ಏನೋ ಹೊಸದು ಮಾಡುವಲ್ಲಿ ಎಡವುದು ಸಹಜ. ಕಷ್ಟ ಕೋಟಲೆಗಳು ನೂರಾರು. ಅವನ್ನೆಲ್ಲಾ ಮೆಟ್ಟಿ ನಿಂತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇಲ್ಲಿ ಈ ವರ್ಷ ಮಕ್ಕಳ ಅಜ್ಜಿಯಂದಿರಿಂದ ಸಂಗ್ರಹಿಸಿದ 'ಅಜ್ಜಿ ಮದ್ದು' ಎಂಬ ಕಿರು ಹೊತ್ತಗೆಯನ್ನು ಅನಾವರಣಗೊಳಿಸಲಾಯಿತು. ನಿವೃತ್ತ ಸಸ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಅರವಿಂದ ಹೆಬ್ಬಾರ್ ಅವರು ಪತ್ರಿಕೆ ಪ್ರಾಯೋಜಿಸಿ ಅನಾವರಣಗೊಳಿಸಿ ಮಾತನಾಡಿದರು.
ಮಕ್ಕಳ, ಶಿಕ್ಷಕರ ಪ್ರಯತ್ನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ಇನ್ನೂ ಹೆಚ್ಚಿನ ಸಂಚಿಕೆಗಳು ಹೊರ ಬರಲಿ ಎಂದು ಆಶಿಸಿದರು.
No comments:
Post a Comment