ಹಿಮಚ್ಚಾದಿತ ಬೆಟ್ಟಗಳು |
ಹೀಗೊಂದು ಸ್ಥಳವಿದೆಯೆಂದು ಕನಸಿನಲ್ಲೂ ಎಣಿಸಿರಲಿಲ್ಲ. ಸಮುದ್ರ ಮಟ್ಟದಿಂದ 10,200 ಅಡಿಗಳಷ್ಟು ಎತ್ತರ. ಪರ್ವತದ
ಮಲಾನ ಹಳ್ಳಿ ಎದುರು |
ಸೆರಗಿನಲ್ಲಿ,
ಇಳಿಜಾರಿನಲ್ಲಿ ಮನೆಗಳು. ಮನೆಯ ಚಾವಡಿಯಲ್ಲಿ ಕೂತು ಹಿಮಚ್ಚಾದಿತ ಪರ್ವತ ನೋಡುತ ಚಹ ಆಸ್ವಾದಿಸುವ ಅವಕಾಶ. ಕೆಳಗೆ ಬೋರ್ಗರೆಯುವ ಮಲಾನ ನದಿ. ಸುತ್ತಲೂ ಪರ್ವತಗಳ ಚಾದರ. ತಾಯಿ ತನ್ನ ಮಗುವನ್ನು ವೃಕ್ಷಸ್ಥಳದಲ್ಲಿ ಅಡಗಿಸಿಡುವಂತೆ ಮಲಾನ ಹಳ್ಳಿಯನ್ನು ಪರ್ವತಗಳು ಅಡಗಿಸಿಟ್ಟಿವೆ.
ಬೆಟ್ಟ ಏರುವ ಕಡಿದಾದ ದಾರಿ |
ಮನೆ ಎದುರಿನ ಸುಂದರ ನೋಟಗಳು |
ಇಲ್ಲಿ ಮೌನವೇ ಹಾಸಿ ಹೊದ್ದು ಮಲಗಿದೆ. ಕಣಿವೆಗಳ ಮಹೋನ್ನತ ನೋಟ ಎಂತಹವರನ್ನು ಬೆರಗುಗೊಳಿಸುತ್ತವೆ. ಸಂಜೆ ನಾಲ್ಕಕ್ಕೇ ಬೀಸುವ ಚಳಿಗಾಳಿ. ಎಷ್ಟು ನೋಡಿದರೂ ಮತ್ತೂ ನೋಡಬೇಕೆನಿಸುವ ಗಿರಿ ಶಿಖರಗಳು. ಹಿಮದಿಂದ ತುಂಬಿ ತುಳುಕುವ ಚಂದ್ರಕಣಿಯ ನೋಟ. ಎಂತವರನ್ನು ಮಂತ್ರ ಮುಗ್ದರನ್ನಾಗಿಸುವ ತಾಣ. ಅದುವೇ ಮಲಾನ ಎನ್ನುವ ಮುಗ್ದ ಹಳ್ಳಿ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿದೆ.
ಇತಿಹಾಸ
ಬೀದಿ ಬದಿಯಿಂದ ಕಾಣುವ ದೃಶ್ಯ |
ಆಟದಲ್ಲಿ ನಿರತರಾದ ಜನರು. |
ಮಲಾನದ ಸುಂದರ ಹುಡುಗಿಯರು |
ಹೀಗೆ ಗ್ರೀಕ್ ಜನರು ಇಲ್ಲಿನವರೊಂದಿಗೆ ಕ್ರಿ. ಪೂ. ದಲ್ಲಿ ಬರೆತು ಇಂದಿಗೂ ತಮ್ಮ ತನವನ್ನು ಉಳಿಸಿಕೊಂಡು ಬಂದಿರುವುದೊಂದು ವಿಶೇಷವೇ! ಸುಮಾರು 3000 ವರ್ಷಗಳ ಹಿಂದೆ ಯಾವ ಪರಿಸರದ ಒತ್ತಡವು ಗ್ರೀಕರನ್ನು ಇಲ್ಲಿ ಉಳಿಯುವಂತೆ ಮಾಡಿತು. ಅವರು ಸಂಪಕರ್ಿಸಿದ ಭಾಷೆ ಯಾವುದ್ದಿತು? ಹೇಗೆ ಅವರೊಂದಿಗೆ ಬೆರೆತರು? ಗ್ರೀಕರ ಸಾಹಸ. ಎಂತಹ ಸಾಹಸಿಯೂ ಯುದ್ದ ದಾಹಿಯೂ ಹಿಮಾಲಯದೆದುರು ತಣ್ಣಗಾಗಲೇ ಬೇಕು. ಆದರೂ ಅವರು ಈ ಪ್ರದೇಶವನ್ನು ದಾಟಿ ಹೋದ್ದಾದರೂ ಹೇಗೆ? ಅವರು ದಾರಿ ತಪ್ಪಿ ಬಂದು ಇಲ್ಲಿ ಉಳಿದುಕೊಂಡರೆ? ಯಾವ ಆಮಿಷ ಅವರನ್ನು ಇಲ್ಲಿಯೇ ಉಳಿಸಿತು? ಇಂತಹ ಹಲವು ಜಿಜ್ಞಾಸೆಗೆ ದಾರಿ ಮಾಡಿಕೊಟ್ಟು ಮತ್ತೊಮ್ಮೆ ಈ ಸ್ಥಳಕ್ಕೆ ಹೋಗಲು ನಮ್ಮನ್ನು ಪ್ರೇರೇಪಿಸುತ್ತದೆ.
ಜನ ಜೀವನ
ಜನರ ಸಾಹಸವಂತೂ ಅಸಾದಾರಣ. ತಾಳ್ಮೆ ಕಳೆದುಕೊಳ್ಳದ ಸೌಮ್ಯ ಜನರು. ಕಠಿಣ ಪರಿಶ್ರಮಿಗಳಾದ ಇವರು ಸತತವಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಸಂಜೆ ಹೊತ್ತು ಸಮಯ ಕಳೆಯಲು ಗಂಡಸರು ಕೆಲವು ಸ್ಥಳೀಯ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರ ಸ್ಥಳೀಯ ಆಟಗಳೀಗ ಕ್ರಮೇಣ ನಶಿಸುವ ಹಂತ ತಲುಪಿವೆ. ಇಲ್ಲಿಗೂ ಇಸ್ಪೀಟ್ನಂತಹ ಆಟಗಳು ಕಾಲಿಟ್ಟಿವೆ.
ಜನರ ಮುಖ್ಯ ಆದಾಯದ ಮೂಲ ಕೃಷಿ ಮತ್ತು ಹೈನುಗಾರಿಕೆ. ಅದರ ಜೊತೆ ಜೊತೆಗೆ ಕುರಿ ಸಾಕಣೆಯನ್ನು ಕೈಗೊಳ್ಳುತ್ತಾರೆ. ಉತ್ತಮ ಜಾತಿಯ ಕುರಿಗಳು ಇಲ್ಲಿವೆ. ಅದರಿಂದ ಬಟ್ಟೆ ತಯಾರಿಸಿಕೊಳ್ಳುತ್ತಾರೆ. ಇಲ್ಲಿನ ಜನರು ಸ್ನೇಹ ಜೀವಿಗಳು. ಆಲೂಗಡ್ಡೆ, ಹೂಕೋಸು, ನವಿಲುಕೋಸು ಮುಂತಾದ ಗಡ್ಡೆಗಳನ್ನು ಗುಡ್ಡದ ಇಳಿಜಾರಿನಲ್ಲಿ ಬೆಳೆಸುತ್ತಾರೆ. ಕುರಿಗಳ ಸಗಣಿಯನ್ನು ಗೊಬ್ಬರವಾಗಿ ಬಳಸುತ್ತಾರೆ.
ಮಹಿಳೆಯರು, ಮುದುಕರು ಕಣಿವೆಗಳಿಂದ ಕಟ್ಟಿಗೆಯನ್ನು ಹೊತ್ತು ತರುತ್ತಾರೆ. ಕೆಲವರಂತೂ ಮಗುವನ್ನು ಸಹ ತಮ್ಮ ಜೊತೆಗೆ ಕರೆದೊಯ್ಯುತ್ತಾರೆ ಎನ್ನುವುದು ವಿಸ್ಮಯಕಾರಿ ವಿಷಯ! ನಾವೊ ಸಣ್ಣ ಸಣ್ಣ ಕೆಲಸ ಮಾಡಲು ಹೆಣಗುತ್ತೇವೆ. ಅವರಿಗದಲ್ಲಾ ಸಲೀಸು.
ವಿಭಿನ್ನವಾದ ಜನರು ಮಗುವಿನ ಜೊತೆಗೆ ಪ್ರಯಾಣ |
ಅಜ್ಜಿಯ ಆರೈಕೆಯಲ್ಲಿ ಮಗು. |
ಮುಂದುವರಿಯುವುದು....
No comments:
Post a Comment