ಅದೊಂದು ದಿನ, ನಾವೆಲ್ಲಾ ತೋಟದಲ್ಲಿ ಕೆಲಸ ಮಾಡುತ್ತಿದ್ದೆವು. ಅಲ್ಲಿ ಬೆಳೆದ ಬೆಂಡೆ, ಅಲಸಂಡೆ ಮತ್ತಿತರ ಗಿಡಗಳಿಗೆ ಗೊಬ್ಬರ ಹಾಕುತ್ತಿದ್ದೆವು. ಕೆಲಸ ಮಾಡುತ್ತಿರುವಾಗ ಯಾರೋ ನಮಗೆ ಅಲ್ಲೊಂದು ಮರ ಹಾವಿದೆ ಎಂದು ಹೇಳಿದರು. ಕೂಡಲೇ ನಾವೆಲ್ಲಾ ಜಾಗೃತರಾದೆವು. ಅದೆಲ್ಲಿದೆ ಎಂದು ಹುಡುಕ ತೊಡಗಿದೆವು. ಅದೊಂದು ಸಣ್ಣ ಹಸಿರು ಹಾವಾಗಿತ್ತು. ತುಂಬಾ ಚುರುಕಾಗಿ ಗಿಡಗಳ ನಡುವೆ ಓಡಾಡುತ್ತಿತ್ತು.
ತೋಟದ ನಿವರ್ಾಹಕಿಯಾಗಿರುವ ಸಂಗೀತ ಮೆಡಮ್ ಕೂಡಲೇ ವಿಜ್ಞಾನ ಶಿಕ್ಷಕರಾದ ಶ್ರೀಧರ್.ಎಸ್. ಅವರನ್ನು ಕರೆದರು. ಅತ್ತಿತ್ತ ಓಡಾಡುತ್ತಿದ್ದ ಆ ಹಾವನ್ನು ಕಷ್ಟ ಪಟ್ಟು ಅವರು ಕೋಲಿನ ಸಹಾಯದಿಂದ ಹಿಡಿದರು. ಹೀಗೆ ಹಿಡಿದ ಹಾವನ್ನು ನಮಗೆಲ್ಲಾ ತೋರಿಸಿದರು. ಏಳನೇ ತರಗತಿ ವಿದ್ಯಾಥರ್ಿಗಳೆಲ್ಲಾ ಅದನ್ನು ನೋಡಿ ಖುಷಿ ಪಟ್ಟೆವು. ನಂತರ ನಮಗೂ ಹಾವನ್ನು ಕೋಲಿನ ತುದಿಯಲ್ಲಿ ಇರಿಸುವುದು ಹೇಗೆಂದು ತಿಳಿಸಿದರು. ನಾನು ಕೋಲಿನ ತುದಿಯಲ್ಲಿ ಹಾವನ್ನು ಹಿಡಿದುಕೊಂಡೆ. ಅದೊಂದು ರೋಮಾಂಚಕ ಅನುಭವ. ಶ್ರೀಧರ್ ಸರ್ ನಮ್ಮ ಮತ್ತು ಹಾವಿನ ಜೊತೆಗೊಂದಿಷ್ಟು ಪೋಟೋ ತೆಗೆದರು. ನಂತರ ಹಾವನ್ನು ಸನಿಹದ ಕಾಡೊಳಗೆ ಬಿಟ್ಟರು. ಸುಮಾರು ಹೊತ್ತು ಅಲ್ಲೇ ಇದ್ದ ಅದನ್ನು ಇತರೇ ವಿದ್ಯಾಥರ್ಿಗಳು ಇಣುಕಿ ನೋಡುತ್ತಿದ್ದರು. ಹೀಗೆ ಹಾವು ಹಿಡಿಯುವುದು ಹೇಗೆಂಬುದು ನಮಗೊಂದು ಪ್ರತ್ಯಕ್ಷ ಅನುಭವವನ್ನು ಈ ಘಟನೆ ನೀಡಿತು.
ವರದಿಗಾರ-ಶೈಲೇಶ್ 7 ನೇ ತರಗತಿ.
No comments:
Post a Comment