ಹಕ್ಕಿ ಹಿಕ್ಕೆಯಂತೆ ಕಾಣುವ, ಚಪ್ಪಟೆ ಹುಳದಂತಹ ಎಂಟು ತುದಿ ಹೊಂದಿರುವ, ಅಂಗಿ ಗುಂಡಿಯಂತಿರುವ, ಕಿತ್ತಳೆ ಹಣ್ಣಿನಂತಿರುವ,
ಅಳಿಲಿನ ಮರಿಯಂತಿರುವ ಜೇಡಗಳು. ಒಂದೊಂದು ಒಂದು ಬಗೆ.
ಕೆಲವು ಮುದುಡಿ ಮಲಗಿದರೆ, ಕೆಲವು ಕೀಟಗಳ ಹಿಡಿದು ತಿನ್ನಲು ಕುಳಿತಿದ್ದವು.
ಇನ್ನು ಕೆಲವು ಮತ್ತೊಂದು ಜೇಡವನ್ನು ತಿನ್ನಲು ಹಿಡಿದಿದ್ದವು.
ಕೆಲವು ಎರಡು ಬಾಲದವು. ಕೆಲವು ಇರುವೆಯಂತಿರುವವು, ಆದರೆ ಇರುವೆಗಳಲ್ಲ! ಎಲ್ಲವೂ ಜೇಡಗಳು. ಬಲೆ ಹೆಣೆದು ಕಾದು ಕುಳಿತ ಕೆಲವು ಜೇಡಗಳ ಛಾಯಾಚಿತ್ರಗಳು.
ಒಂದೊಂದು ಒಂದು ಬಣ್ಣ. ಕೆಲವು ನಿದ್ರಾವಸ್ಥೆಯಲ್ಲಿ. ಕೆಲವು ರಾತ್ರಿ ಶಿಖಾರಿಗೆ ಸಜ್ಜಾಗಿದ್ದವು.
ಇವುಗಳ ಜೊತೆಗೆ ಒಂದಿಪ್ಪತ್ತು ಹಕ್ಕಿಗಳು.
ಹಲವು ಮಿಡತೆಗಳು, ಏರೋಪ್ಲೇನ್ ಚಿಟ್ಟೆಗಳು ಮತ್ತು ಅವುಗಳ ದೂರದ ಸಂಬಂಧಿ ಕೀಟಗಳು! ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳು ಕಣ್ತುಂಬಿಕೊಂಡ ದೃಶ್ಯ! ಮಕ್ಕಳ ಕಲ್ಪನೆಯಲ್ಲಿ ಹೊಸ ಹೂಗಳಂತೆ ಜೇಡಗಳು ಅರಳಿ ನಿಂತವು.
ಎಲ್ಲಾ ಛಾಯಾಚಿತ್ರಗಳು ಶ್ರೀಧರ್ ಎಸ್. ಸಿದ್ದಾಪುರ ಅವರ ಕ್ಯಾಮರ ಕಣ್ಣಿಂದ ಮೂಡಿಬಂದಿತ್ತು.
very good
ReplyDeletethank you
ReplyDeleteತುಂಬಾ ಚೆನ್ನಾಗಿವೆ ಚಿತ್ರಗಳು
ReplyDeleteThanks
ಧನ್ಯವಾದಗಳು ಸರ್
ReplyDelete