ಹಾಳುಗೆಡವಿದ ಹೈಡೋ ಪ್ರಾಜೆಕ್ಟ್
ನಿನಾದದ ಮಲಾನಾ ನದಿ. |
ಮಲಾನದ ಜನರು ತಮ್ಮಷ್ಟಕ್ಕೆ ತಾವು ಆರಾಮವಾಗಿದ್ದರು. ಅವರದ್ದೇ ಕೃಷಿ, ಹೈನುಗಾರಿಕೆ ಮತ್ತಿತರೇ ಉದ್ಯೋಗದಲ್ಲಿ ಅವರದೇ ಆಟಗಳಲ್ಲಿ ಮಜವಾಗಿದ್ದರು. ಆದರೆ ದಶಕದಿಂದೀಚಗೆ ಅಲ್ಲೊಂದು ಹೈಡ್ರೋಪ್ರಾಜೆಕ್ಟ್ ಕಾಲಿಟ್ಟಿತು ನೋಡಿ ಅಲ್ಲಿಂದ ಮಲಾನದ ನಕ್ಷೆಯೇ ಬದಲಾಯಿತು. ಮಲಾನ ನದಿಯಲ್ಲಿ ಕಷ್ಟ ಪಟ್ಟು ದಾಟಿ ಜನರು ಅಲ್ಲಿಗೆ ಹೋಗ ಬೇಕಾಗಿತ್ತು. ಹಾಗಾಗಿ ಜನರಿಗೆ ಹೊರಗಿನ ಸಂಪರ್ಕವೇ ಇರಲಿಲ್ಲ, ನೋಡ ಬೇಕೆಂದರೆ ಕನಿಷ್ಟ 20 ಕಿ.ಮೀ ನಡೆಯಬೇಕಿತ್ತು. ಅಲ್ಲಿನ ಜನರ ಮುಗ್ದತೆ ಹಾಗೆ ಉಳಿಯುತ್ತಿತ್ತು. ಹಿಂದೆ ಹೋದವರು ಅಲ್ಲಿನ ವರ್ಣನೆ ಕೇಳಿ ಹೋದರೆ ಬ್ರಮನಿರಸನವಾಗುದರಲ್ಲಿ ಆಶ್ಚರ್ಯವಿಲ್ಲಾ.
ಹೈಡ್ರೋ ಪ್ರಾಜೆಕ್ಟ್ ಗೆ ಮಾಡಿದ ರಸ್ತೆಯ ವಿಹಂಗಮ ನೋಟ. |
ಅಂಥ ಸೌಂದರ್ಯದಿಂದ ಕೂಡಿದ ಮಲಾನ ಈಗ ಮಲೀನವೆನ್ನುವಷ್ಟು ಮಲೀನವಾಗಿದೆ. ಶುದ್ಧ ಜಲಮೂಲಗಳು ಸಹ ಹಾಳಾಗಿವೆ ಎನ್ನುವಾಗ ವಿಷಾದವಾಗುತ್ತದೆ. ಮಲಾನದಲ್ಲಿ ಈಗ ಪ್ಲಾಸ್ಟಿಕ್ಮಯ ವಾತವಾರಣ. ಅಲ್ಲಲ್ಲಿ ಲೇಸ್ ಪ್ಯಾಕೆಟ್ಟುಗಳನ್ನು, ಚಾಕಲೇಟ್, ಐಸ್ಕ್ರೀಮ್ ತಟ್ಟೆಗಳು ಕಾಣಸಿಗುತ್ತವೆ. ಐಸ್ಕ್ರೀಮ್ ಮಾರುವವರು 20-30 ಕಿ.ಮೀ. ನಿಂದಾಚೆಯಿಂದ ತಂದು ಇಲ್ಲಿ ಮಾರುತ್ತಾರೆ! ಮಾರುವವರು ಮಕ್ಕಳು ನಡೆದೇ ಬರುತ್ತಾರೆ!
ಆದಷ್ಟು ಇಲ್ಲಿನ ಪರಿಸರವನ್ನಾದರೂ ರಕ್ಷಿಸುವುದು ಅಗತ್ಯ.
ಧಮ್ ಹೊಡಿ ಬೇಕೆ?
ಇಲ್ಲಿನ ಇನ್ನೊಂದು ವಿಶೇಷತೆ, ನಮ್ಮ ಕಾನೂನುಗಳು ಇವರಿಗೆ ಲಾಗೂ ಆಗದೇ ಇರುವುದು. ಇಲ್ಲಿ ಪೋಲಿಸ್ ಹಸ್ತಕ್ಷೇಪವಾಗಲೀ, ರಾಜಕೀಯ ಹಸ್ತಕ್ಷೇಪ ಇಲ್ಲದೇ ತಮ್ಮದೇ ವಿಶೇಷವಾದ ಸರಕಾರ ಸ್ಥಾಪಿಸಿಕೊಂಡು ಆಡಳಿತ ನಡೆಸುತ್ತಾರೆ. ಎಲ್ಲದಕ್ಕೂ ಗ್ರಾಮದ 'ಮುಖ್ಯ' ನೋಡಿಕೊಳ್ಳುತ್ತಾನೆ. ಎಲ್ಲದೂ ಅವನ ಮೇಲುಸ್ಥುವಾರಿಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿನ ಜನರು ಸ್ವತಂತ್ರರು. ಇವರ ಅವಶ್ಯಕತೆಗಳು ತುಂಬಾ ಕಡಿಮೆ ಹಾಗಾಗಿ ನಿತ್ಯ ಸಂತೋಷಿಗಳು. ಯಾಕೊ ಏನೋ ಸರಕಾರದ ಹಸ್ತಕ್ಷೇಪ ಇಲ್ಲಿ ಬಹಳ ಕಡಿಮೆ. ಹಾಗಾಗಿ ಇವರು ಅಮಲು ಪದಾರ್ಥ ಬೆಳೆಯುತ್ತಾರೆ.
ಅಲ್ಲಿನ ಕುರಿ ಕಾಯುವ ಅಜ್ಜನೊಂದಿಗೆ. |
ನಾವಿಲ್ಲಿಗೆ ಹೋದಾಗ ಅಲ್ಲಿನ ಕುರಿಕಾಯುವವ ನಿಮಗೆ ಜರಸ್ ಬೇಕೆ ಎಂದು ಕೇಳಿದ. ಅದೂ ಯಾವುದೇ ಆತಂಕವಿಲ್ಲದೇ! ನಾವಂತೂ ದಂಗು ಬಡಿದು ಕುಳಿತೆವು, ನಿರಾಕರಿಸಿದೆವು. ಇಲ್ಲಿ ಜರಸ್ ಎನ್ನುವುದು ಅತಿ ಸಾಮಾನ್ಯವಾದ ಸಂಗತಿ! ಶಾಲಾ ಮಸ್ತರರನ್ನು ಭೇಟಿಯಾದೆವು! ಇಲ್ಲಿಯೂ ಒಬ್ಬ ಶಾಲಾ ಮಾಸ್ತರರೆ ಎಂದು ಕೇಳಬೇಡಿ. ಇಲ್ಲಿಯೂ ಒಂದು ಶಾಲೆ ಇದೆ ಅದರ ಬಗ್ಗೆ ಟಿಣಜಡಿಣಟಿರ ಆದ ವಿಷಯ ಮುಂದಿನ ಬಾರಿ ತಿಳಿಸುವೆ. ಅಲ್ಲಿಯವರೆಗೆ ವಿರಾಮ...
ಮಲಾನಾದ ಹಳೆ ಕಟ್ಟಡ ಸಣ್ಣ ದೇವರ ಗುಡಿ . |
No comments:
Post a Comment