oxyopes shweta ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ. |
ಯಾವುದೋ ಪತ್ತೆದಾರಿ ಕಾದಂಬರಿಯ ಕುರಿತು ಹೇಳುತ್ತಾನೆಂದು ಸೀಟಿನ ತುದಿಗೆ ಬಂದಿರಾ? ವಿಷಯ ಆಸಕ್ತಿದಾಯಕವಾಗಿದೆ. ಸ್ವಲ್ಪ ಇರಿ.
ಪ್ರತೀ ಜೀವಿಯು ಈ ಜಗತ್ತಿನಲ್ಲಿ ಭಿನ್ನ. ಅವುಗಳಿಗೆ ಪ್ರಕೃತಿ ನೀಡಿದ ಸಂಸ್ಕಾರ ಬೇರೆ ಬೇರೆ. ಹಾಗಾಗಿ ಅವು ಒಂದರಂತೆ ಮೊತ್ತೊಂದಿಲ್ಲ. ಪರಿಸರದ ಒತ್ತಡಗಳು ಅವನ್ನು ವಿಭಿನ್ನವಾಗಿ ರೂಪಿಸಿವೆ. ನಾನು ಹೇಳುವ ಕತೆಯೂ ಅಂತಹುದೇ ಒಂದು ತುಣುಕು.
ಕ್ರಾಬ್ ಜೇಡವನ್ನು ಹಿಡಿದಿರುವ ಮತ್ತೊಂದು ಜೇಡ. |
ಜೀವಿಗಳು ತಮ್ಮ ಸಂತಾನವನ್ನು ಮುಂದುವರಿಸುವ ಸಲುವಾಗಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿವೆ. ಪ್ರಕೃತಿ ಸಹಜವಾದುದು. ಸಂತಾನೋತ್ಪತ್ತಿಯಾಗಲು ಗಂಡು ಹೆಣ್ಣನ್ನು ಕೂಡ ಬೇಡವೇ?
ಹೀಗಿರುವ ಪ್ರಸ್ಥದ ಕೋಣೆಯಲ್ಲಿಯೇ ವರನಿಗೆ ಮರಣ ಬಂದರೆ ಹೇಗೆ? ಪ್ರಸ್ತದ ಮನೆಯಲ್ಲಿಯೇ ಒಂದು ಕೊಲೆ ಅದೂ ಮದುಮಗನದ್ದು! ಕೊಲೆಗಾರ ಯಾರೆಂದಿರಾ? ಬೇರಾರೂ ಅಲ್ಲ, ಒಲಿಸಿಕೊಂಡವಳು! ಅಚ್ಚರಿಯಾಯಿತೆ? ಓಡಿದಾಗಲೋ, ಕೆಲಸ ಮಾಡಿದಾಗ ಹಸಿವಾಗೋದು ಸಹಜ. ಆದರೆ ಜೇಡಗಳಿವೆಯಲ್ಲ ಅವುಗಳಿಗೆ ಪ್ರಸ್ಥದ ಕೊನೆಗೆ ಹೆಣ್ಣಿಗೆ ವಿಪರೀತ ಹಸಿವು! ಹಸಿವು ಆರಲು ಕೊಲೆ ಮಾಡಲು ಹೇಸುವುದಿಲ್ಲ. ಹೆಣ್ಣು ಗಂಡಿನ ಚರಮಗೀತೆ ಬರೆಯುವವು. ಗಂಡು ಜಾಣನಾದರೆ ಉಪಾಯವಾಗಿ ತಪ್ಪಿಸಿಕೊಳ್ಳುವುದು. ಆದರೆ ಕೆಲವೊಮ್ಮೆ ಸಿಕ್ಕಿ ಬೀಳುವುದು ಮಾಮೂಲು. ಹೆಣ್ಣು ಸ್ವಲ್ಪ ಯಾಮಾರಿದರೂ ಗಂಡು ತಪ್ಪಿಸಿಕೊಳ್ಳುವುದು.
ಇಲ್ಲಿರುವ oxyopes shweta ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ. ಇದಕ್ಕೆ cannibalism ಎನ್ನುವರು. ಅದು ಸಂಗದ ತರುವಾಯ. ಅಚ್ಚರಿಯಾಯಿತೇ? ಇನ್ನೆಷ್ಟು ಅಚ್ಚರಿಗಳು ಪ್ರಕೃತಿ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುವಳೋ ಗೊತ್ತಿಲ್ಲ. ಗುಟ್ಟು ರಟ್ಟಾದಂದು ನಿಮಗೆ ತಿಳಿಸುವೆ. ಅಲ್ಲಿವರೆಗೆ ನಮಸ್ಕಾರ...
ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,

No comments:
Post a Comment