ಮೊನ್ನೆ ಫೋಟೋಗ್ರಫಿಗೆಂದು ಹೊರಗಡೆ ಹೋಗಿದ್ದೆ. ನೇರಳೆ ಮರದಡಿ ನಿಂತು ನಿರುಕಿಸುತ್ತಾ ಇದ್ದೆ. ಆಗ ಈ ಮುರಿದ ರೆಂಬೆಯೊಂದು ಕಣ್ಣಿಗೆ ಬಿತ್ತು. ಬೆಳಗಿನ ಬಿಸಿಲಿಗೆ ಚೆನ್ನಾಗಿತ್ತು. ಸುಮ್ನೆ ಒಂದು ಫೋಟೋ ತೆಗೆದೆ. ಹಾಗೇ ಅದನ್ನು ಗಮನಿಸುತ್ತಾ ನಿಂತೆ. ಎಂದೋ ಓದಿದ ಈ ಕವನ ತಟ್ಟನೆ ನೆನಪಾಯಿತೇಕೋ. ಮತ್ತೂ ಗಮನಿಸುತ್ತಾ ನಿಂತೆ! ಕವಿಗೆ ಚಂದ್ರ ಹೆಂಡತಿಯ ಮೋರೆ ವಿಜ್ಞಾನಿಗಳಿಗೆ ಬರಿಯ ಕಲ್ಲು ಗುಂಡು ಮಕ್ಕಳಿಗೆ ಐಸ್ ಕ್ರೀಮ್ನ ತುಂಡು... ನಿಮಗಿಲ್ಲಿ ಹೆಂಡತಿಯ ಮೋರೆ ಕಾಣಿಸಲಿಕ್ಕಿಲ್ಲ ಆದರೂ ಬಿಡದೆ ನೀವೂ ಗಮನಿಸಿ ನೋಡಿ ನಿಮ್ಮ ಕಣ್ಣಿಗದು ಏನಾಗಿ ಕಾಣುತ್ತದೆಂದು ಊಹಿಸಿ. ನೋಡೋಣ.
Monday, February 5, 2018
ಕವಿಗೆ ಚಂದ್ರ ಹೆಂಡತಿಯ ಮೋರೆ..
Sunday, February 4, 2018
ಮಚ್ಚಟ್ಟು ಶಾಲೆಗೆ 'ಹಸಿರು ಶಾಲೆ' ಪ್ರಶಸ್ತಿಯ ಹ್ಯಾಟ್ರಿಕ್ ಗರಿ..
ಮರವೇ ವರ ಎಂಬ ಮಕ್ಕಳ ಮತ್ತು ಶಿಕ್ಷಕರ ತಂಡ. 'ಒಂದು ಮರ ಸಾವಿರ ವರ' ಎಂಬ ಫೋಷ ವಾಕ್ಯವನ್ನು ಓದಿಕೊಂಡು ಶಾಲೆ ಒಳ ಹೊಕ್ಕರೆ ಅಂಜೂರ ಮತ್ತು ಮಂದಾರ ಗಿಡಗಳು ಸ್ವಾಗತಿಸುತ್ತವೆ. ಅಂಜೂರದ ಎಡ ಬಲಕ್ಕಿರುವ ಚಿಕ್ಕು, ತೆಂಗು, ನೆಲ್ಲಿ, ಅಜರ್ುನ, ಧೂಪ, ಕದಂಬ, ಸೀತಾಫಲಗಳು, ಬಾದಾಮಿ, ವಾಟೆ, ನೇರಳೆ, ಅಡಿಕೆ, ಹಾಲೆ, ಮಾವು, ನಿಂಬೆ ಸಾಗುವಾನಿ ಮುಂತಾದ ಗಿಡಗಳು ಶಾಲೆಯ ಸುತ್ತಲೂ ತಮ್ಮ ನಗು ಚೆಲ್ಲಿವೆ. ಉರಗ, ತುಂಬೆ, ಅಮೃತ ಬಳ್ಳಿ, ಅರಶಿನ, ಸ್ಥಳೀಯ ಅಗಳು ಶುಂಠಿ, ಕಿರಾತ ಕಡ್ಡಿ ಮುಂತಾದ ಔಷಧೀಯ ಗಿಡಗಳು ಶಾಲೆಯ ಸುತ್ತುವರಿದಿದೆ. ಶಾಲೆಯಲ್ಲಿನ ಇಂಗು ಗುಂಡಿಗಳು, ತಿಪ್ಪೆ ಗುಂಡಿ, ಪೈಪ್ ಕಾಂಪೋಸ್ಟ್, ಶಾಲೆಯ ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿನ ಅನನ್ಯತೆ, ವಿವಿಧ ಔಷಧಿ ಗಿಡಗಳ ಕುರಿತು ಮಕ್ಕಳು ಸಂಗ್ರಹಿಸಿದ ಮಾಹಿತಿಗಳು, ಭೂಮಿ ಎಂಬ ವಿಜ್ಞಾನ ಪತ್ರಿಕೆ, ವಿಜ್ಞಾನದ ವಿವಿಧ ಮಾದರಿಗಳು, ಪ್ಲಾಸ್ಟಿಕ್ ನಿರ್ವಹಣೆ, ಸ್ವಚ್ಚತೆಯ ನಿರ್ವಹಣೆ, ಅಡುಗೆ ಕೋಣೆಯ ನಿರ್ವಹಣೆ, ಶಾಲಾ ಕೈತೋಟ, ಗೋಡೆಯ ಮೇಲಿನ ವಿವಿಧ ಫೋಷಣೆಗಳು, ಹೀಗೆ ಶಾಲೆ ಕೈಗೊಂಡ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಶಾಲೆಗೆ ಹಸಿರು ಶಾಲೆ ಎಂಬ ಜಿಲ್ಲಾ ಪ್ರಶಸ್ತಿಯನ್ನು ಮೂರನೇ ಬಾರಿಗೆ ಶ್ರೀ ಶೇಷ ಶಯನ ಕಾರಿಂಜ ಅವರು ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ, ಪರಿಸರ ಅಧಿಕಾರಿ ಶ್ರೀ ಲಕ್ಷೀಕಾಂತ, ಶ್ರೀ ದಿನೇಶ್ ಶೆಟ್ಟಿಗಾರ್ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದಶರ್ಿ ಉಪಸ್ಥಿತರಿದ್ದರು. ಸಸ್ಯ ಶ್ಯಾಮಲದ ದಿನೇಶ ನಾಯಕ್ ವಿಟ್ಲ ಇವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
Subscribe to:
Posts (Atom)
ವಾರೆ ನೋಟ
ಸಂತಾನ ದೇಗುಲದಲ್ಲಿ …
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...