ಕುವೆಂಪು ಕಾವ್ಯ ಮತ್ತು ಕಾಜಾಣ
ಒಮ್ಮೆ ಮನೆಯ ಮುಂದೆ ಬೆಕ್ಕೊಂದರ ವಿಚಿತ್ರವಾದ ಕೂಗು ಕೇಳಿಸುತ್ತಿತ್ತು. ಏನಾಯಿತು ನಮ್ಮ ಮನೆಯ
ಬೆಕ್ಕಿಗೆ ಎಂದು ಗಾಬರಿ ಬಿದ್ದೆವು. ಕೂಡಲೇ ನೋಡಲು ಓಡಿದೆವು. ಹೊರ ಕಾಲಿಟ್ಟವರಿಗೆ ಆಶ್ಚರ್ಯ ಕಾದಿತ್ತು.
ಮನೆ ಎದುರಿನ ಬಾವಿ ಕಟ್ಟೆಯ ಆಚೆಯಿಂದ ಬೆಕ್ಕಿನ
ಸ್ವರವೊಂದು ಪುಂಖಾನು ಪುಂಖವಾಗಿ ಬರುತಲಿದೆ.
ಒಬ್ಬರಿಗೂ ಬೆಕ್ಕು ಕಾಣಿಸುತ್ತಿಲ್ಲ! ಎಲ್ಲಿದೆ ಎಲ್ಲಿದೆ
ಎಂದು ಹುಡುಕ ತೊಡಗಿದರು. ಅಲ್ಲಿಗೆ ಬಂದ ನಾನು
ಹೇಳಿದೆ ಬೆಕ್ಕು ಕೂಗುತ್ತಿರುವುದು ಕೆಳಗೆಲ್ಲೂ ಅಲ್ಲ.
ಆ ಸಪೂರ ಸರಿಗೆಯ ಮೇಲೆಂದು ಕೈತೋರಿದೆ.
ಎಲ್ಲರೂ ಅತ್ತ ನೋಡಿದರು. ಗಾಢ ನೀಲ ವರ್ಣದ, ತಲೆ
ಮೇಲೊಂದು ಜುಟ್ಟು ಹೊತ್ತ, ಉದ್ದ ಬಾಲದ
ಹಕ್ಕಿಯೊಂದು ಬೆಕ್ಕಿನ ಮರಿಯಂತೇ
ಕರ್ಕಶವಾಗಿ ಬೆಕ್ಕಿನಂತೆ ಕೂಗುತಲಿತ್ತು!
ಮನೆಯವರೆಲ್ಲರಿಗೂ ಸಖತ್ ಆಶ್ಚರ್ಯ!
ಇದೊಂದು ವಿಶಿಷ್ಟ ಹಕ್ಕಿ. ಗಾಢ ನೀಲ ವರ್ಣದ, ತಲೆ
ಮೇಲೊಂದು ಜುಟ್ಟು ಹೊತ್ತ, ಟಿಸಿಲೊಡೆದ
ಬಾಲವಿರುವ, ತುದಿಯನ್ನು ಯಾರೋ ಮಾಂತ್ರಿಕ
ಕತ್ತರಿಸಿದಂತೆ ಸಿಂಗರಿಸಿಕೊಂಡಿರುವ ಹಕ್ಕಿಯೇ
ಕಾಜಾಣ. ಇದು ಮಲೆನಾಡು ಮತ್ತು ಅರೆ
ಮಲೆನಾಡುಗಳಲ್ಲಿ ಕಂಡುಬರುವ ಹಕ್ಕಿ. ಕುವೆಂಪು
ಕಾವ್ಯದಲ್ಲಿ ಈ ಹಕ್ಕಿ ಹಾಸು ಹೊಕ್ಕಾಗಿದೆ. ಕುವೆಂಪು
ಕಾವ್ಯದಲ್ಲಿ ಈ ಹಕ್ಕಿ ಸೌಮ್ಯ ಸ್ವಭಾವದಂತೆ ಅದನ್ನು
ವಿವರಿಸಿದ್ದು ಕಾಣಬಹುದು. ಅವರಿಗೂ ಬಹಳ
ಪ್ರಿಯವಾದ ಹಕ್ಕಿ ಎಂದು ಬರೆದು ಕೊಂಡಿದ್ದಾರೆ.
ಅವರ 'ಕಾನೂರು ಹೆಗ್ಗಡತಿ' ಕಾದಂಬರಿಯಲ್ಲಿ
ಇದರ ಪ್ರಸ್ತಾಪ ಬರುತ್ತೆ. ಕಾಲವನ್ನು ಸೂಚಿಸಲು
ಈ ಹಕ್ಕಿ ಮರಿ ಮಾಡುವ ವಿಚಾರವಾಗಿ ಬರೆದಿದ್ದಾರೆಂದು
ನೆನಪು. ಹಾಗೆಯೇ ಆ ಕೃತಿಯ ಮುಖ ಪುಟವನ್ನೇ
ಅಲಂಕರಿಸಿದ 'ಚಿತ್ತ ಚೋರ'. ಮಲೆಗಳಲ್ಲಿ ಮದು
ಮಗಳು, ಮಲೆನಾಡಿನ ಚಿತ್ರಗಳು ಕೃತಿಗಳಲ್ಲಿ ಇದರ
ವರ್ಣನೆಗಳಿವೆಯೆಂದು ನೆನಪು.
Rocket Tailed Dongro. |
ಅವರ ಕುಪ್ಪಳ್ಳಿ ಮನೆಯ ಉಪ್ಪರಿಗೆಯಲ್ಲೊಂದು ಈ
ಹಕ್ಕಿಯ ಸುಂದರ ಚಿತ್ರವಿದೆ. ಕುವೆಂಪು ಸಂಬಂಧಿ
ಮೈನಾ ಹೇಳುವಂತೆ ಅವರಿಗೂ ಈ ಹಕ್ಕಿಗೂ ಬಹಳಾ
ಅಚ್ಚುಮೆಚ್ಚು. ಅವರ ಕೃತಿ ಪ್ರಕಾಶನ ಸಂಸ್ಥೆಯಾದ
ಉದಯರವಿಯೂ ಸಹ ಈ ಹಕ್ಕಿಯ ಚಿತ್ರವನ್ನೇ ಅವರ
ಚಿಹ್ನೆಯಾಗಿ ಬಳಸಿಕೊಂಡಿದ್ದಾರೆ. 'ವಿಹರಿಸುತ್ತಿರುವ
ಕಾಜಾಣ'. ಕಾಜಾಣಗಳು ವಿವಿಧ ಹಕ್ಕಿಗಳ 38 ರೀತಿಯ ಕೂಗನ್ನು
ಪುನರುತ್ಪಾದಿಸಬಲ್ಲವೆಂದು ಇತ್ತಿಚಿಗೆ ಮೀರಾ ಎನ್ನುವ
ಗುಜರಾತಿ ಹುಡುಗಿ ಸಂಶೋಧನೆ ಮಾಡುವವರೆಗೂ
ಯಾರಿಗೂ ಗೊತ್ತಿರಲಿಲ್ಲ. ಈ ಹಕ್ಕಿಯ 38 ವಿಧಧ
ಕೂಗನ್ನು ದಾಖಲೀಕರಣ ಮಾಡಿದ್ದಾಳೀಕೆ. ಹಾಗಾಗಿ
ನಾವು ನೀವು ಎಣಿಸಿದಂತೆ ಇದೊಂದು ಸಾಮಾನ್ಯ
ಪಕ್ಷಿಯಲ್ಲ! ಇದು ಅದಲ್ಲ ಅದರ ಸಂಬಂಧಿ:- ಕರಾವಳಿ ಹಾಗು ಮಲೆನಾಡಿನ ಪಾದದಲ್ಲಿಯೂ ಇದರ
ಹತ್ತಿರದ ಸಂಬಂಧಿಯಂತೆ ಕಾಣುವ ಮತ್ತೊಂದು
ಹಕ್ಕಿಯೊಂದಿದೆ. ಎಲ್ಲಾ ಹೋಲಿಕೆಗಳಲ್ಲಿಯೂ ಇದು
ಕಾಜಾಣದಂತಿದೆ. ವ್ಯತ್ಯಾಸವೇನೆಂದರೆ 'ಕರಾವಳಿ ಜಾಣ'
ನಿಗೆ ತಲೆಯ ಮೇಲೊಂದು ಟೋಪಿ ಇಲ್ಲ. ಉದ್ದನೆಯ
ಬಾಲ ಮೊಂಡಾಗಿದೆ ಮತ್ತು ನೇರವಾಗಿದೆ. ಕಾಜಾಣಗಳು
ಜೋಡಿಯಾಗಿ ಕಂಡುಬಂದರೆ ಇವು ಏಕಾಂಗಿಯಾಗಿ
ಕಾಣ ಸಿಗುತ್ತದೆ. ಕಾಜಾಣ ಹಕ್ಕಿಗಳಲ್ಲಿ ಗಂಡು ಹೆಣ್ಣು
ಹಕ್ಕಿಗೆ ವ್ಯತ್ಯಾಸವಿಲ್ಲ. ಚಿಕ್ಕ ಕಾಜಾಣ ಹಕ್ಕಿಗಳು ಬಹಳ ತುಂಟ ಹಕ್ಕಿಗಳು.
ಒಮ್ಮೆ ಮನೆ ಹಿಂದಿನ ಹಿಂಡಲುಗಳಲ್ಲಿ ಅಲೆಯುತ್ತಿದ್ದಾಗ
ದೂರದಲ್ಲಿ ಎರಡು ಹಕ್ಕಿಗಳ ಹಾರಾಟ ಕಾಣಿಸಿತು.
ಸಮೀಪಕ್ಕೆ ಹೋಗಿ ಮರೆಯಲ್ಲಿ ನಿಂತೆ. ಕುಟ್ರ
ಹಕ್ಕಿಯೊಂದು ಹುಳ ಬೇಟೆಯಾಡಿತ್ತು. ಆ ಬೇಟೆಯನ್ನು
ಕಸಿದುಕೊಳ್ಳಲು 'ಕಾಜಾಣ' ಅದನ್ನು ಅಟ್ಟುತ್ತಿತ್ತು.
ಅದು ನನ್ನನ್ನೇ ಮರೆತು ಅಟ್ಟಾಡುತ್ತಿದ್ದವು. ಕುಟ್ರಹಕ್ಕಿ
ಹುಳವನ್ನು ನಾ ಬಿಡಲೊಲ್ಲೆ ಅನ್ನುವುದು 'ಕಾಜಾಣ'
ಅಟ್ಟುವುದು ಹತ್ತಾರು ಬಾರಿ ನಡದೇ ಇತ್ತು. ಕೊನೆಗೂ
ಕುಟ್ರಹಕ್ಕಿಯ ಹುಳವನ್ನು ಎಗರಿಸಲು 'ಕಾಜಾಣ'
ಯಶಸ್ವಿಯಾಯಿತು. ನಾನು ವಿಸ್ಮಿತನಾಗಿದ್ದೆ. ಕಾಜಾಣ
ಈ ಪರಿ ಆಕ್ರಮಣಕಾರಿಯೆಂದು! ಪಾಪದ ಹಕ್ಕಿಯೆಂದು
ತಿಳಿದಿದ್ದು ನನ್ನದೇ ತಪ್ಪು! ಕೈಲ್ಲೊಂದು ಡಿಜಿಟಲ್
ಕ್ಯಾಮರವಿದ್ದರೂ ಸುಮ್ಮನೆ ನಿಂತಿದ್ದೆ! ನಂತರ ಇದರ
ಆಕ್ರಮಣ ಹಲವಾರು ಬಾರಿ ನೋಡಿದೆ. ಮೆಲೆನಾಡಿನ
ಕಾಜಾಣ ತಲೆಯಲೊಂದು ಟೊಪಿ ಹಾಕಿಕೊಂಡು
ಇತರೇ ಹಕ್ಕಿಗಳಿಗೆ ಸಲೀಸಾಗಿ ಅವುಗಳ ಸ್ವರ
ಅನುಕರಿಸಿ ಟೋಪಿ ಹಾಕುತ್ತೆ!
ಇಷ್ಟೆಲ್ಲಾ ಓದಿ, ನೋಡಿದ ನನ್ನ ಮನಸ್ಸಿನಲ್ಲಿ ಅನೇಕ ಶಂಕೆಗಳೇಳುತ್ತವೆ. ಚಿಕ್ಕ ಕಾಜಾಣಗಳು ಮತ್ತು ಉದ್ದ ಬಾಲದ ಕಾಜಾಣಗಳು ಎರಡೂ ಒಂದೇಯೇ? ಒಂದೇ ಆಗಿದ್ದರೆ ಕೆಲವು ಕಾಜಾಣಗಳಿಗೆ ಟೋಪಿ ಹಾಕಿದವರಾರು. ಎರಡನ್ನೂ ಇಂಗ್ಲೀಷ್ ನಲ್ಲಿ Dongro ಎನ್ನುತ್ತಾರೆ. ವಿಕಾಸದ ಯಾವುದೋ ಕಾಲಘಟ್ಟದಲ್ಲಿ ತನ್ನ ಟೋಪಿ, ಬಾಲ ಮರೆತು ಚಿಕ್ಕದಾಗಿರಬೇಕು. ಪ್ರಕೃತಿಯ ಒತ್ತಡಕ್ಕೆ ಮಣಿದು ವಿಕಾಸದ ಹಾದಿಯಲ್ಲಿ ಈ ಬದಲಾವಣೆ ಮಾಡಿಕೊಂಡಿರಬೇಕು. ಇವರೆಡೂ ಹಕ್ಕಿಗಳ ಗುಣಾಣೂಗಳ ಸೂಕ್ಷ್ಮ ಅವಲೋಕನ ಮಾಡಿದರೆ ವಿಕಾಸವಾದದ ಹೊಳಹಿಗೆ ಹೊಸದೊಂದು ಹೊಳಹು ಸಿಗಬಹುದೇನೋ? ಬಲ್ಲವರು ಉತ್ತರಿಸಬೇಕು.
ಶ್ರೀಧರ. ಎಸ್. ಸಿದ್ದಾಪುರ.
hi, yes man when we met His house i saw that. Anyway its good keep it up............want for next generation yar...
ReplyDeleteSripathi Adiga