ಕೆ ನಿಕ್ಕಿಯಾಗಿದ್ದು ಮೃದ್ವಂಗಿ ಮಯವಾಗಿದ್ದ ಆಯಿಸ್ಟರ್ ದ್ವೀಪಕ್ಕೆ. ಕಡಲ ನಡುವಿನ ಸುಮನೋಹರ ತಾಣ. ಒಂದು ಕಾಲದಲ್ಲಿ ಆಯಿಸ್ಟರ್ ಮಯವಾಗಿದ್ದ ದ್ವೀಪ!
ಮೃದ್ವಂಗಿ ದ್ವೀಪ:-

ಲೈಟ   ಹ ೌಸನ ನೆತ್ತಿಯಿಂದ

ಮೆಲ್ಲಗೆ ಮುತ್ತಿಕ್ಕುವ ಕಡಲಿನ ಅಲೆಗಳು. ಕಾಡುವ ಕೆಂಬಣ್ಣದ ಸೂರ್ಯ ನೆತ್ತಿಗೆ ಬಂದಿದ್ದ. ಕಾರಾವಾರದ ಕಡಲ ಜಗಲಿಯಲಿ ಕೂತು ಅಲ್ಲಿನ ಬಾಡಿಗೆ ಹಾಯಿಯವರನ್ನೆಲ್ಲಾ ಮಾತಾಡಿಸಿ 4000 ಸಾವಿರಕ್ಕೆ ಒಬ್ಬನನ್ನು ಒಪ್ಪಿಸಿ ನಡು ಮಧ್ಯಾಹ್ನದ ಹೊತ್ತಿಗೆ ಆಯಿಸ್ಟರ್ ದ್ವೀಪದತ್ತ ಹೊರಟೆವು.
ಲಂಗರು ಜಾಗ.
ಕಾರವಾರದ ಟ್ಯಾಗೋರ ಕಿನಾರೆಯಿಂದ ಅರ್ಧ ತಾಸಿನ ಪ್ರಯಾಣ. ಕೋಟ್ಯಾಂತರ ವರ್ಷಗಳ ಕೆಳಗೆ ಎದ್ದ ನೂರಾರು ನಡುಗುಡ್ಡೆಗಳಲ್ಲಿ ಒಂದಕ್ಕೆ ಹೊರಟು ನಿಂತಾಗ ಉಂಟಾಗುವ ಪುಳಕವೇ ಬೇರೆ. ಮೃದ್ವಂಗಿಗಳೇ ತುಂಬಿ ತುಳುಕುತ್ತಿದ್ದ ಈ ದ್ವೀಪವು ನಮ್ಮನ್ನು ಅಡಿಗಡಿಗೆ ಅಚ್ಚರಿಗೆ ಕೆಡವಿತ್ತು.


ಅಂದು ಇಳಿತದ ಸಮಯ, ಕಡಲು ತುಂಬಾ ಶಾಂತವಾಗಿತ್ತು. ಲೈಪ್ ಜಾಕೇಟ್ ಎಲ್ಲರ ಹೆಗಲೇರಿತ್ತು. ಎಂದೋ ಎದ್ದ ನಡುಗುಡ್ಡೆಗಳ ನಡುವೆ ಸೀಳುತ್ತಾ ಸಾಗಿತ್ತು ಹಡಗು.
ಹಾರುವ ಡಾಲ್ಪಿನ್ಗಳು ದ್ವೀಪಕ್ಕೆ ಭವ್ಯ ಸ್ವಾಗತವನ್ನೇ ಕೋರಿದ್ದವು. ನನ್ನ ಮಗನಂತೂ ರೋಮಾಂಚಿತನಾಗಿದ್ದ. ಕಣ್ಣರಳಿಸಿ ಕಡಲನ್ನೇ ನೋಡುತ್ತಾ ನಿಂತ. ಒಂದು ಬದಿ ಕಾಳಿ ನದಿಯೂ ಕಡಲನ್ನು ಅಪ್ಪಿಕೊಳ್ಳುವ ತವಕದಲ್ಲಿತ್ತು. ಮುಂದೆ ಸಮುದ್ರ ಸೀಲ್ಗಳ ಗುಂಪೊಂದು ನಮಗೆದುರಾಗಿ ಆಯಿಸ್ಟರ್ ದ್ವೀಪದ ಮೊತ್ತೊಂದು ಬದಿಯಲ್ಲಿ ಚಕ್ಕಂದದಲಿ ನಿರತರಾಗಿದ್ದವು. ನಮ್ಮನ್ನು ನೋಡುತ್ತಲೇ ಮಾಯವಾದವು. ಸೀಲ್ಗಳ ಮೊದಲ ನೋಟಕ್ಕೆ ನಾವು ಪರವಶರಾದೆವು. ಬಿಳಿ ಹೊಟ್ಟೆಯ ಸಿ ಈಗಲ್, ಡಾಲ್ಪಿನ್, ಸೀಲ್ ನೋಡಿದ ಖುಷಿಯಲ್ಲಿ ತೇಲುತ್ತಲೇ ದ್ವೀಪಕ್ಕೆ ಲಗ್ಗೆ ಇಟ್ಟೆವು.

ಅನಾಥ ದ್ವೀಪದಲ್ಲೊಂದು ದೀಪ ಸ್ತಂಭ:-
ಆ ದ್ವೀಪದ ಅಪರಿಮಿತ ಸೌಂದರ್ಯವನ್ನು ಪದಗಳಲ್ಲಿ ಖಂಡಿತಾ ಹಿಡಿದಿಡಲಾರೆ. ಕಡಲ ನಡುವಿನ ಒಂಟಿ ದೀಪ ಸ್ತಂಭ. ಅಲ್ಲೊಬ್ಬ ಒಂಟಿ ಕಾವಲುಗಾರ.
ರಾತ್ರಿ-ಹಗಲು ಕಡಲನ್ನೇ ಕಾಣುತ್ತಾ ದ್ವೀಪ ಕಾಯುತ್ತಾ ಅಲ್ಲಿರುತ್ತಾನೆ. 1860 ರ ಸುಮಾರಿಗೆ ಪೋಚರ್ುಗೀಸರು ಅವರ ಹಡುಗಗಳಿಗಾಗಿ ಸಂಜ್ಞೆ ನೀಡಲು ರೂಪಿಸಿದ್ದರು. ಕಾರವಾರದ ನೈಸಗರ್ಿಕ ಬಂದರಿನಿಂದ ತಮ್ಮ ಊರಿಗೆ ಸಾಂಬಾರು ಪದಾರ್ಥಗಳನ್ನು ಕೊಂಡೊಯ್ಯಲು ಅವರು ಮಾಡಿಕೊಂಡ ವ್ಯವಸ್ಥೆ.
ದ್ವೀಪ ಸ್ತಂಭ ಇಂದು ಭಾರತದ ಸುರ್ಪದಿಯಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಶಿಲೆಕಲ್ಲಿನಿಂದ ನಿಮರ್ಿಸಲಾದ ಇದು ಬಹಳ ಗಟ್ಟಿ ಮುಟ್ಟಾಗಿದೆ.

ಇಲ್ಲಿಗೆ ಬಂದರೆ ಬೇರೆ ಯಾವುದೋ ಲೋಕಕ್ಕೆ ಬಂದಂತಹ ಅನುಭವ ನೀಡುವುದು. ಅಪರಿಮಿತ ಸೌಂದರ್ಯದ ಖನಿ. ದೀಪ ಸ್ತಂಭ ಏರಿ ಸುತ್ತಲಿನ ದೃಶ್ಯಾವಳಿಯ ಸುಂದರತೆ ಅನ್ಯಾದರ್ಶ.
ದ್ವೀಪದಲ್ಲಿ ಮಾವು ಮುಂತಾದ ಹಣ್ಣಿನ ಗಿಡಗಳಿವೆ. ಕಡಲ ಹಕ್ಕಿಗಳು ದ್ವೀಪಗಳನ್ನೇ ನೆಲೆಯಾಗಿಸಿಕೊಂಡಿವೆ. ಕಡಲ ಜೀವಿಗಳನ್ನು ಹೆಕ್ಕಿ ಹೆಕ್ಕಿ ತಿಂದ ಹಕ್ಕಿಗಳು ಸಂತಾನ ಬೆಳೆಸಿಕೊಂಡಿವೆ. ವಿದ್ಯುತ್ಗಾಗಿ ಸೋಲಾರ್ ಅಳವಡಿಸಲಾಗಿದೆ. ಇವೆಲ್ಲವನ್ನು ನೋಡಿಕೊಳ್ಳಲೊಬ್ಬನನ್ನು ನೇಮಿಸಲಾಗಿದೆ! ಹುಚ್ಚು ಕಡಲ ನಡುವೆ ಒಂಟಿಯಾಗಿರುವುದು ಅವನ ಸಾಹಸವೇ ಸರಿ. ಸಿಹಿ ನೀರಿಗಾಗಿ ಬಾವಿಯೊಂದಿದೆ. ಉಳಿದೆಲ್ಲವನ್ನೂ ಕಾರವಾರದಿಂದಲೇ ತರಬೇಕು. ಎಲ್ಲವಿದ್ದೂ ಒಂಟಿ ಎಂಬ ಭಾವ.
ಆಯಿಸ್ಟರ್ಗಳೆಂಬ ಮೃದ್ವಂಗಿ ಜೀವಿಗಳು ಇಲ್ಲಿ ಹೇರಳವಾಗಿ ಸಿಗುವುದರಿಂದಲೇ ಈ ದ್ವೀಪಕ್ಕೆ ಆಯಿಸ್ಟರ್ ದ್ವೀಪವೆಂದು ಹೆಸರು ಬಂದಿದೆ. ಮೊದಲಿನಂತೆ ಈಗ ಇಲ್ಲಿ ಅವು ಕಾಣಸಿಗುವುದಿಲ್ಲ! ತಮ್ಮ ನೆಲೆ ಕಳಕೊಂಡಿವೆ.
ಕುರುಮ್ ಗಡ   ದ್ವಿಪ..
ಎಲ್ಲಿ ಹೋದವೋ ಆಯಿಸ್ಟರ್ಗಳು ಎಂಬ ಪ್ರಶ್ನೆ ಕಾಡುತ್ತಲೇ ಇದೇ, ನನಗೆ ಕ್ರಿಸಮಸ್ ದ್ವೀಪದ ಕೆಂಪು ಏಡಿಗಳ ನೆನಪಾಯಿತು. ಪ್ರತಿ ವರ್ಷವು ಅವು ಕ್ರಿಸ್ಮಸ್ ದ್ವೀಪಕ್ಕೇ ಬಂದು ಮೊಟ್ಟೆ ಇಟ್ಟು ಮರಿ ಮಾಡಿ ಪುನಃ ತಮ್ಮ ಮೂಲವನ್ನು ತಪ್ಪದೇ ಸೇರಬೇಕಾದರೆ ಅವುಗಳ ಮೆದುಳಿನಲ್ಲಿ ಆ ದ್ವೀಪದ ದಾರಿ ದಾಖಲಾಗಿರಲೇ ಬೇಕಲ್ಲವೇ? ಹೇಗೆ ಈ ದ್ವೀಪಗಳ ದಾರಿ ಅವುಗಳ ಮೆದುಳುಗಳಲ್ಲಿ ದಾಖಲಾಗಿರಬಹುದು? ಚಿಕ್ಕ ಮರಿಯೊಂದು ಅಲ್ಲಿ ಹುಟ್ಟಿ ಮೂಲ ನೆಲೆಯನ್ನು ಮತ್ತೆ ಸೇರಲು ಹಿಂದಿರುಗಿ ಬರುವ ದಾರಿಯೂ ದಾಖಲಾಗಿರಬೇಕಲ್ಲ ಎಂದು ಯೋಚಿಸುತ್ತಾ ಮಗದೊಂದು ದ್ವೀಪಕ್ಕೆ ಬಂದೆವು. ಆಯಿಸ್ಟರ್ಗಳ ಕಣ್ಮರೆಗೆ ಕಾರಣವಿನ್ನೂ ತಿಳಿದಿಲ್ಲವಂತೆ! ತೀರ ಮೃದು ದೇಹ ಹೊಂದಿದ ಅವು ಉಷ್ಣಾಂಶದಲ್ಲಾದ ತೀವ್ರ ಸ್ವರೂಪದ ಬದಲಾವಣೆಗೆ ಅವು ಹೊಂದಿಕೊಳ್ಳಲಾಗದೆ ನಾಶ ಹೊಂದಿರಬೇಕೆಂದು ಯೋಚಿಸಿದೆ. ಅಷ್ಟರಲ್ಲೇ ಮತ್ತೊಂದು ದ್ವೀಪಕ್ಕೆ ಬಂದಿದ್ದೆವು, ಅದೇ ಕುರುಮ್ಗಢ್ ದ್ವೀಪ. ಕುರಮ್ಗಢ್ ದ್ವೀಪದ ಇತಿಹಾಸ ಇನ್ನೂ ರೋಚಕ.
ಕುರುಮ್ಗಢ್ ದ್ವೀಪ:-

ಗಢ್ ಎಂದರೆ ಕೋಟೆ ಎಂಬ ಅರ್ಥವು ಮರಾಠಿ ಭಾಷೆಯಲ್ಲಿದೆ. ಕಾರವಾರವು ಮೊದಲು ಮುಂಬೈ ಪ್ರಾಂತಕ್ಕೆ ಅಂಟಿಕೊಂಡಿತ್ತು. ಮರಾಠಿ ಭಾಷೆಯ ಎರಿಳಿತ ಮತ್ತು ಎಳೆ ಅಲ್ಲಿನ ಕನ್ನಡಿಗರಲ್ಲಿ ಕಾಣಬಹುದು. ಪೋಚರ್ುಗೀಸರು ಕುರುಮ್ಗಢ್ನ್ನು ಕಾವಲಿನ ತಾಣವಾಗಿ ಬಳಸುತ್ತಿದ್ದರು ಎಂದು ಕಾಣುತ್ತೆ. ಸದಾಶಿವ ಗಢ್ನ ಪ್ರವೇಶಿಸುವ ಹಡಗುಗಳು ಈ ಜಾಗವನ್ನು ಹಾದು ಹೋಗಬೇಕು ಅದರ ಕಾವಲಿಗೆ ಇದನ್ನು ಬಳಸಿಕೊಳ್ಳುತ್ತಿದ್ದಿರಬೇಕು. ಆಯಿಷ್ಟರ್ ದ್ವೀಪವನ್ನು ದಾಟಿ ಬಂದ ವೈರಿಗಳನ್ನು ಹೊಡೆದುರುಳಿಸಲು ಇಲ್ಲಿನ ಗುಡ್ಡದ ಮೇಲೊಂದು ಪಿರಂಗಿಯನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು.
ಎಲ್ಲೂ ಈ ದ್ವೀಪದ ಕುರಿತು ಸ್ಪಷ್ಟವಾದ ಮಾಹಿತಿ ಸಿಗಲಿಲ,್ಲ ನಿರಾಸೆಯಾಯಿತು. ಆಳೆತ್ತರದ ಹುಲ್ಲ ರಾಶಿ ನಡುವೆ ತುಕ್ಕು ತಿನ್ನದೆ ಬಿದ್ದಿರುವ ಪಿರಂಗಿಗಳು ಮಾತು ಬಂದಿದ್ದರೆ ಇಲ್ಲಿನ ಕತೆಗಳನ್ನು ರೋಚಕವಾಗಿ ಹೇಳುತ್ತಿದ್ದವೋ ಏನೋ?!
ಇಳಿಯಲು ಇಲ್ಲಿ ಸೂಕ್ತ ಜೆಟ್ಟಿ ವ್ಯವಸ್ಥೆ ಇಲ್ಲ. ಅತ್ಯಂತ ಕುಶಲಿ ನಾವಿಕ ಮಾತ್ರ ಹಡಗನ್ನು ಲಂಗರು ಹಾಕಬಲ್ಲ.
ಸಣ್ಣ ಬಂಡೆಯ ಮೇಲೆ ಕಡಲನ್ನು ನಿರುಕಿಸುತ್ತಾ ಕುಳಿತೆವು. ಅಲ್ಲಲ್ಲಿ ಡಾಲ್ಫಿನ್ಗಳು ಹಾರುತ್ತಿದುದು ಕಾಣುತಲಿತ್ತು. ಇಲ್ಲಿನ ಬೃಹತ್ ಬಂಡೆಗಳ ಮೇಲೆ ಕಡಲು ಕೆತ್ತಿದ ಚಿತ್ರಗಳ ಚಿತ್ತಾರ. ನಾವಿಳಿದ ಜಾಗದ ಬಂಡೆಗಳ ಮೇಲೆ ಹುಡುಗಿಯೊಬ್ಬಳ ಚಿತ್ರವೊಂದು ಕಾಣಿಸಿತು.
ಹುಡುಗಿಯ ಚಿತ್ತಾರದ ಬಂಡೆ...
ಶೋಧಿಸುತ್ತಾ ಹೋದರೆ ಬಂಡೆಗಳಲ್ಲಿ ಹಲವು ಚಿತ್ತಾರ ನಿಮಗೆ ಕಾಣುತ್ತೆ. ದ್ವೀಪದ ದಕ್ಷಿಣ ತುದಿ ಕಡಿದಾಗಿದೆ. ಅಲ್ಲೊಂದು ರೆಸಾಟರ್್ ಕಾರ್ಯನಿರ್ವಹಿಸುತ್ತಿದೆ.
ಇದೊಂದು ಸಣ್ಣ ದ್ವೀಪವಾದರೂ ಇದರ ಒಡಲಿನಲ್ಲೊಂದು ನರಸಿಂಹ ದೇವಾಲಯವಿದೆ.
ವರ್ಷಕ್ಕೊಮ್ಮೆ ಇಲ್ಲಿ ಪೂಜೆ ನಡೆಯುತ್ತೆ. ಗೋವಾ ಮತ್ತು ಕಾರವಾರದಿಂದ ಜನ ಬಂದು ಇಲ್ಲಿ ಪೂಜೆ ಸಲ್ಲಿಸಿ ಹೋಗುವರು. ದಿನವಿಡೀ ಕಳೆದರೂ ಬೇಸರವೆನಿಸದ ಮನಕೆ ಉಲ್ಲಾಸ ತುಂಬಬಹುದಾದ ತಾಣಗಳಲ್ಲಿ ಇದೂ ಒಂದು.
ಕೊನೆಯ ಮಾತು:-
ಕಡಲ ಒಡಲನ್ನು ತಿಳಿಯಾಗಿಡಬೇಕಾದುದು ನಮ್ಮ ಕರ್ತವ್ಯ. ತಿಳಿಯದೇ ಎಸೆದ ಪ್ಲಾಸ್ಟಿಕ್ ದಡದ ಬದುಕನ್ನು ಕದಡದೇ ಬಿಡದು. ದಡದಲ್ಲೇರಿದ ಇಂಗಾಲವನ್ನು ನುಂಗುವ ಕಡಲು ಪ್ರಕ್ಷುಬ್ದಗೊಂಡರೆ ದಡದ ಬದುಕು ಹೈರಾಣವಾಗುವುದು ಎಂಬ ತಿಳಿವಿನೊಂದಿಗೆ ಸುಮಧುರ ನೆನಪಿನ ಕಾರವಾರಕ್ಕೆ ವಿದಾಯ ಕೋರಿ ದಾಂಡೇಲಿಯತ್ತ ಹೊರಟೆವು.

ಶ್ರೀಧರ್. ಎಸ್. ಸಿದ್ದಾಪುರ

Friday, July 13, 2018

ಲಾಚೆನ್ ಟು ಗುರುದೊಂಗ್ಮಾರ್



ಪೂವರ್ೋತ್ತರ ಸೀಮೆಯ ಕೊನೆ ಹಳ್ಳಿ, ಲಾಚೆನ್. ನಾಗರಿಕತೆಯ ಕೊನೆಯ ತಾಣ. ನಾವಿಲ್ಲಿ ಬಂದಿಳಿದಾಗ ಸಂಜೆ ಆರು ಗಂಟೆ. ಎರಡು ಬೃಹತ್ ಬೆಟ್ಟದ ನಡುವಿನ ಪುಟ್ಟ ಹಳ್ಳಿ ನಿದ್ರೆಗೆ ಜಾರುತಲಿತ್ತು. ಬಗ್ದೋದ್ರ ಎರ್ಪೋಟರ್ಿನಿಂದ ಒಂದುವರೆ ದಿನದ ಪ್ರಯಾಣ. ಏರು ದಾರಿಯಲಿ ಹೊಟ್ಟೆಯೊಳಗಿರುವುದನ್ನೆಲ್ಲಾ ಹೊರ ಹಾಕುವಂತಹ ಕುಲುಕಾಟದ ಪ್ರಯಾಣ. ಗುರುದೊಂಗ್ ಮಾರ್ ಎಂಬ ವಿಶಿಷ್ಟ ಸರೋವರ ನೋಡಲು ಇಲ್ಲಿ ತನಕ ಪ್ರಯಾಣ ಬೆಳೆಸಿದ್ದೆವು.
ಉತ್ತರದ ಕೊನೆಯ ಹಳ್ಳಿ ಲಾಚೆನ್: -


ವರ್ಷದ ಕೆಲವೇ ದಿನಮಾಸದಲ್ಲಿ ಪ್ರವಾಸಿಗರಿಂದ ಗಿಜಿಗುಡುವ ಊರು. ನಾವು ಹೋದಾಗ ಬಿಕೋ ಎನ್ನುತ್ತಿತ್ತು. ಅಲ್ಲಿಲ್ಲಿ ಒಂದೆರಡು ಗುಂಪುಗಳಿಗಿದ್ದವು. ಹಿಮ ಬೆಟ್ಟಗಳ ಪಾದದಡಿಯಲ್ಲಿ ಮಗುವಾಗಿ ಮಲಗಿಹ ಹಳ್ಳಿ. ಸಣ್ಣ ಶಾಲೆ, ಬೆಳಿಗ್ಗೆ 9 ರಿಂದ 3ರವರೆಗೆ ಮಾತ್ರ ಕಾರ್ಯಾಚರಿಸುವ ಪೋಸ್ಟಾಪೀಸು ಈ ಊರಿನಲ್ಲಿರುವ ಸೌಲಭ್ಯಗಳು. ಬೆಟ್ಟದ ಮೇಲೊಂದು ಬುದ್ದನ ದೇವಾಲಯ. ಕೇವಲ ಒಂದು ಕಿಲೋ ಮೀಟರ್ ವ್ಯಾಪಿಸಿರುವ ಊರು. ಸಾಂಬಾರಿನಲ್ಲಿ ಸಿಗುವ ಸಾಸಿವೆಯಂತೆ ಚದುರಿದ ನಾಲ್ಕಾರು ಮನೆಗಳು, ಹತ್ತಾರು ಹೋಟೆಲುಗಳನ್ನು ಹೊಂದಿದ ಹಿಮದ ನಾಡಿನ ಪುಟಾಣಿ ಗ್ರಾಮ. ಬಯಲಿನಿಂದ ಸುಮಾರು 8,838 ಅಡಿ ಎತ್ತರದಲ್ಲಿದೆ!
ಜನ ಜೀವನ:-

ಬೆಳಗ್ಗೆ ಬೇಗ ಏಳುವ ಇಲ್ಲಿನವರು ತುಂಬಾ ಸರಳರು ಹಾಗೂ ಸಜ್ಜನರು. ತಮ್ಮ ಪಾಡಿಗೆ ತಾವಿದ್ದು, ಪ್ರವಾಸಿಗರಿಗೂ ನೆರವಾಗುವುದು ಇವರಿಗೆ ಇಷ್ಟ. ಅವರು ತೋರುವ ಪ್ರೀತಿಯೂ ಅನ್ಯಾದರ್ಶ. ನಾವಿದ್ದ ಮನೆಯವರು ಊಟ ಮಾಡಿಕೊಂಡೇ ಹೊರಡಿ ಮುಂದೆ ನಿಮಗೆ ಎಲ್ಲೂ ಊಟ ಸಿಗದೆಂದು ಅಕ್ಷರಷಃ ಅಡ್ಡ ಕಟ್ಟಿದ್ದರು. ಒಂದು ಹೋಮ್ ಸ್ಟೇನವರಂತೂ ನಾವು ಹೇಳಿದ ಅಲ್ಲಿನ ವಿಶೇಷ ಖಾದ್ಯವೊಂದನ್ನು ನಮ್ಮ ಕೋರಿಕೆ ಮೇರೆಗೆ ಮಾಡಿ ಬಡಿಸಿದ್ದರು. ನಾವಿದ್ದ ಹೋಟೆಲಿನಲ್ಲೊಬ್ಬ ಏಳನೇ ತರಗತಿ ಕಲಿಯುತ್ತಿದ್ದ ಹುಡುಗನಂತು ಯಾವಾಗ ತಿಂಡಿಗೆ ಬರುತ್ತೀರಿ ಎಂದು ಪ್ರೀತಿಯಿಂದ ಕೇಳುತ್ತಲೇ ಇರುತ್ತಿದ್ದ.
ಮರುದಿನ ಬೆಳಗ್ಗೆ ಹಕ್ಕಿ ಫೋಟೋ ತೆಗೆಯುವ ವೇಳೆ ಎಲ್ಲೆಲ್ಲಿ ಯಾವ ಹಕ್ಕಿ ಎಲ್ಲಿ ಕೂರುವುದೆಂದು ದಾರಿಹೋಕನೊಬ್ಬ ಬೆಳಗ್ಗೆ 5 ಗಂಟೆಗೆ ಅವುಗಳ ಇಂಗ್ಲೀಷ್ ಹೇಸರಿನೊಂದಿಗೇ ಹೇಳಿಹೋದ. ಇಲ್ಲಿನ ಮನೆಗಳು ಬಹಳ ವಿಶಿಷ್ಟ. ಮರದ ಗೋಡೆಗಳ, ಕಲ್ಲಿನ ಹೊದಿಕೆಯ ಮಾಡು. ಪ್ರತಿ ಮನೆಯ ಕಿಟಕಿ ಬಾಗಿಲುಗಳನ್ನು ಸಮಯ ಕೊಟ್ಟು ಸಿಂಗರಿಸುತ್ತಾರೆ. ಒಂದೊ ಎರಡೋ ಪುಟ್ಟ ಕೋಣೆಯ ಪುಟಾಣಿ ಮನೆಗಳಲ್ಲಿ ಇವರ ವಾಸ. ಇಂತಹ ಒಂದಂತಸ್ತಿನ ಮನೆಗಳಿಗೆ ತಲಗಟ್ಟೆಂಬುದೇ ಇರದು! ಒಳ ಕೋಣೆಯನ್ನು ಶಿಸ್ತಾಗಿ ಜೋಡಿಸಿಟ್ಟಿರುತ್ತಾರೆ. ಜಾಗವಿರದ ಮನೆಗಳ ತೊಲೆಗಳ ಮೇಲೂ ಅನೇಕ ಗಿಡಗಳ ತೂಗುಬುಟ್ಟಿಗಳು ನೇತು ಬಿದ್ದಿರುತ್ತಿದ್ದವು. ಇವರ ಸೌಂದರ್ಯ ಪ್ರಜ್ಞೆಗೆ ಮೆಚ್ಚಲೇ ಬೇಕು.

ಇಲ್ಲಿನ ಮಹಿಳಾ ಮಣಿಗಳನ್ನು ಮೆಚ್ಚಲೇ ಬೇಕು. ಬಹು ಕಷ್ಟ ಜೀವಿಗಳು. ಹೋಟೆಲ್ ಉದ್ಯಮದಿಂದ ಹಿಡಿದು ರಸ್ತೆ ಕಾಮಾಗಾರಿಯಲ್ಲೆಲ್ಲಾ ಇವರದೇ ಕೈಚಳಕ. ಮನೆ ಸಂಭಾಳಿಸಿಕೊಂಡು ಅದು ಹೇಗೋ ಹೋಟೆಲ್ ನೋಡಿಕೊಳ್ಳುತ್ತಾರೆ. ನಮ್ಮೂರಿನ ಹೆಂಗಸರಿಗೆ ಮನೆ ಎದುರಿನ ಅಂಗಳ ತೊಳೆ ಎಂದರೆ, ನೀವು ನನಗೆ ಬಹಳ ಕೆಲಸ ಹೇಳುತ್ತಿದ್ದೀರಿ, ಮಹಿಳಾ ಮಣಿಗಳ ಸ್ವಾತಂತ್ರ್ಯ ಹರಣವೆಂದು ಬೊಬ್ಬೆ ಹಾಕುತ್ತಾರೆ! ಅದಕ್ಕೆ ಹೇಳುವುದಿರಬೇಕು ಹಿಂದಿನವರು, ಜಗತ್ತು ಸುತ್ತಿ ನೋಡು ಎಂದು. ಚಳಿ ಹವೆೆಗೋ ಅಥವಾ ಅವರ ವಂಶವಾಹಿಯ ಕಾರಣಕ್ಕೋ ಹೆಚ್ಚಿನೆಲ್ಲಾ ಮಹಿಳೆಯರು ಸ್ಫುರದ್ರುಪಿಗಳು. ಮನೆಯಿಂದ ಹೊರ ಹೊರಡುವ ಮುನ್ನವೇ ಒಂದಿಷ್ಟು ಲಿಪ್ಸ್ಟಿಕ್ ಬಳಿದುಕೊಳ್ಳದೇ ಹೊರಡುತ್ತಿರಲಿಲ್ಲ. ಬೆಳಗ್ಗೆ 7 ಕ್ಕೆ ಹೊಕ್ಕ ಸಣ್ಣ ಕ್ಯಾಂಟಿನ್ ಒಡತಿಯೊಬ್ಬಳು ಅದೆಷ್ಟು ಹೊತ್ತಿಗೊ ಲಿಪ್ಸ್ಟಿಕ್, ಬಣ್ಣ ಬಳಿದುಕೊಂಡು ಸಜ್ಜಾಗಿ ಬಂದಿದ್ದಳು!
ಅಡಿಗಡಿಗೂ ಮದ್ಯ.
ಸಣ್ಣ ಸಣ್ಣ ಗೂಡಂಗಡಿಯಲ್ಲೂ ಮದ್ಯ ಮಾರಟಕ್ಕೆ ಅವಕಾಶವಿತ್ತು. ವೈನಾಗಿ ವೈನನ್ನ ಜೋಡಿಸಿದ ನೋಡಲು ಎರಡು ಕಣ್ಣು ಸಾಲದು! ಚಿಕ್ಕ ಅಂಗಡಿಗಳಲ್ಲಿ ಅವರು ವಸ್ತುಗಳ ಜೋಡಿಸುವ ಕ್ರಮ ಅನುಕರಣೀಯ. ನಮ್ಮೂರಿನ ಸೇಂದಿಯಂತೆ ಅಲ್ಲಿನವರೇ ರಾಗಿಯಿಂದ ತಯಾರಿಸುವ 'ತುಂಬಾ' ಎಂಬ ವಿಶಿಷ್ಟ ಪಾನೀಯ ಎಲ್ಲಾ ಗೂಡಂಗಡಿಗಳಲ್ಲೂ ಸಿಗುತ್ತಿತ್ತು!
ಗಂಟೆ ಎಂಟಕ್ಕೆಲ್ಲಾ ಮೂಳೆ ಕೊರೆವ ಚಳಿಯ ಮೊರೆತ. ಎಲ್ಲೆಲ್ಲೂ ಹಿಮ ಕರಗಿ ಮನೆ ಮನೆಗಳ ಅಂಚುಗಳಲಿ ಹರಿವ ಝರಿಗಳ ಸದ್ದು. ನೀರವ ರಾತ್ರಿಗಳಲೂ ನೀರ ಮೊರೆತ. ನೀರ ಸೆಳೆತಕೆ ಸಿಕ್ಕಿ ಸಿಕ್ಕಿಂ ರಾಜ್ಯ ಕೊಚ್ಚಿ ಹೋಗುವುದೋ ಎಂಬ ಭಾವ ಸದಾ ನಮ್ಮನ್ನು ಕಾಡುತಲಿತ್ತು. ನಾವೈವರು ಗೆಳೆಯರು ನಮ್ಮ ನಮ್ಮ ಕೋಣೆಗೆ ಹೊರಡುವ ಸನ್ನಾಹದಲ್ಲಿದ್ದೆವು. ಹೋಟೆಲ್ ಮಾಲಿಕ ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದ. ಬೆಳಗಿನ ಜಾವ ಬೇಗ ಏಳ ಬೇಕಾದುದರಿಂದ ಮಾತು ಮುಗಿಸಿ ಬೇಗ ಹೊರಟೆವು. ಹೊಟೆಲ್ ಎದುರಿಗಿನ ಕಣಿವೆಯಲ್ಲಿ ಟೀಸ್ಟಾ ನದಿ ಅಬ್ಬರದಿಂದ ಹರಿಯುತ್ತಿದ್ದಳು. ಬ್ರಹ್ಮಪುತ್ರ ನದಿ ಸೇರುವ ತವಕವಿರಬೇಕು. ಪ್ರಯಾಣದ ಆಯಾಸವು ನಮ್ಮನ್ನು ಬೇಗನೆ ಹಾಸಿಗೆಗೆ ಕೆಡವಿತ್ತು. ನಮ್ಮ ಕನಸಿಗೋಗೊಡಲು ಬೆಳಗ್ಗೆ ನಾಲ್ಕಕ್ಕೇ ಏಳಬೇಕಿತ್ತು. ನಡುಗುವ ಚಳಿಗೆ ಎರಡು ಹೊದಿಕೆಯೂ ಸಾಲದಾಗಿತ್ತು.


ಬೆಳ್ಳಂ ಬೆಳಗ್ಗೆ ಬರೀ ನಾಲ್ಕಕ್ಕೇ;-
ಪಶ್ಚಿಮ ಕರಾವಳಿಗರಾದ ನಮಗೆ ಸೂರ್ಯ ದರ್ಶನ 6 ರಿಂದ 7 ಕ್ಕೆ. ಆದರಿಲ್ಲಿ ಬರೀ ನಾಲ್ಕಕ್ಕೇ ಬೆಳ್ಳಂ ಬೆಳಗ್ಗೆ. ನಾವಿದ್ದ ಹೋಟೆಲ್ನೆದುರಿಗೆ ಹಿಮ ಪರ್ವತವೊಂದು ಬೆಳ್ಳಂ ಬೆಳಗ್ಗೆ ನಾಲ್ಕಕ್ಕೇ ಹಣಕಿ ಹಾಕಿತ್ತು. ಬೆಳಗ್ಗೆ ಮೂರು ಗಂಟೆಗೆದ್ದು ತಯಾರಾದೆವು. ಮೂರರ ನಂತರ ಯಾರಿಗೂ ನಿದ್ದೆಯೇ ಸರಿಯಾಗಿ ಬಂದಿಲ್ಲ.
ಗುರುದೊಂಗ್ ಮಾರ್ ಸರೋವರದೆಡೆಗೆ:-

ಚಹ ಹೀರಿ ಬೆಳಗ್ಗೆ 4 ರ ಹೊತ್ತಿಗೆ ನಮ್ಮನ್ನು ಹೊತ್ತ ಜೀಪ್ ಹೊರಟಿತು. ಹೊರಟ ಎರಡೇ ನಿಮಿಷಕ್ಕೆ ಊರಾಚೆಗಿದ್ದೆವು. ಬೀಜ ಚಲ್ಲಿದಲ್ಲಿ ಬೆಳೆವ ಹೂ ಕೋಸಿನ, ಎಲೆ ಕೋಸಿನ ಹೊಲಗಳನ್ನು ದಾಟಿ ನೂರಾರು ಝರಿಗಳ ಹಾದು ಹೊರಟೆವು. ಹೊರಟ ಕೂಡಲೇ ಸಿಕ್ಕಿದುದು ಎರಡು ಜಲಧಾರೆ ಮತ್ತೊಂದು ಕಬ್ಬಿಣದ ಸೇತುವೆ. ಎಷ್ಟು ಸೇತುವೆ, ಜಲಧಾರೆ ನೋಡಿದೆವೆಂಬುದು ಲೆಕ್ಕವಿಡಲಸದಳದ ಸಂಖ್ಯೆ! ನಮ್ಮ ಹೋಟೆಲ್ ಎದುರಿಗೇ ಸುಂದರ ಜಲಪಾತವೊಂದು ಸುರಿಯುತ್ತಿತ್ತು. ಕೆಲವೆಡೆ ಗುಡ್ಡ ಕುಸಿದು ದಾರಿ ಅದಲು ಬದಲಾಗಿತ್ತು.

ಲಾಚೆನ್ನ ಸ್ವಲ್ಪ ದೂರದಲ್ಲಿಯೇ ಸೈನಿಕರ ಮಕ್ಕಳಿಗಾಗಿ ಶಾಲೆಯೊಂದ ತೆರೆದಿತ್ತು. ಆ ಶಾಲೆಯನ್ನು ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಶಾಲೆಯೆಂದರೆ ತಪ್ಪಾಗಲಿಕ್ಕಿಲ್ಲ. ನಡುವೆ 'ಟೀಸ್ಟಾ' ನದಿಗೆ ಅಣೆಕಟ್ಟು ಕಟ್ಟಿದ್ದರು. ಪ್ರತಿ ಕಿಲೋ ಮೀಟರ್ಗೊಂದರಂತೆ ಸೈನಿಕರ ಬಂಕರ್ಗಳು, ಪೆಟ್ರೋಲ್ ಬಂಕ್ಗಳು, ಶೇಖರಣಾ ತೊಟ್ಟಿಗಳಿದ್ದವು. ಲಾಚೆನ್ನಿಂದ 14,000 ಅಡಿಯ ತಾಂಗು ಎಂಬ ತಪಾಸಣಾ ಜಾಗಕ್ಕೆ ಬಂದ್ದಿದ್ದೆವು. ಮದ್ರಾಸ್ ರೆಜಿಮೆಂಟ್ ದಾಟಿ ಮುಂದೆ ಸಾಗಿದರೆ ಸೇನಾ ತಪಾಸಣೆ. ನಮ್ಮ ಪಮರ್ೀಟುಗಳ ದಾಖಲೆ ತೋರಿಸಲು ಡ್ರೈವರ್ ಹೋದ. ಮೂರು ನಾಲ್ಕು ಮನೆಯಿರುವ ಊರು ತಾಂಗು. ಮನೆ ಮಾಡಿಗೆ ಶೀಟುಗಳು ಮತ್ತು ಬಳಪದ ಕಲ್ಲುಗಳ ಬಳಸಿ ಹೊದಿಸಲಾಗಿತ್ತು.


ಕೆಫೆ ಎಟ್ 14,000, ತಾಂಗು:-
ಬೆಳಗ್ಗೆ ಬೇಗ ಎದ್ದಿರುವುದಕ್ಕೋ ಎನೋ ಹೊಟ್ಟೆ 7 ಕ್ಕೆ ಚುರುಗುಡುತ್ತಿತ್ತು. ಕೊರೆವ ಚಳಿಗೆ ಮೈ ಮನಸ್ಸು ಚಹಕ್ಕೆ ಹಾತೊರೆಯುತ್ತಿತ್ತು. ಚಿಕ್ಕ ಗುಡುರಾದೊಳಗೆ ನುಗ್ಗಿದೆವು. ಅಲ್ಲಿದ್ದದ್ದು ಬ್ರೆಡ್ ಜಾಮ್, ಆಮ್ಲೆಟ್. ಮೂರ್ನಾಲ್ಕು ದಿನದಿಂದ ಬ್ರೆಡ್ ತಿಂದುಕೊಂಡಿದ್ದ ನಮಗೆ ಮತ್ತೆ ಅದರ ದರ್ಶನ. ಅನಿವಾರ್ಯ. ಪಾಶ್ ಹೋಟೆಲ್ನಲ್ಲಿ ಉಳಿದ ಜೋಡಿಯೊಂದು ತಣಿದ ಬ್ರೆಡ್ ತಿನ್ನುವುದು ನಮಗೆ ನಗು ತರಿಸಿತು. ನಾವು ಬಿಸಿ ಬ್ರೆಡ್ ಜಾಮ್, ಆಮ್ಲೇಟ್ಗೆ ಆರ್ಡರಿಸಿದೆವು. ಬ್ರೆಡ್ನ ಪರಮ ವೈರಿಯಾದ ನಾನು ಬ್ರೆಡ್ ತಿನ್ನುತ್ತಿದ್ದುದು ನೋಡಿ ಗೆಳೆಯ ನಾಗರಾಜ ನನ್ನ ಕಾಲೆಳೆಯುತ್ತಿದ್ದ. ಕೊನೆ ಕೊನೆಗೆ ಬ್ರೆಡ್ ಆಮ್ಲೆಟ್ ಎಂದರೆ ವಾಕರಿಕೆ ಬರುವಂತಾಗಿತ್ತು.
ಹೊಟೆಲ್ ಒಡತಿ ಬಂದ ಹತ್ತಾರು ಜನರಿಗೆ ತನ್ನ ಕೆರೊಸಿನ್ ಸ್ಟೋವ್ನಲ್ಲಿ ತಿಂಡಿ ಮಾಡಿ ಬಡಿಸುತ್ತಿದ್ದಳು. ದಿನದ ಒಂದೆರಡು ಗಂಟೆಯಷ್ಟೇ ವ್ಯಾಪಾರ. ಉಳಿದ ಸಮಯ ಸೂಟಿ. ಲಾಚೆನವಳಾದ ಈಕೆ ಪರಮ ಸುಂದರಿ. ಅನಿವಾರ್ಯವಾಗಿ ಒಂದೆರಡು ಬ್ರೆಡ್ ಆಮ್ಲೆಟ್ ತಿಂದು ಹೊರಟೆವು.
ದಟ್ಟ ಕಾನನದ ನಡುವೆ ಹುದುಗಿದ್ದ ಲಾಚೆನ್ಗೂ ಇಲ್ಲಿನ ಪರಿಸರಕ್ಕೂ ಅಜಗಜಾಂತರ. ಗುಡ್ಡದ ಝರಿಯೇ ಜೀವಸೆಲೆ. ಇಲ್ಲಿನ ಕುರುಚಲು ಕಾಡಿನ ಬೆಟ್ಟಗಳ ಮೇಲ್ಮೈ ವಿಶಿಷ್ಟವಾಗಿದೆ. ಬೆಟ್ಟದ ಬಿಳಿ ಕಾಂಡಗಳ ಪುಟ್ಟ ಮರಗಳು ಬೆಟ್ಟದ ಮೇಲೆ ನೆಟ್ಟ ಕೋಲಿನಂತೆ ಕಾಣುತ್ತವೆ. ಮಾರ್ಚ-ಎಪ್ರಿಲ್ ತಿಂಗಳಿನಲ್ಲಿ ಬೆಟ್ಟವೆಲ್ಲಾ  ವಿಶಿಷ್ಟ ಹೂಗಳಿಂದ ಅಲಂಕರಿಸಿ ಅದ್ಭುತವಾಗಿ ಕಾಣುತ್ತವಂತೆ.

ತಾಂಗುವಿನ ಬಳಿಕ ಸುಮಾರು ಮೂರು ಸಾವಿರ ಅಡಿಗಳ ಎತ್ತರವನ್ನು ದಾಟಿ ಮರುಭೂಮಿಯಂತಹ ಒಣ ಹವೆಗೆ ದಾಟಿಕೊಳ್ಳಬೇಕು. ಸಣ್ಣ ಮೊಟರು ಕಲ್ಲಿನ ಬೆಟ್ಟಗಳ ಸಾಲು. ಅಲ್ಲಲ್ಲಿ ಕಲ್ಲುಗಳು ಋಷಿಗಳಂತೆ ಪೋಜು ಕೊಟ್ಟು ನಿಂತಿದ್ದವು. ಬಿಸಿಲಿಗೆ ಹೊಳೆವ ಬಿಳಿ ಕಲ್ಲುಗಳ ಗುಡ್ಡಗಳು. ಹಿಮನದಿಗಳು ಅಷ್ಟಿಷ್ಟು ಕಲ್ಲುಗಳನ್ನು ತಂದು ದಾರಿಯುದ್ದಕ್ಕೂ ಹರಡಿದ್ದವು. ಬ್ರೆಡ್ಡಿನ ಹಲ್ಲೆಗಳಂತಿರುವ ಕಲ್ಲರಾಶಿಗಳ ಹತ್ತಿಳಿಯುತ್ತಾ ಸಾಗಿತ್ತು ನಮ್ಮ ವಾಹನ. ಶುಷ್ಕಗಾಳಿಯ ಹಾವಳಿ. ಒಂಟಿ ಬಂಕರಗಳು, ಬೆಪ್ಪರಂತೆ ಹಸಿರು ಹೊದ್ದ ಬೆಟ್ಟಗಳಲ್ಲಿ ಚೇಳುಗಳಂತೆ ಕಲ್ಲು ಸಂಧಿಗಳಲ್ಲಿ ಅವಿತಿದ್ದವು. ಪರಿಸರದ ಸೌಂದರ್ಯಕ್ಕೆ ಮೋಡಿಗೊಳಗಾದವರಂತೆ ನೋಡತೊಡಗಿದೆವು ನಾವು. ಪ್ರತಿಯೊಬ್ಬರ ಬಾಯಿಯಿಂದ ವಾವ್ ಎಂಬ ಉದ್ಘಾರ. ಮೊದ ಮೊದಲಿಗೆ ಸರ್ಕಸ್ಸನಂತಿದ್ದ ದಾರಿ ಈಗ ಬಹಳೇ ಚೆನ್ನಾಗಿತ್ತು. ಇಲ್ಲಿಂದ ಚೀನಾ ಕೇವಲ 15 ಕಿಲೋ ಮೀಟರ್. ಮೊಟರು ಕಲ್ಲಿನ ಬೆಟ್ಟ ದಾಟಿ ಯಾರೋ ಇಸ್ತ್ರಿ ಮಾಡಿಟ್ಟಂತಹ ಕೆಂಬಣ್ಣದ ಬೆಟ್ಟ ಸಾಲು ನಮ್ಮೆದುರಿಗೆ ಬಂದು ನಿಂತಿದ್ದು ಗೊತ್ತೇ ಆಗಲಿಲ್ಲ. ಬೆಟ್ಟದ ಮೇಲೆ ಹಿಮ ಕೊರೆದ ದಾರಿಗಳು ಗೀಟು ಎಳೆದಂತೆ ಕಾಣುತ್ತಿದ್ದವು. ಕೆಂಬಣ್ಣದ ಪರ್ವತದ ಕೆಳೆಗೆ ಹಸಿರು ಪರ್ವತಗಳು. ಕೆಲವನ್ನು ಕಣ್ತುಂಬಿಕೊಳ್ಳುತ್ತಾ ಕೆಲವನ್ನು ಕ್ಯಾಮರದಲ್ಲಿ, ಹೀಗೆ ಸಾಗಿತ್ತು ಪ್ರಯಾಣ. ತಾಂಗು ಬಳಿಕ ಜೊತೆಯಾದ ಹಿಮ ಬೆಟ್ಟವೊಂದು ದಾರಿ ಹೇಳುತ್ತಾ ಹಿಂಬಾಲಿಸಿ ಬಂದಿದ್ದು ಸರೋವರ ತಲುಪುವ ಕೊನೆ ಕ್ಷಣದಲ್ಲಿ ಕಣ್ಮರೆಯಾಗಿತ್ತು.
ಇನ್ನೇನು ಸರೋವರಕ್ಕೆ 5 ಕಿಲೋ ಮೀಟರ್ ಇರಬೇಕಾದರೆ ಚಾದರ ಹೊದ್ದಂತಿದ್ದ ಯಾಕ್ಗಳು ಯಾತ್ರೆಗೆ ಹೊರಟಂತೆ ನಮಗೆದುರಾಯಿತು. ದೈತ್ಯ ಯಾಕ್ಗಳೆದುರು ಧೈರ್ಯಮಾಡಿ ಒಂದೆರಡು ಪೋಟೊ ಕ್ಲಿಕ್ಕಿಸಿದೆ. ಗೆಳೆಯ ನಾಗರಾಜ್ ಜಾಗೃತೆ ಹೇಳಿದ. ಇಲ್ಲಿಂದ ಶುರುವಾಯಿತು ನೋಡಿ ನಗಲು, ಮಾತನಾಡಲೂ ಸಾಧ್ಯವಾಗದಂತಹ ಚಳಿ!  ಅಂತೂ 9.30ರ ಸುಮಾರಿಗೆ ಪವಿತ್ರ ಸರೋವರದಲ್ಲಿದ್ದೆವು.
ಪವಿತ್ರ ಸರೋವರದಲ್ಲಿ:-



ಭಾರತದ ಅತಿ ಎತ್ತರದ ಎರಡನೇ ಸರೋವರ. 290 ಎಕರೆಯಷ್ಟು ವಿಸ್ತೀರ್ಣ. ಒಟ್ಟು ಮೂರು ಸರೋವರಗಳ ಗುಚ್ಛ. 5 ಕಿ. ಮೀ ವ್ಯಾಸವಿರುವ ಗುರುದೊಂಗ್ ಮಾರ್. ಹಿಮಗಟ್ಟದೇ ಉಳಿವ ಇದರ ಕೆಲ ಭಾಗಗಳು ವಿಶಿಷ್ಟ. 8ನೇ ಶತಮಾನಕ್ಕೂ ಚಾಚಿಕೊಂಡ ಇದರ ಇತಿಹಾಸ. ಕಡು ನೀಲಿ, ಕಂದು, ಅಲ್ಲಲ್ಲಿ ಬದಲಾಗುವ ನೇರಳೆ ಬಣ್ಣವೋ ಮನಮೋಹಕ. ಹಿಮ ಬೆಟ್ಟದಡಿಯಲ್ಲಿ ತಣ್ಣಗೆ ನಲಿಯುತ್ತಿತ್ತು. ಹಿಮಗಾಳಿಗೆ ಸಣ್ಣ ತೆರೆಗಳೆದ್ದು ಬರುವ ಪರಿ ಅಮೋಘ.


ಸರೋವರದೆದುರಿಗೆ ನಿಂತರೆ ಧನ್ಯತಾ ಭಾವ. ಸ್ವಚ್ಛ ಪರಿಸರ. ಎವರೆಸ್ಟ್ ಬೇಸ್ ಕ್ಯಾಂಪನಷ್ಟು ಎತ್ತರ,  17,100 ಅಡಿ. ಗ್ಲೇಷಿಯರ್ನ ಹಿಮಗಾಳಿಗೆ ಶತಮಾನದಿಂದ ಸ್ವಲ್ಪವೂ ಅಂಜದೇ ನಿಂತಿರುವ ಕಾಂಗಚೇನ್ ಪರ್ವತ. ಮಡಿಲಲ್ಲಿ ಸರೋವರ. ಹಿಮಗಾಳಿಗೆ ಮೂಳೆ ಮುರಿವಂತಹ ಚಳಿ. ಪ್ರತಿ ಉಸಿರಿಗೂ ತಿಣುಕುವಂತೆ ಮಾಡುವ ಆಕ್ಸಿಜನ್ ಅಭಾವ. ಎಂತಹ ಗಟ್ಟಿಗರಿಗೂ ಎದೆ ನಡುಕ ಬರದಿರದು. ಬಲಕ್ಕೆ ಭೂತಾನ್, ಉತ್ತರಕ್ಕೆ ಚೀನಾದ ಗಡಿ. ಎದುರಿಗಿದ್ದ ಹಿಮ ಹೊದ್ದ ಶಿಖರಗಳು ಮೋಡಗಳೊಳಗೆ ನುಸುಳಿ ಬರುತ್ತಿದ್ದವು. ಮೊಗೆದಷ್ಟು ಚಿಮ್ಮುವ ಹಿಮಗಾಳಿ. ಊಸರವಳ್ಳಿಯಂತೆ ಗಳಿಗೆಗೊಂದು ಬಣ್ಣ ಬದಲಾಯಿಸುತ್ತಿತ್ತು. ಸರೋವರದ ಎದುರಿನ ಬೆಟ್ಟಕ್ಕೂ ಇದೇ ಚಾಳಿ ಅಂಟಿಕೊಂಡಿತು. ಸರೋವರ ತಲುಪಿದಾಗ ಕೆಂಪಗಿದ್ದವು ಸ್ವಲ್ಪ ಹೊತ್ತಿಗೆ ಹಸಿರಾದವು. ಕಪ್ಪಗಿದ್ದ ಕೆಲವು ಹಸಿರಾದವು!



ತಿಳಿ ನೀರ ಸರೋವರದಲ್ಲಿ ಮೀಯುವಾಸೆ. ಪುಸಲಾಯಿಸಿದರೂ ಪುಪ್ಪಸಗಳು ಮುಷ್ಕರ ಹೂಡಿತ್ತು. ಅವಿರತವಾಗಿ ಕ್ಯಾಮರ ತನ್ನ ಕೆಲಸ ಮಾಡುತ್ತಿತ್ತು. ಗಳಿಗೆ ಗಳಿಗೂ ಹಾರಿ ಬರುವ ಹತ್ತಿ ಹಿಂಜಿದಂತಹ ಮೋಡಗಳು ಪ್ರತಿ ಚಿತ್ರಕ್ಕೊಂದು ಕಲಾತ್ಮಕ ಸ್ಪರ್ಶ ನೀಡುತ್ತಿದ್ದವು.
ಇತಿಹಾಸ:-

ಇದರ ಇತಿಹಾಸಕ್ಕೆ ಸುತ್ತು ಹಾಕಿದರೆ 8 ನೇ ಶತಮಾನದ ಕಾಲಕ್ಕೆ ಬಂದು ನಿಲ್ಲುತ್ತೆ. ರಿಂಪೋಚೆ ಯಾ ಪದ್ಮಸಂಭವ, ಟಿಬೆಟಿಯನ್ ಮಹಾಯನ ಸ್ಥಾಪಕನ ಸುತ್ತು ಗಿರಕಿ ಹೊಡೆಯುತ್ತೆ. ಈತ ಟಿಬೆಟಿನಿಂದ ಹಿಂದಿರುಗುವಾಗ ಈ ಸರೋವರದ ಸನಿಹದಲ್ಲಿ ಹಾದು ಹೋಗುತ್ತಾನೆ. ಆತನಲ್ಲಿ ಹಳ್ಳಿಗರು ಬೇಡಿಕೆಯೊಂದನ್ನು ಇಡುತ್ತಾರೆ. ಈಗಿಲ್ಲಿ ಹಳ್ಳಿಯೇ ಇಲ್ಲ ನೆನಪಿರಲಿ. ಸೈನಿಕರ ಬಂಕರ್ಗಳು ಜೊತೆಗೆ ಟೀಸ್ಟಾ ನದಿ ಮಾತ್ರ. ನಮಗೆ ಚಳಿಗಾಲಕ್ಕೆ ಕುಡಿಯಲು ನೀರಿಲ್ಲ, ಎಲ್ಲವೂ ಹಿಮವಾಗುತ್ತದೆ. ಹಾಗಾಗಿ ತಾವು ದಯಮಾಡಿ ಸಹಾಯ ಮಾಡಿ ಎಂದು ಬೇಡುತ್ತಾರೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ -35 ಡಿಗ್ರಿಗೆ ಇಳಿಯುತ್ತೆ. ಉರುವಲಿಲ್ಲದ ತಣ್ಣನೆ ಮರುಭೂಮಿಯ ನಡುವಿರುವ ಸರೋವರಕ್ಕೆ ಗುರು ಪದ್ಮ ಸಂಭವ ತಮ್ಮ ಕೋಲಿನಿಂದ ಕೆಲಭಾಗಕ್ಕೆ ಬಾರಿಸುತ್ತಾರೆ. ಆ ಭಾಗ ಹಾಗೆ ಉಳಿದು ಉಳಿದೆಲ್ಲಾ ಭಾಗ ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆ, ಅದೂ -35ಡಿಗ್ರಿಯಲ್ಲಿ. ಹಾಗಾಗಿ ಈ ಸರೋವರಕ್ಕೆ ಗುರುದೊಂಗ್ ಮಾರ್ ಎಂಬ ವಿಶಿಷ್ಟ ಹೆಸರು. ಗುರು ತನ್ನ ಕೋಲಿನಿಂದ ಬಾರಿಸಿದ ಎಂದು ಇದರ ಅರ್ಥ. ಇವತ್ತಿಗಿದು ಬೌದ್ಧರ ಪವಿತ್ರ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಮಕ್ಕಳಿಲ್ಲದವರು ಬೇಡಿಕೊಂಡರೆ ಮಗುವೆಂಬ ಪ್ರಸಾದವೂ ಆಗುವುದೆಂಬ ಪ್ರತೀತಿಯೂ ಇದೆ. ಇದರ ನೀರನ್ನು ಕೆಲವು ಪ್ರವಾಸಿಗರು ಸಂಗ್ರಹಿಸಿ ಕೊಂಡೊಯ್ಯುವರು.
ಒಂದೇ ದಿನ 10,000 ಅಡಿ ಎತ್ತರಕ್ಕೆ:-
ವಿಜ್ಞಾನದ ಪ್ರಕಾರ ಒಂದು ದಿನಕ್ಕೆ ಹೆಚ್ಚೆಂದರೆ ಸಾವಿರ ದಿಂದ ಎರಡು ಸಾವಿರ ಅಡಿಗಳವರೆಗೆ ಏರಬಹುದು. ನಾವು ಬರೋಬ್ಬರಿ 10 ಸಾವಿರ ಅಡಿ ಏರಿದ್ದೆವು. ಎಲ್ಲರಿಗೂ ಸಣ್ಣಗೆ ತಲೆ ತಿರುಗಿದಂತಹ ಅನುಭವ. ಅಲ್ಲಿಗೆ ಬಂದ ಹೆಚ್ಚಿನವರು ಕೂಡಲೇ ಹಿಂದಿರುಗುತ್ತಿದ್ದರು. ಕೆಲವರಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದರು.
ಸರೋವರದ ಒಂದು ಸುತ್ತು ಹೊಡೆದು ಬಂದೆವು. ಪವಿತ್ರ ಸರೋವರದ ಪ್ರದಕ್ಷಿಣೆ ಮಾಡಲು ನಾಗರಾಜ ಮತ್ತು ಮಿಲಿಂದ್ ಹೊರಟು ನಿಂತರು. ನಾನು ಮಮತಾ, ಅನುರಾಧ ದಂಡೆಯಲ್ಲಿ ಉಳಿದು ಸರೋವರದ ಸೌಂದರ್ಯ ಸವಿಯುತ್ತಾ ಕುಳಿತೆವು. ಹಲವು ಹಿಮಗುಬ್ಬಿ ಮರಿಗಳು ನಮ್ಮ ಜೊತೆಗಿದ್ದವು. ಸುಂದರ ಮತ್ತೊಂದು ಹಕ್ಕಿಯೂ ನಮಗೆ ಗಿರಕಿ ಹೊಡೆದು ಬರುತ್ತಿತ್ತು.
17 ಸಾವಿರ ಅಡಿಯಲ್ಲೊಂದು ಚಹದಂಗಡಿ:-
ಅವರು ಹಿಂದಿರುಗುವಾಗ 12.30. ಆಕ್ಸಿಜನ್ ಅಭಾವಕ್ಕೆ ನಮ್ಮ ಡ್ರೈವರ್ಗೆ ತಲೆ ಗಿರಕಿ ಹೊಡಿತ್ತಿತ್ತು. ಆತನಿಗೆ ಚಾ ಕುಡಿಸಿ, ಮ್ಯಾಗಿ ತಿನ್ನಿಸಿ ಸ್ವಲ್ಪ ಸುಧಾರಿಸಿದ ಕೂಡಲೇ ಹೊರಟು ಬಿಟ್ಟೆವು. 17 ಸಾವಿರ ಅಡಿಯಲ್ಲಿ ಗೇಲೇ ಎನ್ನುವ ಸಾಹಸಿಗನಿಲ್ಲಿ ಚಹದಂಗಡಿ ಇಟ್ಟಿದ್ದ! ಚಹ ಒಂದಕ್ಕೆ 40 ರೂ. ಮ್ಯಾಗಿಯೊಂದಕ್ಕೆ 70 ರೂಪಾಯಿ. ದೇವಸ್ಥಾನದ ಕಾವಲುಗಾರನಾದ ಈತ ಚೀನಾ ಗಡಿ ಭಾಗದಲ್ಲಿ ರೂಂ ಮಾಡಿ ವಾಸಕ್ಕಿದ್ದ. ಮತ್ತೊಮ್ಮೆ ಬಂದು ಈತನನ್ನು ಮಾತನಾಡಿಸುವ ಹಂಬಲದೊಂದಿಗೆ ಅಲ್ಲಿಂದ ಹೊರಟು ನಿಂತೆವು. ನಸು ಕಂದು ಬಣ್ಣದಿಂದ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಾ ಸರೋವರ ನಮಗೆಲ್ಲಾ ಬಾಯ್ ಬಾಯ್ ಹೇಳಿತ್ತು. ಅಗಾಧ ಅನುಭವದ ಬುತ್ತಿಯೊಂದು ನಮ್ಮ ಜೊತೆಗಿತ್ತು.

ಶ್ರೀಧರ್. ಎಸ್. ಸಿದ್ದಾಪುರ
  ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ-576229



Sunday, July 8, 2018

ಹಂಪಿ ಎಂಬ ಶಿಲ್ಪಕಲೆಯ ಹೂತೋಟದಲ್ಲಿ......


#Hampi_photography
Thanks to k s Shrinivas.
ವಿಶ್ವ ಪಾರಂಪರಿಕತೆಯ ನಾಡು ಹಂಪಿ. ಮೊಗೆದಷ್ಟು ಮುಗಿಯದ ಹಂಪಿ. ಛಾಯಾಚಿತ್ರಕಾರರ ಪ್ರಿಯ ನಾಡು. ಒಟ್ಟು 25 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಕನರ್ಾಟಕದ ಶಿಲ್ಪಕಲಾ ವಿಸ್ಮಯ ಎನ್ನಬಹುದು!
2000 ನೇ ಇಸವಿಯಲ್ಲಿ ಹಂಪಿಯನ್ನು ವಿದ್ಯಾಥರ್ಿಯಾಗಿ ನೋಡಿದ್ದೆ. ಈ ಬಾರಿ ನೋಡಿದ್ದು ಛಾಯಾಚಿತ್ರಕಾರನಾಗಿ. ಇಲ್ಲಿನ ಪ್ರತೀ ಕಲ್ಲೂ ಕತೆ ಹೇಳುತ್ತವೆ.
ಹಂಪಿಯಲ್ಲಿ  ಬೆಳಗು ....

ವಿರೂಪಾಕ್ಷನ ಎದುರಿನ ಮಾತಂಗ ಪರ್ವತದ ತುದಿಯಿಂದ ನೋಡಿದ ಹಂಪಿಯ ಸೌಂದರ್ಯವನ್ನು ಪದಗಳಲ್ಲಿ ಹಿಡಿದಿಡಲಾರದ್ದು. ವಿಚಿತ್ರ ಕಲ್ಲುಗಳ ಮಾತಂಗ ಚಾರಣ ಬಣ್ಣಿಸಲಾಗದ್ದು.
ಮಾತಂಗದ ಇಳಿ ಹಾದಿ... 
ಮಾತಂಗ ಪರ್ವತದ ತುದಿಯಿಂದ ಕಾಣುವ ಪಂಪಾವತಿಯ ಗಾಂಬಿರ್ಯ, ಅಚ್ಚುತರಾಯ ದೇವಾಲಯದ ಪೂರ್ಣ ಮೇಲ್ನೋಟ,

ಪುರಂದರ ಮಂಟಪ, ಅಚ್ಚುತರಾಯ ದೇವಾಲಯದ ದ್ವಾರ, ಆಗಿನ ಕಾಲದ ದೇವಾಲಯದ ವಿಶಾಲ ಬೀದಿಗಳು, ಹನುಮನ ಪಾದ, ತೆನಾಲಿ ಮಂಟಪ,
ವಿಠ್ಠಲ ದೆವಾಲಯದ ಮುಖ  ಮಂಟಪ ...
ಕೋಟೆಯ ಗೋಡೆಗಳ 360 ಡಿಗ್ರಿ ನೋಟ ನಮ್ಮನ್ನು ಎದೆಂದೂ ಮರೆಯದಂತೆ ಮಾಡಿ ದಂಗು ಬಡಿಸುತ್ತದೆ. ಮಳೆಗಾಲಕ್ಕೆ ಭೂಮಿ ಹಾಸಿದ ಮೋಡದ ಚಪ್ಪರದೊಂದಿಗೆ ಒಂದಿಷ್ಟು ಛಾಯಾ ಮಿತ್ರರೊಂದಿಗೆ ಸವಿದ ಸಣ್ಣ ಚಾರಣ.
ವಿಶಿಷ್ಟ  ವಿನ್ಯಾಸ ದ  ಶಿಲಾ  ರಚನೆ ..
ಆಹಾ ಎನ್ನುವಂತಹ ಆನಂದವನ್ನು ನೆನದಷ್ಟು ಕೊಡುವ ನೆನಪುಗಳ ಚಿತ್ತಾರ. ಪ್ರತಿ ಚಿತ್ರಕ್ಕೂ ಮುಗಿಲ ಸಿಂಗಾರಿಸಿದ ಸಣ್ಣ, ದೊಡ್ಡ ಮೋಡದ ತುಣುಕುಗಳ ಅಲಂಕಾರ ನಮ್ಮನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಪ್ರತಿ ಚಿತ್ರವೂ ಛಾಯಾ ಕಥನ. ಬೆಳಕು ನೆರಳಿನ ಹಗ್ಗ ಜಗ್ಗಾಟ.

ಸಾಮಾನ್ಯವಾಗಿ ಅಚ್ಚುತರಾಯ ದೇವಾಲಯವನ್ನು ಯಾವ ಪ್ರವಾಸಿಯೂ ನೋಡುವುದು ಕಡಿಮೆ. ನಾವು ಹೋದಾಗ ಶನಿವಾರವೂ ಈ ದೇವಾಲಯ ಖಾಲಿ ಹೊಡೆಯುತ್ತಿತ್ತು!
ಮಾತಂಗದ ತುದಿ ಮತ್ತು  ಅಚ್ಚುತ ರಾಯ  ಮಂದಿರ..

 ಮಾತಂಗ ಶಿಖರದ ಪೂರ್ವ ಮಗ್ಗುಲಿನಲ್ಲಿಳಿದರೆ ಸಿಗುವುದೇ ಅಚ್ಚುತರಾಯ ದೇವಾಲಯ.

Achutaraya temple Gopura..

Achutaraya Temple. Hampi.

ದೇವಾಲಯದ ವಿಮಾನ, ಗರ್ಭ ಗುಡಿ ಬಣ್ಣಿಸಲು ಕನಿಷ್ಠ ಒಂದು ದಿನವಾದರೂ ಬೇಕು. ಸವಿದೇ ತೀರಬೇಕು.
Pattabhirama Temple..Hampi..
ಪಟ್ಟಾಭಿ ರಾಮಚಂದ್ರ ದೇವಾಲಯ ಊರ ಹೊರಗಿನ ದೇವಾಲಯ. ಇಲ್ಲಿಗೂ ಪ್ರವಾಸಿಗಳು ಬರುವುದು ವಿರಳ.
ಕೋದಂಡ ರಾಮ, ವರಾಹ ದೇವಾಲಯ, ವ್ಯಾಸರು ಸ್ಥಾಪಿಸಿದ್ದೆಂದು ಹೇಳಲಾದ ಯಂತ್ರೋಧ್ಧಾರಕ ಆಂಜನೇಯ, ಕೋದಂಡ ರಾಮ ದೇವಾಲಯದ ಸನಿಹವೂ ಪ್ರವಾಸಿಗರು ಸುಳಿಯೋದಿಲ್ಲ. ಕೆ. ಎಸ್. ಶ್ರೀನಿವಾಸ್ ಅವರ ಜೊತೆ ಹೋಗಿದ್ದರಿಂದ ಅವನ್ನೆಲ್ಲಾ ನೋಡಲು ಸಾಧ್ಯವಾಯಿತು. ಜೊತೆಗೊಂದಿಷ್ಟು ಚಿತ್ರಗಳು.
ಮಾತಂಗದಿಂದ...


ಹಂಪಿಯನ್ನು ಸರಿಯಾಗಿ ನೋಡಲು ಏನಿಲ್ಲೆವೆಂದರೂ 15 ರಿಂದ 20 ದಿನಗಳು ಬೇಕು. ಅರ್ಥ ಮಾಡಿಕೊಳ್ಳಲು ಮೂರ್ನಾಲ್ಕು ತಿಂಗಳೂ ಸಾಲದೇನೋ. ನಮ್ಮ ತಂಡದೊಂದಿಗೆ 20 ನೇ ಬಾರಿಗೆ ಹಂಪಿಗೆ ಬಂದವರಿದ್ದರು. ಅವರ ಪೋಟೋಗ್ರಫಿಯ ಹಸಿವಿಗೆ ಮೆಚ್ಚಿದೆ.
ವಿಜಯ ವಿಠಲ ದೇವಾಲಯವೊಂದನ್ನೇ ನೋಡಲು 2 ದಿನವೂ ಕಡಿಮೆಯೇ!


ಇನ್ನು ಅಂಜನಾದ್ರಿ ಬೆಟ್ಟ, ಆನೆಗುಂದಿಯ ಕೋಟೆ ಉಳಿದೇ ಹೋಯಿತು. ಮುಂದಿನ ಬಾರಿ ಹೋದಾಗ ನೋಡಿಕೊಂಡು ಬರಬೇಕು.
ಪದಗಳಾಟ ಇಲ್ಲಿಗೆ ಸಾಕು ಮುಂದಿನದು ಮತ್ತೆ ಪುರುಸೊತ್ತಾದಾಗ. ಇನ್ನು ನೀವುಂಟು ಮತ್ತು ಚಿತ್ರಗಳುಂಟು.
ಶ್ರೀಧರ್. ಎಸ್. ಸಿದ್ದಾಪುರ

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...