ಚಾರಣದ ಅನುಭವ
|
ಚಾರಣದ ನಡುವೆ |
ಹಿಮಾಲಯವೆಂದರೆ ಮೊದಲಿಗೆ ನೆನಪಿಗೆ ಬರುವುದು ಹಿಮ ಮತ್ತು ಇಲ್ಲಿನ ಚಾರಣದ ಕ್ಲಿಷ್ಟತೆ. ಸಾದಾರಣ ದೇಹ ಸ್ಥಿತಿಯವರಿಗೆ ಅಸಾಧ್ಯವೆಂಬ ಬಾವ. ಅಂತಹ ಆತಂಕಗಳೊಂದಿಗೆ ಹಿಮಾಲಯ ತಪ್ಪಲಿನ ಮಲಾನದ ಬಳಿಯ ಪರ್ವತವೇರಲು ತೀಮರ್ಾಸಿದೆವು. ದೂರದಿಂದ ನೋಡಿದರಂತೂ ಅಸಾಧಾರಣ ಗಿರಿ ಶ್ರೇಣಿಗಳಂತೆ ಅದು ಭಾಸವಾಗುತ್ತದೆ.
10,200 ಅಡಿಗಳ ಎತ್ತರ. ಕಡಿದಾದ ಶಿಖರಗಳು. ಆಮ್ಲಜನಕದ ಕೊರತೆ. ಪೈನ್ಮರಗಳ ಎಲೆಗಳಿಂದ ಇಚಿಂಚಿಗೂ ಜಾರುವ ಕಲ್ಲುಗಳು. ಎರಡಿಂಚೂ ವ್ಯತ್ಯಾಸವಾದರೂ ಕಣಿವೆ ಪಾಲಾಗುವ ಭೀತಿ ಎಂತಹ ಗಂಡೆದೆಯನ್ನು ನಡುಗಿಸಿ ಬಿಡುವುದು. ಅನಿರೀಕ್ಷಿತವಾಗಿ ಬೀಳುವ ಮಳೆ, ಚಾರಣಿಗರನ್ನು ಮತ್ತೂ ಹೈರಾಣ ಮಾಡಿಬಿಡುತ್ತದೆ. ಸುಂದರ ಪ್ರಕೃತಿಯೂ ಭೀಕರವಾಗಿ ಕಾಣಿಸುತ್ತದೆ.
|
ಬೆಟ್ಟದ ಮೇಲಿಂದ ಕಾಣುವ ಹಿಮ ಬೆಟ್ಟಗಳ ಮನ್ಮಯ ನೋಟ |
ಬುಂತರ್ ಎಂಬ ಊರಿನಿಂದ ನಾವಿಲ್ಲಿಗೆ ಕಾಲಿಟ್ಟಾಗ ಸುಮಾರು ಒಂದು ಗಂಟೆಯ ಸಮಯ. ಗಿರಿಯ ಸಮೀಪದ ವರೆಗೆ ವಾಹನ ಸೌಲಭ್ಯವಿದೆ. ಅಲ್ಲಿಂದೇನಿದ್ದರು ನಿಮ್ಮ ಕಾಲುಗಳು ನಿಮ್ಮ ಸಹಾಯಕ್ಕೆ. ನಿಧಾನಕ್ಕೆ ಮೋಡವೂ ಆವರಿಸುತ್ತಾ ಇರುವ ಸಮಯವದು. ಅಲ್ಲಿನ ಹತ್ತಿರದ ಹಳ್ಳಿಯವನೊಬ್ಬನಲ್ಲಿ ಮಲಾನಕ್ಕೆ ದಾರಿ ಕೇಳಿದೆವು. ಆತ ನಮಗೆ ಹೇಳಿದ ಪ್ರಕಾರ ನಾವಿರುವ ಸ್ಥಳದಿಂದ ಸುಮಾರು ಒಂದು ಗಂಟೆಯ ದಾರಿ.
|
ಗೆಳೆಯ ನಾಗರಾಜನ ಫೋಟೋ ಸೆಶನ್ |
ಸರಿ ಕೇವಲ ಒಂದು ಗಂಟೆ ಎಂದು ಆತ ಹೇಳಿದ ದಾರಿಯಲ್ಲಿ ನಡೆಯ ತೊಡಗಿದೆವು. ನೆಡೆದು ನೆಡೆದು 3 ಗಂಟೆಯ ದಾರಿ ಸವೆಸಿದರೂ ಮಲಾನ ಹಳ್ಳಿ ಸಿಗಲಿಲ್ಲ! ಯಾವ ಒಂದು ಗಂಟೆ ಇದು ಎಂದು ಕೊಂಡೆವು. ನಾಳೆ ಮಧ್ಯಾಹ್ನ ಒಂದು ಗಂಟೆಯೆ? ಗೊಂದಲಕ್ಕೆ ಬಿದ್ದೆವು. ನಾವು ಖಂಡಿತವಾಗಿ ದಾರಿ ತಪ್ಪಿದವೆಂದು ತೀಮರ್ಾನಿಸಿದೆವು. ಏನಾದರಾಗಲಿ ಈ ಬೆಟ್ಟ ಹತ್ತಿಯೇ ನೋಡೊಣವೆಂದು ಹತ್ತ ತೊಡಗಿದೆವು. ಕಡಿದಾದ ದಾರಿ, ಆಮ್ಲಜನಕದ ಕೊರತೆಯಿಂದಾಗಿ ಅಲ್ಲಲ್ಲಿ ಕುಳಿತುಕೊಂಡು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಿದೆವು.
|
ಪರ್ವತದ ಇಳಿಜಾರಿನಲ್ಲಿ |
ಕೇವಲ ಹತ್ತಿ ಬಟ್ಟೆ ಮತ್ತು ಬಮರ್ುಡದಲ್ಲಿ ಹತ್ತಿದ ನನಗೆ ಮಳೆ ಬಂದಿದ್ದರೆ 0 ಡಿಗ್ರಿಗೆ ಜಾರುವ ಉಷ್ಣಾಂಶವು ಪಚೀತಿಯನ್ನುಂಟುಮಾಡುತ್ತಿತ್ತು. ಅಲ್ಲದೇ ಮಳೆ ಬಂದರೆ ಮೋಡದಿಂದ ದಾರಿ ಕಾಣಿಸದೆ ದಾರಿ ತಪ್ಪುವ ಅವಕಾಶ ಬಹಳವಾಗಿತ್ತು. ದಾರಿ ತಪ್ಪಿದ ಹಿಮಾಲಯದ ಚಾರಣಿಗರು ಅಲ್ಲಿಯೇ ಲೀನವಾದ್ದದೂ ಇದೆ. ಹಾಗಾಗಿ ಜಾಗ್ರತೆಯಿಂದ ಒಟ್ಟಿಗೆ ಸಾಗಿದೆವು. ಅಂತೂ ಪರ್ವತದ ತುತ್ತ ತುದಿಯ ತನಕವೂ ಮೋಡಗಳು ಮಾತ್ರ ನಮ್ಮನ್ನು ಸ್ವಾಗತಿಸಿದವು.
|
ದೂರದಲ್ಲಿನ ಕೆಲವು ಮನೆಗಳು |
ಪರ್ವತದ ತುದಿಗೇರಿದಾಗ ಹಲವು ಸಂದೇಹಗಳು ಉಂಟಾದವು. ಅಲ್ಲಿ ಯಾವುದೇ ಮನೆಗಳು ಇರದೇ ಇದ್ದದ್ದು, ದೂರದಲ್ಲಿ ಕೆಲವು ಮನೆಗಳು ಕಾಣಸಿಕ್ಕವು. ಅದೇ ಮಲಾನವಿರಬಹುದೇ ಎಂದುಕೊಂಡೆವು. ಅವು ಇರುವ ದೂರವನ್ನು ನೋಡಿದರೆ ಅಲ್ಲಿಗೆ ತಲುಪಲು ನಮಗೆ ಎನಿಲ್ಲವೆಂದರೂ ಇನ್ನರ್ಧ ದಿನ ಬೇಕಾಗಿತ್ತು. ನಿರಾಶೆಯ ಗಡಲಲ್ಲಿ ಮುಳುಗಿರುವಾಗ ಅಲ್ಲಿಗೊಬ್ಬ ಕುರಿ ಕಾಯುವವ ಕಾಣಿಸಿದ.
ಆತನನ್ನು ಮಾತನಾಡಿಸಿದೆವು, ಮಲಾನಕ್ಕೆ ಹೋಗುವುದು ಹೇಗೆಂದು ಕೇಳಿದೆವು. ಇಲ್ಲಿಂದ ಕೇವಲ ಐದು ನಿಮಿಷದ ದಾರಿ ಎಂದ. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲಿ. ಏನೋ ಸಾಧಿಸಿದ ತೃಪ್ತಿ. ಸರಿ ಎಂದು ಅವನಿಗೆ ವಂದಿಸಿ, ಸ್ವಲ್ಪ ಒಣ ದ್ರಾಕ್ಷಿಯನ್ನು ಕೊಟ್ಟೆವು. ಆತ ಸಿಗರೇಟ್ ಇಲ್ಲವೇ? ಎಂದ. ಮುಂದಿನ ಬಾರಿ ಬರುವಾಗ ನಿಮಗೆ ಖಂಡಿತಾ ಸಿಗರೇಟ್ ತರುತ್ತೇವೆಂದು ಹೇಳಿ ಮುಂದುವರಿದೆವು. ಹಿಂದಿನ ಹಳ್ಳಿಗ ಕೇವಲ ಒಂದು ಗಂಟೆಯಲ್ಲಿ ಏರಬಹುದೆಂದಿದ್ದ. ನಮಗೆ 3 ಗಂಟೆ ಹಿಡಿಯಿತು. ಇತನ 5 ನಿಮಿಷ ನಮಗೆಷ್ಟು ಹೊತ್ತೊ ಎಂದು ಮನದಲ್ಲೇ ಲೆಕ್ಕಚಾರ ಹಾಕುತ್ತಾ ಸಾಗಿದೆವು.
ಅಂತೂ ಬಂತು ಮಲಾನ
ಪರ್ವತ ಏರಿ ಸ್ವಲ್ಪವೇ ಇಳಿದಾಗ ಅಚ್ಚರಿ ಕಾದಿತ್ತು. ನಿಜವಾಗಿ ನಾವು ಮಲಾನದ ಹಾದಿಯಲ್ಲಿದ್ದೆವು ಎಂಬ ಸಂತೋಷವೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ನನ್ನ ಗೆಳೆಯ ನಾಗರಾಜನಂತು ಚಿಗರೆಯಂತೆ ಜಿಗಿಯುತ್ತಾ ಆ ವಿಶಿಷ್ಟ ಜನರನ್ನು ಭೇಟಿಯಾಗಲು ಓಡತೊಡಗಿದ! ಈ ವಿಶಿಷ್ಟಾನುಭೂತಿಯನ್ನು ಅನುಭವಿಸಲು ಕಾತರರಾಗಿ ಹಳ್ಳಿ ಕಡೆಗೆ ನಡೆದೆವು.
|
ಮಲಾನ ಕಣಿವೆಯ ಒಂಟ ಮನೆ |
ಹಲವು ವಿಶಿಷ್ಟತೆಗೆ ಹೆಸರು ಮಾಡಿದ ಈ ಹಳ್ಳಿ ನನ್ನಲ್ಲಿ ಸಂಚಲನೆಯನ್ನೇ ಉಂಟುಮಾಡಿತು. ಅದನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳವೆ.
|
ಪರ್ವತ ಸೆರಗಿನಲ್ಲಿರುವ ಮೋಹಕ ಮಲಾನ ಹಳ್ಳಿ |
ಮುಂದುವರಿಯುವುದು......