Sunday, July 8, 2018

ಹಂಪಿ ಎಂಬ ಶಿಲ್ಪಕಲೆಯ ಹೂತೋಟದಲ್ಲಿ......


#Hampi_photography
Thanks to k s Shrinivas.
ವಿಶ್ವ ಪಾರಂಪರಿಕತೆಯ ನಾಡು ಹಂಪಿ. ಮೊಗೆದಷ್ಟು ಮುಗಿಯದ ಹಂಪಿ. ಛಾಯಾಚಿತ್ರಕಾರರ ಪ್ರಿಯ ನಾಡು. ಒಟ್ಟು 25 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಕನರ್ಾಟಕದ ಶಿಲ್ಪಕಲಾ ವಿಸ್ಮಯ ಎನ್ನಬಹುದು!
2000 ನೇ ಇಸವಿಯಲ್ಲಿ ಹಂಪಿಯನ್ನು ವಿದ್ಯಾಥರ್ಿಯಾಗಿ ನೋಡಿದ್ದೆ. ಈ ಬಾರಿ ನೋಡಿದ್ದು ಛಾಯಾಚಿತ್ರಕಾರನಾಗಿ. ಇಲ್ಲಿನ ಪ್ರತೀ ಕಲ್ಲೂ ಕತೆ ಹೇಳುತ್ತವೆ.
ಹಂಪಿಯಲ್ಲಿ  ಬೆಳಗು ....

ವಿರೂಪಾಕ್ಷನ ಎದುರಿನ ಮಾತಂಗ ಪರ್ವತದ ತುದಿಯಿಂದ ನೋಡಿದ ಹಂಪಿಯ ಸೌಂದರ್ಯವನ್ನು ಪದಗಳಲ್ಲಿ ಹಿಡಿದಿಡಲಾರದ್ದು. ವಿಚಿತ್ರ ಕಲ್ಲುಗಳ ಮಾತಂಗ ಚಾರಣ ಬಣ್ಣಿಸಲಾಗದ್ದು.
ಮಾತಂಗದ ಇಳಿ ಹಾದಿ... 
ಮಾತಂಗ ಪರ್ವತದ ತುದಿಯಿಂದ ಕಾಣುವ ಪಂಪಾವತಿಯ ಗಾಂಬಿರ್ಯ, ಅಚ್ಚುತರಾಯ ದೇವಾಲಯದ ಪೂರ್ಣ ಮೇಲ್ನೋಟ,

ಪುರಂದರ ಮಂಟಪ, ಅಚ್ಚುತರಾಯ ದೇವಾಲಯದ ದ್ವಾರ, ಆಗಿನ ಕಾಲದ ದೇವಾಲಯದ ವಿಶಾಲ ಬೀದಿಗಳು, ಹನುಮನ ಪಾದ, ತೆನಾಲಿ ಮಂಟಪ,
ವಿಠ್ಠಲ ದೆವಾಲಯದ ಮುಖ  ಮಂಟಪ ...
ಕೋಟೆಯ ಗೋಡೆಗಳ 360 ಡಿಗ್ರಿ ನೋಟ ನಮ್ಮನ್ನು ಎದೆಂದೂ ಮರೆಯದಂತೆ ಮಾಡಿ ದಂಗು ಬಡಿಸುತ್ತದೆ. ಮಳೆಗಾಲಕ್ಕೆ ಭೂಮಿ ಹಾಸಿದ ಮೋಡದ ಚಪ್ಪರದೊಂದಿಗೆ ಒಂದಿಷ್ಟು ಛಾಯಾ ಮಿತ್ರರೊಂದಿಗೆ ಸವಿದ ಸಣ್ಣ ಚಾರಣ.
ವಿಶಿಷ್ಟ  ವಿನ್ಯಾಸ ದ  ಶಿಲಾ  ರಚನೆ ..
ಆಹಾ ಎನ್ನುವಂತಹ ಆನಂದವನ್ನು ನೆನದಷ್ಟು ಕೊಡುವ ನೆನಪುಗಳ ಚಿತ್ತಾರ. ಪ್ರತಿ ಚಿತ್ರಕ್ಕೂ ಮುಗಿಲ ಸಿಂಗಾರಿಸಿದ ಸಣ್ಣ, ದೊಡ್ಡ ಮೋಡದ ತುಣುಕುಗಳ ಅಲಂಕಾರ ನಮ್ಮನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಪ್ರತಿ ಚಿತ್ರವೂ ಛಾಯಾ ಕಥನ. ಬೆಳಕು ನೆರಳಿನ ಹಗ್ಗ ಜಗ್ಗಾಟ.

ಸಾಮಾನ್ಯವಾಗಿ ಅಚ್ಚುತರಾಯ ದೇವಾಲಯವನ್ನು ಯಾವ ಪ್ರವಾಸಿಯೂ ನೋಡುವುದು ಕಡಿಮೆ. ನಾವು ಹೋದಾಗ ಶನಿವಾರವೂ ಈ ದೇವಾಲಯ ಖಾಲಿ ಹೊಡೆಯುತ್ತಿತ್ತು!
ಮಾತಂಗದ ತುದಿ ಮತ್ತು  ಅಚ್ಚುತ ರಾಯ  ಮಂದಿರ..

 ಮಾತಂಗ ಶಿಖರದ ಪೂರ್ವ ಮಗ್ಗುಲಿನಲ್ಲಿಳಿದರೆ ಸಿಗುವುದೇ ಅಚ್ಚುತರಾಯ ದೇವಾಲಯ.

Achutaraya temple Gopura..

Achutaraya Temple. Hampi.

ದೇವಾಲಯದ ವಿಮಾನ, ಗರ್ಭ ಗುಡಿ ಬಣ್ಣಿಸಲು ಕನಿಷ್ಠ ಒಂದು ದಿನವಾದರೂ ಬೇಕು. ಸವಿದೇ ತೀರಬೇಕು.
Pattabhirama Temple..Hampi..
ಪಟ್ಟಾಭಿ ರಾಮಚಂದ್ರ ದೇವಾಲಯ ಊರ ಹೊರಗಿನ ದೇವಾಲಯ. ಇಲ್ಲಿಗೂ ಪ್ರವಾಸಿಗಳು ಬರುವುದು ವಿರಳ.
ಕೋದಂಡ ರಾಮ, ವರಾಹ ದೇವಾಲಯ, ವ್ಯಾಸರು ಸ್ಥಾಪಿಸಿದ್ದೆಂದು ಹೇಳಲಾದ ಯಂತ್ರೋಧ್ಧಾರಕ ಆಂಜನೇಯ, ಕೋದಂಡ ರಾಮ ದೇವಾಲಯದ ಸನಿಹವೂ ಪ್ರವಾಸಿಗರು ಸುಳಿಯೋದಿಲ್ಲ. ಕೆ. ಎಸ್. ಶ್ರೀನಿವಾಸ್ ಅವರ ಜೊತೆ ಹೋಗಿದ್ದರಿಂದ ಅವನ್ನೆಲ್ಲಾ ನೋಡಲು ಸಾಧ್ಯವಾಯಿತು. ಜೊತೆಗೊಂದಿಷ್ಟು ಚಿತ್ರಗಳು.
ಮಾತಂಗದಿಂದ...


ಹಂಪಿಯನ್ನು ಸರಿಯಾಗಿ ನೋಡಲು ಏನಿಲ್ಲೆವೆಂದರೂ 15 ರಿಂದ 20 ದಿನಗಳು ಬೇಕು. ಅರ್ಥ ಮಾಡಿಕೊಳ್ಳಲು ಮೂರ್ನಾಲ್ಕು ತಿಂಗಳೂ ಸಾಲದೇನೋ. ನಮ್ಮ ತಂಡದೊಂದಿಗೆ 20 ನೇ ಬಾರಿಗೆ ಹಂಪಿಗೆ ಬಂದವರಿದ್ದರು. ಅವರ ಪೋಟೋಗ್ರಫಿಯ ಹಸಿವಿಗೆ ಮೆಚ್ಚಿದೆ.
ವಿಜಯ ವಿಠಲ ದೇವಾಲಯವೊಂದನ್ನೇ ನೋಡಲು 2 ದಿನವೂ ಕಡಿಮೆಯೇ!


ಇನ್ನು ಅಂಜನಾದ್ರಿ ಬೆಟ್ಟ, ಆನೆಗುಂದಿಯ ಕೋಟೆ ಉಳಿದೇ ಹೋಯಿತು. ಮುಂದಿನ ಬಾರಿ ಹೋದಾಗ ನೋಡಿಕೊಂಡು ಬರಬೇಕು.
ಪದಗಳಾಟ ಇಲ್ಲಿಗೆ ಸಾಕು ಮುಂದಿನದು ಮತ್ತೆ ಪುರುಸೊತ್ತಾದಾಗ. ಇನ್ನು ನೀವುಂಟು ಮತ್ತು ಚಿತ್ರಗಳುಂಟು.
ಶ್ರೀಧರ್. ಎಸ್. ಸಿದ್ದಾಪುರ

2 comments:

  1. ಹೊಟ್ಟೆ ಉರಿಸುತ್ತೆ ಮರೆಯ ನಿನ್ನ ತಿರುಗಾಟ. ಚೆನ್ನಾಗಿ ಬರೆದಿರುವೆ. ಓದಲು ಖುಷಿಯಾಗುತ್ತೆ.

    ReplyDelete

ವಾರೆ ನೋಟ

 ಮೊದಲ ಮಮ್ಮಿಯ ತೊದಲು ನೋಟ… ಮೊದಲ್ಗೊಂಡ ಓಟ- ಶಿಮ್ಲಾದ ಹಾಟ್‌ ರಷ್‌ನ್ನು ಹಿಂದಿಕ್ಕಿ ನಾರ್ಕಂಡದ ಆಪಲ್‌ ತೋಟಗಳನ್ನು ಹಾದು ವಿಶ್ವದ ಉತ್ಕೃಷ್ಠ ಆಲೂ ಬೆಳೆಯುವ ಚಿತ್ಕುಲ್‌ ಊ...