Friday, April 10, 2020

ಬಿಳಲು




       ಏಕೋ ಮೂರು ನಾಲ್ಕು ದಿನಗಳಿಂದ ಅವನದೇ ನೆನಪು! ಏನು ಮಾಡುತ್ತಿದ್ದಾನೊ ಏನೋ. ಅಪ್ಪನ ತಿಥಿಗೂ ಬಂದಿರಲಿಲ್ಲ ಪುಣ್ಯಾತ್ಮ. ಪೋನ್ನಲ್ಲಿ 'ಹಾಂ', 'ಹೂಂ' ಎಂಬಲ್ಲಿಗೆ ಮಾತಿಗೆ ಕಡಿವಾಣ.
 ನಿಮ್ಮ ಆಸ್ತಿನೂ ಬೇಡ ಮನೆನೂ ಬೇಡವೆಂದು ಒಂದಿಷ್ಟು ಹಣ ಹೊತ್ತು ಹೋದ ನನ್ನ ತಮ್ಮ ಇಂದು ಹೆಬ್ಬಾಗಿಲಲಿ ನಿಂತು ಹಣಕಿ ಹಾಕಿದಂತೆ ಭಾಸ. 

      ಯಾರೋ ಅದು ಎಂದು ಕರೆದೆ. ತೆರೆದ ಹೆಬ್ಬಾಗಿಲಿನಲಿ ಆರಡಿ ಎತ್ತರದ ವ್ಯಕ್ತಿ. ಕನ್ನಡಕವಿಲ್ಲದೇ ದೂರದ್ದು ಕಾಣಲ್ಲ. 'ತಥ್ ಈ ಚಾಲೀಸು' ಎಂದು ಶಪಿಸಿದೆ. ಆತನ ಹಿಂದೆ ಮಿಳ್ಳೆಗಣ್ಣಿನ ಪೋರನೊಬ್ಬ ಹಣಕಿ ಹಾಕಿ ನನ್ನೇ ನೋಡುತ್ತಲಿದ್ದ. ಬಿಸಿಲಕೋಲೊಂದು ಇಡಿ ಮನೆಯನು ಬೆಳಗಿತ್ತು. 
    ನನ್ನ ಗಮನವೆಲ್ಲಾ ಆತನೆಡೆಗೆ ಹೋಯಿತು. ತಕ್ಷಣಕ್ಕೆ ತಿಳೀಲಿಲ್ಲ. 'ನಿಜ ಅವನು ನನ್ನ ತಮ್ಮನೇ', 'ಒಳಗೆ ಬಾರೋ' ಎಂದೆ. ದೊಡ್ಡಪ್ಪ ಎಂದು ದೊಡ್ಡ ದನಿ ಮಾಡಿ ನನ್ನ ಕಾಲ ಬಳಸಿ ನಿಂತ ಮಗುವನ್ನು ಒಮ್ಮೆಲೆ ಎತ್ತಿ ಹಿಡಿದೆ. 'ಅಂತೂ ನಿನಗೆ ಮನೆ ನೆನಪಾಯಿತಲ್ಲ, ನಡೆ ನೀರು ದೋಸೆ ಮಾವಿನ ರಸ ಹಾಕ್ಕೊಂಡು ತಿನ್ನೋಣ' ಎನ್ನುತ್ತಾ ಮಗುವನ್ನು ಒಮ್ಮೆಲೆ ಆಕಾಶಕ್ಕೆ ಹಾರಿಸಿದೆ. 
#_ಶ್ರೀಧರ್_ಎಸ್_ಸಿದ್ದಾಪುರ.
#_ಸಣ್ಣ_ಕತೆಗಳು.

No comments:

Post a Comment

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...