"ದೂರ ಹೊರಟೆ"
"ಫೋಟೋಗ್ರಫಿ ಮಾಡಲು"
"ಯಾವುದರದ್ದು ತೆಗಿತಿ ಚಿತ್ರ?"
"ಹಕ್ಕಿ"
"ಫೋಟೋಗ್ರಫಿ ಮಾಡಲು"
"ಯಾವುದರದ್ದು ತೆಗಿತಿ ಚಿತ್ರ?"
"ಹಕ್ಕಿ"
"ಈ ಹಕ್ಕಿಗಳ ಚಿತ್ರ ತೆಗೆದು ತೆಗೆದು ಏನು ಮಾಡುತ್ತಿ?" ಹೀಗೆ ಸರಣಿ ಪ್ರಶ್ನೆಗಳ ಸರಣಿಯನ್ನು ಎದುರಿಸಿದ್ದು ನನ್ನ ಗೆಳೆಯನೊಬ್ಬನಿಂದ. ಪ್ರತಿ ಭಾನುವಾರ ಒಂದಿಷ್ಟು ಸಮಯ ಫೋಟೋಗ್ರಫಿಗಾಗಿ ಮೀಸಲಿಡುವ ನನಗೆ ಅತ್ಯಂತ ಕಠಿಣವಾದ ಪ್ರಶ್ನೆ. ಬಹುಶಃ ಕೆ. ಎ. ಎಸ್. ಮತ್ತು ಐ. ಎ. ಎಸ್. ನಲ್ಲೂ ಉತ್ತರಿಸಲಾಗದ ಇಂತಹ ಪ್ರಶ್ನೆ ಕೇಳಿರಲಿಕ್ಕಿಲ್ಲ. ಏನೆಂದು ಉತ್ತರಿಸಲಿ? ಯೋಚನೆ ಮಾಡುತ್ತೇನೆ.
"ಹಾಗೆ ಸುಮ್ನೆ ಕಂಪ್ಯೂಟರಿಗೆ ಹಾಕಿ ಇಡ್ತೇನೆ."
"ಹಾಕಿ ಏನ್ ಮಾಡ್ತಿ?" ಮತ್ತೊಂದು ಭೀಕರ ಪ್ರಶ್ನೆ.
"ಪುರುಸೊತ್ತಾದಾಗ ನೋಡ್ತೇನೆ."
"ನೋಡಿ?" ಮತ್ತದೇ ರಾಗ.
ಹೀಗೆ ಪ್ರಶ್ನೆಗಳ ಸರಮಾಲೆ ಮುಂದುವರಿಯುತ್ತದೆ. ಏನು ಉತ್ತರಿಸುವುದೋ ಗೊತ್ತಾಗದೆ ಸುಮ್ಮನಾಗುತೇನೆ. ಅವರಿಂದ ಹೇಗೋ ತಪ್ಪಿಸಿಕೊಂಡು ಮುನ್ನುಗ್ಗುವೆ. ಕೆಲವೊಮ್ಮೆ ಅವರು ಕಾಣುತ್ತಲೇ ನಾನು ದಿಕ್ಕು ಬದಲಾಯಿಸುವುದುಂಟು ಮರ್ರೆ. ಹಳ್ಳಿಗಳಲ್ಲಿ ಛಾಯಾಚಿತ್ರ ತೆಗೆಯುವವರು ಎದುರಿಸುವ ಪ್ರಶ್ನೆಗಳ ಸರಮಾಲೆಯನ್ನು ಕೇಳಿದರೆ ಚಳಿ ಜ್ವರ ಶುರುವಾಗುವುದು. ಅವರ ಅಜ್ಞಾನವೋ ನಮ್ಮ ಕರ್ಮವೋ ನಾ ಕಾಣೆ.
ಇಂತಹ ಬಿಕ್ಕಟ್ಟಿನ ಪ್ರಶ್ನೆಗಳ ಸರಮಾಲೆಯನ್ನು ನನ್ನ ಅಕ್ಕನೂ ನನ್ನ ಮೇಲೆಸೆದು ನನ್ನನ್ನು ಕಕ್ಕಾಬಿಕ್ಕಿ ಮಾಡಿದ್ದಿದೆ. ಈ ವಂಶದ ಜಿವಿಗಳಿಗೆ ಹೊಸ ಸೇರ್ಪಡೆ ನನ್ನ ಪತ್ನಿ!! ಇಂತಹ ಮಮರ್ಾಘಾತದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಇಂತವರಿಂದ ಆದಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಅವರನ್ನು ಗೊಂದಲಗೊಳಿಸಲು "ಲಕ್ಷ, ಲಕ್ಷ ಸುರಿದು ಯಾವ ಪುರುಷಾರ್ಥಕ್ಕೆ ಚಿನ್ನಕೊಳ್ಳುತ್ತೀರಿ? ನೀವು ಹಾಕುವುದು ಬರೇ 30 ನಿಮಿಷವಷ್ಟೇ." ಎಂದವರಿಗೆ ಪ್ರಶ್ನೆ ಕೇಳಿ ಗಾಬರಿ ಹುಟ್ಟಿಸುತ್ತೇನೆ.
ಮಲಬರ್ ಸ್ಟಾರ್ಲಿಂಗ್. |
ಎಲ್ಲವೂ ಪ್ರಯೋಜನಕ್ಕೆ ಬರಲೇಬೇಕೆ? ಗೊತ್ತಿಲ್ಲ. 5 ವರುಷಗಳಿಂದ ನನ್ನ ಗಣಕದಲ್ಲಿ ತಣ್ಣಗೆ ಕುಳಿತ ಎಲ್ಲಾ ಚಿತ್ರಗಳಿಗೂ ಅಚಾನಕ್ ಒಳ್ಳೆ ಬೇಡಿಕೆ ಬಂದಿತು ಮರ್ರೆ.
'ಮಕ್ಕಳ ವಾಣಿ' ಎಂಬ ಯು-ಟ್ಯುಬ್ ಚಾನೆಲ್ ಒಂದಕ್ಕೆ ಹಕ್ಕಿಗಳ ಪುಟ್ಟ ಪುಟ್ಟ ಎರಡು ವಿಡಿಯೋ ಮಾಡಿ ಕೊಡಿ ಎಂದು ಉದಯ ಗಾಂವಕ್ಕರ್ ಕೇಳಿಕೊಂಡಿದ್ದರು. ಒಂದು ಸುಂದರ ಹಕ್ಕಿಯ ಛಾಯಾ ಚಿತ್ರ ತೆಗೆಯಲು ಒದ್ದಾಡಿದ ನೆನಪುಗಳೆಲ್ಲಾ ಒದ್ದುಕೊಂಡು ಬಂತು. 300 mm ನ ಸುಮಾರು 2 ಕೆ.ಜಿ ತೂಕದ ಲೆನ್ಸ್! ಹೊತ್ತು ತಿರುಗಿದವನಿಗೇ ಗೊತ್ತದರ ಕಷ್ಟ. ಬಿಡ ಬೇಕು ಎಂದು ಅನೇಕ ಬಾರಿ ಎಣಿಸಿದ್ದೂ ಉಂಟು. ಆದರೆ ಏನೋ ವಿಚಿತ್ರ ಸೆಳೆತ. ಚಿತ್ರ ತೆಗೆದ ಸ್ಥಳಕ್ಕೊಮ್ಮೆ ಹೋಗಿ ಕೂಡಾ ಬಂದೆ. ಆ ಮರದ ರೆಂಬೆಯೊಂದು ಮುರಿದು ಬಿದ್ದಿತ್ತು. ಸನಿಹದಲ್ಲೇ ಒಂದೆರಡು ಮನೆ ಕೂಡಾ ಆಗಿತ್ತು. ಆ ನಿಮ್ಮಿತ್ತ ನನ್ನ ಗಣಕದಲ್ಲಿ ತಣ್ಣಗೆ ಮಲಗಿದ್ದ ಹಕ್ಕಿಗಳನ್ನೆಲ್ಲಾ ಮತ್ತೊಮ್ಮೆ ಎಬ್ಬಿಸಬೇಕಾಗಿ ಬಂತು. ಹಾಗೆ ಅನೇಕ ಮಿತ್ರರನ್ನು ಸಹ. ಜೊತೆಗೆ ನಿಮ್ಮನ್ನು! ಕಾಣದ ಕಡಲಿಗೆ ನಾವೂ ಹೀಗೆ ಯಾವೊತ್ತೋ ಉಪಯೋಗಕ್ಕೆ ಬರುವುದಕ್ಕಾಗಿ ಹುಟ್ಟಿದ್ದೇವೆಯೇ? ಹುಟ್ಟು ಸಾರ್ಥಕವಾಗುವುದು ಹೀಗೆಯೇ? ಕಾಣದ ಕಡಲಿಗೆ ಕಾಯುವುದೇ ಬದುಕಾ? ಗೊತ್ತಿಲ್ಲ.
https://youtu.be/Osc0IFMU6dM
ಅಂತೂ ತೆಗೆದ ಹಲವು ಹಕ್ಕಿಗಳ ಚಿತ್ರಗಳ ಕುರಿತು ಪುಟಾಣಿ ಲೇಖನಗಳನ್ನು ಬ್ಲಾಗಿನಲ್ಲಿ ಹಾಕಿರುವೆ. 'ಬಾನಾಡಿ' ಅಡಿಯಲ್ಲಿ ಅವೆಲ್ಲಾ ಇವೆ. ಕೆಲವು ಚೆನ್ನಾಗಿವೆ. ಕೆಲವು ಸಪ್ಪೆ. ಮತ್ತೆ ಸರಿ ಪಡಿಸಬೇಕಾಗಿದೆ.
ಓದಿ, ವಿಡಿಯೋ ನೋಡಿ ಪ್ರತಿಕ್ರಿಯಿಸುವಿರಲ್ಲಾ. ನಿಮ್ಮ ರಚನಾತ್ಮಕ ಸಲಹೆಗಳ ನಿರೀಕ್ಷೆಯಲ್ಲಿ....
ಶ್ರೀಧರ್. ಎಸ್. ಸಿದ್ದಾಪುರ
ತುಂಬಾ ಚೆನ್ನಾಗಿದೆ.ಶುಭಾಶಯಗಳು.
ReplyDeleteವಂದನೆಗಳು
ReplyDelete